ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಡ್ ಇನ್ ಇಂಡಿಯಾ ಫ್ರೀಡಂ 251ಗೆ ಕಾಪಿರೈಟ್ ಪ್ರಾಬ್ಲಂ!

By Mahesh
|
Google Oneindia Kannada News

ನವದೆಹಲಿ, ಫೆ.19: ನೋಯ್ಡಾ ಮೂಲದ ಮೊಬೈಲ್ ಹ್ಯಾಂಡ್ ಸೆಟ್ ಉತ್ಪಾದನಾ ಸಂಸ್ಥೆ ರಿಂಗಿಂಗ್ ಬೆಲ್ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಪರಿಚಯಿಸಲು ಮುಂದಾಗಿದ್ದು ಎಲ್ಲರಿಗೂ ತಿಳಿದ ವಿಷಯ. ಈಗ ಸ್ಮಾರ್ಟ್ ಫೋನ್ ವಿವಾದದ ಕೇಂದ್ರ ಬಿಂದುವಾಗಿದೆ.

ಬುಧವಾರ (ಫೆಬ್ರವರಿ 16) ದಿಂದ ಕೇವಲ 251 ರು ಬೆಲೆಗೆ ಸ್ಮಾರ್ಟ್ ಫೋನ್ ಖರೀದಿಸಲು ಮುಂದಾಗಿದ್ದ ಗ್ರಾಹಕರು ಈಗ ಬೆಚ್ಚಿಬೀಳುವ ಸತ್ಯಗಳು ಹೊರಬರುತ್ತಿದೆ. ಹಂಗೂ ಹಿಂಗೂ ಬುಕ್ಕಿಂಗ್ ಮಾಡಿಕೊಂಡ ಗ್ರಾಹಕರಿಗೆ ಫೋನ್ ಯಾವಾಗ ಕೈ ಸೇರುವುದೋ ಎಂಬ ಆತಂಕ ಎದುರಾಗಿದೆ. [ಇ ಆಡಳಿತ ಸ್ನೇಹಿ ಭಾರತ್ ಫೋನ್ ನೋಡಿ]

ಜೊತೆಗೆ ರಿಂಗಿಂಗ್ ಬೆಲ್ ಕಂಪನಿ ಕಾಪಿರೈಟ್ ಉಲ್ಲಂಘನೆ ಆರೋಪವನ್ನು ಹೊತ್ತುಕೊಂಡಿದೆ. ಆಪಲ್ ಐಫೋನ್ ವಿನ್ಯಾಸವನ್ನು ಕದ್ದು ಅತಿಕಡಿಮೆಯ ಬೆಲೆಯ ಫೋನ್ ವಿನ್ಯಾಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.


ಇದರ ಜೊತೆಗೆ ಬಿಐಎಸ್ ಸರ್ಟಿಫಿಕೇಷನ್ ಕೂಡಾ ಪಡೆದುಕೊಂಡಿಲ್ಲ. ಈ ಬಗ್ಗೆ ಉತ್ತರಪ್ರದೇಶ ಸರ್ಕಾರ ತನಿಖೆ ನಡೆಸಲಿ ಎಂದು ಬಿಜೆಪಿ ಸಂಸದ ಕಿರೀಟ್ ಸೋಮಯ್ಯ ಅವರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಮೊಬೈಲ್ ಫೋನ್ ಕ್ಷೇತ್ರಕ್ಕೆ ಕಾಲಿರಿಸಿದ ಸಂಸ್ಥೆ

ಇತ್ತೀಚೆಗೆ ಮೊಬೈಲ್ ಫೋನ್ ಕ್ಷೇತ್ರಕ್ಕೆ ಕಾಲಿರಿಸಿದ ಸಂಸ್ಥೆ

ಸಂಸ್ಥೆ 2,999 ರು ಬೆಲೆಗೆ ಸ್ಮಾರ್ಟ್ 101 ಎಂಬ ಮೊಬೈಲ್ ಪರಿಚಯಿಸಿತು. ನಂತರ ಮಾಸ್ಟರ್ ಹಾಗೂ 4ಯು ಮೊಬೈಲ್ ಗಳನ್ನು 999 ರು ಹಾಗೂ 799 ರು ಗೆ ಮಾರುಕಟ್ಟೆಗೆ ಪರಿಚಯಿಸಿತ್ತು. 5,600 ಎಂಎಎಚ್ ಬ್ಯಾಟರಿ ಸ್ಯಾಮರ್ಥವುಳ್ಳ ಕಿವಿ ಮೊಬೈಲ್ 399 ರು ಗೆ ಪರಿಚಯಿಸಿದೆ. ಈಗ 500 ರು ಗೆ ಮೊಬೈಲ್ ನೀಡಲು ಮುಂದಾಗಿದ್ದ ಕಂಪನಿ 251 ರು ಗೆ ಸ್ಮಾರ್ಟ್ ಫೋನ್ ಘೋಷಿಸಿ ಸಮೂಹಸನ್ನಿ ಸೃಷ್ಟಿಸಿತು.

