ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್‌ಗೆ ಸಂತಸ; ರಿಲಯನ್ಸ್ -ಫ್ಯೂಚರ್ ಒಪ್ಪಂದಕ್ಕೆ ಸುಪ್ರೀಂ ತಡೆ

|
Google Oneindia Kannada News

ನವದೆಹಲಿ, ಆಗಸ್ಟ್ 6: ರಿಲಯನ್ಸ್ ರೀಟೇಲ್ ಲಿಮಿಟೆಡ್ ಹಾಗೂ ಫ್ಯೂಚರ್ ರೀಟೇಲ್ ನಡುವಿನ 24,713 ಕೋಟಿ ಮೊತ್ತದ ಡೀಲ್ ವಿರುದ್ಧ ಇ-ಕಾಮರ್ಸ್ ದಿಗ್ಗಜ ಅಮೆಜಾನ್‌ಗೆ ಮತ್ತೊಮ್ಮೆ ಭಾರಿ ಗೆಲುವು ಸಿಕ್ಕಿದೆ. ರಿಲಯನ್ಸ್-ಫ್ಯೂಚರ್ ಒಪ್ಪಂದ ಕುರಿತಂತೆ ದೆಹಲಿ ಹೈಕೋರ್ಟ್ ನೀಡಿದ್ದ ತುರ್ತು ಆದೇಶವನ್ನು ಸುಪ್ರೀಂಕೋರ್ಟ್ ಇಂದು(ಆ.6) ಎತ್ತಿ ಹಿಡಿದಿದೆ. ಈ ಮೂಲಕ ಅಮೆಜಾನ್‌ ಪಾಲಿಗೆ ಮಹತ್ವದ ಗೆಲುವು ದಕ್ಕಿದೆ. ಫ್ಯೂಚರ್‌ -ರಿಲಯನ್ಸ್‌ ಒಪ್ಪಂದವನ್ನು ತಡೆ ಹಿಡಿಯಲು ಈ ಹಿಂದೆ ಮಧ್ಯಂತರವಾಗಿ ತುರ್ತು ಆದೇಶವನ್ನು ದೆಹಲಿ ಹೈಕೋರ್ಟ್‌ ಹೊರಡಿಸಿತ್ತು.

ಫ್ಯೂಚರ್‌ ರಿಟೇಲ್‌, ಫ್ಯೂಚರ್‌ ಕೂಪನ್ಸ್‌, ಕಿಶೋರ್‌ ಬಿಯಾನಿ ಮತ್ತು ಇತರರು ತುರ್ತು ತೀರ್ಪನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಮೂರ್ತಿ ಜೆ ಆರ್‌ ಮಿಧಾ ಅವರ ನೇತೃತ್ವದ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಇಂದು ಸುಪ್ರೀಂಕೋರ್ಟ್ ನ್ಯಾಯಪೀಠ ಮಾನ್ಯ ಮಾಡಿದೆ. ಜಸ್ಟೀಸ್ ಆರ್ ಎಫ್ ನಾರಿಮನ್ ಅವರಿದ್ದ ನ್ಯಾಯಪೀಠವು, ಫ್ಯೂಚರ್‌ ಸಮೂಹಕ್ಕೆ 20 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ಅದನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಸಂದಾಯ ಮಾಡುವಂತೆ ಸುಪ್ರೀಂಕೋರ್ಟ್ ತಿಳಿಸಿದೆ.

