ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಸತತ 4ನೇ ದಿನ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 9,000 ರೂಪಾಯಿ ಕಡಿಮೆ

|
Google Oneindia Kannada News

ನವದೆಹಲಿ, ಫೆಬ್ರವರಿ 04: ಜಾಗತಿಕ ಮಾರುಕಟ್ಟೆಗಳಲ್ಲಿ ಅಮೂಲ್ಯವಾದ ಲೋಹದ ದರಗಳ ಕುಸಿತದ ನಡುವೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಡಿಮೆಯಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಸತತ ನಾಲ್ಕನೇ ದಿನ ಇಳಿಕೆಯಾಗಿದೆ.

ಎಂಸಿಎಕ್ಸ್‌ನಲ್ಲಿ, ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.56ರಷ್ಟು ತಗ್ಗಿದ್ದು, 47,549 ರೂಪಾಯಿಗೆ ಇಳಿಕೆಯಾಗಿದೆ. ನಾಲ್ಕು ದಿನಗಳಲ್ಲಿ, ಜಾಗತಿಕ ದರಗಳು ಮತ್ತು ಆಮದು ಸುಂಕ ಕಡಿತದ ಮಧ್ಯೆ ಚಿನ್ನವು 10 ಗ್ರಾಂಗೆ ಸುಮಾರು 2,000 ರೂಪಾಯಿ ತಗ್ಗಿದೆ. ಎಂಸಿಎಕ್ಸ್‌ನಲ್ಲಿ ಬೆಳ್ಳಿ ಭವಿಷ್ಯವು ಇಂದು ಶೇಕಡಾ 1ರಷ್ಟು ಇಳಿಕೆಯಾಗಿ ಪ್ರತಿ ಕೆಜಿಗೆ 67,848 ರೂಪಾಯಿಗೆ ತಲುಪಿದೆ.

ಸತತ ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 03ರಂದು ಬೆಲೆ ಎಷ್ಟಿದೆ?ಸತತ ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 03ರಂದು ಬೆಲೆ ಎಷ್ಟಿದೆ?

ಚಿನ್ನದ ಬೆಲೆಗಳಲ್ಲಿನ ಕುಸಿತ ಮತ್ತು ಆರ್ಥಿಕತೆಯ ಚೇತರಿಕೆಯು ಭೌತಿಕ ಚಿನ್ನದ ಬೇಡಿಕೆಯನ್ನು ಹೆಚ್ಚಿಸಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಆಗಸ್ಟ್‌ನಲ್ಲಿ ಚಿನ್ನದ ಬೆಲೆ ದಾಖಲೆಯ ಗರಿಷ್ಠ ಮಟ್ಟ 56,200 ರೂಪಾಯಿಗಳಿಂದ 9,000 ರೂಪಾಯಿ ಕಡಿಮೆಯಾಗಿದೆ.

Gold Price Fall 4th Day In A Row: Rs 9000 Down From Record High

ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.1 ರಿಂದ 1,832.84 ಡಾಲರ್‌ಗೆ ಇಳಿದಿದೆ. ಡಾಲರ್ ಸೂಚ್ಯಂಕವು 91.198 ಕ್ಕೆ ಏರಿದ್ದು, ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಅಮೂಲ್ಯವಾದ ಲೋಹಗಳ ಬೆಲೆ ದುಬಾರಿಯನ್ನಾಗಿ ಮಾಡಿದೆ. ಸ್ಪಾಟ್ ಸಿಲ್ವರ್ ಶೇಕಡಾ 0.5ರಷ್ಟು ಇಳಿದು 26.72 ಡಾಲರ್‌ಗೆ ತಲುಪಿದೆ.

English summary
Gold and silver prices today edged lower in Indian markets today amid a slide in rates of precious metals in global markets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X