ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11 ವರ್ಷಗಳಲ್ಲೇ ಅತ್ಯಂತ ಕುಸಿತ ಕಂಡ ಚಿನ್ನದ ಬೇಡಿಕೆ

|
Google Oneindia Kannada News

ಬೆಂಗಳೂರು, ಜನವರಿ 28, 2021: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020ರ ವರ್ಷದಾದ್ಯಂತ ಗ್ರಾಹಕರಿಂದ ಚಿನ್ನದ ಬೇಡಿಕೆ ಅತ್ಯಂತ ಕಡಿಮೆ ಮಟ್ಟದಲ್ಲಿತ್ತು. 2009 ರಿಂದ 2019 ರವರೆಗೆ ಚಿನ್ನದ ವಾರ್ಷಿಕ ಬೇಡಿಕೆ ಸುಮಾರು 4,000 ಟನ್ ಇತ್ತು. ಆದರೆ, ಸಾಂಕ್ರಾಮಿಕದ ಪರಿಣಾಮ ಕಳೆದ ವರ್ಷ ವಾರ್ಷಿಕ ಬೇಡಿಕೆ 3,759 ಟನ್ ಗೆ ಇಳಿಕೆಯಾಗಿದ್ದು, ಶೇ.14 ರಷ್ಟು ಕಡಿಮೆಯಾಗಿದೆ ಎಂದು ಇತ್ತೀಚಿಗೆ ವಿಶ್ವ ಚಿನ್ನ ಮಂಡಳಿಯ ಗೋಲ್ಡ್ ಡಿಮ್ಯಾಂಡ್ ಟ್ರೆಂಡ್ಸ್ ವರದಿ ತಿಳಿಸಿದೆ.

ವರ್ಷದಿಂದ ವರ್ಷಕ್ಕೆ ಹೋಲಿಸಿದರೆ 2020 ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಜಾಗತಿಕ ಚಿನ್ನದ ಬೇಡಿಕೆ ಶೇ.28 ರಷ್ಟು ಕಡಿಮೆಯಾಗಿದೆ. 2008 ರ ಎರಡನೇ ತ್ರೈಮಾಸಿಕದಲ್ಲಿ ಉಂಟಾಗಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟಿನಲ್ಲಿ ಉಂಟಾದ ಚಿನ್ನದ ಬೇಡಿಕೆಯ ಕುಸಿತ ಇಷ್ಟೊಂದು ಪ್ರಮಾಣದಲ್ಲಿ ಕುಸಿತ ಕಂಡಿರುವುದು ಇದೇ ಮೊದಲಾಗಿದೆ.

ನಾಲ್ಕನೇ ತ್ರೈಮಾಸಿಕದಲ್ಲಿ ಕೇವಲ 515.9 ಟನ್ ನಷ್ಟು ಬೇಡಿಕೆ

ನಾಲ್ಕನೇ ತ್ರೈಮಾಸಿಕದಲ್ಲಿ ಕೇವಲ 515.9 ಟನ್ ನಷ್ಟು ಬೇಡಿಕೆ

ಚಿನ್ನಾಭರಣಗಳ ಬೇಡಿಕೆಯ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.13 ರಷ್ಟು ಇಳಿಕೆ ಕಂಡಿದ್ದು, ಕೇವಲ 515.9 ಟನ್ ನಷ್ಟು ಚಿನ್ನಾಭರಣಕ್ಕೆ ಬೇಡಿಕೆ ಕಂಡು ಬಂದಿದೆ. ಡೇಟಾ ಸೀರೀಸ್ ನಲ್ಲಿ ಇದು ಹೊಸ ವಾರ್ಷಿಕ ಇಳಿಕೆಯಾಗಿದೆ. ತೀವ್ರವಾಗಿ ಕುಸಿದಿದ್ದ ಬೇಡಿಕೆಯು 2 ನೇ ತ್ರೈಮಾಸಿಕದಿಂದ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದ್ದು, ಸ್ಥಿರತೆಗೆ ಮರಳಿತಾದರೂ ಕೊರೊನಾವೈರಸ್ ಗ್ರಾಹಕರ ನಡವಳಿಕೆ ಮೇಲೆ ಪರಿಣಾಮ ಬೀರುವುದನ್ನು ಮುಂದುವರಿಸಿತ್ತು.