ಸಿಂಗಪುರದ ಮಧ್ಯಸ್ಥರ ತುರ್ತು ಆದೇಶ ಸೆಕ್ಷನ್ 17 (1) ಹಾಗೂ ಸೆಕ್ಷನ್ 17 (2) ಅನ್ವಯ ಸದರಿ ಆದೇಶವನ್ನು ಭಾರತೀಯ ಕಾನೂನಿನ ಅನ್ವಯ ಜಾರಿಗೊಳಿಸಲು ಸಾಧ್ಯವಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಎಫ್‌ಆರ್‌ಎಲ್‌ನ ಷೇರುದಾರ ಮತ್ತು ಶೇ 49 ಪಾಲನ್ನು ಹೊಂದಿರುವ ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ ಒಪ್ಪಿಗೆ, ಅನುಮತಿ ಇಲ್ಲದೆ ಫ್ಯೂಚರ್ ಕೂಪನ್ಸ್ ಲಿಮೆಟೆಡ್ ಜೊತೆ ರಿಲಯನ್ಸ್ ಒಪ್ಪಂದ ಮಾಡಿಕೊಂಡಿದ್ದನ್ನು ಅಮೆಜಾನ್ ಪ್ರಶ್ನಿಸಿತ್ತು. draft scheme of arrangement ಮಾದರಿ ಪ್ರಸ್ತಾವಿಕ ವ್ಯವಹಾರವನ್ನು ಪರಿಗಣಿಸುವಂತೆ ನ್ಯಾಯಾಲಯದಲ್ಲಿ ಅಮೆಜಾನ್ ವಾದಿಸಿತ್ತು. ಫ್ಯೂಚರ್ ರೀಟೈಲ್ ಮಾರುಕಟ್ಟೆ ಮೌಲ್ಯ ಸುಮಾರು 2.91 ಬಿಲಿಯನ್ ಡಾಲರ್ ನಷ್ಟಿದೆ. 900ಕ್ಕೂ ಅಧಿಕ ಮಳಿಗೆ, ಬಿಗ್ ಬಜಾರ್ ಸೇರಿ ಅನೇಕ ಸೂಪರ್ ಮಾರ್ಕೆಟ್ ಗಳನ್ನು ನಿಯಂತ್ರಿಸುತ್ತಿದೆ. ಈ ಒಪ್ಪಂದದ ನಂತರ ಫ್ಯೂಚರ್ ಕೂಪನ್ಸ್ ಮೇಲೆ ಶೇ49ರಷ್ಟು ಪಾಲು ಅಮೆಜಾನ್ ಹೊಂದಿದ್ದರೆ, ಫ್ಯೂಚರ್ ರೀಟೈಲ್ ಸ್ಥಾಪಕ ಕಿಶೋರ್ ಬಿಯಾನಿ ಹಾಗೂ ಕುಟುಂಬದ ಬಳಿ ಶೇ 47.02% ಪಾಲಿದೆ.

ಶೇ 49 ಪಾಲನ್ನು ಹೊಂದಿರುವ ಫ್ಯೂಚರ್

ಶೇ 49 ಪಾಲನ್ನು ಹೊಂದಿರುವ ಫ್ಯೂಚರ್

ಎಫ್‌ಆರ್‌ಎಲ್‌ನ ಷೇರುದಾರ ಮತ್ತು ಶೇ 49 ಪಾಲನ್ನು ಹೊಂದಿರುವ ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ ಒಪ್ಪಿಗೆ, ಅನುಮತಿ ಇಲ್ಲದೆ ಫ್ಯೂಚರ್ ಕೂಪನ್ಸ್ ಲಿಮೆಟೆಡ್ ಜೊತೆ ರಿಲಯನ್ಸ್ ಒಪ್ಪಂದ ಮಾಡಿಕೊಂಡಿದ್ದನ್ನು ಅಮೆಜಾನ್ ಪ್ರಶ್ನಿಸಿತ್ತು. draft scheme of arrangement ಮಾದರಿ ಪ್ರಸ್ತಾವಿಕ ವ್ಯವಹಾರವನ್ನು ಪರಿಗಣಿಸುವಂತೆ ನ್ಯಾಯಾಲಯದಲ್ಲಿ ಅಮೆಜಾನ್ ವಾದಿಸಿತ್ತು. ಫ್ಯೂಚರ್ ರೀಟೈಲ್ ಮಾರುಕಟ್ಟೆ ಮೌಲ್ಯ ಸುಮಾರು 2.91 ಬಿಲಿಯನ್ ಡಾಲರ್ ನಷ್ಟಿದೆ. 900ಕ್ಕೂ ಅಧಿಕ ಮಳಿಗೆ, ಬಿಗ್ ಬಜಾರ್ ಸೇರಿ ಅನೇಕ ಸೂಪರ್ ಮಾರ್ಕೆಟ್ ಗಳನ್ನು ನಿಯಂತ್ರಿಸುತ್ತಿದೆ. ಈ ಒಪ್ಪಂದದ ನಂತರ ಫ್ಯೂಚರ್ ಕೂಪನ್ಸ್ ಮೇಲೆ ಶೇ49ರಷ್ಟು ಪಾಲು ಅಮೆಜಾನ್ ಹೊಂದಿದ್ದರೆ, ಫ್ಯೂಚರ್ ರೀಟೈಲ್ ಸ್ಥಾಪಕ ಕಿಶೋರ್ ಬಿಯಾನಿ ಹಾಗೂ ಕುಟುಂಬದ ಬಳಿ ಶೇ 47.02% ಪಾಲಿದೆ.

