ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಆಘಾತ! ಜಿಡಿಪಿ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಕುಸಿತ

|
Google Oneindia Kannada News

Recommended Video

ಭಾರತಕ್ಕೆ ಆಘಾತ | ಜಿಡಿಪಿ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಕುಸಿತ | Oneindia Kannada

ನವದೆಹಲಿ, ಆಗಸ್ಟ್ 02: 2018ನೇ ಸಾಲಿನ ಜಾಗತಿಕ ಜಿಡಿಪಿ ಶ್ರೇಯಾಂಕ ಪಟ್ಟಿ ಪ್ರಕಟಿಸಲಾಗಿದೆ. ಭಾರತ ಐದನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದಿದೆ. 20.5 ಟ್ರಿಲಿಯನ್ ಡಾಲರ್ ಹೊಂದಿರುವ ಯುಎಸ್ 2018ರಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಯುಕೆ ಹಾಗೂ ಫ್ರಾನ್ಸ್ ಪ್ರಗತಿ ಕಂಡಿದ್ದು, ಕ್ರಮವಾಗಿ ಐದು ಹಾಗೂ ಆರನೇ ಸ್ಥಾನಕ್ಕೇರಿವೆ ಎಂದು ವಿಶ್ವಬ್ಯಾಂಕ್ ಪ್ರಕಟಣೆಯ ಅಂಕಿ ಅಂಶ ಹೇಳುತ್ತಿವೆ.2017ರಲ್ಲಿ ಭಾರತ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶ ಎನಿಸಿಕೊಂಡಿತ್ತು. ಫ್ರಾನ್ಸ್ 7ನೇ ಸ್ಥಾನದಲ್ಲಿತ್ತು.

ಸುಳ್ಳಾದ ನಿರೀಕ್ಷೆ! ಭಾರತದ ಜಿಡಿಪಿ ದರ ವರ್ಷದಿಂದ ವರ್ಷಕ್ಕೆ ಕುಸಿತ ಸುಳ್ಳಾದ ನಿರೀಕ್ಷೆ! ಭಾರತದ ಜಿಡಿಪಿ ದರ ವರ್ಷದಿಂದ ವರ್ಷಕ್ಕೆ ಕುಸಿತ

2018ರಲ್ಲಿ 13.6 ಟ್ರಿಲಿಯನ್ ಆರ್ಥಿಕತೆಯೊಂದಿಗೆ ಚೀನಾ ಎರಡನೇ ಸ್ಥಾನ ಹಾಗೂ 5 ಟ್ರಿಲಿಯನ್ ಆರ್ಥಿಕತೆಯೊಂದಿಗೆ ಜಪಾನ್ ಮೂರನೇ ಸ್ಥಾನದಲ್ಲಿವೆ. 4ನೇ ಸ್ಥಾನದಲ್ಲಿರುವ ಜರ್ಮನಿ 3.9 ಟ್ರಿಲಿಯನ್ ಜಿಡಿಪಿ ಹೊಂದಿದೆ.5 ಹಾಗೂ 6ನೇ ಸ್ಥಾನದಲ್ಲಿ ಯುಕೆ ಹಾಗೂ ಫ್ರಾನ್ಸ್ ತಲಾ 2.8 ಟ್ರಿಲಿಯನ್ ಡಾಲರ್ ಹೊಂದಿವೆ. ನಂತರದ ಸ್ಥಾನದಲ್ಲಿ ಜಿಡಿಪಿ ಗಳಿಕೆ 2.7 ಟ್ರಿಲಿಯನ್ ಡಾಲರ್ ನೊಂದಿಗೆ ಭಾರತ ಇದೆ.

Global GDP Rankings of 2018 : India drops to 7th spot

2017ರಲ್ಲಿ ಭಾರತದ ಆರ್ಥಿಕ ಸ್ಥಾನಮಾನ 2.65 ಟ್ರಿಲಿಯನ್ ಡಾಲರ್ ನಷ್ಟಿತ್ತು. ಯುಕೆ 2.64 ಟ್ರಿಲಿಯನ್ ಡಾಲರ್ ಹಾಗೂ ಫ್ರಾನ್ಸ್ 2.5 ಟ್ರಿಲಿಯನ್ ಡಾಲರ್ ಹೊಂದಿದ್ದವು.

ಫ್ರಾನ್ಸಿನ ಜನ ಸಂಖ್ಯೆ ಇರುವುದು ಕೇವಲ 6.7 ಕೋಟಿ ಮಾತ್ರ. ಭಾರತದ ಒಬ್ಬ ವ್ಯಕ್ತಿಯ ತಲಾವಾರು ಜಿಡಿಪಿಗೆ ಲೆಕ್ಕ ಹಾಕಿದರೆ, ಫ್ರಾನ್ಸ್​ ನಮ್ಮ ದೇಶದ 20 ಪಟ್ಟು ಹೆಚ್ಚಿನ ತಲಾದಾಯ ಹೊಂದಿದೆ. ಭಾರತದ ಜನಸಂಖ್ಯೆ 134 ಕೋಟಿ ಮೀರುತ್ತಿದೆ. ಸುಮಾರು 134 ಕೋಟಿ ಜನ ಸಂಖ್ಯೆಯನ್ನು ಹೊಂದಿರುವ ಭಾರತ, ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ.

2024ರ ವೇಳೆಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್: ಮೋದಿ ವಿಶ್ವಾಸ 2024ರ ವೇಳೆಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್: ಮೋದಿ ವಿಶ್ವಾಸ

ಜಿಡಿಪಿ ಪ್ರಗತಿ ದರ ಕುಸಿತ: 2018-19ನೇ ಸಾಲಿನ ಆರ್ಥಿಕ ಪ್ರಗತಿ ದರ ಶೇ 7.2ರಷ್ಟಾಗಲಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿತ್ತು. ಆದರೆ, ಕಳೆದ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ 7.2% ರಿಂದ 6.8% ಕೇಂದ್ರ ಸಾಂಖ್ಯಿಕ ಕಚೇರಿ(ಸಿಎಸ್ಒ) ಮಾಹಿತಿ ನೀಡಿದೆ. 2024ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಗುರಿಯನ್ನಿಟ್ಟುಕೊಳ್ಳಲಾಗಿದೆ.

ಖಾಸಗಿ ಆರ್ಥಿಕ ತಜ್ಞ ದೇವೇಂದ್ರ ಪಂತ್ ಪ್ರಕಾರ, "2018-19ನೇ ಸಾಲಿಗೆ ಶೇ7ರಷ್ಟಿರಲಿದೆ.ಶೇ 7.4ರಷ್ಟು ನಿರೀಕ್ಷೆಯನ್ನು ಹೊಂದಲಾಗಿತ್ತು. ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಬದಲಾವಣೆ, ಮೇಲಿಂದ ಮೇಲೆ ಬಡ್ಡಿ ದರದಲ್ಲಿನ ಏರಿಕೆ, ರಫ್ತು ಬೇಡಿಕೆ ದುರ್ಬಲಗೊಂಡಿದ್ದ ಕಾರಣಕ್ಕೆ ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ತಡೆ ಬಿದ್ದಂತಾಗಿತ್ತು, ಶೇ 8ರಷ್ಟು ಪ್ರಗತಿ ದರ ಗುರಿ ಇಟ್ಟುಕೊಂಡು ಮುನ್ನಡೆಯುವುದು ಅನಿವಾರ್ಯ".

English summary
From fifth position, India has slipped to the seventh spot in the global GDP rankings of 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X