ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರಲ್ ಅಟ್ಲಾಂಟಿಕ್‌ನಿಂದ ರಿಲಯನ್ಸ್‌ನಲ್ಲಿ 3,675 ಕೋಟಿ ರು ಹೂಡಿಕೆ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 30: ಜಾಗತಿಕ ಹೂಡಿಕೆ ಸಂಸ್ಥೆ ಜನರಲ್ ಅಟ್ಲಾಂಟಿಕ್ ನಿಂದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿಎಲ್)ನಲ್ಲಿ 3,675 ಕೋಟಿ ರುಪಾಯಿ ಹೂಡಿಕೆ ಮಾಡಲಾಗುತ್ತದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಬುಧವಾರ ಘೋಷಣೆ ಮಾಡಿದೆ. ಆರ್ ಆರ್ ವಿಎಲ್ ಪ್ರೀ- ಮನಿ ಈಕ್ವಿಟಿ ಮೌಲ್ಯ 4.285 ಲಕ್ಷ ಕೋಟಿ ಇದೆ.

Recommended Video

corona timeಅಲ್ಲು income ಜೋರು | Oneindia Kannada

ಅದರ ಆಧಾರದಲ್ಲಿ ಹೇಳುವುದಾದರೆ, ಈಗ ಜನರಲ್ ಅಟ್ಲಾಂಟಿಕ್ ಹೂಡಿಕೆ ಮಾಡುತ್ತಿರುವ ಮೊತ್ತಕ್ಕೆ ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ 0.84 ಪರ್ಸೆಂಟ್ ಪಾಲು ದೊರೆತಂತಾಗುತ್ತದೆ (ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ). ಈ ವರ್ಷದ ಆರಂಭದಲ್ಲಿ ಜನರಲ್ ಅಟ್ಲಾಂಟಿಕ್ ನಿಂದಲೇ ರಿಲಯನ್ಸ್ ಗೆ ಸೇರಿದ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 6,598.38 ಕೋಟಿ ರುಪಾಯಿ ಹೂಡಿಕೆ ಘೋಷಣೆ ಮಾಡಲಾಗಿದೆ.

ಸಿಲ್ವರ್ ಲೇಕ್ ಕಂಪನಿಯಿಂದ 7,500 ಕೋಟಿ ಪಡೆದ ರಿಲಯನ್ಸ್ ರಿಟೇಲ್ಸಿಲ್ವರ್ ಲೇಕ್ ಕಂಪನಿಯಿಂದ 7,500 ಕೋಟಿ ಪಡೆದ ರಿಲಯನ್ಸ್ ರಿಟೇಲ್

ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ಆರ್ ಆರ್ ವಿಎಲ್ ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. 64 ಕೋಟಿ ಮಂದಿಗೆ ಸೇವೆ ಒದಗಿಸುತ್ತಿದೆ. ಭಾರತದ ರೈತರು, ಎಂಎಸ್ ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ ಸಂಸ್ಥೆಗೆ ಇದೆ.

 ನಲವತ್ತು ವರ್ಷಗಳ ಹಿನ್ನೆಲೆ ಇರುವ ಜನರಲ್ ಅಟ್ಲಾಂಟಿಕ್:

ನಲವತ್ತು ವರ್ಷಗಳ ಹಿನ್ನೆಲೆ ಇರುವ ಜನರಲ್ ಅಟ್ಲಾಂಟಿಕ್:

ಜನರಲ್ ಅಟ್ಲಾಂಟಿಕ್ ಜಾಗತಿಕ ಗ್ರೋಥ್ ಈಕ್ವಿಟಿ ಸಂಸ್ಥೆ. ನಲವತ್ತು ವರ್ಷಗಳ ಹಿನ್ನೆಲೆ ಇರುವಂಥ ಸಂಸ್ಥೆ. ತಂತ್ರಜ್ಞಾನ, ಗ್ರಾಹಕರು, ಹಣಕಾಸು ಸೇವೆ ಮತ್ತು ಹೆಲ್ತ್ ಕೇರ್ ವಲಯದಲ್ಲಿ ಹೂಡಿಕೆ ಮಾಡುತ್ತಾ ಬರುತ್ತಿದೆ. ಏರ್ ಬಿಎನ್ ಬಿ, ಅಲಿಬಾಬ, ಆಂಟ್ ಫೈನಾನ್ಷಿಯಲ್, ಬಾಕ್ಸ್, ಬೈಟ್ ಡ್ಯಾನ್ಸ್, ಫೇಸ್ ಬಿಕ್, ಸ್ಲ್ಯಾಕ್, ಸ್ನ್ಯಾಪ್ ಚಾಟ್, ಉಬರ್ ಸೇರಿದಂತೆ ಇತರ ಕಂಪೆನಿಗಳನ್ನು ಜನರಲ್ ಅಟ್ಲಾಂಟಿಕ್ ಬೆಂಬಲಿಸಿದೆ.

 ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, ಜನರಲ್ ಅಟ್ಲಾಂಟಿಕ್ ಜತೆಗೆ ನಮ್ಮ ಬಾಂಧವ್ಯ ವಿಸ್ತರಣೆ ಆಗುತ್ತಿರುವುದಕ್ಕೆ ಸಂತೋಷ ಆಗುತ್ತಿದೆ. ವರ್ತಕರು ಹಾಗೂ ಗ್ರಾಹಕರ ಸಬಲೀಕರಣಕ್ಕೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಅಂತಿಮವಾಗಿ ಭಾರತದ ರೀಟೇಲ್ ವಲಯದ ಬದಲಾವಣೆಗೆ ಪ್ರಯತ್ನಿಸುತ್ತೇವೆ. ಗ್ರಾಹಕ ವ್ಯವಹಾರದಲ್ಲಿ ಜನರಲ್ ಅಟ್ಲಾಂಟಿಕ್ ಅನುಭವ ಅಪಾರವಾಗಿದೆ. ಭಾರತದಲ್ಲೇ ಕಳೆದ ಇಪ್ಪತ್ತು ವರ್ಷದಿಂದ ಹೂಡಿಕೆ ಮಾಡಿದ ಅನುಭವ ಇದೆ. ದೇಶದ ರೀಟೇಲ್ ವಲಯದಲ್ಲಿ ನಾವು ಹೊಸ ಅಲೆ ಸೃಷ್ಟಿಸುತ್ತೇವೆ ಎಂದಿದ್ದಾರೆ.

ಕೆಕೆಆರ್ ನಿಂದ ರಿಲಯನ್ಸ್ ರೀಟೇಲ್ ನಲ್ಲಿ 5500 ಕೋಟಿ ರುಪಾಯಿ ಹೂಡಿಕೆಕೆಕೆಆರ್ ನಿಂದ ರಿಲಯನ್ಸ್ ರೀಟೇಲ್ ನಲ್ಲಿ 5500 ಕೋಟಿ ರುಪಾಯಿ ಹೂಡಿಕೆ

 ಜನರಲ್ ಅಟ್ಲಾಂಟಿಕ್ ಸಿಇಒ ಬಿಲ್ ಫೋರ್ಡ್ ಮಾತನಾಡಿ

ಜನರಲ್ ಅಟ್ಲಾಂಟಿಕ್ ಸಿಇಒ ಬಿಲ್ ಫೋರ್ಡ್ ಮಾತನಾಡಿ

ಜನರಲ್ ಅಟ್ಲಾಂಟಿಕ್ ಸಿಇಒ ಬಿಲ್ ಫೋರ್ಡ್ ಮಾತನಾಡಿ, ಮುಕೇಶ್ ಅವರ ಹೊಸ ವಾಣಿಜ್ಯ ಗುರಿಯನ್ನು ಬೆಂಬಲಿಸುತ್ತಿರುವುದಕ್ಕೆ ಖುಷಿ ಆಗುತ್ತಿದೆ. ಜಿಯೋ ಪ್ಲಾಟ್ ಫಾರ್ಮ್ ಜತೆಜತೆಗೆ ರೀಟೇಲ್ ವ್ಯವಹಾರವು ಡಿಜಿಟಲ್ ಇಂಡಿಯಾ ಸಾಕಾರದತ್ತ ಸಾಗುತ್ತದೆ. ತಂತ್ರಜ್ಞಾನದ ಸಾಮರ್ಥ್ಯದ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಗೆ ಇರುವ ನಂಬಿಕೆಯು ಜನರಲ್ ಅಟ್ಲಾಂಟಿಕ್ ಗೂ ಇದೆ. ರಿಲಯನ್ಸ್ ಗೆ ಇರುವ ಅಪಾರ ಸಾಮರ್ಥ್ಯ ಕೂಡ ನಮಗೆ ಸಂತೋಷ ತಂದಿದೆ. ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಅರ್ಥಪೂರ್ಣವಾಗಿ ರಿಲಯನ್ಸ್ ತಂಡ ಮುನ್ನಡೆಸುತ್ತಿದೆ ಎಂದಿದ್ದಾರೆ.