ಮೊಬೈಲ್ ನ ಅಸಲಿ ಬೆಲೆ ಏನು?

ಮೊಬೈಲ್ ನ ಅಸಲಿ ಬೆಲೆ ಏನು?

ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಹಾಗೂ ಡಿಜಿಟಲ್ ಇಂಡಿಯಾ ಯೋಜನೆಗೆ ಅನುಗುಣವಾಗಿ ಮೊಬೈಲ್ ಫೋನ್ ರೂಪಿಸಲಾಗುವುದು ರಿಂಗಿಂಗ್ ಬೆಲ್ ಪ್ರೈ ಲಿಮಿಟೆಡ್ ಹೇಳಿದೆ. ಫ್ರೀಡಂ 251ನ ಅಸಲಿ ಬೆಲೆ 2,500 ರು ಆದರೆ, ವಿಭಿನ್ನ ಮಾರ್ಕೆಟಿಂಗ್ ಮೂಲಕ ಇ ಕಾಮರ್ಸ್ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುವುದು ನಮ್ಮ ಉದ್ದೇಶ ಹೀಗಾಗಿ ಕಡಿಮೆ ಬೆಲೆಗೆ ನೀಡುತ್ತಿದ್ದೇವೆ ಎಂದು ರಿಂಗಿಂಗ್ ಬೆಲ್ ನ ಅಧ್ಯಕ್ಷ ಅಶೋಕ್ ಛಡ್ಡಾ ಹೇಳಿದ್ದಾರೆ.

ಫ್ರೀಡಂ ಫೋನ್ ಬಗ್ಗೆ ಟ್ರಾಯ್ ಗೆ ಸೂಚನೆ

ಫ್ರೀಡಂ 251 ಮೊಬೈಲ್ ಫೋನ್ ನೀಡಿರುವ ಆಫರ್ ಬಗ್ಗೆ ಟೆಲಿಕಾಂ ನಿಯಂತ್ರಕ ಟ್ರಾಯ್ ಕೂಡಲೇ ತನಿಖೆ ನಡೆಸಲಿ ಎಂದು ಸಂಸದ ಕಿರೀಟ್ ಸೊಮಯ್ಯ ಕೇಳಿಕೊಂಡಿದ್ದಾರೆ.

ಈಗ ಸ್ಮಾರ್ಟ್ ಫೋನ್ ವಿವಾದದ ಕೇಂದ್ರ ಬಿಂದುವಾಗಿದೆ

ಮೇಡ್ ಇನ್ ಇಂಡಿಯಾ ಫ್ರೀಡಂ 251ಗೆ ಕಾಪಿರೈಟ್ ಪ್ರಾಬ್ಲಂ ಎದುರಾಗಿದೆ. ಜೊತೆಗೆ ಬಿಐಎಸ್ ಸರ್ಟಿಫಿಕೇಷನ್ ಇಲ್ಲ ಎಂಬ ಆರೋಪದ ಬಗ್ಗೆ ಗಮನ ಹರಿಸಿ

ಗ್ರಾಹಕರೇ ಎಚ್ಚರ ಸಮೂಹ ಸನ್ನಿಗೆ ಒಳಗಾಗಬೇಡಿ

ಗ್ರಾಹಕರೇ ಎಚ್ಚರ ಸಮೂಹ ಸನ್ನಿಗೆ ಒಳಗಾಗಬೇಡಿ ಎಲ್ಲವೂ ಸರಿ ಹೋಗುವ ತನಕ ಕಾಯಿರಿ. ಉತ್ತರಪ್ರದೇಶ ಸರ್ಕಾರ ಈ ಬಗ್ಗೆ ತನಿಖೆ ನಡೆಸಲಿ ಎಂದು ಸಂಸದ ಕಿರೀಟ್ ಕೇಳಿಕೊಂಡಿದ್ದಾರೆ.

English summary
World's cheapest "Made In India" smartphone-- "Freedom 251", priced at Rs 251 only, developed by a Noida-based start up-- Ringing Bells Pvt Ltd, took the world by surprise, on Wednesday, Feb 17. The Telecom Ministry is believed to have sought clarification from Ringing Bells for marketing its 'Freedom251' mobile phone without BIS certification and have asked UP government to check its credentials, as per BJP MP Kirit Somaiya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X