ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಲಕ್ಷ ಉದ್ಯೋಗ ಸೃಷ್ಟಿಸುವ ಭರಾಟೆಯಲ್ಲಿ ಉನ್ನತ ಐಟಿ ಸಂಸ್ಥೆಗಳು

|
Google Oneindia Kannada News

ನವದೆಹಲಿ, ಏಪ್ರಿಲ್ 15: ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಡಿಜಿಟಲ್ ಕೌಶಲ್ಯ ಮತ್ತು ಪ್ರತಿಭೆಯ ಬೇಡಿಕೆ ಹೆಚ್ಚಾಗಿದೆ. ಐಟಿ ಕಂಪನಿಗಳು ನೇಮಕಾತಿ ಕಳೆದ ವರ್ಷ ಸಾಕಷ್ಟು ನೇಮಕಾತಿಯನ್ನು ಮಾಡಿಕೊಂಡಿದೆ. ಈ ವರ್ಷವೂ ಕೂಡಾ ಉದ್ಯೋಗ ನೇಮಕಾತಿ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್, ಕಾಂಗ್ನಿಝೆಂಟ್ ಹಾಗೂ ಕ್ಯಾಪ್‌ಜೆಮಿನಿ ಸೇರಿದಂತೆ ಪ್ರಮುಖ ಐಟಿ ಕಂಪನಿಗಳು ತಮ್ಮ ನೇಮಕಾತಿ ಗುರಿಗಳನ್ನು ಹೊಂದಿದ್ದು, ಈ ಹಣಕಾಸು ವರ್ಷದಲ್ಲಿ ಸುಮಾರು 3 ಲಕ್ಷ ಜನರನ್ನು ತಮ್ಮ ಉದ್ಯೋಗಿಗಳಿಗೆ ಸೇರಿಸಿಕೊಳ್ಳಲು ಬಯಸುತ್ತಿವೆ.

ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 100,000 ಜನರನ್ನು ನೇಮಿಸಿಕೊಂಡ ಟಿಸಿಎಸ್ ಈ ಬಾರಿ ತನ್ನ ಕ್ಯಾಂಪಸ್ ನೇಮಕಾತಿ ಮಾದರಿಯ ಮೂಲಕ ಸುಮಾರು 40,000 ಫ್ರೆಶರ್‌ಗಳನ್ನು ನೇಮಕಾತಿ ಮಾಡುವ ನಿರೀಕ್ಷೆಯನ್ನು ಹೊಂದಿದೆ. ಅದೇ ರೀತಿ, ಈ ಹೊಸ ಹಣಕಾಸು ವರ್ಷದಲ್ಲಿ 85,000 ಜನರನ್ನು ನೇಮಕಾತಿ ಮಾಡಿಕೊಳ್ಳಲು ಗುರಿಯನ್ನು ಹೊಂದಿರುವ ಇನ್ಫೋಸಿಸ್, ಈ ವರ್ಷ 50,000 ನೇಮಕಾತಿ ಮಾಡುವ ಗುರಿಯನ್ನು ಹೊಂದಿದೆ.

ನೇಮಕಾತಿ ಹೆಚ್ಚಿಸಲಿರುವ ವಿಪ್ರೋ

ನೇಮಕಾತಿ ಹೆಚ್ಚಿಸಲಿರುವ ವಿಪ್ರೋ

ಭಾರತೀಯ ಐಟಿ ಪ್ರಮುಖ ಸಂಸ್ಥೆ ವಿಪ್ರೋ ತನ್ನ ನೇಮಕಾತಿಯನ್ನು ಕಳೆದ ಆರ್ಥಿಕ ವರ್ಷದಲ್ಲಿ 17,500 ರಿಂದ 2023 ರಲ್ಲಿ 30,000 ಕ್ಕೆ ಹೆಚ್ಚಿಸಲಿದೆ. ಎಚ್‌ಸಿಎಲ್ ಳೆದ ವರ್ಷದ 22,000 ನೇಮಕಾತಿ ಮಾಡಿಕೊಂಡಿದ್ದು, ಈ ವರ್ಷ 40,000 ರಿಂದ 45,000 ಕ್ಕೆ ತನ್ನ ನೇಮಕಾತಿ ಗುರಿಯನ್ನು ದ್ವಿಗುಣಗೊಳಿಸಿದೆ.

