• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೋದ್ರೇಜ್ ಹೊಚ್ಚ ಹೊಸ 2 ರೆಫ್ರಿಜರೇಟರ್ಸ್ ವಿಶಿಷ್ಟ ಹೇಗೆ?

|

'ಯೋಚನಾಬದ್ಧವಾಗಿ ಮಾಡಿದ ಸಾಧನಗಳು' ಎಂಬ ತನ್ನ ತತ್ವಕ್ಕೆ ಅನುಗುಣವಾಗಿ ಅಗ್ರಗಣ್ಯ ಗ್ರಾಹಕ ವಸ್ತುಗಳ ಉತ್ಪಾದಕ ಕಂಪನಿಗೋದ್ರೇಜ್ ಅಪ್ಲಯನ್ಸಸ್, ತನ್ನ ಗ್ರಾಹಕರಿಗಾಗಿ ಸ್ಮಾರ್ಟ್ ತಂತ್ರಜ್ಞಾನ ಎನಿಸಿದ 6 ಇನ್ 1 ಫ್ರೀಝರ್ ಮೋಡ್ ಪರಿಚಯಿಸಿದೆ. ಇದು ಫ್ರೀಜರ್ ನಿಂದ ಡೀಪ್ ಫ್ರೀಜರ್ ಹಾಗೂ ಕೋಲ್ಡ್ ಸ್ಟೋರೇಜ್ ಮೋಡ್‍ವರೆಗೂ ಪರಿವರ್ತನೀಯವಾಗಲಿದೆ.

ಪರಿವರ್ತನೀಯ ಫ್ರೀಜರ್ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಇದು ತಂಪಾಗಿಸುವಿಕೆಯ ಆರು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ.

* ಸ್ವಯಂಚಾಲಿತ ಮೋಡ್: ಡಿಫಾಲ್ಟ್ ಸೆಟ್ಟಿಂಗ್‍ನಲ್ಲಿ ಜಾಣ್ಮೆಯಿಂದ ಫ್ರೀಜರ್ ಉಷ್ಣತೆಯನ್ನು ನಿಯಂತ್ರಿಸಲಾಗುತ್ತದೆ.

* ಕಡಿಮೆ ಲೋಡ್ ಮೋಡ್: ಫ್ರೀಜರ್ ಭರ್ತಿಯಾಗಿದ್ದಾಗ ಕೂಡಾ ಕಡಿಮೆ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತದೆ.

* ಐಸ್‍ಕ್ರೀಮ್ ಮೋಡ್: ಐಸ್‍ಕ್ರೀಂಗೆ ಸೂಕ್ತ ಎನಿಸುವ ಉಷ್ಣತೆ

* ಹೈಲೋಡ್ ಮೋಡ್: ಮುಖ್ಯ ವಿಭಾಗವು ಭರ್ತಿಯಾಗಿದ್ದಾಗ ಕೂಡಾ, ಹೈಲೋಡ್ ಮೋಡ್ ಸೂಕ್ತವೆನಿಸುಷ್ಟು ಫ್ರೀಜರ್ ಉಷ್ಣತೆಯನ್ನು ನಿರ್ವಹಿಸುತ್ತದೆ

* ಡೀಪ್ ಫ್ರೀಜರ್ ಮೋಡ್: ಇದು ಶೀತಲೀಕೃತ ಆಹಾರ ದಾಸ್ತಾನಿಗೆ ಸೂಕ್ತವಾಗಿದ್ದು, ಮೈನಸ್ 18 ಡಿಗ್ರಿ ಸೆಲ್ಷಿಯಸ್‍ನಷ್ಟು ಉಷ್ಣತೆಯಲ್ಲಿ ಶೀತಲೀಕೃತ ಖಾದ್ಯಗಳು ಮತ್ತು ಶೀತಲೀಕೃತ ವಸ್ತುಗಳನ್ನು ಸಂರಕ್ಷಿಸುತ್ತದೆ.

* ಕೋಲ್ಡ್ ಸ್ಟೋರೇಜ್ ಮೋಡ್: ಇದು ಮೈನಸ್ 25 ಡಿಗ್ರಿ ಸೆಲ್ಷಿಯಸ್ ಉಷ್ಣತೆಯಲ್ಲಿ ಶೀಲತೀಕೃತ ಆಹಾರವನ್ನು ಸಂರಕ್ಷಿಸುತ್ತದೆ. ಇದು ಮಾಂಸದ ಶೀತಲೀಕೃತ ವ್ಯವಸ್ಥೆಗೆ ಸೂಕ್ತ.