ಬಹುದೊಡ್ಡ ಮೊತ್ತದ ಒಪ್ಪಂದ

ಬಹುದೊಡ್ಡ ಮೊತ್ತದ ಒಪ್ಪಂದ

ಭಾರತದಲ್ಲಿ ಆಧುನಿಕ ರಿಟೇಲ್ ವ್ಯವಹಾರ ಕ್ಷೇತ್ರದಲ್ಲಿ ಬಹುದೊಡ್ಡ ಮೊತ್ತದ ಒಪ್ಪಂದ ಇದಾಗಿತ್ತು. ಈ ಮೂಲಕ ಬಿಗ್ ಬಜಾರ್, ಫ್ಯಾಶನ್ ಅಟ್ ಬಿಗ್ ಬಜಾರ್, ಈಸಿ ಡೇ ಮತ್ತು ಬ್ರಾಂಡ್ ಫ್ಯಾಕ್ಟರಿ ಸೇರಿದಂತೆ ಭಾರತದ ಕೆಲವು ಪ್ರಮುಖ ಚಿಲ್ಲರೆ ಸ್ವರೂಪಗಳನ್ನು ರಿಲಯನ್ಸ್ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿತ್ತು. ಫ್ಯೂಚರ್ ಸಮೂಹದಿಂದ ನಡೆಸುತ್ತಿರುವ ಕೆಲವು ಕಂಪೆನಿಗಳ ವ್ಯವಹಾರವನ್ನು ಫ್ಯೂಚರ್ ಎಂಟರ್ ಪ್ರೈಸಸ್ ಲಿಮಿಟೆಡ್ (FEL)ನಲ್ಲಿ ವಿಲೀನ ಮಾಡಿತ್ತು. ಫ್ಯೂಚರ್ ಸಮೂಹದಿಂದ ಬಟ್ಟೆ, ಸಾಮಾನ್ಯ ಬಳಕೆ ವಸ್ತುಗಳು ಹಾಗೂ ಸ್ವಂತ ಎಫ್ ಎಂಸಿಜಿ ಬ್ರ್ಯಾಂಡ್ ಗಳನ್ನು ಒದಗಿಸಲಾಗುತ್ತಿದೆ. ಈ ಖರೀದಿಯು ಸೆಬಿ, ಸಿಸಿಐ, ಎನ್ ಸಿಎಲ್ ಟಿ, ಷೇರುದಾರರು, ಸಾಲಗಾರರು ಮತ್ತು ಇತರ ಅಗತ್ಯ ಅನುಮತಿಗಳ ನಿಬಂಧನೆಗಳಿಗೆ ಒಳಪಟ್ಟಿತ್ತು.

