ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತವಾಗಿ 11ನೇ ದಿನ ಇಂಧನ ದರ ಕುಸಿತ, ಪೆಟ್ರೋಲ್ ಬೆಲೆ ಎಷ್ಟು?

|
Google Oneindia Kannada News

ನವದೆಹಲಿ, ಅಕ್ಟೋಬರ್ 28: ದಸರಾ ಹಬ್ಬದ ನಂತರ ವಾಹನ ಸವಾರರಿಗೆ ನಿರಂತರವಾಗಿ ನೆಮ್ಮದಿಯ ಸುದ್ದಿ ಸಿಗುತ್ತಿದೆ. ಸತತ 11ನೇ ದಿನವೂ ಇಂಧನ ದರದಲ್ಲಿ ಇಳಿಕೆ ಮಾಡಿ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾನುವಾರ(ಅಕ್ಟೋಬರ್ 28) ಬೆಳಗ್ಗೆ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಸುಧಾರಿಸಿದೆ. ಹೀಗಾಗಿ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಇಳಿಕೆಯಾಗುತ್ತಿದೆ.

ಇದೇ ಮೊದಲ ಬಾರಿ, ಪೆಟ್ರೋಲ್‌ಗಿಂತಲೂ ಡೀಸೆಲ್‌ ದುಬಾರಿ! ಇದೇ ಮೊದಲ ಬಾರಿ, ಪೆಟ್ರೋಲ್‌ಗಿಂತಲೂ ಡೀಸೆಲ್‌ ದುಬಾರಿ!

ತೈಲ ಬೆಲೆ ಮೇಲೆ ನಿಯಂತ್ರಣ ಸಿಗದ ಕಾರಣ ಜನಸಾಮಾನ್ಯರ ಮೇಲೆ ತೀವ್ರ ಆರ್ಥಿಕ ಹೊರೆಯಾಗುತ್ತಿದೆ ಎಂದು ವಿರೋಧಪಕ್ಷಗಳ ಪ್ರತಿಭಟನೆ ನಡೆಸಿ, ತೀವ್ರ ಒತ್ತಡ ಹೇರಿದ್ದವು. ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಅಕ್ಟೋಬರ್ 4ರಂದು 2.50 ರೂ. ಇಳಿಕೆ ಮಾಡಿತ್ತು. ಆದರೆ, ಕಡಿಮೆ ಮಾಡಿದ ಮೊತ್ತವನ್ನು ಮೀರಿ ಹತ್ತೇ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಬೆಲೆ ಸತತವಾಗಿ ಕುಸಿಯುತ್ತಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಷ್ಟು?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಷ್ಟು?

ನವದೆಹಲಿಯಲ್ಲಿ ಭಾನುವಾರದಂದು ಪೆಟ್ರೋಲ್ 40 ಪೈಸೆ ಹಾಗೂ ಡಿಸೇಲ್ 33 ಪೈಸೆ ದರ ಕಡಿತವಾಗಿದೆ. ಈ ಮೂಲಕ ಸತತ 11ನೇ ದಿನವೂ ಈ ಬೆಲೆ ಇಳಿಕೆಯಾಗಿದೆ. ಭಾನುವಾರದಂದು ದೆಹಲಿಯಲ್ಲಿ 80.05 (ನಿನ್ನೆ 80.45ರು) ಹಾಗೂ ಡಿಸೇಲ್ 74.05 (ಡೀಸೆಲ್ ಬೆಲೆ ಪ್ರತಿ ಲೀಟರ್ 74.38 ರು) ನಷ್ಟಿದೆ.

