• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

13 ಸಾವಿರ ಕೋಟಿ ವಂಚನೆ ನಂತರ ಮೆಹುಲ್ ಚೋಕ್ಸಿ ಮೊದಲ ಮಾತುಗಳಿವು

By Srinivasa
|
   13 ಸಾವಿರ ಕೋಟಿ ವಂಚನೆ ನಂತರ ಮೆಹುಲ್ ಚೋಕ್ಸಿ ಮೊದಲ ಮಾತುಗಳಿವು

   ನವದೆಹಲಿ, ಸೆಪ್ಟೆಂಬರ್ 11: "ನನ್ನ ವಿರುದ್ಧ ಮಾಡಿರುವ ಎಲ್ಲ ಆರೋಪಗಳು ಸುಳ್ಳು ಹಾಗೂ ಆಧಾರರಹಿತವಾದದ್ದು" ಎಂದು ದೇಶದಿಂದ ಪರಾರಿ ಆಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಹೇಳಿಕೊಂಡಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 13 ಸಾವಿರ ಕೋಟಿ ರುಪಾಯಿ ವಂಚನೆ ಪ್ರಕರಣದಲ್ಲಿ ವಾಂಟೆಡ್ ಆಗಿರುವ ಬಗ್ಗೆ ಕ್ಯಾಮೆರಾ ಮುಂದೆ ಇದೇ ಮೊದಲ ಬಾರಿಗೆ ನೀಡಿದ ಹೇಳಿಕೆ ಇದಾಗಿದೆ.

   ಜಾರಿ ನಿರ್ದೇಶನಾಲಯದಿಂದ ನನ್ನ ಎಲ್ಲ ಆಸ್ತಿಯನ್ನೂ ಕಾನೂನುಬಾಹಿರವಾಗಿ ಯಾವುದೇ ಆಧಾರವಿಲ್ಲದೆ ಜಪ್ತಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಮಾಡಿದ್ದು, ಸುದ್ದಿ ಸಂಸ್ಥೆ ಎಎನ್ ಐಗೆ ನೀಡಿದ ಸಂದರ್ಶನದಲ್ಲಿ ಮೆಹುಲ್ ಚೋಕ್ಸಿ ಹೇಳಿದ ಮಾತುಗಳಿವು. ಈ ಪ್ರಶ್ನೆಗಳನ್ನು ಆಂಟಿಗುವಾದಲ್ಲಿ ಚೋಕ್ಸಿ ವಕೀಲರ ಮೂಲಕ ಕೇಳಲಾಗಿದೆ.

   ಚೋಕ್ಸಿ ವಿರುದ್ಧ ಯಾವ ಆರೋಪವೂ ಇಲ್ಲ ಎಂದಿದ್ದ ಭಾರತ

   ಈ ವರ್ಷ ಜನವರಿಯಲ್ಲಿ ಮೆಹುಲ್ ಚೋಕ್ಸಿ ಹಾಗೂ ಆತನ ಸಂಬಂಧಿ ನೀರವ್ ಮೋದಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. "ನನ್ನ ಪಾಸ್ ಪೋರ್ಟ್ ಸರೆಂಡರ್ ಮಾಡುವ ಪ್ರಶ್ನೆಯೇ ಇಲ್ಲ. ನನ್ನಿಂದ ಭಾರತಕ್ಕೆ ಇರುವ ಸುರಕ್ಷತೆ ಧಕ್ಕೆ ಏನು ಅನ್ನೋದನ್ನು ವಿವರಿಸದ ಹೊರತು ಅದು ಸಾಧ್ಯವೇ ಇಲ್ಲ" ಎಂದು ಚೋಕ್ಸಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

   ಮುಂಬೈ ಪಾಸ್ ಪೋರ್ಟ್ ಕಚೇರಿಯಿಂದ ಮೇಲ್

   ಮುಂಬೈ ಪಾಸ್ ಪೋರ್ಟ್ ಕಚೇರಿಯಿಂದ ಮೇಲ್

   ಮುಂಬೈನ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯಿಂದ ಇಮೇಲ್ ಬಂದಿತ್ತು. ನನ್ನ ಪಾಸ್ ಪೋರ್ಟ್ ಅಮಾನತು ಮಾಡಿದ್ದಾಗಿ ಅದರಲ್ಲಿ ತಿಳಿಸಿದ್ದರು. ಅದನ್ನು ತೆರವುಗೊಳಿಸುವಂತೆ ಮನವಿ ಮಾಡಿದೆ. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಚೋಕ್ಸಿ ಹೇಳಿಕೊಂಡಿದ್ದಾನೆ.