ಚಿನ್ನದ ಬೆಲೆ ಸತತ 5ನೇ ದಿನ ಇಳಿಕೆ: ಬೆಳ್ಳಿ ಬೆಲೆಯು ಕುಸಿತಚಿನ್ನದ ಬೆಲೆ ಸತತ 5ನೇ ದಿನ ಇಳಿಕೆ: ಬೆಳ್ಳಿ ಬೆಲೆಯು ಕುಸಿತ

ಇದಕ್ಕೆ ವ್ಯತಿರಿಕ್ತವಾಗಿ, ಸಾಂಕ್ರಾಮಿಕ ಬೆಂಬಲಿತ ವಾರ್ಷಿಕ ಹೂಡಿಕೆಯ ಬೇಡಿಕೆ ಹೆಚ್ಚಾದ ಪರಿಣಾಮ 1,773.2 ಟನ್ ಗೆ ಹೆಚ್ಚಳವಾಗಿ, ಶೇ.40 ರಷ್ಟು ಹೆಚ್ಚಳ ಸಾಧಿಸಿದೆ. ಈ ಹೆಚ್ಚಳ ಹೆಚ್ಚಾಗಿ ಕಂಡುಬಂದಿರುವುದು ETFs (gold ETFs) ಗಳ ಮಾದರಿಯ ಹಿನ್ನೆಲೆಯಿಂದ. ಆದರೆ, ಎಚ್2 ನಲ್ಲಿ ಗಟ್ಟಿ ಮತ್ತು ನಾಣ್ಯದ ಬೇಡಿಕೆಯ ಬೆಳವಣಿಗೆಯಿಂದ ಇದು ಸಹಕಾರಿಯಾಗಿದೆ.

ಇಟಿಎಫ್‌ಗಳ ಹೂಡಿಕೆಯ ಬೇಡಿಕೆಯಲ್ಲೂ ಕುಸಿತ

ಇಟಿಎಫ್‌ಗಳ ಹೂಡಿಕೆಯ ಬೇಡಿಕೆಯಲ್ಲೂ ಕುಸಿತ

4 ನೇ ತ್ರೈಮಾಸಿಕದಲ್ಲಿ ಚಿನ್ನದ ಇಟಿಎಫ್ ಗಳಿಗೆ ಹೂಡಿಕೆಯಲ್ಲಿ ಬೇಡಿಕೆಯಲ್ಲಿ ಗಮನಾರ್ಹವಾದ ಕುಸಿತ ಉಂಟಾಗಿದ್ದು, ಇದರ ಪ್ರಮಾಣ 130 ಟನ್ ನಷ್ಟಾಗಿದೆ.

ವಾರ್ಷಿಕ ಚಿನ್ನದ ಪೂರೈಕೆಯ ಮೇಲೆಯೂ ಹೊಡೆತ ಬಿದ್ದಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪೂರೈಕೆಯ ಪ್ರಮಾಣ ಶೇ.4 ರಷ್ಟು ಕುಸಿತ ಕಂಡಿದ್ದು, 4,633 ಟನ್ ಮಾತ್ರ ಪೂರೈಕೆಯಾಗಿದೆ. ಇದು 2013 ರ ನಂತರ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿರುವ ವರ್ಷವಾಗಿದೆ.

ಗಣಿ ಉತ್ಪಾದನೆ ಮೇಲೆ ಕೊರೋನಾವೈರಸ್ ಸಂಬಂಧಿತ ಅಡೆತಡೆಗಳು ಉಂಟಾದ ಹಿನ್ನೆಲೆಯಲ್ಲಿ ಪೂರೈಕೆಯಲ್ಲಿ ಈ ಕುಸಿತ ಕಂಡುಬರಲು ಪ್ರಮುಖ ಕಾರಣವಾಗಿದೆ. ಇದೇ ವೇಳೆ, ಮರುಬಳಕೆಯಲ್ಲಿ ಶೇ.1 ರಷ್ಟು ಹೆಚ್ಚಳದ ಪರಿಣಾಮ 2020 ಕ್ಕೆ 1,297 ಟನ್ ಗೆ ಸರಿದೂಗಿಸಲಾಗಿದೆ.