ಒಪ್ಪಂದ ಮುಖ್ಯಾಂಶಗಳು:

ಒಪ್ಪಂದ ಮುಖ್ಯಾಂಶಗಳು:

* ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸಂಸ್ಥೆಯನ್ನು RRVLಗೆ ವರ್ಗಾವಣೆ; ಮತ್ತು

* RRFLLನಿಂದ ಹೂಡಿಕೆ ಪ್ರಸ್ತಾವ: * ವಿಲೀನದ ನಂತರ 6.09% ಈಕ್ವಿಟಿ ಸ್ವಾಧೀನಕ್ಕಾಗಿ 1200 ಕೋಟಿ ರುಪಾಯಿಯ FEL ಪ್ರಿಫರೆನ್ಷಿಯಲ್ ಈಕ್ವಿಟಿ ಷೇರುಗಳ ವಿತರಣೆ; ಮತ್ತು
* 400 ಕೋಟಿ ರುಪಾಯಿಯ ಈಕ್ವಿಟಿ ವಾರಂಟ್ ಗಳ ಪ್ರಿಫರೆನ್ಷಿಯಲ್ ವಿತರಣೆ, ಅದರ ಬದಲಿಗೆ ಮತ್ತು ವಿತರಣೆ ಬೆಲೆಯ ಬಾಕಿ 75% ಪಾವತಿ, ಇದರ ಫಲಿತಾಂಶವಾಗಿ FELನಲ್ಲಿ 7.05%ನಷ್ಟನ್ನು RRFLL ಪಡೆಯುತ್ತದೆ.
ರೀಟೇಲ್ ವೆಂಚರ್ಸ್ ನ ನಿರ್ದೇಶಕಿ ಇಶಾ ಅಂಬಾನಿ

ರೀಟೇಲ್ ವೆಂಚರ್ಸ್ ನ ನಿರ್ದೇಶಕಿ ಇಶಾ ಅಂಬಾನಿ

ರಿಲಯನ್ಸ್ ರೀಟೇಲ್ ವೆಂಚರ್ಸ್ ನ ನಿರ್ದೇಶಕಿ ಇಶಾ ಅಂಬಾನಿ ಮಾತನಾಡಿ, ಈ ವ್ಯವಹಾರದ ಮೂಲಕ ಹೆಸರಾಂತ ಮಾದರಿಯ ಹಾಗೂ ಫ್ಯೂಚರ್ ಸಮೂಹದ ಬ್ರ್ಯಾಂಡ್ ಗಳಿಗೆ ಸೂರು ಒದಗಿಸುತ್ತಿದ್ದೇವೆ ಎಂದು ತಿಳಿಸುವುದಕ್ಕೆ ಸಂತೋಷ ಆಗುತ್ತದೆ. ಅದರ ವ್ಯವಹಾರದ ವಾತಾವರಣ ಹಾಗೆ ಉಳಿಸುತ್ತೇವೆ. ಭಾರತದಲ್ಲಿ ಆಧುನಿಕ ರಿಟೇಲ್ ವ್ಯವಹಾರ ಬದಲಾವಣೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದು ಅದೇ ಎಂದು ಹೇಳಿದ್ದಾರೆ. ಸಣ್ಣ ವರ್ತಕರು, ಅಂಗಡಿಗಳವರು ಮತ್ತು ದೊಡ್ಡ ಮಟ್ಟದ ಗ್ರಾಹಕರ ಬ್ರ್ಯಾಂಡ್ ಗಳ ಜತೆಗಿನ ನಮ್ಮ ವಿಶಿಷ್ಟ ರೀತಿಯ ಸಹಭಾಗಿತ್ವ ಸಕ್ರಿಯವಾಗಿ ಮುಂದುವರಿಯುತ್ತದೆ. ದೇಶದಾದ್ಯಂತ ಇರುವ ನಮ್ಮ ಗ್ರಾಹಕರಿಗೆ ಮೌಲ್ಯಯುತವಾದ ಸೇವೆ ಮುಂದುವರಿಸುವುದಕ್ಕೆ ಬದ್ಧರಾಗಿದ್ದೇವೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
A bench of Justices R F Nariman dealt with the larger question and held that an award of an EA of a foreign country is enforceable under the Indian Arbitration and Conciliation Act despite the fact that the term EA is not used in arbitration laws here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X