ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಏಳನೇ ತ್ರೈಮಾಸಿಕ ಅವಧಿಯಲ್ಲೂ ನೆಲಕಚ್ಚಿದ GDP

|
Google Oneindia Kannada News

ನವದೆಹಲಿ, ನವೆಂಬರ್ 29: ಪ್ರಗತಿಯ ನಿರೀಕ್ಷೆಯಲ್ಲಿರುವ ಭಾರತಕ್ಕೆ ಆರ್ಥಿಕ ಹೊಡೆತದ ಬಿಸಿ ಮತ್ತೆ ತಟ್ಟಿದೆ. ಕಳೆದ ಆರು ವರ್ಷಗಳಲ್ಲಿಯೇ ಅತ್ಯಂತ ಕಳಪೆ ಸಾಧನೆ ಮಾಡುವ ಮೂಲಕ ಭಾರತದ ಆರ್ಥಿಕ ಕುಸಿತ ಕಂಡಿದೆ.

ಶುಕ್ರವಾರ ಪ್ರಕಟವಾದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಅವಧಿಯ ಭಾರತದ ಜಿಡಿಪಿ ವರದಿಯಲ್ಲಿ ಪ್ರಗತಿ ದರ ಶೇ 4.5ಕ್ಕೆ ಕುಸಿದಿದೆ. 2012-13ರಲ್ಲಿ ಜಿಡಿಪಿ ದರ ಶೇ 4.3ಕ್ಕೆ ಕುಸಿದಿತ್ತು. ಅದರ ಬಳಿಕ ಇದು ದೊಡ್ಡ ಕುಸಿತವಾಗಿದೆ. ಬಳಿಕ ಉತ್ತಮ ಪ್ರಗತಿ ಕಂಡಿದ್ದ ಜಿಡಿಪಿ, ಏಳು ತ್ರೈಮಾಸಿಕ ಅವಧಿಗಳಲ್ಲಿ ಸತತ ಕುಸಿತ ಅನುಭವಿಸಿದೆ.

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇ4.5ಕ್ಕೆ ಕುಸಿತ2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇ4.5ಕ್ಕೆ ಕುಸಿತ

2017-18ರ 4ನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ದರ ಶೇ 8.13 ರಷ್ಟಿತ್ತು. 2018-19ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಅದು ಶೇ 7.95ಕ್ಕೆ ಕುಸಿತ ಕಂಡಿತ್ತು. 2018-19ರ 2ನೇ ತ್ರೈಮಾಸಿಕ ಅವಧಿಯಲ್ಲಿ 7.00%ಕ್ಕೆ ಇಳಿದಿತ್ತು. 2018-19ರ 3ನೇ ತ್ರೈಮಾಸಿಕ ಅವಧಿಯಲ್ಲಿ 6.58%ಕ್ಕೆ ಹಿನ್ನಡೆ ಅನುಭವಿಸಿತ್ತು. 2018-19ರ ಕೊನೆಯ ಹಾಗೂ 4ನೇ ತ್ರೈಮಾಸಿಕ ಅವಧಿಯಲ್ಲಿಯೂ ಜಿಡಿಪಿ ತತ್ತರಿಸಿತ್ತು. ಆಗ ಅದು 5.83%ರ ಸಾಧನೆ ಮಾಡಿತ್ತು.

GDP Downward In 7th Consecutive Quarter

ಸುಳ್ಳಾದ ನಿರೀಕ್ಷೆ! ಭಾರತದ ಜಿಡಿಪಿ ದರ ವರ್ಷದಿಂದ ವರ್ಷಕ್ಕೆ ಕುಸಿತ ಸುಳ್ಳಾದ ನಿರೀಕ್ಷೆ! ಭಾರತದ ಜಿಡಿಪಿ ದರ ವರ್ಷದಿಂದ ವರ್ಷಕ್ಕೆ ಕುಸಿತ

ಹೊಸ ಹಣಕಾಸು ವರ್ಷಕ್ಕೆ ಕಾಲಿಟ್ಟ ಬಳಿಕವೂ ಜಿಡಿಪಿ ಸುಧಾರಣೆಯಾಗಿಲ್ಲ. ಬದಲಾಗಿ ಮತ್ತಷ್ಟು ಆಘಾತಕಾರಿ ಕುಸಿತ ಕಂಡಿದೆ. 2019-20ರ 1ನೇ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ 5.01%ರಷ್ಟು ದಾಖಲಾಗಿತ್ತು. ಆರ್ಥಿಕ ಕುಸಿತ ಅನುಭವಿಸುತ್ತಿರುವ ಕಾಲಘಟ್ಟದಲ್ಲಿ ಜಿಡಿಪಿ ದರ ಇಳಕೆಯಾಗಲಿದೆ ಎಂದು ಊಹಿಸಲಾಗಿತ್ತು. ನಿರೀಕ್ಷೆಯಂತೆಯೇ ವರದಿ ಬಂದಿದ್ದು 2019-20ರ 2ನೇ ತ್ರೈಮಾಸಿಕ ಅವಧಿಯಲ್ಲಿ 4.50%ಕ್ಕೆ ಇಳಿದಿದೆ.

English summary
GDP has continued to downfall for the seventh consecutive quarter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X