ಮತ್ತಷ್ಟು ಎತ್ತರಕ್ಕೆ ಚಿನ್ನದ ಬೆಲೆ: ಸತತ 4ನೇ ದಿನ ಏರಿಕೆ
ನವದೆಹಲಿ, ಡಿಸೆಂಬರ್ 04: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೊಮ್ಮೆ ಗಗನಕ್ಕೇರುವ ಲಕ್ಷಣ ತೋರಿದ್ದು, ಸತತ 4ನೇ ದಿನ ಏರಿಕೆಗೊಂಡಿದೆ. ಶುಕ್ರವಾರ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,250 ರೂಪಾಯಿ ಏರಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 52,630 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 1,600 ರೂಪಾಯಿ ಹೆಚ್ಚಳಗೊಂಡು 64 ಸಾವಿರ ಗಡಿ ಮುಟ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಸತತ 4ನೇ ದಿನ ಚಿನ್ನದ ಬೆಲೆ ಏರಿಕೆ: ಆಗಸ್ಟ್ ಗರಿಷ್ಠದಿಂದ 7,000 ರೂಪಾಯಿ ಕಡಿಮೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 04: 46,100-50,290 (220 ರೂಪಾಯಿ ಏರಿಕೆ)
ಡಿಸೆಂಬರ್ 03: 45,900-50,070
ಡಿಸೆಂಬರ್ 02: 45,150-49,200
ಡಿಸೆಂಬರ್ 01: 44,900-48,980
ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 04: 48,250-52,630 (220 ರೂಪಾಯಿ ಏರಿಕೆ)
ಡಿಸೆಂಬರ್ 03: 48,050-52,410
ಡಿಸೆಂಬರ್ 02: 47,300-51,600
ಡಿಸೆಂಬರ್ 01: 47,050-51,320
19 ವರ್ಷಗಳ ಬಳಿಕ ಕೆಜಿಎಫ್ ಚಿನ್ನದ ಗಣಿ ಪ್ರಾರಂಭಕ್ಕೆ ಹಸಿರು ನಿಶಾನೆ
ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 04: 46,560-50,790 (10 ರೂಪಾಯಿ ಏರಿಕೆ)
ಡಿಸೆಂಬರ್ 03: 46,560-50,780
ಡಿಸೆಂಬರ್ 02: 45,740-49,890
ಡಿಸೆಂಬರ್ 01: 45,260-49,380
ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 04: 48,330-49,330 (190 ರೂಪಾಯಿ ಏರಿಕೆ)
ಡಿಸೆಂಬರ್ 03: 48,140-49,140
ಡಿಸೆಂಬರ್ 02: 47,630-48,630
ಡಿಸೆಂಬರ್ 01: 46,920-47,920
ಜೈಪುರ ಚಿನ್ನದ ಬೆಲೆ
ಡಿಸೆಂಬರ್ 04: 48,250-52,630 (220 ರೂಪಾಯಿ ಏರಿಕೆ)
ಡಿಸೆಂಬರ್ 03: 48,050-52,410
ಡಿಸೆಂಬರ್ 02: 47,300-51,600
ಡಿಸೆಂಬರ್ 01: 47,050-51,320
ಚಂಡೀಗಡ ಚಿನ್ನದ ಬೆಲೆ
ಡಿಸೆಂಬರ್ 04: 47,150-50,930 (10 ರೂಪಾಯಿ ಏರಿಕೆ)
ಡಿಸೆಂಬರ್ 03: 47,140-50,920
ಡಿಸೆಂಬರ್ 02: 47,130-50,910
ಡಿಸೆಂಬರ್ 01: 47,130-50,910
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.