ವಾಣಿಜ್ಯ ನಗರಿ ಮುಂಬೈಯಲ್ಲಿ ಇಂಧನ ಬೆಲೆ

ವಾಣಿಜ್ಯ ನಗರಿ ಮುಂಬೈಯಲ್ಲಿ ಇಂಧನ ಬೆಲೆ

ಮುಂಬೈ ನಗರದಲ್ಲಿ ಭಾನುವಾರದಂದು ಪೆಟ್ರೋಲ್ ದರ ಪ್ರತಿ ಲೀಟರ್ ಪೆಟ್ರೋಲ್ 85.54 ರು ನಷ್ಟಿದ್ದರೆ, ಡೀಸೆಲ್ ಬೆಲೆ 77.61ರುನಷ್ಟಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಶನಿವಾರದಂದು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 85.93 ರು ನಷ್ಟಿತ್ತು. ಡೀಸೆಲ್ ಬೆಲೆ 77.96 ರೂ.ಗಳಷ್ಟಿತ್ತು.

ತೈಲ ಬೆಲೆಯಲ್ಲಿ ಮತ್ತೆ ಇಳಿಕೆ, ಜನಸಾಮಾನ್ಯ ಕೊಂಚ ನಿರಾಳ ತೈಲ ಬೆಲೆಯಲ್ಲಿ ಮತ್ತೆ ಇಳಿಕೆ, ಜನಸಾಮಾನ್ಯ ಕೊಂಚ ನಿರಾಳ

ಕೋಲ್ಕತ್ತಾ ಹಾಗೂ ಚೆನ್ನೈ ನಗರಗಳಲ್ಲಿ ಬೆಲೆ

ಕೋಲ್ಕತ್ತಾ ಹಾಗೂ ಚೆನ್ನೈ ನಗರಗಳಲ್ಲಿ ಬೆಲೆ

ಕೋಲ್ಕತಾ ನಗರದಲ್ಲಿ ಭಾನುವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 81.92ರು ಹಾಗೂ ಡೀಸೆಲ್ ಬೆಲೆ 75.90ರು ನಷ್ಟಿದೆ. ಶನಿವಾರದಂದು ಪೆಟ್ರೋಲ್ ಬೆಲೆ 82.31 ರೂ. ಇದ್ದರೆ, ಡೀಸೆಲ್ ದರ 76.23 ರೂ.ಗೆ ಮಾರಾಟ ಆಗುತ್ತಿತ್ತು.

ಚೆನ್ನೈನಲ್ಲಿ ಭಾನುವಾರದಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 83.18 ರು ಹಾಗೂ ಡೀಸೆಲ್ ಬೆಲೆ 78.29ರು ನಷ್ಟಿದೆ. ಶನಿವಾರದಂದು ಪೆಟ್ರೋಲ್ ಬೆಲೆ 84.96 ರು ಹಾಗೂ ಡೀಸೆಲ್ ಬೆಲೆ 78.64ರು ನಷ್ಟಿತ್ತು.

ಬೆಂಗಳೂರು ಹಾಗೂ ಹೈದರಾಬಾದ್

ಬೆಂಗಳೂರು ಹಾಗೂ ಹೈದರಾಬಾದ್

ಭಾನುವಾರದಂದು ಹೈದರಾಬಾದಿನಲ್ಲಿ ಪ್ರತಿ ಲೀಟರ್ ಬೆಲೆ 84.86 ರು ನಷ್ಟಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 80.55 ರು ಗೇರಿದೆ. ಶನಿವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 85.28 ರು ನಷ್ಟಿದೆ. ಪ್ರತಿ ಲೀಟರ್ ಡೀಸೆಲ್ ಪ್ರತಿ ಲೀಟರ್ 80.91 ರು ನಷ್ಟಿದೆ.

ಬೆಂಗಳೂರಿನಲ್ಲಿ ಭಾನುವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 80.67ರು ನಷ್ಟಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 74.43 ರು ನಷ್ಟಿದೆ. ಶನಿವಾರದಂದು ಪೆಟ್ರೋಲ್ ಬೆಲೆ 81.08ರು ಹಾಗೂ ಡೀಸೆಲ್ ಬೆಲೆ 74.76ರು ನಷ್ಟಿದೆ.

ಸತತವಾಗಿ 5ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಅಗ್ಗಸತತವಾಗಿ 5ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಅಗ್ಗ

English summary
Fuel prices continued to witness a downfall on Sunday (October 28), providing much needed relief to consumers from the relentless rate hike in recent months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X