ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಧನ ಬೆಲೆ ಏರಿಕೆ ನಡುವೆ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ

|
Google Oneindia Kannada News

ಬೆಂಗಳೂರು, ಸೆ. 17: ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಹೌತಿ ಬಂಡುಕೋರರ ಡ್ರೋನ್ ದಾಳಿಯಿಂದ ಕಚ್ಚಾ ತೈಲ ಬೆಲೆ ಏರಿಕೆ ಭೀತಿ, ತಗ್ಗಿದ ಬೇಡಿಕೆ ಹಿನ್ನೆಲೆಯಲ್ಲಿ ಮಂಗಳವಾರದಂದು ಚಿನ್ನದ ಬೆಲೆ ಕೊಂಚ ಇಳಿಕೆ ಕಂಡಿದೆ.

ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 150 ರೂಪಾಯಿ ಇಳಿಕೆ ಕಂಡು 10 ಗ್ರಾಂಗೆ 38,905 ರೂಪಾಯಿಯಂತೆ ವಹಿವಾತು ನಡೆಸಿದೆ ಎಂದು ಎಚ್ ಡಿ ಎಫ್ ಸಿ ಸೆಕ್ಯುರಿಟೀಸ್ ಹೇಳಿದೆ.

ಚಿನ್ನದ ಮೇಲೆ ಹೂಡಿಕೆ ಮಾಡಿ, 42 ಸಾವಿರ ರು ಗಡಿ ದಾಟಲಿದೆಚಿನ್ನದ ಮೇಲೆ ಹೂಡಿಕೆ ಮಾಡಿ, 42 ಸಾವಿರ ರು ಗಡಿ ದಾಟಲಿದೆ

ಮಂಗಳವಾರದಂದು ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, 290 ರೂಪಾಯಿ ತಗ್ಗಿ, 1 ಕೆ.ಜಿ.ಗೆ 48,028 ರೂಪಾಯಿಯಂತೆ ಮಾರಾಟವಾಗಿದೆ. ಸೋಮವಾರದಂದು 1 ಕೆಜಿಗೆ 48,318ರು ನಷ್ಟಿತ್ತು.

Gold falls Rs 150 to Rs 38,905 per 10 gm on weak demand

"ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಕಂಡರೂ, ಸ್ಥಳೀಯ ಆಭರಣಗಾರರಿಂದ ತಗ್ಗಿದ ಬೇಡಿಕೆಯಿಂದಾಗಿ ದೆಹಲಿಯಲ್ಲಿ ಚಿನ್ನದ ಬೆಲೆ 150 ರು ನಷ್ಟು ತಗ್ಗಿದೆ' ಎಂದು ಎಚ್ ಡಿ ಎಫ್ ಸಿ ಸೆಕ್ಯುರಿಟೀಸ್ ನ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯಲ್ಲಿ ಸೋಮವಾರದಂದು ಚಿನ್ನದ ಬೆಲೆ 10 ಗ್ರಾಂಗೆ 39,055 ರು ನಷ್ಟಿತ್ತು.

ಜಾಗತಿಕ ಮಾರುಕಟ್ಟೆಯಲ್ಲಿ ನ್ಯೂಯಾರ್ಕ್ ನಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದ್ದು, ಪ್ರತಿ ಔನ್ಸಿಗೆ 1,497 ಯುಎಸ್ ಡಾಲರ್ ನಷ್ಟಿದೆ. ಬೆಳ್ಳಿ ಬೆಲೆ ಇಳಿಕೆಯಾಗಿ ಪ್ರತಿ ಔನ್ಸಿಗೆ 17.81 ಡಾಲರ್ ನಷ್ಟಿದೆ.

ಚಿನ್ನದ ಮೇಲೆ ಹೂಡಿಕೆ ಮಾಡಿ, 42 ಸಾವಿರ ರು ಗಡಿ ದಾಟಲಿದೆಚಿನ್ನದ ಮೇಲೆ ಹೂಡಿಕೆ ಮಾಡಿ, 42 ಸಾವಿರ ರು ಗಡಿ ದಾಟಲಿದೆ

ಮಾರುಕಟ್ಟೆ ವಿಶ್ಲೇಷಕರ ಮುನ್ಸೂಚನೆಗೆ ಅನುಗುಣವಾಗಿ ಕಳೆದ ಒಂದು ತಿಂಗಳಲ್ಲಿ ಚಿನ್ನದ ಇಟಿಎಫ್‌ಗಳಲ್ಲಿ ಹೆಚ್ಚಿನ ಹೂಡಿಕೆ ಕಂಡು ಬಂದಿದೆ. ಆಗಸ್ಟ್‌ ತಿಂಗಳಿನಲ್ಲಿ 145 ಕೋಟಿ ರೂಪಾಯಿ ಹೂಡಿಕೆಯಾಗಿದೆ. ಈ ನಡುವೆ ಮಂಗಳವಾರದಂದು ಯುಎಸ್ ಡಾಲರ್ ಎದುರು ರುಪಾಯಿ ಮೌಲ್ಯ 71.88 ರು ನಷ್ಟಿತ್ತು.

English summary
Gold prices declined by Rs 150 to Rs 38,905 per 10 gram in the bullion market here on Tuesday due to weak demand, according to HDFC Securities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X