ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಾನಿಗೆ ಶಾಕ್‌: ಗೌತಮ್‌ ಅದಾನಿ ಈಗ ಏಷ್ಯಾದ ಅತೀ ಶ್ರೀಮಂತ ವ್ಯಕ್ತಿ

|
Google Oneindia Kannada News

ಮುಂಬೈ, ನವೆಂಬರ್ 24: ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಲ್ಲಿ ಬುಧವಾರ ಒಂದೂವರೆ ಶೇಕಡದಷ್ಟು ಕುಸಿತ ಕಂಡು ಬಂದಿದೆ. ಈ ಕಾರಣದಿಂದಾಗಿ ಕಂಪನಿಯು ಭಾರೀ ಹಿನ್ನೆಡೆಯನ್ನು ಅನುಭವಿಸಿದೆ. ಈ ನಡುವೆ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ ಅದಾನಿ ಗ್ರೂಪ್‌ನ ಸ್ಥಾಪಕ ಮತ್ತು ಅಧ್ಯಕ್ಷ ಗೌತಮ್ ಅದಾನಿ ಈಗ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಸೋಮವಾರ ಮಾರುಕಟ್ಟೆಯಲ್ಲಾದ ಕುಸಿತದ ಪರಿಣಾಮವಾಗಿ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ನಿವ್ವಳ ಮೌಲ್ಯದಲ್ಲಿ ಶೇಕಡ 3.6 ಬಿಲಿಯನ್ ಡಾಲರ್‌ ವ್ಯತ್ಯಾಸವು ಕಂಡು ಬಂದಿದೆ. ಈ ಬೆನ್ನಲ್ಲೇ ಮುಖೇಶ್ ಅಂಬಾನಿಯನ್ನು ಈ ಏಷ್ಯಾದ ಶ್ರೀಮಂತಿಕೆಯ ಓಟದಲ್ಲಿ ಹಿಂದಿಕ್ಕಿದ ಗೌತಮ್ ಅದಾನಿ ಈಗ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

ಮುಖೇಶ್ ಅಂಬಾನಿಯವರ ಮಾರುಕಟ್ಟೆ ನಿವ್ವಳ ಮೌಲ್ಯ 14.3 ಬಿಲಿಯನ್ ಡಾಲರ್‌ ಆಗಿದೆ. ಆದರೆ ಗೌತಮ್ ಅದಾನಿ ಸಂಪತ್ತಿನಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದ್ದು, ಗೌತಮ್ ಅದಾನಿ ಸಂಪತ್ತಿಗೆ ವರ್ಷದಿಂದ ವರ್ಷಕ್ಕೆ 55 ಬಿಲಿಯನ್ ಡಾಲರ್ ಸೇರಿದೆ. ಈ ಮೂಲಕ ಇಬ್ಬರ ನಿವ್ವಳ ಮೌಲ್ಯದಲ್ಲಿ ಶೇಕಡ 3.6 ಬಿಲಿಯನ್ ಡಾಲರ್‌ ವ್ಯತ್ಯಾಸವು ಕಂಡು ಬಂದಿದೆ.

Gautam Adani Surpasses Mukesh Ambani, Becomes Asia’s Richest Person

ಆದರೆ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಇನ್ನೂ ಕೂಡಾ ಹೊಸ ಡೇಟಾವನ್ನು ನವೀಕರಣ ಮಾಡಿಲ್ಲ. ಬ್ಲೂಮ್‌ಬರ್ಗ್‌ನಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ, ಮುಕೇಶ್ ಅಂಬಾನಿಯವರ ನಿವ್ವಳ ಮೌಲ್ಯ 91 ಶತಕೋಟಿ ಆಗಿದೆ. ಗೌತಮ್ ಅದಾನಿ ನಿವ್ವಳ ಮೌಲ್ಯ 88.8 ಬಿಲಿಯನ್‌ ಡಾಲರ್‌ ಆಗಿದೆ.

ಕುಸಿಯುತ್ತಿದೆ ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳು

ಈ ನಡುವೆ ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳು ಕುಸಿತ ಕಾಣುತ್ತಿದೆ. ಇತ್ತೀಚೆಗೆ O2C ಒಪ್ಪಂದವನ್ನು ರದ್ದು ಮಾಡಿದ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳು ಸಾಕಷ್ಟು ಒತ್ತಡದಿಂದ ಇದೆ. ಇಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳಲ್ಲಿ ಸುಮಾರು 1.48 ರಷ್ಟು ಕುಸಿತ ಕಂಡು ಬಂದಿದೆ. 2,350.90 ರೂಪಾಯಿಯಲ್ಲಿ ವಹಿವಾಟು ಕೊನೆಯಾಗಿದೆ. ಹಾಗೆಯೇ ರಿಲಯನ್ಸ್ ಷೇರುಗಳು ಈ ವಾರ ಸುಮಾರು ಶೇ. 5 ರಷ್ಟು ಕುಸಿತ ಕಂಡು ಬಂದಿದೆ. ಕಳೆದ ವಾರದ ಕೊನೆಯ ವಹಿವಾಟಿಗೆ ನಾವು ಹೋಲಿಕೆ ಮಾಡಿದಾಗ ಕಂಪನಿಯ ಮಾರುಕಟ್ಟೆ ಮೌಲ್ಯವು ರೂ.77293.64 ಕೋಟಿಗಳಷ್ಟು ಕಡಿಮೆಯಾಗಿ ರೂ.14,91,256.53 ಕೋಟಿಗಳಿಗೆ ಇಳಿಕೆ ಕಂಡು ಬಂದಿದೆ.

