ಹಳದಿ ಲೋಹಕ್ಕೆ ಮತ್ತಷ್ಟು ಬೇಡಿಕೆ: ಸೆಪ್ಟೆಂಬರ್ 08ರ ಚಿನ್ನದ ದರ ಇಲ್ಲಿದೆ
ನವದೆಹಲಿ, ಸೆಪ್ಟೆಂಬರ್ 08: ಭಾರತೀಯ ಮಾರುಕಟ್ಟೆಯಲ್ಲಿ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಕುಸಿತಗೊಂಡಿದ್ದ ಚಿನ್ನದ ಬೆಲೆ ದಿನದ ವಹಿವಾಟು ಮುಕ್ತಾಯಕ್ಕೆ ಏರಿಕೆ ದಾಖಲಿಸಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 49,800 ರೂಪಾಯಿಗೆ ಏರಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 54,310 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 100 ರೂಪಾಯಿ ತಗ್ಗಿದ್ದು 68,000 ರೂಪಾಯಿ ದಾಖಲಾಗಿದೆ.
ಕೊರೊನಾ ಸಾಂಕ್ರಾಮಿಕ ಸಂಖ್ಯೆಯ ಏರಿಕೆ, ಅಮೆರಿಕಾ-ಚೀನಾ ಹಾಗೂ ಭಾರತ-ಚೀನಾ ನಡುವಿನ ಉದ್ವಿಗ್ನತೆಯು ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆ ಚಿನ್ನದತ್ತ ಮತ್ತೆ ಮುಖ ಮಾಡುವಂತೆ ಮಾಡಿದೆ. ಇದರ ನಡುವೆ ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಚಿನ್ನದ ಬೆಲೆ ಮತ್ತೆ ಏರಿಳಿತ: ಸೆಪ್ಟೆಂಬರ್ 07 ದರ ಹೀಗಿದೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಸೆಪ್ಟೆಂಬರ್ 08: 48,300-52,670 (150 ರೂಪಾಯಿ ಏರಿಕೆ)
ಸೆಪ್ಟೆಂಬರ್ 07: 48,150-52,520
ಸೆಪ್ಟೆಂಬರ್ 06: 48,160-52,530
ಸೆಪ್ಟೆಂಬರ್ 05: 48,150-52,520
ದೆಹಲಿಯಲ್ಲಿ ಚಿನ್ನದ ಬೆಲೆ
ಸೆಪ್ಟೆಂಬರ್ 08: 49,800-54,310 (150 ರೂಪಾಯಿ ಏರಿಕೆ)
ಸೆಪ್ಟೆಂಬರ್ 07: 49,650-54,160
ಸೆಪ್ಟೆಂಬರ್ 06: 49,610-54,120
ಸೆಪ್ಟೆಂಬರ್ 05: 49,600-54,110
ಮೂರು ದಿನ ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ
ಚೆನ್ನೈನಲ್ಲಿ ಚಿನ್ನದ ಬೆಲೆ
ಸೆಪ್ಟೆಂಬರ್ 08: 48,850-53,290 (ಬದಲಾವಣೆ ಇಲ್ಲ)
ಸೆಪ್ಟೆಂಬರ್ 07: 48,850-53,290
ಸೆಪ್ಟೆಂಬರ್ 06: 48,890-53,320
ಸೆಪ್ಟೆಂಬರ್ 05: 48,880-53,310
ಮುಂಬೈ ಚಿನ್ನದ ಬೆಲೆ
ಸೆಪ್ಟೆಂಬರ್ 08: 49,550-50,550 (40 ರೂಪಾಯಿ ಇಳಿಕೆ)
ಸೆಪ್ಟೆಂಬರ್ 07: 49,590-50,590
ಸೆಪ್ಟೆಂಬರ್ 06: 49,510-50,510
ಸೆಪ್ಟೆಂಬರ್ 05: 49,500-50,500
ಜೈಪುರ ಚಿನ್ನದ ಬೆಲೆ
ಸೆಪ್ಟೆಂಬರ್ 08: 49,800-54,310 (150 ರೂಪಾಯಿ ಏರಿಕೆ)
ಸೆಪ್ಟೆಂಬರ್ 07: 48,850-53,290
ಸೆಪ್ಟೆಂಬರ್ 06: 48,890-53,320
ಸೆಪ್ಟೆಂಬರ್ 05: 49,600-54,110
ಚಂಡೀಗಡ ಚಿನ್ನದ ಬೆಲೆ
ಸೆಪ್ಟೆಂಬರ್ 08: 48,900-51,900 (ಬದಲಾವಣೆ ಇಲ್ಲ)
ಸೆಪ್ಟೆಂಬರ್ 07: 48,900-51,900
ಸೆಪ್ಟೆಂಬರ್ 06: 48,910-51,910
ಸೆಪ್ಟೆಂಬರ್ 05: 48,900-51,900
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.