ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್‍ಗೆ 267 ಮಿಲಿಯನ್ ಡಾಲರ್‌ ದಂಡ ವಿಧಿಸಿದ ಫ್ರಾನ್ಸ್

|
Google Oneindia Kannada News

ಪ್ಯಾರಿಸ್, ಜೂ.07: ಆನ್‌ಲೈನ್ ಜಾಹೀರಾತುಗಳನ್ನು ಹಾಕಲು ಗೂಗಲ್ ತನ್ನ ಪ್ರಾಬಲ್ಯದ ಮಾರುಕಟ್ಟೆ ಸ್ಥಾನವನ್ನು ಬಳಸಿಕೊಂಡಿದೆ ಎಂದು ತೀರ್ಪಿನ ಭಾಗವಾಗಿ ಫ್ರಾನ್ಸ್‌ನ ಸ್ಪರ್ಧಾ ಪ್ರಾಧಿಕಾರ 'ಆಟೊರೈಟ್ ಡೆ ಲಾ ಕಾನ್ಕರೆನ್ಸ್' ಗೂಗಲ್‌ಗೆ 220 ಮಿಲಿಯನ್ ಯುರೋಗಳಷ್ಟು (267 ಮಿಲಿಯನ್ ಡಾಲರ್‌) ದಂಡ ವಿಧಿಸಿದೆ.

ಮೂರು ಮಾಧ್ಯಮ ಕಂಪನಿಗಳಾದ ನ್ಯೂಸ್ ಕಾರ್ಪೊರೇಷನ್, ಲೆ ಫಿಗರೊ ಮತ್ತು ಬೆಲ್ಜಿಯಂನ ಗ್ರೂಪ್ ರೊಸೆಲ್ ಗೂಗಲ್ ಮೂಲಭೂತವಾಗಿ ಇಂಟರ್ನೆಟ್ ಜಾಹೀರಾತು ಮಾರಾಟವನ್ನು ಏಕಸ್ವಾಮ್ಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದವು. ಇದೀಗ ಗೂಗಲ್‌ಗೆ 1,948 ಕೋಟಿ ರೂ. ದಂಡವಿಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಕನ್ನಡ ಭಾಷೆ ವಿವಾದ; ಕನ್ನಡಿಗರ ಕ್ಷಮೆ ಕೇಳಿದ ಗೂಗಲ್ಕನ್ನಡ ಭಾಷೆ ವಿವಾದ; ಕನ್ನಡಿಗರ ಕ್ಷಮೆ ಕೇಳಿದ ಗೂಗಲ್

ಗೂಗಲ್ ತನ್ನ ಸ್ವಂತ ಸೇವೆಗಳಿಗೆ ಅಕ್ರಮ ವ್ಯವಹಾರ ನಡೆಸಿದೆ. ಸ್ಪರ್ಧೆಯ ವಿಚಾರದಲ್ಲಿ ತಾರತಮ್ಯ ಮಾಡಿದೆ. ಆದ್ದರಿಂದ ದಂಡವನ್ನು ವಿಧಿಸಲಾಗಿದೆ ಎಂದು ಫ್ರೆಂಚ್ ಸ್ಪರ್ಧಾ ಪ್ರಾಧಿಕಾರ ಹೇಳಿದೆ. ಹಾಗೆಯೇ ಗೂಗಲ್‌ ಈ ತಪ್ಪನ್ನು ತಿದ್ದುಕೊಳ್ಳುವುದಾಗಿ ತಿಳಿಸಿರುವುದಾಗಿಯೂ ಹೇಳಿದೆ.

France imposed Google $267 million fine for online ad dominance

ಫ್ರೆಂಚ್ ಸ್ಪರ್ಧಾ ಪ್ರಾಧಿಕಾರದ ತನಿಖೆಯಿಂದ ಗೂಗಲ್ ತನ್ನ ಡಿಎಫ್‌ಪಿ ಜಾಹೀರಾತು ಸರ್ವರ್‌ಗೆ ಆದ್ಯತೆ ನೀಡುತ್ತಿದೆ. ಇದು ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳ ಪ್ರಕಾಶಕರಿಗೆ ತಮ್ಮ ಜಾಹೀರಾತು ಸ್ಥಳವನ್ನು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಹರಾಜು ಪ್ರಕ್ರಿಯೆಗಳನ್ನು ಆಯೋಜಿಸಲು, ಪ್ರಕಾಶಕರಿಗೆ ಜಾಹೀರಾತು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಗೂಗಲ್‌ನ ಪ್ರತಿಸ್ಪರ್ಧಿಗಳು ಮತ್ತು ಪ್ರಕಾಶಕರು ಇದರ ಪರಿಣಾಮವಾಗಿ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡವನ್ನು ಕೊಳಕು ಭಾಷೆ ಎಂದು ಅವಮಾನಿಸಿದ ಗೂಗಲ್: ಸರಿ ಮಾಡೋದು ಹೇಗೆ?ಕನ್ನಡವನ್ನು ಕೊಳಕು ಭಾಷೆ ಎಂದು ಅವಮಾನಿಸಿದ ಗೂಗಲ್: ಸರಿ ಮಾಡೋದು ಹೇಗೆ?

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಫ್ರೆಂಚ್ ಸ್ಪರ್ಧಾ ಪ್ರಾಧಿಕಾರದ ಅಧ್ಯಕ್ಷ ಇಸಾಬೆಲ್ಲೆ ಡಿ ಸಿಲ್ವಾ, "ಆನ್‌ಲೈನ್ ಜಾಹೀರಾತುಗಳ ಹರಾಜು ಪ್ರಕ್ರಿಯೆ ವಿಶ್ವದಲ್ಲೇ ಮೊದಲನೆಯದಾಗಿದೆ. ಈ ಗಂಭೀರ ಅಭ್ಯಾಸದ ವಿರುದ್ದ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಗೂಗಲ್ ಜಾಹೀರಾತುಗಳು ಬಳಸುವ ವಿಧಾನಗಳು "ಅಪಾರದರ್ಶಕ ಮತ್ತು ಅರ್ಥಮಾಡಿಕೊಳ್ಳುವುದು ಕಷ್ಟ" ಮತ್ತು ಕಂಪನಿಯು ಅವುಗಳನ್ನು "ಅಸಮಾನ ಮತ್ತು ಅನಿಯಂತ್ರಿತ ರೀತಿಯಲ್ಲಿ" ಅನ್ವಯ ಮಾಡುತ್ತದೆ ಎಂದು 2019 ರಲ್ಲಿ ಗೂಗಲ್‌ಗೆ ಫ್ರಾನ್ಸ್‌ನ ಸ್ಪರ್ಧಾ ನಿಯಂತ್ರಕ ಏಜೆನ್ಸಿಯು 150 ಮಿಲಿಯನ್ ಯುರೋಗಳಷ್ಟು (166 ಮಿಲಿಯನ್ ಡಾಲರ್‌) ದಂಡ ವಿಧಿಸಿತ್ತು ಎಂದು ನಾವು ಈ ಸಂದರ್ಭದಲ್ಲಿ ಸ್ಮರಿಸಬಹುದು.

(ಒನ್‌ಇಂಡಿಯಾ ಸುದ್ದಿ)

English summary
France imposed Google $267 million fine for online ad dominance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X