ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019-20ರ ಜಿಡಿಪಿ ಶೇ 4.2%, ಇದು 11 ವರ್ಷದಲ್ಲೇ ಮಹಾ ಕುಸಿತ

|
Google Oneindia Kannada News

ನವದೆಹಲಿ, ಮೇ 29: ಕೊರೊನಾವೈರಸ್ ನಿಂದಾಗಿ ಭಾರತಕ್ಕೆ ಆರ್ಥಿಕ ಹೊಡೆತದ ಬಿಸಿ ಕೂಡಾ ದೊಡ್ಡ ಪ್ರಮಾಣದಲ್ಲಿ ತಟ್ಟಿದೆ. ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ 4ನೇ ತಲಾ ಆದಾಯ ಶೇ 3.1ಕ್ಕೆ ಕುಸಿತ ಕಂಡಿದೆ.

ಸತತ 8 ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಕುಸಿತ ಕಂಡಿದೆ. 2019-20ರ ಅವಧಿಯಲ್ಲಿ ಶೇ 4.2 ರಷ್ಟು ಜಿಡಿಪಿ ದಾಖಲಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ 11 ವರ್ಷಗಳಷ್ಟೇ ಮಹಾ ಕುಸಿತ ಎನ್ನಬಹುದು. 2018-19ರಲ್ಲಿ ಜಿಡಿಪಿ ಶೇ 6.1ರಷ್ಟಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ(ಎನ್ಎಸ್ಒ) ಶುಕ್ರವಾರದಂದು ಪ್ರಕಟಿಸಿದೆ.

GDP growth in 2019-20 slows to 11-year low of 4.2%

2012-13ರಲ್ಲಿ ಜಿಡಿಪಿ ದರ ಶೇ 4.3ಕ್ಕೆ ಕುಸಿದಿತ್ತು. ನಂತರ ಏಳು ತ್ರೈಮಾಸಿಕ ಅವಧಿಗಳಲ್ಲಿ ಸತತ ಕುಸಿತ ಅನುಭವಿಸಿತ್ತು. 2017-18ರ 4ನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ದರ ಶೇ 8.13 ರಷ್ಟಿತ್ತು. 2018-19ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಅದು ಶೇ 7.95ಕ್ಕೆ ಕುಸಿತ ಕಂಡಿತ್ತು. 2018-19ರ 2ನೇ ತ್ರೈಮಾಸಿಕ ಅವಧಿಯಲ್ಲಿ 7.00%ಕ್ಕೆ ಇಳಿದಿತ್ತು. 2018-19ರ 3ನೇ ತ್ರೈಮಾಸಿಕ ಅವಧಿಯಲ್ಲಿ 6.58%ಕ್ಕೆ ಹಿನ್ನಡೆ ಅನುಭವಿಸಿತ್ತು. 2018-19ರ ಕೊನೆಯ ಹಾಗೂ 4ನೇ ತ್ರೈಮಾಸಿಕ ಅವಧಿಯಲ್ಲಿಯೂ ಜಿಡಿಪಿ ತತ್ತರಿಸಿತ್ತು. ಆಗ ಅದು 5.83%ರ ಸಾಧನೆ ಮಾಡಿತ್ತು.

2019-20ರ 1ನೇ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ 5.01%ರಷ್ಟು ದಾಖಲಾಗಿತ್ತು. ಆದರೆ, ಮೊದಲ ಅವಧಿಗೆ ಶೇ 5.6ರಷ್ಟು ಎಂದು ಅಂದಾಜಿಸಲಾಗಿತ್ತು. ಆರ್ಥಿಕ ಕುಸಿತ ಅನುಭವಿಸುತ್ತಿರುವ ಕಾಲಘಟ್ಟದಲ್ಲಿ 3ನೇ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ದರ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕೊರೊನಾ ವೈರಾಣು ಪರಿಣಾಮ ಜಾಗತಿಕವಾಗಿ ಆಥಿಕ ಪರಿಸ್ಥಿತಿ ಸ್ಥಿರವಾಗಿಲ್ಲದ ಕಾರಣ ಜಿಡಿಪಿ ದರ ಪರಿಷ್ಕರಿಸಲಾಗಿತ್ತು.

* ರಿಯಲ್ ಎಸ್ಟೇಟ್ ಕ್ಷೇತ್ರ ಶೇ 2.4%,
* ವ್ಯಾಪಾರ, ಹೋಟೆಲ್, ಸಾರಿಗೆ, ಟೆಲಿಕಾಂ ಶೇ 2.6%,
* ಉತ್ಪಾದನಾ ಕ್ಷೇತ್ರದ ಪ್ರಗತಿ ಶೂನ್ಯ, ಕಳೆದ ಆರ್ಥಿಕ ವರ್ಷದಲ್ಲಿ ಶೇ 5.7%.

English summary
The Indian economy grew at 3.1 percent in the January-March quarter (Q4) of 2020, official gross domestic product (GDP) data released on Friday showed. For the full FY20 financial year, the number came to an 11-year-low of 4.2 percent against 6.1 percent in 2018-2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X