ಪ್ರಸಕ್ತ ಆರ್ಥಿಕ ವರ್ಷದ ಅಂದಾಜು ಜಿಡಿಪಿ ಬೆಳವಣಿಗೆ ದರ ಶೇ. 6.5

Subscribe to Oneindia Kannada

ನವದೆಹಲಿ, ಜನವರಿ 5: 2017-18ನೇ ಆರ್ಥಿಕ ವರ್ಷದಲ್ಲಿ ನಿವ್ವಳ ಉತ್ಪನ್ನ ದರ (ಜಿಡಿಪಿ) ಶೇಕಡಾ 6.5 ತಲುಪಲಿದೆ ಎಂದು ಕೇಂದ್ರ ಸಂಖ್ಯಾಶಾಸ್ತ್ರ ಮತ್ತು ಯೋಜನಾ ಜಾರಿ ಇಲಾಖೆ ಅಂದಾಜು ಮಾಡಿದೆ. 2016-17ರಲ್ಲಿ ನಿವ್ವಳ ಉತ್ಪನ್ನ ದರ ಶೇಕಡಾ 7.1 ಇತ್ತು ಎಂಬುದು ಗಮನಾರ್ಹ.

ಕೇಂದ್ರ ಸಂಖ್ಯಾಶಾಸ್ತ್ರ ಇಲಾಖೆ ಬಿಡುಗಡೆ ಮಾಡಿರುವ ಅಂದಾಜು ವರದಿ ಪ್ರಕಾರ 2017-18ರಲ್ಲಿ ಜಿಡಿಪಿ 129.85 ಲಕ್ಷ ಕೋಟಿ ತಲುಪಲಿದೆ. 2016-17ರಲ್ಲಿ ಈ ಪ್ರಮಾಣ 121.90 ಲಕ್ಷ ಕೋಟಿ ರೂಪಾಯಿ ಇತ್ತು.

 GDP growth in 2017-18 estimated at 6.5%

ಸಾರ್ವಜನಿಕ ಆಡಳಿತ, ಭದ್ರತೆ, ವ್ಯಾಪಾರ, ಹೋಟೆಲ್, ಸಾರಿಗೆ, ಸಂಪರ್ಕ, ಬ್ರಾಡ್ ಕಾಸ್ಟಿಂಗ್, ವಿದ್ಯುತ್, ಗ್ಯಾಸ್, ನೀರು ಪೂರೈಕೆ, ರಿಯಲ್ ಎಸ್ಟೇಟ್, ವೃತ್ತಿಪರ ಸೇವೆಗಳು ಮತ್ತು ಆರ್ಥಿಕ ಸೇವಾ ಕ್ಷೇತ್ರಗಳು ಶೇಕಡಾ 7 ಬೆಳವಣಿಗೆ ದರ ದಾಖಲಿಸಲಿವೆ ಎಂದು ಇಲಾಖೆ ವರದಿಯಲ್ಲಿ ಹೇಳಿದೆ.

ಇನ್ನು ಕೃಷಿ, ಅರಣ್ಯ, ಮೀನುಗಾರಿಕೆ ಕ್ಷೇತ್ರಗಳ ಈ ಹಿಂದಿನ ವರ್ಷದ ಶೇಕಡಾ 4.9 ಬೆಳವಣಿಗೆ ದರಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 2.1ಕ್ಕೆ ಇಳಿಕೆಯಾಗಲಿದೆ.

ಇದೇ ವೇಳೆ ಖಾರಿಫ್ ಬೆಳೆಯಲ್ಲೂ ಇಳಿಕೆಯಾಗಿದೆ. 2016-17ರಲ್ಲಿ 138.52 ಮಿಲಿಯನ್ ಟನ್ ಖಾರಿಫ್ ಬೆಳೆ ದೇಶದಲ್ಲಿ ಬೆಳೆದಿದ್ದರೆ ಈ ವರ್ಷ ಅದರ ಪ್ರಮಾಣ 134.67 ಮಿಲಿಯನ್ ಟನ್ ಗೆ ಇಳಿಕೆಯಾಗಿದೆ.
ಉತ್ಪಾದನ ವಲಯದ ಬೆಳವಣಿಗೆ 2016-17ರ ಶೇ. 7.9ಕ್ಕೆ ಹೋಲಿಸಿದರೆ ಈ ವರ್ಷ ಕೇವಲ ಶೇ. 4.6ಕ್ಕೆ ಇಳಿಕೆಯಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The growth in Gross Domestic Product (GDP) during 2017-18 is estimated at 6.5 per cent, as compared to the growth rate of 7.1 per cent in 2016-17, the Ministry of Statistics and Programme Implementation noted on Friday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