ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಕ್‌ಗಳ ಸರಕು- ಸಾಗಣೆ ದರ ಶೇಕಡಾ 20ರಿಂದ 25ರಷ್ಟು ಹೆಚ್ಚಳ ಸಾಧ್ಯತೆ

|
Google Oneindia Kannada News

ನವದೆಹಲಿ, ಜುಲೈ 7: ತೈಲ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಸುಮಾರು ಮೂರು ತಿಂಗಳಿನಿಂದ ಬೆಲೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಜೂನ್ 7 ರಿಂದ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಲು ಪ್ರಾರಂಭಿಸಿದವು. ಹೀಗೆ ತೈಲ ಬೆಲೆಯಲ್ಲಿ ಭಾರೀ ಏರಿಕೆ, ನಿರ್ವಹಣೆ ವೆಚ್ಚದಲ್ಲಿ ಹೆಚ್ಚಳ ಹಾಗೂ ಸಿಬ್ಬಂದಿ ಕೊರತೆ ಆಗುತ್ತಿರುವ ಹಿನ್ನೆಲೆಯಲ್ಲಿ ಟ್ರಕ್ ಗಳ ಸರಕು- ಸಾಗಣೆ ದರವು ಶೇಕಡಾ 20ರಿಂದ 25ರಷ್ಟು ಹೆಚ್ಚಳ ಆಗಬಹುದು.

Recommended Video

ಕಪ್ಪು ಪಟ್ಟಿ ಕಟ್ಟಿಕೊಂಡು ಬೀದಿಗೆ ಬಂದ ಡಾಕ್ಟರ್ ಮತ್ತು ನರ್ಸ್ ಗಳು | Oneindia Kannada

ಒಂದೆಡೆ ಬೇಡಿಕೆಯ ಕೊರತೆಯಿಂದಾಗಿ, ಸುಂಕ ಹೆಚ್ಚಳವು ಇನ್ನು ಮುಂದೆ ಅನುಕೂಲಕರವಾಗಿಲ್ಲ. ಆದರೆ ಹೆಚ್ಚುತ್ತಿರುವ ಇಂಧನ ಬೆಲೆಗಳು ಹೆಚ್ಚಿದ ಬೆಲೆಗೆ ಕಾರಣವಾಗುತ್ತಿವೆ.

ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ವಾಹನ ಸವಾರರಿಗೆ ಶುಭ ಸುದ್ದಿ!ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ವಾಹನ ಸವಾರರಿಗೆ ಶುಭ ಸುದ್ದಿ!

ಆರ್ಥಿಕ ಚಟುವಟಿಕೆ ಕ್ರಮೇಣ ಚೇತರಿಸಿಕೊಳ್ಳುತ್ತಿದೆ. ಕೈಗಾರಿಕೆಗಳು ಕ್ರಮೇಣ ಉತ್ಪಾದನೆಯನ್ನು ಹೆಚ್ಚಿಸುತ್ತಿವೆ. ಸಾರಿಗೆಯ ಬೇಡಿಕೆಯೂ ಇದೇ ರೀತಿ ಹೆಚ್ಚುತ್ತಿದೆ. ಆದರೆ ಸಾರಿಗೆ ಉದ್ಯಮವು ದಾಖಲೆಯ ಇಂಧನ ಬೆಲೆಗಳಿಂದ ದುಪ್ಪಟ್ಟು ಪರಿಣಾಮ ಬೀರುತ್ತದೆ. ಈಗಾಗಲೇ, ಹಲವಾರು ಸಾರಿಗೆ ಮತ್ತು ಟ್ರಕ್‌ಗಳ ಸಂಘಗಳು ತಮ್ಮ ಗ್ರಾಹಕರಿಗೆ ಬೆಲೆಗಳನ್ನು 20 ಪ್ರತಿಶತದಿಂದ 25 ಪ್ರತಿಶತಕ್ಕೆ ಹೆಚ್ಚಿಸುವ ಪ್ರಸ್ತಾಪಗಳನ್ನು ಕಳುಹಿಸಿವೆ.

Fuel Prices Hike Impact:Truckers Raise Tariff By 20 To 25 Percent

ಲಾರಿಗಳಲ್ಲಿ ಸರಕು- ಸಾಗಣೆ ಆಗುವುದು ಬಹುತೇಕ ಕೃಷಿ ಉತ್ಪನ್ನಗಳು ಮತ್ತು ನಿತ್ಯ ಬಳಕೆ ವಸ್ತುಗಳು. ಸಾಗಣೆಗೆ ಬೇಡಿಕೆ ಹೆಚ್ಚಾಗಿರುವುದರಿಂದ ರಸ್ತೆಗೆ ಇಳಿಯುವ ವಾಹನಗಳ ಪ್ರಮಾಣ ಲಾಕ್ ಡೌನ್ ಅವಧಿಗಿಂತ ಶೇಕಡಾ ಐವತ್ತರಷ್ಟು ಹೆಚ್ಚಾಗಿದೆ. ಟ್ರಕ್ ಗಳ ಬಾಡಿಗೆ ದರ ಹೆಚ್ಚಾದರೂ ಗ್ರಾಹಕರು ಹೆಚ್ಚಿನ ಹಣ ನೀಡಲು ಸಿದ್ಧವಿಲ್ಲ ಎಂಬುದು ಬಹುತೇಕರ ಆಕ್ಷೇಪ. ಸ್ಥಳೀಯವಾಗಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಅದಕ್ಕೆ ಬೇಡಿಕೆ ಕಡಿಮೆ ಆಗಿರುವುದೇ ಕಾರಣ. ಇಷ್ಟು ದೊಡ್ಡ ಮಟ್ಟದ ನಿರ್ವಹಣಾ ವೆಚ್ಚವನ್ನು ಕೈಯಿಂದ ಹಾಕಿಕೊಂಡು, ನಷ್ಟ ಅನುಭವಿಸುತ್ತಾ ದೀರ್ಘ ಕಾಲ ನಡೆಸುವುದು ಕಷ್ಟ ಎನ್ನುತ್ತಾರೆ ಬಹುತೇಕ ಲಾರಿ ಮಾಲೀಕರು.

ಹೀಗಾಗಿ ಸರಕು- ಸಾಗಣೆ ದರವು ಶೇಕಡಾ 20ರಿಂದ 25ರಷ್ಟು ಹೆಚ್ಚಳ ಆಗಬಹುದು.

English summary
Fuel Price hike and manpower shortage Truckers are increasing prices 20 to 25 Percent
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X