ಡ್ರಗ್ಸ್ ಪತ್ತೆ ಪ್ರಕರಣ: ಈ ರಾಷ್ಟ್ರಗಳ ಸರಕು ಸಾಗಣೆ ನಿಷೇಧಿಸಿದ ಅದಾನಿ ಬಂದರುಡ್ರಗ್ಸ್ ಪತ್ತೆ ಪ್ರಕರಣ: ಈ ರಾಷ್ಟ್ರಗಳ ಸರಕು ಸಾಗಣೆ ನಿಷೇಧಿಸಿದ ಅದಾನಿ ಬಂದರು

ಈ ನಡುವೆ ಅದಾನಿ ಸಮೂಹದ ಕಂಪನಿಗಳ ಷೇರುಗಳ ಮೌಲ್ಯವು ಏರಿಕೆಯನ್ನು ಕಂಡಿದೆ. ಅದಾನಿ ಎಂಟರ್‌ಪ್ರೈಸಸ್ ಶೇ.2.76ರಷ್ಟು ಏರಿಕೆಯಾಗಿದೆ. 1754.65 ರೂಪಾಯಿಗೆ ವಹಿವಾಟು ಕೊನೆಯಾಗಿದೆ. ಇನ್ನು ಅದಾನಿ ಪೋರ್ಟ್ಸ್ ಶೇ.4.59ರಷ್ಟು ಏರಿಕೆ ಕಂಡಿದೆ. 762.75 ರೂ.ಗೆ ಹೆಚ್ಚಳಗೊಂಡಿದೆ. ಅದಾನಿ ಟ್ರಾನ್ಸ್‌ಮಿಷನ್ ಶೇಕಡ 0.36 ರಷ್ಟು ಏರಿಕೆ ಹೊಂದಿದ್ದು, 1,948 ಕ್ಕೆ ಏರಿಕೆ ಆಗಿದೆ. ಅದಾನಿ ಪವರ್ ಷೇರುಗಳು ಕೂಡಾ ಶೇಕಡ 0.05 ರಷ್ಟು ಏರಿಕೆ ಕಂಡಿದೆ, 105.95 ಕ್ಕೆ ತಲುಪಿದೆ. ಆದರೆ ಅದಾನಿ ಗ್ರೀನ್ ಮತ್ತು ಅದಾನಿ ಟೋಟಲ್ ಗ್ಯಾಸ್ ಮಾತ್ರ ಕುಸಿತ ಕಂಡಿದೆ. ಶೇಕಡ 1 ಕ್ಕಿಂತ ಹೆಚ್ಚು ಕುಸಿತದೊಂದಿಗೆ ಅದಾನಿ ಗ್ರೀನ್ ಮತ್ತು ಅದಾನಿ ಟೋಟಲ್ ಗ್ಯಾಸ್‌ನ ವಹಿವಾಟು ಸ್ಥಗಿತಗೊಂಡಿದೆ.

ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣಾ ನಿಯಂತ್ರಣ ಅದಾನಿ ಗ್ರೂ‌ಪ್‌ಗೆಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣಾ ನಿಯಂತ್ರಣ ಅದಾನಿ ಗ್ರೂ‌ಪ್‌ಗೆ

ಈವರೆಗೂ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿದ್ದ, ರಿಲಯನ್ಸ್‌ ಕಂಪನಿ ಮಾಲೀಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್‌ ಅಂಬಾನಿ ತಮ್ಮ 15 ಲಕ್ಷ ಕೋಟಿ ಮೌಲ್ಯದ ಆಸ್ತಿಯ ಉತ್ತರಾಧಿಕಾರಕ್ಕಾಗಿ ವಾಲ್‌ಮಾರ್ಟ್‌ ಸಂಸ್ಥಾಪಕ ವಾಲ್ಟನ್‌ ಕುಟುಂಬದ ಮಾದರಿಯಲ್ಲೇ ವಿಶಿಷ್ಟ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಮುಖೇಶ್‌ ತನ್ನ ಕಂಪನಿಯ ಜವಾಬ್ದಾರಿಗಳಿಂದ ನಿವೃತ್ತಿ ಘೋಷಣೆ ಮಾಡುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಆದರೆ ತಂದೆ ಧೀರು ಭಾಯಿ ಅಂಬಾನಿ ನಿಧನ ಹೊಂದಿದ ಬಳಿಕ ಆಸ್ತಿ ವಿಚಾರದಲ್ಲಿ ಅಂಬಾನಿ ಕುಟುಂಬದಲ್ಲಿ ಉಂಟಾಗಿರುವ ಒಳಜಗಳವನ್ನು ನಿಲ್ಲಿಸುವ ನಿಟ್ಟಿನಲ್ಲಿ ಮುಖೇಶ್‌ ತಮ್ಮ ಉತ್ತರಾಧಿಕಾರವನ್ನು ಟ್ರಸ್ಟ್‌ಗೆ ಹಸ್ತಾಂತರ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ.

English summary
Gautam Adani Surpasses Mukesh Ambani, Becomes Asia’s Richest Person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X