ಚಿನ್ನದ ಬೆಲೆ ಕುಸಿತದ ಪರಿಣಾಮಗಳು

ಚಿನ್ನದ ಬೆಲೆ ಕುಸಿತದ ಪರಿಣಾಮಗಳು

ಜಾಗತಿಕ ಚಿನ್ನದ ಇಟಿಎಫ್ ಗಳ ಒಳಹರಿವಿನ ಪ್ರಮಾಣ 877.1 ಟನ್ ಆಗಿದ್ದು(ಯುಎಸ್ $ 47.9 ಬಿಲಿಯನ್), ಇದು ವಾರ್ಷಿಕ ದಾಖಲೆಯನ್ನು ತಲುಪಿದೆ. 2019 ರ ಡಿಸೆಂಬರ್ ನಲ್ಲಿ ಪ್ರಾರಂಭವಾಗುವ 11 ತಿಂಗಳ ಸತತ ಧನಾತ್ಮಕ ಒಳಹರಿವು ನವೆಂಬರ್ ನಲ್ಲಿ ಸ್ಥಗಿತಗೊಂಡಿತು. ಆಗ ಭಾವನಾತ್ಮಕತೆ ಮತ್ತು ಚಿನ್ನದ ಬೆಲೆ ಕುಸಿತದಿಂದ 4 ನೇ ತ್ರೈಮಾಸಿಕದಲ್ಲಿ 130 ಟನ್ ಹೊರಹರಿವಿಗೆ ಕಾರಣವಾಯಿತು.

ಚಿನ್ನದ ಬೆಲೆ ಕುಸಿತ: ಜನವರಿ 27ರಂದು ಯಾವ ನಗರಗಳಲ್ಲಿ ಎಷ್ಟು ಬೆಲೆ ವ್ಯತ್ಯಾಸ?ಚಿನ್ನದ ಬೆಲೆ ಕುಸಿತ: ಜನವರಿ 27ರಂದು ಯಾವ ನಗರಗಳಲ್ಲಿ ಎಷ್ಟು ಬೆಲೆ ವ್ಯತ್ಯಾಸ?

ಹೂಡಿಕೆದಾರರ ಬೇಡಿಕೆಯಿಂದಾಗಿ 2020 ರಲ್ಲಿ ಯುಎಸ್ ಡಾಲರ್ ಚಿನ್ನದ ಬೆಲೆಯಲ್ಲಿ ಶೇ.25 ರಷ್ಟು ಮರಳಿತು. ಆಗಸ್ಟ್ ನಲ್ಲಿ ಹೆಚ್ಚಿನ ಕರೆನ್ಸಿಗಳಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಎಲ್ ಬಿಎಂಎ ಗೋಲ್ಡ್ ಪ್ರೈಸ್ ಪಿಎಂ ನವೆಂಬರ್ ಅಂತ್ಯದ ವೇಳೆಗೆ ಯುಎಸ್ $1,762.55 ಕ್ಕೆ ಇಳಿದಿದೆ.

