ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ದಿನದಲ್ಲಿ ನಾಲ್ಕನೇ ಬಾರಿ ಚಿನ್ನದ ಬೆಲೆ ಕುಸಿತ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 08: ಭಾರತೀಯ ಮಾರುಕಟ್ಟೆಯು ಕಳೆದ ಹಲವು ವಾರಗಳಲ್ಲಿ ಹಳದಿ ಲೋಹದ ಬೆಲೆಯ ತೀವ್ರ ಏರಿಳಿತಕ್ಕೆ ಸಾಕ್ಷಿಯಾಗುತ್ತಿದೆ. ಜಾಗತಿಕ ದರಗಳಲ್ಲಿನ ಕುಸಿತವನ್ನು ಆಧರಿಸಿ ಗಮನಿಸಿದ ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಸಹ ಕುಸಿದವು.

Recommended Video

ಕೊನೆಗೂ CCB ಪೋಲೀಸರ ಕೈಗೆ ತಗಲಾಕೊಂಡ Sanjjanaa Galrani | Oneindia Kannada

ಎಂಸಿಎಕ್ಸ್‌ನಲ್ಲಿ, ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.5ರಷ್ಟು ಇಳಿದು, 50,803 ರೂಪಾಯಿಗೆ ತಲುಪಿದೆ. ಬೆಳ್ಳಿ ಭವಿಷ್ಯಗಳು ಶೇಕಡಾ 0.6ರಷ್ಟು ಕುಸಿದು ಪ್ರತಿ ಕೆಜಿಗೆ 67,850 ರೂಪಾಯಿಗೆ ತಲುಪಿದೆ.

ಚಿನ್ನದ ಬೆಲೆ ಮತ್ತೆ ಏರಿಳಿತ: ಸೆಪ್ಟೆಂಬರ್ 07 ದರ ಹೀಗಿದೆಚಿನ್ನದ ಬೆಲೆ ಮತ್ತೆ ಏರಿಳಿತ: ಸೆಪ್ಟೆಂಬರ್ 07 ದರ ಹೀಗಿದೆ

ಹಿಂದಿನ ವಹಿವಾಟಿನಲ್ಲಿ, ಚಿನ್ನದ ಭವಿಷ್ಯವು ಶೇಕಡಾ 0.7ರಷ್ಟು ಏರಿಕೆಯಾಗಿದ್ದು, ಮೂರು ದಿನಗಳ ಇಳಿಕೆ ಬಳಿಕ ಏರಿಕೆ ಕಂಡಿತ್ತು. ಆದರೆ, ಬೆಳ್ಳಿ ಭವಿಷ್ಯವು ಶೇಕಡಾ 1.6 ರಷ್ಟು ಹೆಚ್ಚಾಗಿದೆ. ಚಿನ್ನ ಮತ್ತು ಬೆಳ್ಳಿ ಎರಡೂ ಕೂಡ ಕಳೆದ ತಿಂಗಳ ಗರಿಷ್ಠ ಮಟ್ಟದಿಂದ ತೀವ್ರವಾಗಿ ಇಳಿಕೆ ಸಾಧಿಸಿವೆ. ಆಗಸ್ಟ್ ಗರಿಷ್ಠ ಮಟ್ಟದಿಂದ ಚಿನ್ನವು 10 ಗ್ರಾಂಗೆ 5,000 ರೂಪಾಯಿಗಿಂತ ಕಡಿಮೆಯಾಗಿದೆ ಮತ್ತು ಬೆಳ್ಳಿ ಪ್ರತಿ ಕೆಜಿಗೆ 10,000 ರೂಪಾಯಿಯಷ್ಟು ಕಡಿಮೆಯಾಗಿದೆ.

Gold And Silver Price Down 4th Time In 5 Days

ಜಾಗತಿಕ ಮಾರುಕಟ್ಟೆಗಳಲ್ಲಿ ಯುಎಸ್ ಡಾಲರ್ ಪ್ರಬಲವಾಗಿದೆ, ಆದರೂ ಜಗತ್ತಿನಾದ್ಯಂತ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಸ್ಪಾಟ್ ಚಿನ್ನ ಶೇಕಡಾ 0.2ರಷ್ಟು ಇಳಿಕೆಯಾಗಿ ಔನ್ಸ್‌ಗೆ 1,925.68 ಡಾಲರ್‌ಗೆ ತಲುಪಿದೆ. ಡಾಲರ್ ಸೂಚ್ಯಂಕವು ತನ್ನ ಪ್ರತಿಸ್ಪರ್ಧಿಗಳ(ಇತರೆ ಕರೆನ್ಸಿ) ವಿರುದ್ಧ ಶೇಕಡಾ 0.45ರಷ್ಟು ಏರಿಕೆಯಾಗಿದ್ದು, ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನ ಹೆಚ್ಚು ದುಬಾರಿಯನ್ನಾಗಿ ಮಾಡಿದೆ.

ಕಳೆದ ವಾರ ಯುಎಸ್ ಟೆಕ್ ಷೇರುಗಳ ಕುಸಿತದ ನಂತರ ಏಷ್ಯಾದ ಷೇರು ಮಾರುಕಟ್ಟೆಗಳು ಇಂದು ಸ್ವಲ್ಪ ಮಟ್ಟಿಗೆ ಮರಳಲು ಪ್ರಯತ್ನಿಸಿವೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕವು ಹಸಿರು ಬಣ್ಣಕ್ಕೆ ತಿರುಗುವ ಲಕ್ಷಣಗಳಿವೆ.

English summary
Gold and silver prices fell today in Indian markets, tracking declines in global rates. On MCX, gold futures fell 0.5% to Rs 50,803 per 10 gram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X