• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನ, ಬೆಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ, ಗ್ರಾಹಕರಿಗೆ ನೆಮ್ಮದಿ

|

ನವದೆಹಲಿ, ಡಿಸೆಂಬರ್ 19: ಬಂಗಾರ, ಬೆಳ್ಳಿ ಖರೀದಿದಾರರಿಗೆ ಬುಧವಾರ(ಡಿಸೆಂಬರ್ 19)ದಂದು ನೆಮ್ಮದಿ ಸುದಿ ಸಿಕ್ಕಿತ್ತು. ಮಂಗಳವಾರದಂದು ಏರಿಕೆ ಕಂಡಿದ್ದ ಬಂಗಾರದ ಬೆಲೆ ಇಂದು ದಿಢೀರ್ ಕುಸಿತ ಕಂಡಿದೆ.

1 ರುಪಾಯಿಗೂ ಚಿನ್ನ ಖರೀದಿಸಬಹುದು, ಹೇಗೆಂದು ಇಲ್ಲಿದೆ ಮಾಹಿತಿ

ಸ್ಥಳೀಯ ಆಭರಣಗಾರರಿಂದ ತಗ್ಗಿದ ಬೇಡಿಕೆ, ಡಾಲರ್ ಎದುರು ರುಪಾಯಿ ವ್ಯತ್ಯಾಸದಿಂದ ಚಿನ್ನದ ಬೆಲೆ 210ರು ಕುಸಿತ ಕಂಡು ಪ್ರತಿ 10 ಗ್ರಾಂನ ಬೆಲೆ 31850ರು ನಷ್ಟಿತ್ತು. ಬೆಳ್ಳಿ ಬೆಲೆ ಕೂಡ ಇಳಿಕೆಯಾಗಿದ್ದು, 435 ರು ಕುಸಿತ ಕಂಡು ಪ್ರತಿ 1 ಕೆಜಿ ಬೆಲೆ 37,880ರು ನಷ್ಟಿತ್ತು.

ತಗ್ಗಿದ ಬೇಡಿಕೆ, ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಸ್ಥಿರ

ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ, ಬಂಗಾರದ ಬೆಲೆ ಏರಿಕೆ ಕಂಡಿದೆ. ನ್ಯೂಯಾರ್ಕ್ ನಲ್ಲಿ ಬಂಗಾರದ ಬೆಲೆ ಶೇಕಡಾ 0.6ರಷ್ಟು ಏರಿಕೆ ಕಂಡು 1,250.80 ಡಾಲರ್ ಪ್ರತಿ ಔನ್ಸ್ ಆಗಿದೆ. ಇನ್ನು ಬೆಳ್ಳಿ ಶೇಕಡಾ 0.45ರಷ್ಟು ಹೆಚ್ಚಳ ಕಂಡು 14.77 ಡಾಲರ್ ಪ್ರತಿ ಔನ್ಸ್ ಆಗಿದೆ.

ದೆಹಲಿಯಲ್ಲಿ 99.9% ಹಾಗೂ 99.5%ರಷ್ಟು ಶುದ್ಧ ಬಂಗಾರದ ಬೆಲೆ 10 ಗ್ರಾಂಗೆ ತಲಾ 31,850 ರೂಪಾಯಿ ಮತ್ತು 31,700 ರೂಪಾಯಿಯಾಗಿದೆ.

ಸ್ಥಿರತೆ ಕಂಡುಕೊಂಡ ಚಿನ್ನ, ಬೆಳ್ಳಿ ದರ, ಗ್ರಾಹಕರಿಗೆ ಖುಷಿ

ಸವರನ್ ಚಿನ್ನ 8 ಗ್ರಾಂಗೆ 25,000ರು ನಷ್ಟಿತ್ತು, ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಬೆಳ್ಳಿ ನಾಣ್ಯಗಳ ಬೆಲೆ 100ಕ್ಕೆ 74000ರು ಖರೀದಿಗೆ ಹಾಗೂ 75000ರು ಮಾರಾಟದ ಬೆಲೆ ಹೊಂದಿದೆ.

ಯುಎಸ್ ಡಾಲರ್ ಎದುರು ಭಾರತೀಯ ರುಪಾಯಿ 69.85 ನಷ್ಟಿತ್ತು. ರುಪಾಯಿ ಮೌಲ್ಯ ಹೆಚ್ಚಳವಾಗುತ್ತಿದ್ದಂತೆ ಚಿನ್ನದ ಆಮದಿನ ಮೇಲೆ ಪರಿಣಾಮ ಬೀರಲಿದೆ. ಹಲವು ತಿಂಗಳ ಚಿನ್ನದ ಆಮದಿನ ವಿವರ ಚಿತ್ರದಲ್ಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gold prices fell sharply today amid muted demand from local jewellers and a rise in rupee’s value against US dollar. Gold rates fell Rs 210 to Rs 31,850 per 10 gram while silver prices also slumped today on reduced offtake by industrial units.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more