ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಲಕ್ಷ ಪ್ರವಾಸಿಗರಿಗೆ ಉಚಿತ ವೀಸಾ ಘೋಷಿಸಿದ ಮೋದಿ ಸರ್ಕಾರ

|
Google Oneindia Kannada News

ನವದೆಹಲಿ, ಜೂನ್ 28: ಕೋವಿಡ್-19 ಸಾಂಕ್ರಾಮಿಕದಿಂದ ನಷ್ಟ ಹೊಂದಿರುವ ಅನೇಕ ಕ್ಷೇತ್ರಗಳಿಗೆ ಮತ್ತೊಮ್ಮೆ ಮೋದಿ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ವಿವಿಧ ಕ್ಷೇತ್ರಗಳಿಗೆ 8 ಆರ್ಥಿಕ ಪರಿಹಾರ ಕ್ರಮಗಳನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ ಪ್ರಕಟಿಸಿದ್ದಾರೆ. ಈ ನಡುವೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಪ್ರವಾಸಿಗರಿಗೆ ಉಚಿತ ವೀಸಾ ಹಾಗೂ ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ ಹಣಕಾಸು ಸಹಾಯ ಘೋಷಿಸಲಾಗಿದೆ.

ಕೋವಿಡ್-19 ಪೀಡಿತ ಪ್ರದೇಶಗಳಿಗೆ ಪರಿಚಯಿಸಲಾದ ಸಾಲ ಖಾತರಿ ಯೋಜನೆಯ ಮೂಲಕ 11,000 ಕ್ಕೂ ಹೆಚ್ಚು ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳು / ಪ್ರಯಾಣ ಮತ್ತು ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ ಹಣಕಾಸು ಸಹಾಯವನ್ನು ಹಣಕಾಸು ಸಚಿವರು ಘೋಷಿಸಿದರು. ಪ್ರತಿ ಪ್ರವಾಸಿ ಮಾರ್ಗದರ್ಶಿಗೆ 1 ಲಕ್ಷ ರೂ.ವರೆಗೆ ಸಾಲ 100% ಖಾತರಿಯೊಂದಿಗೆ ಲಭ್ಯವಿರುತ್ತದೆ. ಮರು ವಿತರಣೆ ಪ್ರಕ್ರಿಯೆಯ ನಂತರ, ಮೊದಲ 5 ಲಕ್ಷ ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ ನೀಡಲಾಗುವುದು. ಇದರ ಒಟ್ಟು ಮೊತ್ತ 100 ಕೋಟಿ ರೂ. ಆಗಿದೆ.

5 ಲಕ್ಷ ಪ್ರವಾಸಿ ವೀಸಾ
ಮೊದಲ 5 ಲಕ್ಷ ಪ್ರವಾಸಿಗರಿಗೆ ಉಚಿತ ವೀಸಾ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದರೆ ಈ ಸೌಲಭ್ಯ ಒಬ್ಬ ಪ್ರವಾಸಿಗನಿಗೆ ಒಮ್ಮೆಗೆ ಮಾತ್ರ ಸಿಗಲಿದೆ. ಮಾರ್ಚ್ 31, 2022 ಅಥವಾ 5,00,000 ವೀಸಾ ವಿತರಣೆ ಮುಗಿಯುವ ತನಕ ಈ ಸೌಲಭ್ಯ ಜಾರಿಯಲ್ಲಿರಲಿದೆ. ಈ ಸೌಲಭ್ಯ ಜಾರಿಗೊಳಿಸಲು 100 ಕೋಟಿರು ಮೀಸಲಿಡಲಾಗಿದೆ. 2019ರಿಂದ ಇಲ್ಲಿ ತನಕ ಒಟ್ಟು 1.93 ಮಿಲಿಯನ್ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ, 30.098 ಬಿಲಿಯನ್ ಯುಎಸ್ ಡಾಲರ್ ವ್ಯಯಿಸಿದ್ದಾರೆ. ಇದು ವ್ಯಾಪಾರ ಉದ್ದೇಶಿತ ಹಾಗೂ ಸಾಮಾನ್ಯ ಪ್ರವಾಸ ಎರಡು ಸೇರಿದೆ.

Free visa to first 5 lakh tourists: Nirmala Sitharaman

ಭಾರತದಲ್ಲಿ ವಿದೇಶಿ ಪ್ರವಾಸಿಗರು ಉಳಿದುಕೊಳ್ಳುವ ಸರಾಸರಿ ದಿನಗಳು 21 ಹಾಗೂ ಖರ್ಚು ಮಾಡುವ ಮೊತ್ತ 34 ಯುಎಸ್ ಡಾಲರ್ (2400 ರು) ಎಂದು ಅಂದಾಜಿಸಲಾಗಿದೆ.

ಒಟ್ಟಾರೆ, 11,000 ನೋಂದಾಯಿತ ಪ್ರವಾಸಿ ಗೈಡ್/ಟ್ರಾವೆಲ್ ಸಂಸ್ಥೆಗಳಿದ್ದು, ಹೊಸ ಆರ್ಥಿಕ ಪ್ಯಾಕೇಜಿನ ಪ್ರಯೋಜನ ಪಡೆಯಲಿವೆ.

English summary
The first 5 lakh tourist visas issued once India allows entry to this category of visitors will be issued free of charge said Finance minister Nirmala Sitharaman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X