ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು, ಪುಣೆ, ಹೈದ್ರಾಬಾದಿಗೆ ಫ್ರೆಶ್ ಟು ಹೋಂ ವಿಸ್ತರಣೆ

|
Google Oneindia Kannada News

ಬೆಂಗಳೂರು, ಡಿ 3: ವಿಶ್ವದ ಅತಿ ದೊಡ್ಡ ಸಂಪೂರ್ಣ ಆನ್‍ಲೈನ್ ತಾಜಾ ಮೀನು ಮತ್ತು ಮಾಂಸ ವಿತರಣೆ ಬ್ರ್ಯಾಂಡ್ ಆಗಿರುವ ಫ್ರೆಶ್‍ಟುಹೋಂ ತನ್ನ ದೈನಂದಿನ ಎಫ್‍ಟಿಎಚ್ ಡೈಲಿ ಸೇವೆಯನ್ನು ಬೆಂಗಳೂರು, ಹೈದ್ರಾಬಾದ್ ಮತ್ತು ಪುಣೆ ನಗರಗಳಿಗೂ ವಿಸ್ತರಣೆ ಮಾಡಿದೆ.

ಈ ಹೊಸ ಡೆಲಿವರಿ ಸೇವೆಗಳಲ್ಲಿ ಹಾಲು, ದಿನಸಿ, ಹಣ್ಣು, ತರಕಾರಿ ಮತ್ತು ದಿನನಿತ್ಯದ ಅಗತ್ಯ ವಸ್ತುಗಳ ಪೂರೈಕೆ ಸೇರಿದೆ. ಈ ದಿನನಿತ್ಯದ ಸೇವೆಯಲ್ಲಿ ದಿನಸಿ ಮತ್ತು ಸ್ಟಾಪೆಲ್ಸ್, ತೋಟದಿಂದ ತಾಜಾ ಹಣ್ಣು ಮತ್ತು ತರಕಾರಿಗಳು, ಡೈರಿ, ಬೇಕರಿ ಮತ್ತು ಇತರೆ ಆಹಾರ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸಲಿದೆ.

ಜಿಲ್ಲೆಗೊಂದು ಮತ್ಸ್ಯದರ್ಶಿನಿ, ಅಗ್ಗದ ದರದಲ್ಲಿ ರುಚಿಕರ ಮೀನೂಟ ಜಿಲ್ಲೆಗೊಂದು ಮತ್ಸ್ಯದರ್ಶಿನಿ, ಅಗ್ಗದ ದರದಲ್ಲಿ ರುಚಿಕರ ಮೀನೂಟ

ಎಫ್‍ಟಿಎಚ್ ಡೈಲಿ ಪ್ರತಿ ತಿಂಗಳು ಹತ್ತು ಲಕ್ಷಕ್ಕೂ ಅಧಿಕ ಆರ್ಡರ್ ಗಳನ್ನು ವಿತರಣೆ ಮಾಡುತ್ತಿದೆ ಮತ್ತು ಪ್ರತಿದಿನ ಬೆಳಗ್ಗೆ 7.30 ರೊಳಗಿನ ಗೋಲ್ಡನ್ ಅವರ್ ನಲ್ಲಿ ಉಚಿತ ಹೋಂ ಡೆಲಿವರಿ ಮಾಡಲಿದೆ.
ಕೊರೊನಾ ಭೀತಿ ಹಿನ್ನಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದ ವೇಳೆಯಲ್ಲಿ ಜನರು ಮನೆಯಿಂದ ಹೊರಬರದಂತೆ ಆದೇಶ ಹೊರಡಿಸಲಾಗಿತ್ತು. ಇಂಥ ಸಂದರ್ಭದಲ್ಲಿ ಆನ್ ಲೈನ್ ಫುಡ್ ಡೆಲಿವರಿಗೆ ಬೇಡಿಕೆ ಹೆಚ್ಚಿದೆ.

