ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 1ರಿಂದ ಗಲ್ಫ್ ರಾಷ್ಟ್ರಗಳ ಪ್ರವಾಸ ಸಿಕ್ಕಾಪಟ್ಟೆ ದುಬಾರಿ

|
Google Oneindia Kannada News

ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ನಿಮ್ಮ ಮುಂದಿನ ಪ್ರಯಾಣವನ್ನು ಪ್ಲಾನ್ ಮಾಡಿದ್ದರೆ, ಜನವರಿ ಒಂದರ ನಂತರ ಆಗಿದ್ದರೆ ಅದು ದುಬಾರಿ ಆಗಲಿದೆ. ಏಕೆಂದರೆ ಗಲ್ಫ್ ರಾಷ್ಟ್ರಗಳಲ್ಲಿ ಜನವರಿ 1, 2018ರಿಂದ ಹೋಟೆಲ್, ರೆಸ್ಟೋರೆಂಟ್, ಪ್ರವಾಸ- ಟ್ಯಾಕ್ಸಿ, ಆಭರಣ ಸೇರಿದಂತೆ ಹಲವು ಸರಕು ಹಾಗೂ ಸೇವೆಗಳ ಮೇಲೆ ಶೇ 5ರಷ್ಟು ವ್ಯಾಟ್ (ವ್ಯಾಲ್ಯೂ ಆಡೆಡ್ ಟ್ಯಾಕ್ಸ್) ಹಾಕಲಾಗುತ್ತದೆ.

ದುಬೈ ಪ್ರವಾಸೋದ್ಯಮ ಇಲಾಖೆ ಅಧಿಕೃತ ಅಂಕಿಯ ಪ್ರಕಾರ, ದುಬೈಗೆ ತೆರಳುವ ಪ್ರವಾಸಿಗರ ಪೈಕಿ ಭಾರತೀಯರೇ ಹೆಚ್ಚು. ಪ್ರತಿ ವರ್ಷ ಹತ್ತಿರ ಹತ್ತಿರ 1.8 ಕೋಟಿ ಭಾರತೀಯರು ಪ್ರತಿ ವರ್ಷ ಯುಎಇಗೆ ತೆರಳುತ್ತಾರೆ. ಇನ್ನು ದುಬೈ ಹಾಗೂ ಅಬು ಧಾಬಿ ನೆಚ್ಚಿನ ಪ್ರವಾಸಿ ತಾಣವಾಗಿದೆ.

From January 1st Gulf tour will be costly

ಆಭರಣಗಳ ಖರೀದಿ, ಪ್ರವಾಸಕ್ಕೆ ಭಾರತೀಯರಿಗೆ ಯುಎಇ ಅದರಲ್ಲೂ ದುಬೈ ಅಚ್ಚುಮೆಚ್ಚು. ಎಲ್ಲ ವಿಶ್ರಾಂತಿ ಚಟುವಟಿಕೆಗಳ ಮೇಲೆ ಶೇ 5ರಷ್ಟು ತೆರಿಗೆ ಬೀಳುತ್ತದೆ. ಇದರಿಂದ ಭಾರತೀಯರಿಂದ ಶೇಕಡಾ 6ರಿಂದ 8ರಷ್ಟು ಹೆಚ್ಚಿನ ಖರ್ಚು ಬೀಳುತ್ತದೆ. ಕಳೆದ ಕೆಲ ವರ್ಷಗಳಿಂದ ತೈಲ ದರದಲ್ಲಿ ಇಳಿಕೆ ಆಗುತ್ತಿರುವುದರಿಂದ ಆದಾಯ ಹೆಚ್ಚಳಕ್ಕೆ ಯತ್ನಿಸುತ್ತಿದೆ ಮತ್ತು ಅದರ ಭಾಗವಾಗಿ ವ್ಯಾಟ್ ಪರಿಚಯಿಸಲಾಗುತ್ತಿದೆ.

ಇನ್ನು ಕತಾರ್ ಗೆ ಹೋಗಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ!ಇನ್ನು ಕತಾರ್ ಗೆ ಹೋಗಲು ಭಾರತೀಯರಿಗೆ ವೀಸಾ ಅಗತ್ಯವಿಲ್ಲ!

ಪ್ರವಾಸಿಗರನ್ನು ಹೊರತು ಪಡಿಸಿ, ವ್ಯಾಟ್ ಪರಿಚಯಿಸುತ್ತಿರುವ ಕಾರಣಕ್ಕೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಆಗುತ್ತದೆ. ಅಲ್ಲಿ ಈಗಾಗಲೇ ಹಲವು ವಸ್ತುಗಳ ಬೆಲೆ ಏರಿಕೆ ಆಗಿದೆ. ಜನವರಿ ಒಂದರಿಂದ ಮತ್ತೂ ಹೆಚ್ಚಾಗಲಿದೆ.

ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ವಿದೇಶಿ ನೌಕರರಿಗೆ ತೆರಿಗೆ ರಹಿತ ಜೀವನಶೈಲಿಯ ಆಮಿಷ ಒಡ್ಡಲಾಗಿತ್ತು. ಆದರೆ ಈಗ ತೆರಿಗೆ ಹೆಚ್ಚಿಸುವ ಪ್ರಯತ್ನದಿಂದಾಗಿ ವರ್ಚಸ್ಸಿಗೆ ಹಾನಿಯಾಗಲಿದೆ. ಮುಂಬರುವ ವರ್ಷಗಳಲ್ಲಿ ಗಲ್ಫ್ ನ ಇತರ ರಾಷ್ಟ್ರಗಳಲ್ಲಿ ವ್ಯಾಟ್ ಅನ್ನು ವಿಧಿಸುವ ಆಲೋಚನೆ ಇದೆ.

English summary
Due to implementation of VAT on various goods and services in various Gulf countries including Dubai and Abu Dhabi tour will be costly. Dubai and Abu Dhabi are major tourist destinations for Indians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X