   ಆಂಟಿಗುವಾ ಮತ್ತು ಬಾರ್ಬುಡಾ ನಾಗರಿಕತ್ವ

   ಆಂಟಿಗುವಾ ಮತ್ತು ಬಾರ್ಬುಡಾ ನಾಗರಿಕತ್ವ

   ಮೆಹುಲ್ ಚೋಕ್ಸಿಯನ್ನು ಆಂಟಿಗುವಾದಿಂದ ಭಾರತಕ್ಕೆ ಕರೆತರಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿರುವ ಮಧ್ಯದಲ್ಲೇ ಈ ಸಂದರ್ಶನ ಬಂದಿದೆ. ಕಳೆದ ವರ್ಷವೇ ಮೆಹುಲ್ ಚೋಕ್ಸಿಗೆ ಆಂಟಿಗುವಾ ಮತ್ತು ಬಾರ್ಬುಡಾದ ನಾಗರಿಕತ್ವ ದೊರೆತಿದೆ. ಹಲವು ತನಿಖಾ ಸಂಸ್ಥೆಗಳು ಚೋಕ್ಸಿ ಹಾಗೂ ನೀರವ್ ಮೋದಿಯನ್ನು ವಶಕ್ಕೆ ಪಡೆಯುವ ಪ್ರಯತ್ನದಲ್ಲಿವೆ.

   ಮೋದಿ ಸಹೋದರಿ ಪೂರ್ವಿಗೆ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟೀಸ್

   ರೆಡ್ ಕಾರ್ನರ್ ನೋಟಿಸ್ ಗಾಗಿ ಮನವಿ

   ರೆಡ್ ಕಾರ್ನರ್ ನೋಟಿಸ್ ಗಾಗಿ ಮನವಿ

   ಜಾರಿ ನಿರ್ದೇಶನಾಲಯದಿಂದ ಇಂಟರ್ ಪೋಲ್ ಗೆ ಅರ್ಜಿ ಕಳುಹಿಸಿದ್ದು, ಚೋಕ್ಸಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಅಥವಾ ಜಾಗತಿಕ ವಾರಂಟ್ ಹೊರಡಿಸುವಂತೆ ಮತ್ತೊಮ್ಮೆ ಕೇಳಿಕೊಳ್ಳಲಾಗಿದೆ. ಇಂಥ ನೋಟಿಸ್ ಒಂದು ಸಲ ಜಾರಿಯಾದರೆ ತನ್ನ 192 ಸದಸ್ಯ ರಾಷ್ಟ್ರಗಳಿಗೆ ಇಂಟರ್ ಪೋಲ್ ಕೇಳಿಕೊಳ್ಳುತ್ತದೆ. ಮೆಹುಲ್ ಬಂಧನ ಅಥವಾ ವಶ ಹಾಗೂ ಹಸ್ತಾಂತರ ಪ್ರಕ್ರಿಯೆಗಳು ಆರಂಭವಾಗುತ್ತವೆ.

   ಮನವಿಯನ್ನು ಮಾನ್ಯ ಮಾಡಿಲ್ಲ

   ಮನವಿಯನ್ನು ಮಾನ್ಯ ಮಾಡಿಲ್ಲ

   ನನ್ನ ವಿರುದ್ಧದ ಆರೋಪಗಳು ರಾಜಕೀಯ ಪಿತೂರಿ ಎಂದು ಚೋಕ್ಸಿ ಹೇಳಿಕೊಂಡಿರುವುದರಿಂದ ಸದ್ಯಕ್ಕೆ ಭಾರತದ ಮನವಿಯನ್ನು ಇಂಟರ್ ಪೋಲ್ ಹಾಗೇ ಇರಿಸಿದೆ. ಇದರ ಜತೆಗೆ ಭಾರತದ ಜೈಲುಗಳ ಸ್ಥಿತಿ, ವೈಯಕ್ತಿಕ ಭದ್ರತೆ ಮತ್ತು ಆರೋಗ್ಯದ ವಿಚಾರದ ಬಗ್ಗೆ ಕೂಡ ಚೋಕ್ಸಿ ಪ್ರಶ್ನೆಗಳನ್ನು ಎತ್ತಿದ್ದಾನೆ. ಸದ್ಯಕ್ಕೆ ನೀರವ್ ಮೋದಿ, ಆತನ ಸೋದರ ನೀಶಲ್, ಸೋದರಿ ಪೂರ್ವಿ, ಅಧಿಕಾರಿಗಳಾದ ಸುಭಾಷ್ ಪರಬ್ ಮತ್ತು ಮಿಹಿರ್ ಆರ್ ಬನ್ಸಾಲಿ ವಿರುದ್ಧ ಇಂಟರ್ ಪೋಲ್ ನೋಟಿಸ್ ಜಾರಿ ಮಾಡಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Mehul Choksi, wanted in a Rs. 13,000 crore bank fraud, has spoken on camera for the first time from Antigua, where he has been living amid efforts in India to bring him back. "All allegations against me are false and baseless," said the fugitive businessman, in an elaborate defence.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more