ಚಿನ್ನದ ಗಟ್ಟಿ, ನಾಣ್ಯಗಳಿಗೆ ಹೆಚ್ಚಿದ ಬೇಡಿಕೆ

ಚಿನ್ನದ ಗಟ್ಟಿ, ನಾಣ್ಯಗಳಿಗೆ ಹೆಚ್ಚಿದ ಬೇಡಿಕೆ

4 ನೇ ತ್ರೈಮಾಸಿಕದಲ್ಲಿ ಚಿನ್ನದ ಗಟ್ಟಿಗಳು ಮತ್ತು ನಾಣ್ಯಗಳ ಬೇಡಿಕೆಯಲ್ಲಿ ಶೇ.10 ರಷ್ಟು ಬೇಡಿಕೆ ಹೆಚ್ಚಾಗಿತ್ತು. 2020 ರ ದ್ವಿತೀಯಾರ್ಧದಲ್ಲಿ ಚೀನಾ ಮತ್ತು ಭಾರತದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ಮಾರುಕಟ್ಟೆಯಲ್ಲಿ ವಾರ್ಷಿಕ ಬೇಡಿಕೆ ಹೆಚ್ಚಾಗಿ 896.1 ಟನ್ ಗೆ ತಲುಪಿತ್ತು. ಆದರೆ, ಚಿನ್ನಾಭರಣಗಳ ಬೇಡಿಕೆಯಲ್ಲಿ ದಾಖಲೆಯ ಇಳಿಕೆ ಕಂಡುಬಂದಿದ್ದು, 1,411.6 ಟನ್ ಗೆ ಕುಸಿಯಿತು. 4 ನೇ ತ್ರೈಮಾಸಿಕದಲ್ಲಿ ಚೇತರಿಕೆ ಕಂಡುಬಂದಾಗ್ಯೂ, ಕೋವಿಡ್-19 ನಿಂದ ಮುಂದುವರಿದ ಸವಾಲುಗಳಿಂದ ಹೊರಬರಲು ಸಾಧ್ಯವಾಗಿಲ್ಲ.

ಸೆಂಟ್ರಲ್ ಬ್ಯಾಂಕ್‌ನಿಂದಲೂ ಚಿನ್ನ ಖರೀದಿ ಪ್ರಮಾಣ ಇಳಿಕೆ

ಸೆಂಟ್ರಲ್ ಬ್ಯಾಂಕ್‌ನಿಂದಲೂ ಚಿನ್ನ ಖರೀದಿ ಪ್ರಮಾಣ ಇಳಿಕೆ

2020 ರಲ್ಲಿ ಸೆಂಟ್ರಲ್ ಬ್ಯಾಂಕ್ ಗಳಿಂದ ಚಿನ್ನವನ್ನು ಖರೀದಿ ಮಾಡುವ ಪ್ರಕ್ರಿಯೆ ಕುಂಠಿತವಾಗಿದೆ. ಈ ಬ್ಯಾಂಕುಗಳು ಅತ್ಯಂತ ಕಡಿಮೆ ಎಂದರೆ ಕೇವಲ 273 ಟನ್ ನಷ್ಟು ಚಿನ್ನವನ್ನು ಖರೀದಿ ಮಾಡಿವೆ. ಅಂದರೆ, ಖರೀದಿ ಪ್ರಮಾಣದಲ್ಲಿ ಶೇ.59 ರಷ್ಟು ಕುಸಿತ ಕಂಡುಬಂದಿದೆ.

4 ನೇ ತ್ರೈಮಾಸಿಕದಲ್ಲಿ ಸಾಧಾರಣ ನಿವ್ವಳ ಖರೀದಿಗೆ ಮರಳಿದೆ. ಈ ತ್ರೈಮಾಸಿಕದಲ್ಲಿ ಜಾಗತಿಕ ಅಧಿಕೃತ ಮೀಸಲು 44.8 ಟನ್ ಗೆ ಹೆಚ್ಚಾಗಿದ್ದರೆ, ಇದು 3 ನೇ ತ್ರೈಮಾಸಿಕದಿಂದ ನಿವ್ವಳ ಮಾರಾಟದ 6.5 ಟನ್ ಅನ್ನು ಹಿಂದಿಕ್ಕಿದೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ನ ಹಿರಿಯ ಮಾರುಕಟ್ಟೆ ವಿಮರ್ಶಕರು ಮತ್ತು ಸಂಶೋಧಕರಾಗಿರುವ ಲೂಯಿಸ್ ಸ್ಟ್ರೀಟ್ ಅವರು ಈ ಬಗ್ಗೆ ಮಾತನಾಡಿ, ಕೋವಿಡ್-19 ಸಾಂಕ್ರಾಮಿಕದ ಪರಿಣಾಮವು 2020ರಲ್ಲಿ ಚಿನ್ನದ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಇದು 4 ನೇ ತ್ರೈಮಾಸಿಕದಲ್ಲಿಯೂ ಮುಂದುವರಿಯಿತು. ಪ್ರಪಂಚದಾದ್ಯಂತ ಗ್ರಾಹಕರು ಲಾಕ್ ಡೌನ್ ಗಳು, ಆರ್ಥಿಕ ದುರ್ಬಲತೆ ಮತ್ತು ಚಿನ್ನದ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ ಚಿನ್ನ ಖರೀದಿಗೆ ಹೆಚ್ಚು ಆಸಕ್ತಿ ತೋರಿಲ್ಲ. ಇದರ ಪರಿಣಾಮ ಚಿನ್ನಾಭರಣಗಳ ಬೇಡಿಕೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣವನ್ನು ದಾಖಲಿಸುವಂತಾಗಿತ್ತು'' ಎಂದು ತಿಳಿಸಿದರು.