 ಯಾವುದೇ ಕನಿಷ್ಠ ಆರ್ಡರ್ ಮಿತಿ ಇಲ್ಲ

ಯಾವುದೇ ಕನಿಷ್ಠ ಆರ್ಡರ್ ಮಿತಿ ಇಲ್ಲ

ಯಾವುದೇ ಕನಿಷ್ಠ ಆರ್ಡರ್ ಮಿತಿ ಇಲ್ಲ ಮತ್ತು ಸಂಪೂರ್ಣ ಉಚಿತವಾಗಿ ಮನೆ ಬಾಗಿಲಿಗೆ ಉಚಿತವಾಗಿ ವಿತರಣೆ ಮಾಡಲಿದೆ. 55 ಬಗೆಯ ಹಾಲಿನ ಉತ್ಪನ್ನಗಳು ಸೇರಿದಂತೆ ವಿಸ್ತಾರವಾದ ಬಗೆಯ ದಿನನಿತ್ಯದ ದಿನಸಿಗಳು ಮತ್ತು ಆಹಾರ ಉತ್ಪನ್ನಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದೆ. ಇದು ತನ್ನ ಬಳಕೆದಾರರಿಗೆ ತಮ್ಮ ವೈಯಕ್ತಿಕ ಅಗತ್ಯತೆಗಳು ಮತ್ತು ಆಯ್ಕೆಗಳ ಆಧಾರದ ಮೇಲೆ ತಮ್ಮ ಚಂದಾದಾರಿಕೆಗಳನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ.

 ಎಫ್‍ಟಿಎಚ್ ಡೈಲಿ ಸಹ-ಸಂಸ್ಥಾಪಕ ಶಾನ್ ಕಡವಿಲ್

ಎಫ್‍ಟಿಎಚ್ ಡೈಲಿ ಸಹ-ಸಂಸ್ಥಾಪಕ ಶಾನ್ ಕಡವಿಲ್

ಎಫ್‍ಟಿಎಚ್ ಡೈಲಿ ಸಹ-ಸಂಸ್ಥಾಪಕ ಮತ್ತು ಸಿಇಒ ಶಾನ್ ಕಡವಿಲ್ ಅವರು ಮಾತನಾಡಿ, ''ಫ್ರೆಶ್‍ಟುಹೋಂ ಎಫ್‍ಟಿಎಚ್ ಡೈಲಿ ಅನ್ನು ಆರಂಭಿಸಿದ್ದು, ಇದರ ಮೂಲಕ ಲಕ್ಷಾಂತರ ಜನರ ದಿನನಿತ್ಯದ ಅಗತ್ಯತೆಗಳನ್ನು ಪೂರೈಸುತ್ತಿದ್ದು, ಅವರ ಜನಜೀವನವನ್ನು ಸುಗಮಗೊಳಿಸಲಿದೆ. ನಮ್ಮ ಗ್ರಾಹಕರ ದೈನಂದಿನ ಆಹಾರ ಅಗತ್ಯತೆಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುವ ಮೂಲಕ ಅವರ ಪೌಷ್ಠಿಕ ಪಾಲುದಾರರಾಗಬೇಕೆಂಬುದು ನಮ್ಮ ಉದ್ದೇಶವಾಗಿದೆ.

ಮನೆ ಮನೆಗೂ ಮಸಾಲೆ ಸುವಾಸನೆ ಹರಡಿಸಿದ ಗುಲಾಟಿ ವ್ಯಕ್ತಿಚಿತ್ರಮನೆ ಮನೆಗೂ ಮಸಾಲೆ ಸುವಾಸನೆ ಹರಡಿಸಿದ ಗುಲಾಟಿ ವ್ಯಕ್ತಿಚಿತ್ರ

