ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ 200 ರುಪಾಯಿ, ಬೆಳ್ಳಿ ಬೆಲೆ ಕೇಜಿಗೆ 500 ರುಪಾಯಿ ಇಳಿಕೆ

|
Google Oneindia Kannada News

ಚಿನ್ನದ ಬೆಲೆಯಲ್ಲಿ 200 ರುಪಾಯಿ ಇಳಿಕೆಯಾಗಿದ್ದು, ಪ್ರತಿ 10 ಗ್ರಾಮ್ ಚಿನ್ನದ ಬೆಲೆ 31,750 ತಲುಪಿದೆ. ಅದೇ ರೀತಿ ಬೆಳ್ಳಿ ದರವೂ ಕೇಜಿಗೆ 500 ರುಪಾಯಿ ಇಳಿಕೆಯಾಗಿದ್ದು, 37300 ರುಪಾಯಿಗೆ ತಲುಪಿದೆ. ಸ್ಥಳೀಯ ಆಭರಣ ವರ್ತಕರಿಂದ ಬೇಡಿಕೆ ಕುಸಿತ ಹಾಗೂ ವಿದೇಶದಲ್ಲೂ ಮುಂದುವರಿದ ದುರ್ಬಲತೆ ಹಿನ್ನೆಲೆಯಲ್ಲಿ ಹಳದಿ ಲೋಹದ ಬೆಲೆ ಇಳಿಕೆ ಕಂಡಿದೆ.

ಬೆಳ್ಳಿ ಬೆಲೆಯಲ್ಲೂ ಪ್ರತಿ ಕೇಜಿಗೆ 500 ರುಪಾಯಿ ಇಳಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 99.9 ಹಾಗೂ 99.5 ಶುದ್ಧತೆ ಇರುವ ಚಿನ್ನದ ಬೆಲೆಯಲ್ಲಿ 200 ರುಪಾಯಿ ಕಡಿಮೆ ಆಗಿ, 10 ಗ್ರಾಮ್ ನ ಚಿನ್ನದ ಬೆಲೆಯು ಕ್ರಮವಾಗಿ 31,750 ಹಾಗೂ 31,600 ರುಪಾಯಿ ತಲುಪಿದೆ. ಶುಕ್ರವಾರದಂದು ಚಿನ್ನದ ಬೆಲೆ 90 ರುಪಾಯಿ ಕಡಿಮೆ ಆಗಿತ್ತು.

Gold drops 200 on lacklustre demand; silver falls 500

ಸವರನ್ ಚಿನ್ನದ ಬೆಲೆಯು 100 ರುಪಾಯಿಯಷ್ಟು ಇಳಿಕೆಯಾಗಿದ್ದು, 24,700 ರುಪಾಯಿ ತಲುಪಿದೆ. ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿ ಕೂಡ ಇಳಿಕೆಯನ್ನು ಕಾಣುತ್ತಿದೆ. 100 ಬೆಳ್ಳಿ ನಾಣ್ಯಗಳ ಖರೀದಿ ಹಾಗೂ ಮಾರಾಟವು ಕ್ರಮವಾಗಿ 73000 ಹಾಗೂ 74000 ರುಪಾಯಿ ಇದೆ.

English summary
Gold prices fell by ₹200 to ₹31,750 per 10 grams on Saturday, mostly on account of slack demand from local jewellers amid a weak trend overseas. Silver too slumped by ₹500 to ₹37,300 per kg owing to reduced demand from industrial units.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X