ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ರಿಟೇಲ್: GIC ಮತ್ತು TPG ಸಂಸ್ಥೆಯಿಂದ 7,350 ಕೋಟಿ ರೂ. ಹೂಡಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 03: ಇಡೀ ಜಗತ್ತು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ತತ್ತರಿಸಿದ್ದು, ಜಾಗತಿಕ ಆರ್ಥಿಕತೆಯು ನಿಧಾನಗತಿಯಲ್ಲಿ ಚೇತರಿಸಿಕೊಳ್ತಿದೆ. ಭಾರತದಲ್ಲೂ ಕೊರೊನಾ ಪ್ರಕರಣಗಳು, ಸಾವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಇದೆಲ್ಲಾ ಒಂದ್ಕಡೆಯಾದ್ರೆ ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ, ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ವಿಶ್ವದ ಬೃಹತ್ ಕಂಪನಿಗಳಿಂದ ಹೂಡಿಕೆಯನ್ನು ಆಕರ್ಷಿಸುವಲ್ಲಿ ಮತ್ತಷ್ಟು ಯಶಸ್ವಿಯಾಗಿದ್ದಾರೆ.

ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋದಲ್ಲಿ ಫೇಸ್‌ಬುಕ್, ಗೂಗಲ್ ಸೇರಿದಂತೆ 13 ದಿಗ್ಗಜ ಕಂಪನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಮುಕೇಶ್‌ ಅಂಬಾನಿ ಲಕ್ಷಾಂತರ ಕೋಟಿ ರೂಪಾಯಿಯನ್ನು ಹೂಡಿಕೆಗೆ ಕಾರಣವಾಗಿದ್ದರು. ಇದೀಗ ರಿಲಯನ್ಸ್ ರೀಟೆಲ್‌ನಲ್ಲಿ ಒಂದರ ಹಿಂದೆ ಮತ್ತೊಂದರಂತೆ ಕಂಪನಿಗಳನ್ನು ತನ್ನತ್ತ ಸೆಳೆಯುತ್ತಿದ್ದಾರೆ. ಈ ಸಾಲಿಗೆ ಸಿಂಗಾಪುರದ ಜಿಐಸಿ ಮತ್ತು ಟಿಪಿಜಿ ಸಂಸ್ಥೆಗಳು ಸೇರಿದೆ.

ಲಾಕ್‌ಡೌನ್‌ ಆರಂಭದಿಂದ ಮುಕೇಶ್ ಅಂಬಾನಿ ಸಂಪಾದನೆ ಗಂಟೆಗೆ 90 ಕೋಟಿ ರೂಪಾಯಿಲಾಕ್‌ಡೌನ್‌ ಆರಂಭದಿಂದ ಮುಕೇಶ್ ಅಂಬಾನಿ ಸಂಪಾದನೆ ಗಂಟೆಗೆ 90 ಕೋಟಿ ರೂಪಾಯಿ

ಖಾಸಗಿ ಇಕ್ವಿಟಿ ಸಂಸ್ಥೆ ಟಿಪಿಜಿ ಒಟ್ಟು 7,350 ಕೋಟಿ ರೂ. ಹೂಡಿಕೆ

ಖಾಸಗಿ ಇಕ್ವಿಟಿ ಸಂಸ್ಥೆ ಟಿಪಿಜಿ ಒಟ್ಟು 7,350 ಕೋಟಿ ರೂ. ಹೂಡಿಕೆ

ಸಿಂಗಾಪುರದ ಮೂಲದ ಜಿಐಸಿ ಮತ್ತು ಖಾಸಗಿ ಇಕ್ವಿಟಿ ಸಂಸ್ಥೆ ಟಿಪಿಜಿ ಒಟ್ಟು 7,350 ಕೋಟಿ ರೂ.ಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆ ರಿಲಯನ್ಸ್ ರಿಟೇಲ್‌ನಲ್ಲಿ ಹೂಡಿಕೆ ಮಾಡಲಿದೆ ಎಂದು 'ಬ್ಲೂಮ್‌ಬರ್ಗ್ ದಿ ಕ್ವಿಂಟ್' ವರದಿ ಮಾಡಿದೆ. ಈ ಮೂಲಕ ಬಿಲಿಯನೇರ್ ಮುಖೇಶ್ ಅಂಬಾನಿ ತಮ್ಮ ವ್ಯವಹಾರಗಳಿಗೆ ಹಣವನ್ನು ಸಂಗ್ರಹಿಸುವ ಸುಗ್ಗಿಯನ್ನು ಮುಂದುವರಿಸಿದ್ದಾರೆ.

ಜಾಗತಿಕ ಹೂಡಿಕೆ ಸಂಸ್ಥೆಯಾದ ಜಿಐಸಿ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನಲ್ಲಿ ಶೇ. 1.22ರಷ್ಟು ಪಾಲನ್ನು 5,512.5 ಕೋಟಿ ರೂ.ಗೆ ಆಯ್ಕೆ ಮಾಡಲಿದೆ ಎಂದು ರಿಲಯನ್ಸ್ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ. ಟಿಪಿಜಿ ಭಾರತದ ಅತಿದೊಡ್ಡ ರಿಟೇಲ್ ಹೋಲ್ಡಿಂಗ್ ಕಂಪನಿಯಲ್ಲಿ ಶೇ. 0.4ರಷ್ಟು ಅಥವಾ 1,837.5 ಕೋಟಿ ರೂ. ಹೂಡಿಕೆ ಮಾಡಲಿದೆ.

