ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತವಾಗಿ ಚಿನ್ನದ ಬೆಲೆ ಏರಿಕೆ, ಮದುವೆ, ಸಂಕ್ರಾಂತಿ ಇನ್ನಿತರ ಕಾರಣ

|
Google Oneindia Kannada News

ನವದೆಹಲಿ, ಜನವರಿ 09: ಮದುವೆ ಮುಂತಾದ ಶುಭ ಕಾರ್ಯ, ಮಕರ ಸಂಕ್ರಾಂತಿ ಹಬ್ಬದ ಕಾರಣ ಕಳೆದ ಮೂರು ದಿನಗಳಿಂದ ಬಂಗಾರದ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರದಂದು ಚಿನ್ನದ ಬೆಲೆ 110ರು ಏರಿಕೆ ಕಂಡಿದೆ. ಬಂಗಾರದ ಬೆಲೆ ಮೂರು ದಿನಗಳಲ್ಲಿ 300 ರೂಪಾಯಿ ಏರಿಕೆಯಾಗಿದೆ.

ದೆಹಲಿಯಲ್ಲಿ 10 ಗ್ರಾಂ ಬಂಗಾರದ ಬೆಲೆ 32,800 ರೂಪಾಯಿಯಾಗಿದೆ.
ಮಂಗಳವಾರದಂದು ಇಳಿಕೆ ಕಂಡಿದ್ದ ಬೆಳ್ಳಿ ಬೆಲೆ, ಬುಧವಾರದಂದು 300ರು ಗಳಷ್ಟು ಹೆಚ್ಚಳವಾಗಿದೆ. ದೆಹಲಿ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಮತ್ತೆ 40 ಸಾವಿರದ ಗಡಿ ದಾಟಿದ್ದು, ಕೆ.ಜಿ. ಗೆ 40,100 ರೂಪಾಯಿಯಾಗಿದೆ.

ಸತತವಾಗಿ ಬಂಗಾರದ ಬೆಲೆ ಏರಿಕೆ, ಬೆಳ್ಳಿ ಬೆಲೆಯಲ್ಲಿ ಕುಸಿತಸತತವಾಗಿ ಬಂಗಾರದ ಬೆಲೆ ಏರಿಕೆ, ಬೆಳ್ಳಿ ಬೆಲೆಯಲ್ಲಿ ಕುಸಿತ

ಮದುವೆ ಹಿನ್ನೆಲೆಯಲ್ಲಿ ಸ್ಥಳೀಯ ಆಭರಣ ತಯಾರಕರು ಬಂಗಾರ ಖರೀದಿ ಹೆಚ್ಚು ಮಾಡಿದ್ದು ಬೆಲೆ ಏರಿಕೆಗೆ ಕಾರಣವಾಗಿದೆ. ಬೆಳ್ಳಿಗಾಗಿ ಕೈಗಾರಿಕಾ ಘಟಕಗಳು,ನಾಣ್ಯ ತಯಾರಕರರ ಬೇಡಿಕೆ ಹೆಚ್ಚಿದೆ.

Gold closes up Rs 110 on wedding season Buying

ಅಂತಾರಾಷ್ಟ್ರೀಯ ಮಾರುಕಟ್ಟೆ ನ್ಯೂಯಾರ್ಕ್ ನಲ್ಲಿ ಬುಧವಾರದಂದು ಕೂಡ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬುಧವಾರ ಚಿನ್ನದ ಬೆಲೆ 1283.20 ಡಾಲರ್ ಪ್ರತಿ ಔನ್ಸ್ ಆಗಿದೆ. ಇನ್ನು ಬೆಳ್ಳಿ ಬೆಲೆ ಶೇಕಡಾ 0.26 ರಷ್ಟು ಇಳಿಕೆ ಕಂಡು 15.67 ಡಾಲರ್ ಪ್ರತಿ ಔನ್ಸ್ ಆಗಿದೆ.

ಸತತ ಏರಿಕೆ ನಂತರ ಬಂಗಾರದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ಏರಿಕೆಸತತ ಏರಿಕೆ ನಂತರ ಬಂಗಾರದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ಏರಿಕೆ

ದೆಹಲಿ ಮಾರುಕಟ್ಟೆಯಲ್ಲಿ ಶೇಕಡಾ 99.9 ಹಾಗೂ ಶೇಕಡಾ 99.5 ಶುದ್ಧ ಬಂಗಾರದ ಬೆಲೆ 110 ರೂಪಾಯಿ ಹೆಚ್ಚಳ ಕಂಡು 10 ಗ್ರಾಂಗೆ 32,800 ರೂಪಾಯಿ ಮತ್ತು 32,650 ರೂಪಾಯಿಯಾಗಿದೆ. 8ಗ್ರಾಂ ಸವರನ್ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ. ಪ್ರತಿ ತುಂಡಿನ ಬೆಲೆ 25,200ರು ನಷ್ಟಿದೆ.

ಬೆಳ್ಳಿ ನಾಣ್ಯಗಳು 100 ತುಂಡುಗಳಿಗೆ 77000ರು ನಂತೆ ಖರೀದಿಗೆ ಹಾಗೂ 78000ರುನಂತೆ ಮಾರಾಟಕ್ಕೆ ಲಭ್ಯವಿದೆ.

English summary
Gold firmed up for he third straight session on Wednesday(Jan 09) gaining Rs 110 to 32,800 per 10 grams on increased buying by jewellers to meet marriage season demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X