2020ರಲ್ಲಿ ಚಿನ್ನದ ಬೇಡಿಕೆಯ ಟ್ರೆಂಡ್‌ನ ಪ್ರಮುಖಾಂಶಗಳು

2020ರಲ್ಲಿ ಚಿನ್ನದ ಬೇಡಿಕೆಯ ಟ್ರೆಂಡ್‌ನ ಪ್ರಮುಖಾಂಶಗಳು

  • ವಾರ್ಷಿಕ ಬೇಡಿಕೆ (ಒಟಿಸಿ ಹೊರತುಪಡಿಸಿ) 2009 ರಿಂದೀಚೆಗೆ ಇದೇ ಮೊದಲ ಬಾರಿಗೆ 4000 ಟನ್ ನಿಂದ 3,759 ಟನ್ ಗೆ ಕುಸಿದಿದೆ.
  • ಚಿನ್ನದ ಇಟಿಎಫ್ ಒಳಹರಿವಿನಲ್ಲಿ ದಾಖಲೆಯಾಗಿದ್ದು, 877.1 ಟನ್ (ಯುಎಸ್$47.9ಬಿಲಿಯನ್) ಮತ್ತು ಜಾಗತಿಕ ಎಯುಎಂ 3,751.5 ಟನ್ ಗೆ ತಲುಪಿದೆ.
  • 2020 ರಲ್ಲಿ ಚಿನ್ನದ ಗಟ್ಟಿ ಮತ್ತು ನಾಣ್ಯದ ಬೇಡಿಕೆಯಲ್ಲಿ ಶೇ.3 ರಷ್ಟು ಹೆಚ್ಚಳ ಕಂಡುಬಂದಿದ್ದು, 896.1 ಟನ್ ಆಗಿದೆ.
  • ಜಾಗತಿಕ ಆಭರಣ ಬೇಡಿಕೆ ಶೇ.34 ರಷ್ಟು ಕುಸಿತ ಕಂಡುಬಂದಿದೆ. 1,411.5 ಟನ್ ನಷ್ಟು ಕುಸಿದಿದ್ದು, ಇದು ಹೊಸ ವಾರ್ಷಿಕ ಕುಸಿತವಾಗಿದೆ.
  • ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿಯನ್ನು ಶೇ.59 ರಷ್ಟು ಕಡಿಮೆ ಮಾಡಿದ್ದು, 273 ಟನ್ ನಷ್ಟು ಕಡಿಮೆಯಾಗಿದೆ.
  • 2020 ರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೇಡಿಕೆಯು ಶೇ.7 ರಷ್ಟು ಇಳಿಕೆಯಾಗಿದ್ದು, 307.9 ಟನ್ ಗೆ ತಲುಪಿದೆ.
  • ಗಣಿ ಉತ್ಪಾದನೆಯು ಶೇ.4 ಕ್ಕೆ ಕುಸಿಯಿತು.
  • ಮರುಬಳಕೆಯಲ್ಲಿ ಶೇ.1 ವರ್ಷದಿಂದ ವರ್ಷಕ್ಕೆ ಸ್ವಲ್ಪ ಹೆಚ್ಚಾಗಿದೆ.

English summary
Global demand for gold fell to its lowest in 11 years in 2020 as the coronavirus upended the market, triggering huge stockpiling by investors but collapsing sales of jewellery and purchases by central banks
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X