 ಸುರಕ್ಷಿತವಾದ ಪರ್ಯಾಯ ವ್ಯವಸ್ಥೆ ಎಫ್‍ಟಿಎಚ್ ಡೈಲಿ

ಸುರಕ್ಷಿತವಾದ ಪರ್ಯಾಯ ವ್ಯವಸ್ಥೆ ಎಫ್‍ಟಿಎಚ್ ಡೈಲಿ

ಗ್ರಾಹಕರು ತಮಗೆ ಅಗತ್ಯವಿರುವ ಪದಾರ್ಥಗಳನ್ನು ಆರ್ಡರ್ ಮಾಡಿ ದಿನನಿತ್ಯ ಪೌಷ್ಠಿಕ ಆಹಾರವನ್ನು ಪಡೆಯುವಂತೆ ನಿಟ್ಟಿನಲ್ಲಿ ನಮ್ಮ ಉಚಿತ ವಿತರಣೆ ವೇದಿಕೆಯು ಅವಕಾಶ ಕಲ್ಪಿಸುತ್ತದೆ. ಇಂದಿನ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ದಿನನಿತ್ಯದ ಅಗತ್ಯ ಉತ್ಪನ್ನಗಳನ್ನು ಆರ್ಡರ್ ಮಾಡುವ ಸುರಕ್ಷಿತವಾದ ಪರ್ಯಾಯ ವ್ಯವಸ್ಥೆ ಎಫ್‍ಟಿಎಚ್ ಡೈಲಿ ಆಗಿದೆ. ನಾವು ಸದ್ಯದಲ್ಲೇ ಬೆಂಗಳೂರು, ಹೈದ್ರಾಬಾದ್ ಮತ್ತು ಪುಣೆ ಹೊರತಾದ ಇತರೆ ಮೆಟ್ರೋ ನಗರಗಳಿಗೂ ಈ ಸೇವೆಯನ್ನು ವಿಸ್ತರಣೆ ಮಾಡುವ ಉದ್ದೇಶವನ್ನು ಹೊಂದಿದ್ದೇವೆ'' ಎಂದರು.

 ಎಫ್‍ಟಿಎಚ್ ಡೈಲಿ ಆ್ಯಪ್ ಬಳಸಿ ಖರೀದಿಸಬಹುದು

ಎಫ್‍ಟಿಎಚ್ ಡೈಲಿ ಆ್ಯಪ್ ಬಳಸಿ ಖರೀದಿಸಬಹುದು

ಗ್ರಾಹಕರು ಗೂಗಲ್ ಪ್ಲೇ ಮತ್ತು ಆ್ಯಪ್ ಸ್ಟೋರ್ ನಲ್ಲಿ ಎಫ್‍ಟಿಎಚ್ ಡೈಲಿ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳುವ ಮೂಲಕ ದೊಡ್ಡ ಮಟ್ಟದ ದೈನಂದಿನ ಅಗತ್ಯ ವಸ್ತುಗಳನ್ನು ಅಕ್ಸೆಸ್ ಮತ್ತು ಆರ್ಡರ್ ಮಾಡಬಹುದು. ಈ ಸೇವೆಯು ನಿಗದಿತ ಚಂದಾದಾರಿಕೆಗಳನ್ನು ಮತ್ತು ಆರ್ಡರ್‍ಗಳನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ನೀಡುತ್ತದೆ.

ಗ್ರಾಹಕರು ತಮ್ಮ ಮುಂದಿನ ವಿತರಣೆಗಳಿಗೆ ಉತ್ಪನ್ನಗಳನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು. ಈ ಪ್ರಕ್ರಿಯೆಯನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ಮಾಡಬಹುದಾಗಿದೆ. ಈ ಪ್ಲಾಟ್‍ಫಾರ್ಮ್‍ನಲ್ಲಿ ಅತ್ಯಾಕರ್ಷಕ ಕೊಡುಗೆಗಳು ಮತ್ತು ವ್ಯವಹಾರಗಳನ್ನು ತರುತ್ತದೆ. ಅದು ಕಿರಾಣಿ ಬಿಲ್‍ಗಳನ್ನು ದೊಡ್ಡ ಮಟ್ಟದ ಅಂತರದಿಂದ ಕಡಿತಗೊಳಿಸುತ್ತದೆ.

ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?