 ರಿಲಯನ್ಸ್ ರೀಟೇಲ್ ನಿರ್ದೇಶಕಿ ಇಶಾ ಅಂಬಾನಿ

ರಿಲಯನ್ಸ್ ರೀಟೇಲ್ ನಿರ್ದೇಶಕಿ ಇಶಾ ಅಂಬಾನಿ

ರಿಲಯನ್ಸ್ ರೀಟೇಲ್ ನಿರ್ದೇಶಕಿ ಇಶಾ ಅಂಬಾನಿ ಮಾತನಾಡಿ, ಜನರಲ್ ಅಟ್ಲಾಂಟಿಕ್ ಸ್ವಾಗತಿಸುತ್ತಿರುವುದಕ್ಕೆ ಸಂತಸ ಆಗುತ್ತಿದೆ. ಭಾರತದ ಎಲ್ಲ ಗ್ರಾಹಕರು ಹಾಗೂ ವರ್ತಕರ ಅನುಕೂಲಕ್ಕಾಗಿ ಭಾರತೀಯ ರೀಟೇಲ್ ವಾತಾವರಣದ ಅಭಿವೃದ್ಧಿಗೆ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.

 ಭಾರತದ ವೈವಿಧ್ಯ ರಿಲಯನ್ಸ್ ಗೆ ಗೊತ್ತಿದೆ:

ಭಾರತದ ವೈವಿಧ್ಯ ರಿಲಯನ್ಸ್ ಗೆ ಗೊತ್ತಿದೆ:

ಜನರಲ್ ಅಟ್ಲಾಂಟಿಕ್ ಭಾರತ ಹಾಗೂ ಆಗ್ನೇಯ ಏಷ್ಯಾ ಮುಖ್ಯಸ್ಥ ಸಂದೀಪ್ ನಾಯಕ್ ಮಾತನಾಡಿ, ಭಾರತೀಯ ರೀಟೇಲ್ ವಲಯದಲ್ಲಿ ಅತ್ಯಗತ್ಯದ ಬದಲಾವಣೆ ಆಗಬೇಕಿದೆ. ರಿಲಯನ್ಸ್ ರೀಟೇಲ್ ಸ್ಟ್ರಾಟೆಜಿ ವಿಶಿಷ್ಟವಾಗಿದೆ. ಭಾರತದ ವೈವಿದ್ಯದ ಅಗತ್ಯಗಳು ಅವರಿಗೆ ಗೊತ್ತಿದೆ. ಈ ಮೂಲಕ ಕಿರಾಣಿ ವರ್ತಕರಿಗೆ ಹಾಗೂ ಗ್ರಾಹಕರಿಗೆ ಅಮೂಲ್ಯವಾದ ಅವಕಾಶ ದೊರೆಯಲಿದೆ ಎಂದಿದ್ದಾರೆ.

ಜನರಲ್ ಅಟ್ಲಾಂಟಿಕ್ ನ ಈ ವ್ಯವಹಾರವು ನಿಯಂತ್ರಕರು ಮತ್ತು ಇತರ ಅನುಮತಿಗಳ ಆಧಾರದ ಮೇಲೆ ಅಂತಿಮವಾಗುತ್ತದೆ. ಮೊರ್ಗನ್ ಸ್ಟ್ಯಾನ್ಲಿಯು ಆರ್ಥಿಕ ಸಲಹೆಗಾರರಾಗಿ ಹಾಗೂ ಸೈರಿಲ್ ಅಮರ್ ಚಂದ್ ಮಂಗಲ್ ದಾಸ್ ಮತ್ತು ಡೇವಿಸ್ ಪೋಲ್ಕ್ ಅಂಡ್ ವಾರ್ಡ್ ವೆಲ್ ಕಾನೂನು ಸಲಹೆಗಾರರಾಗಿ ರಿಲಯನ್ಸ್ ರೀಟೇಲ್ ಪರ ಇದ್ದರು.

English summary
Reliance Industries Limited (“Reliance Industries”) and Reliance Retail Ventures Limited (“RRVL”) announced today that General Atlantic, a leading global growth equity firm, will invest ₹ 3,675 crore into RRVL, a subsidiary of Reliance Industries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X