ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪತ್ತಿನಲ್ಲಿ ಭಾರಿ ಏರಿಕೆ: ಮಸ್ಕ್, ಬೆಜೊಸ್‌ರನ್ನೂ ಹಿಂದಿಕ್ಕಿದ ಅದಾನಿ

|
Google Oneindia Kannada News

ನವದೆಹಲಿ, ಮಾರ್ಚ್ 13: ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿಯ ಸಂಪತ್ತು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ವರ್ಷ ಜಗತ್ತಿನ ಎಲ್ಲ ಶ್ರೀಮಂತ ಉದ್ಯಮಿಗಳಿಗಿಂತಲೂ ಅತ್ಯಧಿಕ, ಬಿಲಿಯನ್ ಡಾಲರ್‌ಗಟ್ಟಲೆ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ. ಅವರ ಬಂದರು, ವಿದ್ಯುತ್ ಸ್ಥಾವರ ಯೋಜನೆಗಳು ಸೇರಿದಂತೆ ಅನೇಕ ಉದ್ಯಮಗಳಿಗೆ ದೊಡ್ಡ ಮಟ್ಟದ ಹೂಡಿಕೆ ಹರಿದುಬಂದಿದೆ.

ಮೊದಲ ಪೀಳಿಗೆಯ ಉದ್ಯಮಿಯಾಗಿರುವ ಅದಾನಿ ಅವರ ನಿವ್ವಳ ಸಂಪತ್ತಿನ ಮೌಲ್ಯ 2021ರಲ್ಲಿ 16.2 ಬಿಲಿಯನ್ ಡಾಲರ್‌ನಿಂದ 50 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ತಿಳಿಸಿದೆ. ಈ ಮೂಲಕ ಅವರನ್ನು ಈ ವರ್ಷ ಜಗತ್ತಿನಲ್ಲಿ ಈವರೆಗೆ ಅತಿ ಹೆಚ್ಚು ಸಂಪತ್ತು ಸಂಪಾದಿಸಿದ ವ್ಯಕ್ತಿ ಎಂದು ಪ್ರಕಟಿಸಲಾಗಿದೆ.

ಜಗತ್ತಿನ ಮುಂಚೂಣಿ ಉದ್ಯಮಿಗಳಾದ, ಅತಿ ಶ್ರೀಮಂತ ವ್ಯಕ್ತಿ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಅವರನ್ನೂ ಗೌತಮ್ ಅದಾನಿ ಹಿಂದಿಕ್ಕಿದ್ದಾರೆ. ಅದಾನಿ ಸಮೂಹದಲ್ಲಿ ಒಂದು ಕಂಪೆನಿಯ ಹೊರತುಪಡಿಸಿ ಉಳಿದ ಎಲ್ಲ ಕಂಪೆನಿಗಳ ಷೇರುಗಳು ಕನಿಷ್ಠ ಶೇ 50ರಷ್ಟು ಹೆಚ್ಚಾಗಿದೆ. ಮುಂದೆ ಓದಿ.

ಮುಕೇಶ್ ಅಂಬಾನಿ ಸಂಪತ್ತು ಕೊಂಚ ಏರಿಕೆ

ಮುಕೇಶ್ ಅಂಬಾನಿ ಸಂಪತ್ತು ಕೊಂಚ ಏರಿಕೆ

ಅದಾನಿಯೊಂದಿಗೆ ವಿವಿಧ ವಲಯಗಳಲ್ಲಿ ಪೈಪೋಟಿ ನೀಡುತ್ತಿರುವ ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಸಂಪತ್ತು 8.1 ಬಿಲಿಯನ್ ಡಾಲರ್‌ನಷ್ಟು ಹೆಚ್ಚಾಗಿದೆ. ಟೋಟಲ್ ಎಸ್‌ಎ ದಿಂದ ವಾರ್ಬರ್ಗ್ ಪಿಂಕಸ್‌ವರೆಗೆ ದೊಡ್ಡ ದೊಡ್ಡ ಕಂಪೆನಿಗಳಿಂದ ಹೂಡಿಕೆ ಆಕರ್ಷಿಸುವ ಮೂಲಕ ಅದಾನಿ, ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ.

