ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೇಮಿಂಗ್ ಪ್ಲಾಟ್‍ಫಾರ್ಮ್ ಜುಪೀ ಮೌಲ್ಯ 500 ದಶಲಕ್ಷ ಮಿಲಿಯನ್‌ಗೆ ಏರಿಕೆ

|
Google Oneindia Kannada News

ಆಗಸ್ಟ್ 17, 2021, ನವದೆಹಲಿ: ಭಾರತದ ಆನ್‍ಲೈನ್ ಕೌಶಲ್ಯ ಆಧಾರಿತ ಗೇಮಿಂಗ್ ಉದ್ಯಮದ ಪ್ರಮುಖ ಕಂಪನಿಯಾದ ಜುಪೀ, ಸೀರೀಸ್ ಬಿ ಫಂಡಿಂಗ್ ಸುತ್ತಿನಲ್ಲಿ 500 ಲಕ್ಷ ಡಾಲರ್ ಪೂರ್ವ-ನಿರ್ಧರಿತ ಮೌಲ್ಯಮಾಪನದಲ್ಲಿ 300 ಲಕ್ಷ ಡಾಲರ್ ಸಂಗ್ರಹಿಸಿದೆ ಎಂದು ಘೋಷಿಸಿದೆ. ಈ ಸುತ್ತಿನ ಫಂಡಿಗ್‍ಗೆ ಸಿಲಿಕಾನ್ ವ್ಯಾಲಿ ಮೂಲದ ವೆಸ್ಟ್ ಕ್ಯಾಪ್ ಗ್ರೂಪ್ ಮತ್ತು ಟೊಮಾಲೆಸ್ ಬೇ ಕ್ಯಾಪಿಟಲ್, ಮ್ಯಾಟ್ರಿಕ್ಸ್ ಪಾಟ್ರ್ನರ್ಸ್ ಇಂಡಿಯಾ ಮತ್ತು ಓರಿಯೋಸ್ ವೆಂಚರ್ ಪಾರ್ಟ್‍ನರ್ಸ್ ಪಾಲ್ಗೊಳ್ಳುವಿಕೆಯೊಂದಿಗೆ ಸಹ ನೇತೃತ್ವ ವಹಿಸಿದ್ದವು.

ಈ ಸುತ್ತು ಕಂಪನಿಯ ಎ ಸರಣಿಯಲ್ಲಿ 100 ದಶಲಕ್ಷ ಡಾಲರ್ ಮೌಲ್ಯಮಾಪನವನ್ನು ಸಂಗ್ರಹಿಸಿದ 6 ತಿಂಗಳ ಒಳಗಾಗಿ ಬಂದಿದೆ. ಇದು ಕಂಪನಿಯ ಮೌಲ್ಯಮಾಪನದಲ್ಲಿ 5 ಪಟ್ಟು ಹೆಚ್ಚಳಕ್ಕೆ ಕಾರಣವಾಗಿದೆ. ಇದುವರೆಗೆ ಸಂಗ್ರಹಿಸಿದ ಒಟ್ಟು ಮೊತ್ತ 49 ದಶಲಕ್ಷ ಡಾಲರ್ ಆಗಿದೆ. ಜುಪೀಗೆ ಉದ್ಯಮದಲ್ಲಿನ ಕೆಲವು ಅತ್ಯುತ್ತಮವೆನಿಸಿದ ಸಂಸ್ಥೆಗಳು ಬೆಂಬಲ ನೀಡುತ್ತಿದ್ದು, ಅವುಗಳಲ್ಲಿ ವೆಸ್ಟ್‌ಕ್ಯಾಪ್ ಗ್ರೂಪ್, ಮ್ಯಾಟ್ರಿಕ್ಸ್ ಪಾರ್ಟ್‍ನರ್ಸ್ ಇಂಡಿಯಾ, ಸ್ಮೈಲ್ ಗ್ರೂಪ್ ಮತ್ತು ಓರಿಯೋಸ್ ಪಾರ್ಟ್‍ನರ್ಸ್ ಸೇರಿದ್ದಾರೆ. ಕಂಪನಿಯು ಪ್ರಸ್ತುತ 10 ದಶಲಕ್ಷಕ್ಕಿಂತಲೂ ಅಧಿಕ ಬಳಕೆದಾರರನ್ನು ಹೊಂದಿದೆ. ಈ ಹೊಸ ಸುತ್ತಿನ ನಿಧಿಯನ್ನು ಉತ್ಪನ್ನ ವರ್ಗ ವಿಸ್ತರಣೆಗೆ, ಮಾರುಕಟ್ಟೆ ವ್ಯಾಪ್ತಿ ಹೆಚ್ಚಿಸಲು ಮತ್ತು ಜಾಗತಿಕ ಪ್ರತಿಭೆಗಳನ್ನು ನೇಮಿಸಿಕೊಳ್ಳುವ ಮೂಲಕ ವಿಸ್ತರಣಾ ಪ್ರಮಾಣವನ್ನು ಸಕ್ರಿಯಗೊಳಿಸಲು ಬಳಸಲಾಗುತ್ತದೆ.