 ಫ್ರೆಶ್‍ಟುಹೋಂ ಇತ್ತೀಚೆಗೆ 121 ಮಿಲಿಯನ್ ಡಾಲರ್ ಹೂಡಿಕೆ

ಫ್ರೆಶ್‍ಟುಹೋಂ ಇತ್ತೀಚೆಗೆ 121 ಮಿಲಿಯನ್ ಡಾಲರ್ ಹೂಡಿಕೆ

ಭಾರತ ಮತ್ತು ವಿದೇಶದಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಫ್ರೆಶ್‍ಟುಹೋಂ ಇತ್ತೀಚೆಗೆ 121 ಮಿಲಿಯನ್ ಡಾಲರ್ ಹೂಡಿಕೆಯನ್ನು ಸಂಗ್ರಹಿಸಿದೆ. ಇದು ಭಾರತದಲ್ಲಿ ಟೆಕ್ ಸೀರೀಸ್ ಸಿ ಫಂಡಿಂಗ್‍ನಲ್ಲಿ ಅತಿ ದೊಡ್ಡ ಹೂಡಿಕೆಯಾಗಿದೆ. ಕಂಪನಿಯು ಭಾರತಾದ್ಯಂತ 125 ಬಂದರುಗಳಲ್ಲಿ 1500 ಕ್ಕೂ ಅಧಿಕ ಮೀನುಗಾರರನ್ನು ಹೊಂದಿದೆ ಮತ್ತು ಈ ಜಾಲವನ್ನು ಮತ್ತಷ್ಟು ವಿಸ್ತರಣೆಗೆ ಆದ್ಯತೆ ನೀಡುತ್ತಿದೆ.

Recommended Video

Atulya Ganga : ಗಂಗೆಯನ್ನು ಶುದ್ಧಗೊಳಿಸಲು ನಿವೃತ್ತ ಸೈನಿಕರ ಮಹಾ ಯೋಜನೆ | Oneindia Kannada
 ಆಹಾರ ತಜ್ಞರಾದ ರೌನಕ್ ಕುಂಡು ಅವರು ಮಾತನಾಡಿ,

ಆಹಾರ ತಜ್ಞರಾದ ರೌನಕ್ ಕುಂಡು ಅವರು ಮಾತನಾಡಿ,

''ಲಾಕ್‍ಡೌನ್ ಹಂತದಲ್ಲಿ ಗುಣಮಟ್ಟದ ತಾಜಾ ತರಕಾರಿ ಮತ್ತು ಹಾಲು ಖರೀದಿ ಮಾಡಲು ಸಾಧ್ಯವಾಗುತ್ತದೋ ಇಲ್ಲವೋ ಎಂಬುದು ನಮಗೆ ಖಾತರಿ ಇರಲಿಲ್ಲ. ಆದರೆ, ಎಫ್‍ಟಿಎಚ್ ಡೈಲಿ ತಾಜಾ ಉತ್ಪನ್ನಗಳನ್ನು ನಮ್ಮ ಮನೆ ಬಾಗಿಲಿಗೆ ಪೂರೈಕೆ ಮಾಡುವ ಮೂಲಕ ಈ ಪರೀಕ್ಷೆ ಸಮಯದಲ್ಲಿ ನಮ್ಮ ರಕ್ಷಣೆಗೆ ಧಾವಿಸಿತು. ನಾವು ಅವರ ಅಪ್ಲಿಕೇಷನ್ ಅನ್ನು ನಾವು ಅಳವಡಿಸಿಕೊಂಡಿದ್ದೇವೆ. ಈ ಆ್ಯಪ್ ನ್ಯಾವಿಗೇಟ್ ಮಾಡಲು ಅತ್ಯಂತ ಸುಲಭವಾಗಿದೆ ಮತ್ತು ಕುತೂಹಲಕಾರಿಯಾಗಿದೆ. ವ್ಯಾಪಕವಾದ ಶ್ರೇಣಿಯ ಹಾಲನ್ನು ಪೂರೈಕೆ ಮಾಡುವ ಮೂಲಕ ಇಡೀ ಕುಟುಂಬದ ಪೌಷ್ಠಿಕಾಂಶದ ಅಗತ್ಯಗಳನ್ನು ಪೂರೈಸುತ್ತದೆ''ಎಂದು ಆಹಾರ ತಜ್ಞರಾದ ರೌನಕ್ ಕುಂಡು ಹೇಳಿದ್ದಾರೆ.

English summary
FreshToHome, an integrated online fresh fish and meat delivery brand has expanded its daily delivery service, FTH Daily in Bangalore, Hyderabad, and Pune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X