ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತವಾಗಿ ಇಳಿಮುಖವಾಗಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ

|
Google Oneindia Kannada News

ಬೆಂಗಳೂರು, ನವೆಂಬರ್ 22: ದಸರಾ, ದೀಪಾವಳಿ ಹಬ್ಬದ ಸೀಸನ್ ನಂತರ ಚಿನ್ನದ ಬೆಲೆಯಲ್ಲಿ ಇದೇ ಮೊದಲ ಬಾರಿಗೆ ಏರಿಕೆ ಕಂಡು ಬಂದಿದೆ. ಗುರುವಾರದಂದು 65ರು ಏರಿಕೆ ಕಂಡು 10 ಗ್ರಾಂ ಗೆ 30,550ರು ನಂತೆ ವಹಿವಾಟು ನಡೆಸಿದೆ.

ಗುರುವಾರದಂದು ದೆಹಲಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 90 ರೂಪಾಯಿ ಹೆಚ್ಚಳ ಕಂಡಿತ್ತು. 10 ಗ್ರಾಂ ಚಿನ್ನದ ಬೆಲೆ 32,040 ರೂಪಾಯಿಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆ ಹಾಗೂ ಸ್ಥಳೀಯ ಆಭರಣ ತಯಾರಕರಲ್ಲಿ ಹೆಚ್ಚಾದ ಬೇಡಿಕೆ ಬೆಲೆ ಏರಿಕೆಗೆ ಕಾರಣವಾಗಿದೆ. ಬೆಳ್ಳಿ ಕೂಡ ಗುರುವಾರದಂದು ಹೆಚ್ಚಳವಾಗಿದೆ. ಬೆಳ್ಳಿ 250 ರೂಪಾಯಿ ಏರಿಕೆ ಕಂಡಿದ್ದು, ಕೆ.ಜಿ. ಬೆಳ್ಳಿ ಬೆಲೆ 39,100 ರೂಪಾಯಿಯಾಗಿದೆ.

Gold extends gains on firm global cues; silver tops Rs 39,000

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಶೇಕಡಾ 0.51 ರಷ್ಟು ಹೆಚ್ಚಳ ಕಂಡಿದ್ದು, 1213 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ ಶೇ 0.62ರಷ್ಟು ಏರಿಕೆ ಕಂಡು 15.38 ಡಾಲರ್ ಪ್ರತಿ ಔನ್ಸ್ ಆಗಿದೆ.

ದೆಹಲಿ ಮಾರುಕಟ್ಟೆಯಲ್ಲಿ ಶೇಕಡಾ 99.9 ರಷ್ಟು ಹಾಗೂ ಶೇಕಡಾ 99.5 ರಷ್ಟು ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 30,550 ರೂಪಾಯಿ ಹಾಗೂ 30.400 ರೂಪಾಯಿಯಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 29,160 ರು ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 31,120 ರುನಷ್ಟಿದೆ. ಬೆಳ್ಳಿ 1 ಕೆಜಿಗೆ 41,300ರು ನಷ್ಟಿದೆ.

English summary
Rising for the second straight day, gold prices gained Rs 65 to reach Rs 30,550 per 10 grams at the bullion market today on sustained buying by local jewellers amid a firm trend overseas. Silver followed suit and reclaimed the Rs 39,000-mark
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X