ಭಾರತದ ಅಗ್ರಗಣ್ಯ ಸಂಸ್ಥೆ ಎನಿಸಿದ ಕಾನ್ಪುರ ಐಐಟಿ ಪದವೀಧರರಾದ ದಿಲ್ಶೇರ್ ಸಿಂಗ್ ಮತ್ತು ಸಿದ್ಧಾಂತ್ ಸೌರಭ್ ಈ ಕಂಪನಿಯನ್ನು ಸ್ಥಾಪಿಸಿದರು, ಮತ್ತು ಸ್ಮೈಲ್ ಗ್ರೂಪ್‍ನ ನಿಧಿಯಿಂದ ಇದನ್ನು ಪೋಷಿಸಲಾಗಿದೆ. ಸಮಯ ಪರೀಕ್ಷಿತ ಆಟಗಳನ್ನು ಪುನರ್ರಚಿಸುವ ಮೂಲಕ ಮತ್ತು ಕೌಶಲ್ಯ, ಸಂತೋಷ ಮತ್ತು ಭರವಸೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುವ ಮೂಲಕ ಜುಪೀ ಹೊಸತನಕ್ಕೆ ನಾಂದಿ ಹಾಡಿದೆ. ಕಂಪನಿಯ ಬಂಡವಾಳವು ಬಹು ಜನಪ್ರಿಯ ಬೋರ್ಡ್ ಆಟಗಳ ನವೀನ ಗೇಮಿಂಗ್ ಸ್ವರೂಪಗಳನ್ನು ಹೊಂದಿದೆ. ಪ್ರಮುಖ ಗೇಮಿಂಗ್ ಅಪ್ಲಿಕೇಶನ್ ಲೈವ್ ಟ್ರಿವಿಯಾ ರಸಪ್ರಶ್ನೆ ಪಂದ್ಯಾವಳಿಗಳನ್ನು ಆಯೋಜಿಸುತ್ತದೆ ಮತ್ತು 250 ದಶಲಕ್ಷಕ್ಕೂ ಹೆಚ್ಚು ಆಟಗಳನ್ನು ಕಂಡಿದೆ.

