ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಜ ಸೇವೆಗೆ 60 ಸಾವಿರ ಕೋಟಿ ನೀಡಲು ಅದಾನಿ ನಿರ್ಧಾರ

|
Google Oneindia Kannada News

ಮುಂಬೈ, ಜೂನ್ 23: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಮತ್ತು ಅವರ ಕುಟುಂಬ ಗುರುವಾರ ಅದಾನಿ 60 ನೇ ಹುಟ್ಟುಹಬ್ಬದ ಅಂಗವಾಗಿ ವಿವಿಧ ಸಾಮಾಜಿಕ ಕಾರ್ಯಗಳಿಗೆ 60,000 ಕೋಟಿ ರೂಪಾಯಿ ದೇಣಿಗೆ ನೀಡಲು ವಾಗ್ದಾನ ಮಾಡಿದರು. ಈ ಕೆಲಸವನ್ನು ಅದಾನಿ ಫೌಂಡೇಶನ್ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ದೇಣಿಗೆ ಕುರಿತು ಮಾತನಾಡಿರುವ ಗೌತಮ್ ಅದಾನಿ, "ನನ್ನ ಸ್ಪೂರ್ತಿದಾಯಕ ತಂದೆಯ 100 ನೇ ಜನ್ಮ ವಾರ್ಷಿಕೋತ್ಸವದ ಜೊತೆಗೆ, ಈ ವರ್ಷ ನನ್ನ 60 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದೇನೆ. ನಮ್ಮ ಕುಟುಂಬವು ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ದತ್ತಿ ಚಟುವಟಿಕೆಗಳಿಗೆ 60,000 ಕೋಟಿ ರೂಪಾಯಿಗಳನ್ನು ನೀಡಲು ನಿರ್ಧರಿಸಿದೆ, ವಿಶೇಷವಾಗಿ ನಮ್ಮ ರಾಷ್ಟ್ರದ ಗ್ರಾಮೀಣ ಪ್ರದೇಶಗಳಿಗೆ ಇದನ್ನು ವಿನಿಯೋಗಿಸಲಾಗುವುದು". ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಡುಪಿ: ಅದಾನಿ ಗ್ರೂಪ್‌ಗೆ 52 ಕೋಟಿ ದಂಡಉಡುಪಿ: ಅದಾನಿ ಗ್ರೂಪ್‌ಗೆ 52 ಕೋಟಿ ದಂಡ

ಭಾರತದ ಜನಸಂಖ್ಯಾ ಪ್ರಯೋಜನದ ಸಾಮರ್ಥ್ಯ ಬಳಸಿಕೊಳ್ಳಲು, ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಅಗತ್ಯತೆ ಹೆಚ್ಚುತ್ತಿದೆ. ಈ ಪ್ರತಿಯೊಂದು ಪ್ರದೇಶಗಳಲ್ಲಿನ ಕೊರತೆಗಳು ಆತ್ಮನಿರ್ಭರ ಭಾರತಕ್ಕೆ ತೊಡಕಾಗಿವೆ ಎಂದು ಅವರು ಹೇಳಿದ್ದಾರೆ.

Gautam Adani Decided To Contribute Rs 60,000 Crores Towards Charitable Activities

ಒಳ್ಳೆಯತನದೊಂದಿಗೆ ಬೆಳವಣಿಗೆ ಉದ್ದೇಶ

"ಮೂಲಭೂತ ಮಟ್ಟದಲ್ಲಿ, ಆರೋಗ್ಯ, ಶಿಕ್ಷಣ, ಕೌಶಲ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸಮಗ್ರವಾಗಿ ನೋಡಬೇಕು ಮತ್ತು ಸಮಾನ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಭಾರತವನ್ನು ನಿರ್ಮಿಸಲು ಅವು ಒಟ್ಟಾಗಿ ಅರ್ಹ ವ್ಯಕ್ತಿಗಳನ್ನು ರೂಪಿಸುತ್ತವೆ. ದೊಡ್ಡ ಪ್ರಾಜೆಕ್ಟ್ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿನ ನಮ್ಮ ಅನುಭವ ಮತ್ತು ಅದಾನಿ ಫೌಂಡೇಶನ್ ಮಾಡಿದ ಕೆಲಸದ ಕಲಿಕೆಗಳು ಈ ಕಾರ್ಯಕ್ರಮಗಳನ್ನು ಅನನ್ಯವಾಗಿ ವೇಗಗೊಳಿಸಲು ನಮಗೆ ಸಹಾಯ ಮಾಡುತ್ತದೆ" ಎಂದರು.

ವಿಶ್ವದ ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ವಕೀಲೆ ಕರುಣಾ ನಂದಿ ಮತ್ತು ಅದಾನಿವಿಶ್ವದ ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ವಕೀಲೆ ಕರುಣಾ ನಂದಿ ಮತ್ತು ಅದಾನಿ

"ಅದಾನಿ ಕುಟುಂಬದ ಈ ಕೊಡುಗೆಯು ನಮ್ಮ 'ಒಳ್ಳೆಯತನದೊಂದಿಗೆ ಬೆಳವಣಿಗೆ' (Growth with Goodness) ತತ್ವವನ್ನು ಪೂರೈಸುವ ಕಡೆಗೆ ಕೆಲಸ ಮಾಡಲು ಅದಾನಿ ಫೌಂಡೇಶನ್‌ ಉತ್ಸಾಹ ಹೊಂದಿರುವ ಪ್ರತಿಭೆಗಳನ್ನು ಸೆಳೆಯುವ ಉದ್ದೇಶವನ್ನು ಹೊಂದಿದೆ" ಎಂದು ಅದಾನಿ ಹೇಳಿದರು.

Gautam Adani Decided To Contribute Rs 60,000 Crores Towards Charitable Activities

ಶುಕ್ರವಾರ 60 ವರ್ಷಕ್ಕೆ ಕಾಲಿಡುವ ಮೊದಲ ತಲೆಮಾರಿನ ಉದ್ಯಮಿ ಭಾರತೀಯ ಉದ್ಯಮಿ, ಮಾರ್ಕ್ ಜುಕರ್‌ಬರ್ಗ್ ಮತ್ತು ವಾರೆನ್ ಬಫೆಟ್ ಅವರಂತಹ ಜಾಗತಿಕ ಬಿಲಿಯನೇರ್‌ಗಳ ಶ್ರೇಣಿಗೆ ಸೇರುತ್ತಾರೆ.

ತಮ್ಮ ಸಂಪತ್ತಿನ ಹೆಚ್ಚಿನ ಭಾಗವನ್ನು ಸಮಾಜಸೇವೆಗೆ ಬಳಸಲು ಬದ್ಧರಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಸುಮಾರು 92 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ, ಈ ವರ್ಷ ತನ್ನ 15 ಬಿಲಿಯನ್ ಡಾಲರ್ ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ.

English summary
The Gautam Adani family decided to contribute Rs 60,000 crores towards charitable activities related to healthcare, education, and skill development, especially in the rural regions of nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X