ಗೋದ್ರೇಜ್ ಇಯಾನ್ ವೈಬ್ ಮತ್ತು ಗೋದ್ರೇಜ್ ಇಯಾನ್ ವಲೋರ್ ಹೀಗೆ ತನ್ನ ಎರಡು ಫ್ರೋಸ್ಟ್ ಫ್ರೀ ರೆಫ್ರಿಜರೇಶನ್ ಸರಣಿಯಲ್ಲಿ ಲಭ್ಯವಿದ್ದು, ಇದು ಇಂಟೆಲಿಜೆಂಟ್ ಇನ್ವರ್ಟ್ ತಂತ್ರಜ್ಞಾನದಿಂದ ಚಾಲಿತವಾಗಿದೆ. ಈ ವಿಶಿಷ್ಟ ರೆಫ್ರಿಜರೇಟರ್ ಗಳು ಕಂಪ್ರೆಸ್ಸರ್ ವೇಗದ ವ್ಯತ್ಯಯಕ್ಕೆ ಹೊಂದಾಣಿಕೆ ಮಾಡುವಂತಿದ್ದು, ಹೆಚ್ಚಿನ ಕ್ಷಮತೆ, ಬಾಳಿಕೆ ಮತ್ತು ನಿಶ್ಯಬ್ದ ಕಾರ್ಯನಿರ್ವಹಣೆಗೆ ನೆರವಾಗುತ್ತದೆ.

ಪಿಯುಎಫ್ ದಪ್ಪ 2.75 ಇಂಚುಗಳಾಗಿದ್ದು, ಈ ರೆಫ್ರಿಜರೇಟರ್ ಮಾಡೆಲ್‍ಗಳು ಇಡೀ ವರ್ಗದಲ್ಲೇ ಗರಿಷ್ಠ ತಂಪನ್ನು ಉಳಿಸಿಕೊಳ್ಳುವ ಗುಣ ಹೊಂದಿವೆ. ಇದರಿಂದಾಗಿ ಸುಧೀರ್ಘ ಅವಧಿಗೆ ತಾಜಾತನವನ್ನು ಕಾಪಾಡುತ್ತದೆ. ಇದು 27 ಲೀಟರ್ ಸಾಮರ್ಥ್ಯದ ದೊಡ್ಡ ವೆಜಿಟೇಲಬ್ ಟ್ರೇ ಹೊಂದಿದ್ದು, ಎಲ್ಲ ತರಕಾರಿಗಳನ್ನು ಸಂಗ್ರಹಿಸಿ ಇಡಲು ಸಾಕಾಗುವಷ್ಟು ಸ್ಥಳಾವಕಾಶವನ್ನು ಹೊಂದಿರುತ್ತದೆ.

ಲಾಕ್‍ಡೌನ್‍ನಂಥ ಸಂದರ್ಭದಲ್ಲಿ ಗ್ರಾಹಕರ ಆಹಾರ ಸಂರಕ್ಷಣೆ ಮತ್ತು ದಾಸ್ತಾನು ಹವ್ಯಾಸಗಳು ಬದಲಾಗುತ್ತಿದ್ದು, ಹೊಸ ಗೋದ್ರೇಜ್ ಇಯಾನ್ ವೈಬ್ ಮತ್ತು ಇಯಾನ್ ವಲೋರ್ ಈ ಅಗತ್ಯತೆಯನ್ನು ಉತ್ತಮವಾಗಿ ಪೂರೈಸುತ್ತವೆ. ಇದು 261 ಲೀಟರ್ ಮತ್ತು 290 ಲೀಟರ್ ಸಾಮರ್ಥ್ಯಗಳಲ್ಲಿ ಲಭ್ಯವಿದ್ದು, ಈ ಮಾಡೆಲ್‍ಗಳ ಬೆಲೆ ರೂ. 23,500 (+ತೆರಿಗೆಗಳು) ಗಳಿಂದ ಆರಂಭ.

ಗೋದ್ರೇಜ್ ಅಪ್ಲಯಯನ್ಸಸ್‍ನ ರೆಫ್ರಿಜರೇಟರ್ ಉತ್ಪನ್ನ ಸಮೂಹ ಮುಖ್ಯಸ್ಥ ಅನೂಪ್ ಭಾರ್ಗವ ಮಾತನಾಡಿ, ''ಈ ಹೊಸ ಶ್ರೇಣಿಯು ಈ ಹಣಕಾಸು ವರ್ಷದಲ್ಲಿ 250 ಕೋಟಿ ರೂಪಾಯಿಗಳ ಆದಾಯ ತಂದುಕೊಡುತ್ತದೆ ಮತ್ತು ರೆಫ್ರಿಜರೇಟರ್ ವರ್ಗದಲ್ಲಿ ನಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸ ನಮಗಿದೆ" ಎಂದು ಹೇಳಿದರು.

English summary
Godrej Appliances, leading consumer durables manufacturer, brings yet another smart technology for its consumers - Convertible freezer Technology with 6 in 1 Freezer Modes – from Freezer to Deep Freezer and even, Cold Storage Mode
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X