Gaming platform Zupee closes Series B at over 500 million USD valuation

ಜುಪೀ ಸಂಸ್ಥಾಪಕ ಮತ್ತು ಸಿಇಒ ದಿಲ್ಶೇರ್ ಸಿಂಗ್, "ಆಟಗಳು ಅಂತರ್ಗತವಾಗಿ ಪ್ರಯಾಣವನ್ನು ಸಂಭ್ರಮಿಸುತ್ತವೆ ಮತ್ತು ಸ್ವಯಂ ಅಭಿವ್ಯಕ್ತಿಯನ್ನು ಬೆಳೆಸುತ್ತವೆ. ಅದನ್ನೇ ನಾನು ಜುಪೀಯೊಂದಿಗೆ ನಿರ್ಮಿಸಲು ಬದ್ಧನಾಗಿದ್ದೇನೆ - ಇದು ಜಗತ್ತಿನಾದ್ಯಂತ ಜನರು ತಮ್ಮ ಆಂತರಿಕ ಸಂತೋಷವನ್ನು ಆಟಗಳ ಮೂಲಕ ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ನಮ್ಮ ಆಟಗಳು ಕೌಶಲ ಮತ್ತು ಮನೋರಂಜನೆ ನಡುವಿನ ಛೇದನವನ್ನು ಒದಗಿಸುವುದನ್ನು ಖಾತರಿಪಡಿಸುವಂತೆ ನಾವು ಇದನ್ನು ಅನುಶೋಧಿಸುತ್ತೇವೆ ಹಾಗೂ ನಮ್ಮ ಬಳಕೆದಾರರು ಆಟವಾಡುತ್ತಲೇ ಗಳಿಸಲು ಅನುವು ಮಾಡಿಕೊಡುತ್ತೇವೆ. ನಮ್ಮ ಉದ್ದೇಶವನ್ನು ನಂಬಿದ್ದಕ್ಕಾಗಿ ಮತ್ತು ಅದನ್ನು ವಾಸ್ತವಕ್ಕೆ ಪರಿವರ್ತಿಸುವ ನಮ್ಮ ಪ್ರಯಾಣದಲ್ಲಿ ಪ್ರಗತಿಯನ್ನು ಸಾಧಿಸಿದಕ್ಕಾಗಿ ನಾವು ನಮ್ಮ ಹೂಡಿಕೆದಾರರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಭಾರತದಲ್ಲಿ 10 ದಶಲಕ್ಷ, ಜಾಗತಿಕವಾಗಿ ಶತಕೋಟಿಗೂ ಹೆಚ್ಚು ಸಂತೃಪ್ತ ಬಳಕೆದಾರರನ್ನು ನಾವು ಹೊಂದಿದ್ದು, ನಾವು ನಮ್ಮ ವಿನೂತನ ಆಟಗಳ ಮೂಲಕ ಅವರನ್ನು ಸ್ಪರ್ಶಿಸಲು ಬಯಸುತ್ತೇವೆ" ಎಂದು ಹೇಳಿದ್ದಾರೆ.

ಉದ್ಯಮ ವರದಿಗಳ ಪ್ರಕಾರ, ಜಾಗತಿಕ ಆನ್‍ಲೈನ್ ಗೇಮಿಂಗ್ ಉದ್ಯಮವು 2020 ರಲ್ಲಿ 98 ಶತಕೋಟಿ ಡಾಲರ್‌ನಿಂದ 2030 ರಲ್ಲಿ 272 ಶತಕೋಟಿ ಡಾಲರ್‌ಗೆ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. 2020 ರಲ್ಲಿ, ಉದ್ಯಮವು ವಿಶ್ವಾದ್ಯಂತ 53 ಶತಕೋಟಿ ಮೊಬೈಲ್ ಗೇಮಿಂಗ್ ಡೌನ್‍ಲೋಡ್‍ಗಳನ್ನು ಕಂಡಿದೆ, ಅದರಲ್ಲಿ 17% ಭಾರತದಿಂದ ಬಂದಿದೆ. ಈ ವರ್ಷದ ಅಂತ್ಯದ ವೇಳೆಗೆ, ವಿಶ್ವಾದ್ಯಂತ 2.9 ಬಿಲಿಯನ್ ಆಟಗಾರರು ಇರುತ್ತಾರೆ.

ಜುಪಿ ಬಗ್ಗೆ: ಜುಪೀ ಆನ್‍ಲೈನ್ ಕೌಶಲ್ಯ ಆಧಾರಿತ ಗೇಮಿಂಗ್ ಪ್ಲಾಟ್‍ಫಾರ್ಮ್ ಸ್ಟಾರ್ಟ್ಅಪ್ ಆಗಿದ್ದು, ಬಳಕೆದಾರರನ್ನು ತೊಡಗಿಸಿಕೊಳ್ಳುವ, ಮನರಂಜಿಸುವ ಮತ್ತು ಸಬಲೀಕರಣಗೊಳಿಸುವ ಆಟಗಳನ್ನು ನಾವೀನ್ಯಗೊಳಿಸುವ ಮತ್ತು ರಚಿಸುವತ್ತ ಗಮನಹರಿಸಿದೆ.

English summary
Zupee, a leading innovator in India’s online skill-based gaming industry, has announced that it has raised $30 million at a pre-money valuation of $500 million in Series B funding round.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X