ಕಾಗ್ನಿಜೆಂಟ್‌ನಲ್ಲಿ ಫೆಶ್ರರ್‌ಗಳಿಗೆ ಅಧಿಕ ಅವಕಾಶ

ಕಾಗ್ನಿಜೆಂಟ್‌ನಲ್ಲಿ ಫೆಶ್ರರ್‌ಗಳಿಗೆ ಅಧಿಕ ಅವಕಾಶ

ಫ್ರೆಂಚ್ ಐಟಿ ದೈತ್ಯ ಕ್ಯಾಪ್‌ಜೆಮಿನಿ, ಭಾರತದಲ್ಲಿ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ಹೊಂದಿದೆ. ಈ ವರ್ಷ 60,000 ಜನರನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಕಾಗ್ನಿಜೆಂಟ್ ಕೂಡ ನೇಮಕಾತಿಯ ಭರಾಟೆಯಲ್ಲಿದೆ. ಕಳೆದ ವರ್ಷ 33,000 ಫ್ರೆಶರ್‌ಗಳನ್ನು ನೇಮಕ ಮಾಡಿಕೊಂಡಿದ್ದ ಕಾಗ್ನಿಜೆಂಟ್ ಕಳೆದ ವರ್ಷಕ್ಕೆ ಹೋಲಿಸಿದರೆ 2022 ರಲ್ಲಿ 50,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ.

ಯಾವ ಸಂಸ್ಥೆಯಲ್ಲಿ ಕಡಿಮೆ ನೇಮಕಾತಿ?

ಯಾವ ಸಂಸ್ಥೆಯಲ್ಲಿ ಕಡಿಮೆ ನೇಮಕಾತಿ?

ದೊಡ್ಡ ನೇಮಕಾತಿಯ ಹೊರತಾಗಿ, ಹಲವಾರು ಐಟಿ ಸಂಸ್ಥೆಗಳು ಈ ವರ್ಷ ಫ್ರೆಶರ್‌ಗಳಿಂದ ಅನುಭವಿ ವೃತ್ತಿಪರರವರೆಗೆ ಕಡಿಮೆ ಸಂಖ್ಯೆಯಲ್ಲಿ ಜನರನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಡಿಜಿಟಲ್ ಪಾವತಿ ಸಂಸ್ಥೆ ಫೋನ್‌ ಪೇ 2,800 ಜನರನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಇನ್ನು ಫಿನ್‌ಕೆಟ್ ಬ್ಯಾಂಕ್‌ಬಜಾರ್ 1,500 ಜನರನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಕ್ರಿಪ್ಟೋ ಎಕ್ಸ್‌ಚೇಂಜ್ ಪ್ಲಾಟ್‌ಫಾರ್ಮ್ ಕಾಯಿನ್‌ಬೇಸ್ ಭಾರತದಲ್ಲಿ 1,000 ಜನರನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಆದರೆ ಇನ್ಫೋವಿಷನ್ 2,000 ಜನರನ್ನು ನೇಮಿಸಿಕೊಳ್ಳುವುದಾಗಿ ಹೇಳಿದೆ.

ಇತರ ಕಂಪನಿಗಳಿಂದ ಸಾವಿರಾರು ಉದ್ಯೋಗ ಸೃಷ್ಟಿ ನಿರೀಕ್ಷೆ

ಇತರ ಕಂಪನಿಗಳಿಂದ ಸಾವಿರಾರು ಉದ್ಯೋಗ ಸೃಷ್ಟಿ ನಿರೀಕ್ಷೆ

ದೊಡ್ಡ ಮತ್ತು ಸಣ್ಣ ಕಂಪನಿಗಳು, ಭಾರತದ ಒಟ್ಟು ಐಟಿ ವಲಯದ ಶೇಕಡಾವಾರು ಸಣ್ಣ ಪ್ರಮಾಣವನ್ನು ಹೊಂದಿವೆ. ಈ ವರ್ಷ ಇತರ ಕಂಪನಿಗಳಿಂದ ಸಾವಿರಾರು ಉದ್ಯೋಗಗಳನ್ನು ನಿರೀಕ್ಷಿಸಲಾಗಿದೆ. ಇನ್ನು ಕೆಲವು ಸಂಸ್ಥೆಗಳು ವರ್ಷಪೂರ್ತಿ ಉದ್ಯೋಗ ಸೃಷ್ಟಿ ಮಾಡುವ, ನೇಮಕಾತಿ ಮಾಡುವೆಡೆ ಗಮನಹರಿಸುತ್ತಿದೆ. ತಮ್ಮ ಸಂಸ್ಥೆಯ ಕಾರ್ಯವೈಖರಿಗೆ ತಕ್ಕುದಾಗಿ ಈ ಸಂಸ್ಥೆಗಳು ನೇಮಕಾತಿ ಮಾಡುತ್ತದೆ.

English summary
IT hiring spree: From TCS, HCL to Infosys, top IT firms to create nearly 3 lakh jobs this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X