ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ 20 ಪೈಸೆ ಇಳಿಕೆ, ಇನ್ನಷ್ಟು ಕುಸಿತದ ನಿರೀಕ್ಷೆ

|
Google Oneindia Kannada News

ನವದೆಹಲಿ, ನವೆಂಬರ್ 18: ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸತತ 27ನೇ ದಿನವೂ ಇಳಿಕೆ ಕಂಡು ಬಂದಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾನುವಾರ (ನವೆಂಬರ್ 18)ದಂದು ಬೆಳಗ್ಗೆ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿವೆ. ನಿರಂತರವಾಗಿ ಏರಿಕೆ ಕಾಣುತ್ತಿದ್ದ ಇಂಧನ ದರ ಈಗ ಇಳಿಕೆಯಾಗುತ್ತಿದ್ದು, ವಾಹನ ಸವಾರರಿಗೆ ಸಂತಸ ತಂದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್ ಬೆಲೆ 67.10 ಡಾಲರ್ ನಷ್ಟಿದೆ. ಇತ್ತೀಚೆಗೆ 86 ಡಾಲರ್ ಪ್ರತಿ ಬ್ಯಾರೆಲ್ ನಂತೆ ಏರಿಕೆಯಾಗಿತ್ತು. ಇದಲ್ಲದೆ, ಡಾಲರ್ ಎದುರು ರೂಪಾಯಿ ಮೌಲ್ಯ (ಪ್ರತಿ 1 ಡಾಲರ್ =71.79 ರುಪಾಯಿ) ಸುಧಾರಿಸಿದೆ. ಹೀಗಾಗಿ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಇಳಿಕೆಯಾಗುತ್ತಿದೆ.

ನಿರಂತರವಾಗಿ ಇಂಧನ ದರ ಇಳಿಕೆ, ಸಂತಸಗೊಂಡ ವಾಹನ ಸವಾರರುನಿರಂತರವಾಗಿ ಇಂಧನ ದರ ಇಳಿಕೆ, ಸಂತಸಗೊಂಡ ವಾಹನ ಸವಾರರು

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸತತವಾಗಿ ಕುಸಿತಗೊಳ್ಳುತ್ತಿರುವ ಹಿನ್ನೆಲೆ ಭಾನುವಾರವೂ ಪೆಟ್ರೋಲ್‌, ಡೀಸೆಲ್ ಬೆಲೆ ಇಳಿಕೆಯಾಗಿ ಗ್ರಾಹಕರ ಮೊಗದಲ್ಲಿ ನಗೆ ಮೂಡಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಧನ ಬೆಲೆಯಲ್ಲಿ ಇಳಿಕೆಯಾಗಿದ್ದು, 1 ಲೀ. ಪೆಟ್ರೋಲ್‌ಗೆ 20 ಪೈಸೆ ಕಡಿಮೆಯಾಗುವ ಮೂಲಕ 76.71 ರೂ.ಗಳಷ್ಟಿದ್ದರೆ, ಡೀಸೆಲ್‌ ಲೀಟರ್‌ಗೆ 20 ಪೈಸೆ ಕಡಿಮೆಯಾಗಿ 71.56 ರೂ.ಗಳಿಗೆ ಮಾರಾಟವಾಗುತ್ತಿದೆ.

ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ಬೆಲೆ

ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ ಬೆಲೆ

ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ
ಭಾನುವಾರ(ನ.18)ದಂದು ಪೆಟ್ರೋಲ್ 77.38 ರು(17 ಪೈಸೆ ಇಳಿಕೆ)
ಶನಿವಾರದಂದು ಪೆಟ್ರೋಲ್ 77.55 ರು(17ಪೈಸೆ ಇಳಿಕೆ)
ಶುಕ್ರವಾರದಂದು ಪೆಟ್ರೋಲ್ 77.72ರು (18 ಪೈಸೆ ಕಡಿತ)

***
ಡೀಸೆಲ್ ಬೆಲೆ ಇಳಿಕೆ
ಭಾನುವಾರದಂದು ಡೀಸೆಲ್ ಬೆಲೆ 71.94 ರು (21 ಪೈಸೆ ಇಳಿಕೆ)
ಶನಿವಾರದಂದು ಡೀಸೆಲ್ 72.15 ರು (16 ಪೈಸೆ ಇಳಿಕೆ)
ಶುಕ್ರವಾರದಂದು ಡೀಸೆಲ್ 72.31ರು (17 ಪೈಸೆ ಕಡಿತ)

ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ

ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್ ಬೆಲೆ 67.10 ಡಾಲರ್ ನಷ್ಟಿದೆ. ಇತ್ತೀಚೆಗೆ 86 ಡಾಲರ್ ಪ್ರತಿ ಬ್ಯಾರೆಲ್ ನಂತೆ ಏರಿಕೆಯಾಗಿತ್ತು. ಕಳೆದ 15 ದಿನಗಳಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗುತ್ತಲೇ ಇದೆ. ಇರಾನ್ ಮೇಲಿನ ನಿರ್ಬಂಧವನ್ನು ಯುನೈಟೆಡ್ ಸ್ಟೇಟ್ಸ್ ತಕ್ಕಮಟ್ಟಿಗೆ ಹಿಂದಕ್ಕೆ ಪಡೆದುಕೊಂಡಿದೆ. ಇದರಿಂದಾಗಿ, ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಟರ್ಕಿ, ಇಟಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ತೈವಾನ್ ಗೆ ಅನುಕೂಲವಾಗಿದೆ.

ನವದೆಹಲಿಯಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ

ನವದೆಹಲಿಯಲ್ಲಿ ಕಳೆದ ಮೂರು ದಿನಗಳಲ್ಲಿ ತೈಲ

ಭಾನುವಾರ(ನ.18)ದಂದು ಪೆಟ್ರೋಲ್ 76.71 ರು(20ಪೈಸೆ ಇಳಿಕೆ)
ಶನಿವಾರದಂದು ಪೆಟ್ರೋಲ್ 76.91 ರು(19 ಪೈಸೆ ಇಳಿಕೆ)
ಶುಕ್ರವಾರದಂದು ಪೆಟ್ರೋಲ್ 77.10ರು (18 ಪೈಸೆ ಕಡಿತ)

***
ಡೀಸೆಲ್ ಬೆಲೆ ಇಳಿಕೆ
ಭಾನುವಾರದಂದು ಡೀಸೆಲ್ ಬೆಲೆ 71.56 ರು (18 ಪೈಸೆ ಇಳಿಕೆ)
ಶನಿವಾರದಂದು ಡೀಸೆಲ್ 71.74 ರು (19 ಪೈಸೆ ಇಳಿಕೆ)
ಶುಕ್ರವಾರದಂದು ಡೀಸೆಲ್ 71.93 ರು (16 ಪೈಸೆ ಇಳಿಕೆ)

ಮುಂಬೈಯಲ್ಲಿ ತೈಲ ಬೆಲೆ

ಮುಂಬೈಯಲ್ಲಿ ತೈಲ ಬೆಲೆ

ಭಾನುವಾರ(ನ.18)ದಂದು ಪೆಟ್ರೋಲ್ 82.23 ರು(20 ಪೈಸೆ ಇಳಿಕೆ)
ಶನಿವಾರದಂದು ಪೆಟ್ರೋಲ್ 82.43 ರು(19 ಪೈಸೆ ಇಳಿಕೆ)
ಶುಕ್ರವಾರದಂದು ಪೆಟ್ರೋಲ್ 82.80ರು (14 ಪೈಸೆ ಕಡಿತ)
***
ಡೀಸೆಲ್ ಬೆಲೆ ಇಳಿಕೆ
ಭಾನುವಾರದಂದು ಡೀಸೆಲ್ ಬೆಲೆ 74.97 ರು (19 ಪೈಸೆ ಇಳಿಕೆ)
ಶನಿವಾರದಂದು ಡೀಸೆಲ್ 75.16 ರು (20 ಪೈಸೆ ಇಳಿಕೆ)
ಶುಕ್ರವಾರದಂದು ಡೀಸೆಲ್ 75.36 ರು (17 ಪೈಸೆ ಇಳಿಕೆ)

English summary
Fuel prices continued the downward trend on Sunday as well due to a reduction in the rates of crude oil. Petrol prices went down by 20 paise in the national capital and Mumbai while diesel prices were cut by 18-19 paise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X