ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಯೂಚರ್ ರೀಟೇಲ್ ಆದಾಯ ಶೇಕಡಾ 71ರಷ್ಟು ಕುಸಿತ: 847 ಕೋಟಿ ರೂಪಾಯಿ ನಷ್ಟ

|
Google Oneindia Kannada News

ನವದೆಹಲಿ, ಫೆಬ್ರವರಿ 10: ಪ್ರಮುಖ ರೀಟೇಲ್ ಕಂಪನಿಯಾದ ಫ್ಯೂಚರ್ ರೀಟೇಲ್ ಲಿಮಿಟೆಡ್ (FRL) 2020 ರ ಡಿಸೆಂಬರ್ ತ್ರೈಮಾಸಿಕದಲ್ಲಿ ನಿವ್ವಳ ನಷ್ಟವು 846.92 ಕೋಟಿ ರೂ.ಗೆ ಏರಿಕೆಯಾಗಿದೆ.

ಬಿಗ್‌ ಬಜಾರ್, ಎಫ್‌ಬಿಬಿ, ಫುಡ್‌ಹಾಲ್, ಈಸಿಡೇ ಮತ್ತು ನೀಲಗಿರಿಗಳಂತಹ ರೀಟೇಲ್‌ ವ್ಯವಹಾರವನ್ನು ನಿರ್ವಹಿಸುತ್ತಿರುವ ಫ್ಯೂಚರ್ ರೀಟೇಲ್‌ ಆದಾಯವು ಶೇಕಡಾ 71ರಷ್ಟು ಕುಸಿತಗೊಂಡಿದ್ದು, ತ್ರೈಮಾಸಿಕ ನಷ್ಟ 846.92 ಕೋಟಿ ರೂ. ತಲುಪಿದೆ.

ಕಿಶೋರ್ ಬಿಯಾನಿ ನೇತೃತ್ವದ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ನಿವ್ವಳ ನಷ್ಟ 692.36 ಕೋಟಿ ರೂ. ಮತ್ತು ಹಿಂದಿನ ವರ್ಷದ ಅವಧಿಯಲ್ಲಿ 164.56 ಕೋಟಿ ರೂ. ಮುಟ್ಟಿದೆ.

Future Retail Q3 Loss Widens To Rs 847 Crore: Revenue Plumbs 71%

ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 5,193.19 ಕೋಟಿ ರೂ.ಗಳಿಗೆ ಹೋಲಿಸಿದರೆ ಕಾರ್ಯಾಚರಣೆಗಳಿಂದ ಒಟ್ಟು ಆದಾಯವು ಶೇಕಡಾ 71 ರಷ್ಟು ಕುಸಿದು 1,506.87 ಕೋಟಿ ರೂ.ಗೆ ತಲುಪಿದೆ ಎಂದು ಫ್ಯೂಚರ್ ಗ್ರೂಪ್ ಕಂಪನಿ ಬಿಎಸ್‌ಇಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ. 2020 ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆಗಳಿಂದ 1,424.11 ಕೋಟಿ ರೂ. ತಲುಪಿದೆ.

English summary
Future Retail, which operates retail stores such as Big Bazaar, FBB, Foodhall, Easyday and Nilgiris, saw its net loss widening to Rs 846.92 crore during December quarter of 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X