ಈಗಾಗಲೇ ಆರು ಹೂಡಿಕೆದಾರರನ್ನು ಸೆಳೆದಿರುವ ಅಂಬಾನಿ

ಈಗಾಗಲೇ ಆರು ಹೂಡಿಕೆದಾರರನ್ನು ಸೆಳೆದಿರುವ ಅಂಬಾನಿ

ಅಂಬಾನಿ ಡಿಜಿಟಲ್ ವ್ಯವಹಾರದಲ್ಲಿ ಈ ಹಿಂದಿನ ನಿಧಿಸಂಗ್ರಹವನ್ನು ಪುನರಾವರ್ತಿಸುತ್ತಿದ್ದಾರೆ. ಅವರು ಈಗ ರಿಟೇಲ್ ಘಟಕದಲ್ಲಿ ಆರು ಹೂಡಿಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದುವರೆಗೆ ಶೇ. 7.1ರಷ್ಟು ಪಾಲನ್ನು ಮಾರಾಟ ಮಾಡುವ ಮೂಲಕ 32,197.5 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸಿದ್ದಾರೆ. ರಿಲಯನ್ಸ್ ರಿಟೇಲ್ ವೆಂಚರ್ಸ್‌ನಲ್ಲಿ ಇದುವರೆಗೆ ಹೂಡಿಕೆ ಮಾಡಿದ ಇತರ ಸಂಸ್ಥೆಗಳು ಅಬುಧಾಬಿ ಮೂಲದ ಮುಬದಾಲಾ, ಸಿಲ್ವರ್ ಲೇಕ್, ಜನರಲ್ ಅಟ್ಲಾಂಟಿಕ್ ಮತ್ತು ಕೆಕೆಆರ್ ಮತ್ತು ಕಂ.

ಮುಬದಾಲದಿಂದ ರಿಲಯನ್ಸ್ ರೀಟೇಲ್ ನಲ್ಲಿ 6,247.5 ಕೋಟಿ ರು. ಹೂಡಿಕೆಮುಬದಾಲದಿಂದ ರಿಲಯನ್ಸ್ ರೀಟೇಲ್ ನಲ್ಲಿ 6,247.5 ಕೋಟಿ ರು. ಹೂಡಿಕೆ

ಮುಬದಾಲದಿಂದ 6,247.5 ಕೋಟಿ ಹೂಡಿಕೆ

ಮುಬದಾಲದಿಂದ 6,247.5 ಕೋಟಿ ಹೂಡಿಕೆ

ಅಬುಧಾಬಿ ಮೂಲದ ಸಾರ್ವಭೌಮ ಹೂಡಿಕೆದಾರ ಮುಬದಾಲ ಇನ್‌ವೆಸ್ಟ್‌ಮೆಂಟ್ ಕಂಪೆನಿಯಿಂದ (ಮುಬದಾಲ) ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (RRVL) 6,247.5 ಕೋಟಿ ರುಪಾಯಿ (AED 3.1 ಬಿಲಿಯನ್) ಹೂಡಿಕೆ ಮಾಡಲಿದೆ ಎಂದು ಇತ್ತೀಚೆಗಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಘೋಷಣೆ ಮಾಡಿತ್ತು.

ಸಿಲ್ವರ್ ಲೇಕ್ ಕಂಪನಿಯಿಂದ 7,500 ಕೋಟಿ ಹೂಡಿಕೆ

ಸಿಲ್ವರ್ ಲೇಕ್ ಕಂಪನಿಯಿಂದ 7,500 ಕೋಟಿ ಹೂಡಿಕೆ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಿಲ್ವರ್ ಲೇಕ್ ಪಾಲುದಾರರಿಂದ, 7,500 ಕೋಟಿ ಪಡೆದಿದೆ. ಕ್ಯಾಲಿಫೋರ್ನಿಯಾ ಮೂಲದ ಖಾಸಗಿ ಇಕ್ವಿಟಿ ಸಂಸ್ಥೆಯು ಈ ಹಿಂದೆ ರಿಲಯನ್ಸ್‌ನ ಚಿಲ್ಲರೆ ಮಾರಾಟದಲ್ಲಿ ಶೇ. 1.75 ಪಾಲನ್ನು ಪಡೆದುಕೊಂಡಿದೆ. ಸೆಪ್ಟೆಂಬರ್ 9 ರಂದು, ರಿಲಯನ್ಸ್ ಇಂಡಸ್ಟ್ರೀಸ್ ತನ್ನ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನಲ್ಲಿ 7,500 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿತು.


ಸಿಲ್ವರ್ ಲೇಕ್ ಅಷ್ಟೇ ಅಲ್ಲದೆ ಕೆಕೆಆರ್ 81,348,479 ಷೇರುಗಳನ್ನು ಪಡೆದುಕೊಂಡಿದ್ದು, ಜನರಲ್ ಅಟ್ಲಾಂಟಿಕ್ 53,865,885 ರಿಲಯನ್ಸ್ ರಿಟೇಲ್‌ನಲ್ಲಿ ಪಡೆದುಕೊಂಡಿದೆ.

English summary
Singapore's GIC and private equity firm TPG will invest a combined Rs 7,350 crore in the retail unit of Reliance Industries Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X