'ಅದಾನಿಯನ್ನು ತಡೆಯಿರಿ, ಚೆನ್ನೈ ಉಳಿಸಿ': ತಮಿಳಿಗರ ಆಕ್ರೋಶ'ಅದಾನಿಯನ್ನು ತಡೆಯಿರಿ, ಚೆನ್ನೈ ಉಳಿಸಿ': ತಮಿಳಿಗರ ಆಕ್ರೋಶ

ಅದಾನಿ ಜಾಲ ವಿಸ್ತರಣೆ

ಅದಾನಿ ಜಾಲ ವಿಸ್ತರಣೆ

ಬಂದರು, ವಿಮಾನ ನಿಲ್ದಾಣ, ದತ್ತಾಂಶ ಕೇಂದ್ರಗಳು, ಆಹಾರ ಉತ್ಪನ್ನಗಳು, ಕಲ್ಲಿದ್ದಲು ಗಣಿ ಹೀಗೆ ದೇಶದ ಬಹುತೇಕ ಕ್ಷೇತ್ರಗಳಿಗೆ ಅದಾನಿ ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿನ ಕಾರ್ಮೈಖಲ್ ಕಲ್ಲಿದ್ದಲು ಗಣಿ ಯೋಜನೆ ವಿವಾದದಿಂದ ಹಿನ್ನಡೆ ಅನುಭವಿಸಿದ್ದು ಬಿಟ್ಟರೆ, ಉಳಿದೆಲ್ಲ ಕಡೆ ಅದಾನಿ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ.

ಡೇಟಾ ಸೆಂಟರ್ ಉದ್ಯಮ

ಡೇಟಾ ಸೆಂಟರ್ ಉದ್ಯಮ

'ಅದಾನಿ ಸಮೂಹವು ಮಾರುಕಟ್ಟೆಯಲ್ಲಿ ಹೆಚ್ಚು ಸ್ಥಿತಿಸ್ಥಾಪಕ ಗುಣ ಹೊಂದಿರುವ ವಲಯಗಳಲ್ಲಿನ ತನ್ನ ಉದ್ಯಮವನ್ನು ನಿರಂತರವಾಗಿ ವಿಸ್ತರಿಸಿಕೊಳ್ಳುತ್ತಿದೆ. ಈಗ ಡೇಟಾ ಸೆಂಟರ್ ಉದ್ಯಮಕ್ಕೆ ಪ್ರವೇಶಿಸುವುದರ ಮೂಲಕ ಸಮೂಹವು ತಂತ್ರಜ್ಞಾನ ಕ್ಷೇತ್ರದಲ್ಲಿನ ತನ್ನ ಹಸಿವನ್ನು ತೋರಿಸಿದೆ' ಎಂದು ನೈಕಾ ಸಲಹಾ ಸೇವಾ ಕಂಪೆನಿಯ ಸಂಸ್ಥಾಪಕ ಸುನಿಲ್ ಚಂದಿರಾಮಣಿ ತಿಳಿಸಿದ್ದಾರೆ.

ವೃದ್ಧಿಸಿದ ಷೇರು ಮೌಲ್ಯ

ವೃದ್ಧಿಸಿದ ಷೇರು ಮೌಲ್ಯ

ಭಾರತದಲ್ಲಿ 1 ಗಿಗಾ ವ್ಯಾಟ್ ಡೇಟಾ ಕೇಂದ್ರಗಳ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಸಂಬಂಧ ಅದಾನಿ ಎಂಟರ್‌ಪ್ರೈಸಸ್ ಕಳೆದ ತಿಂಗಳು ಒಪ್ಪಂದಕ್ಕೆ ಸಹಿ ಹಾಕಿತ್ತು. ಅದಾನಿ ಟೋಟಲ್ ಗ್ಯಾಸ್‌ನ ಷೇರು ಈ ವರ್ಷ ಶೇ 96ರಷ್ಟು ಹೆಚ್ಚಳ ಕಂಡಿದೆ. ಅದಾನಿ ಎಂಟರ್‌ಪ್ರೈಸಸ್ ಶೇ 90, ಅದಾನಿ ಟ್ರಾನ್ಸ್‌ಮಿಷನ್ ಲಿ. ಶೇ 79ರಷ್ಟು ಹೆಚ್ಚಾಗಿದೆ. ಅದಾನಿ ಪವರ್, ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕಾನಾಮಿಕ್ ಜೋನ್ ಲಿ. ಈ ವರ್ಷ 52%ಕ್ಕಿಂತ ಅಧಿಕ ಏರಿಕೆ ಕಂಡಿದೆ.

English summary
Indian tycoon Gautam Adani beats Elon Musk and Jeff Bezos with biggest wealth surge in this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X