ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಭ್ರಷ್ಟ ಉದ್ಯಮಿ ನೀರವ್ ಮೋದಿಯ ಸ್ವಿಸ್ ಬ್ಯಾಂಕ್ ಖಾತೆ ಜಪ್ತಿ

|
Google Oneindia Kannada News

ನವದೆಹಲಿ, ಜೂನ್ 27: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಅವರಿಗೆ ಸಂಬಂಧಿಸಿದ ಆಸ್ತಿ, ವಸ್ತುಗಳನ್ನು ಜಪ್ತಿ, ಹರಾಜು ಹಾಕಿದ ಬಳಿಕ ತನಿಖಾ ಸಂಸ್ಥೆ ಜಾರಿ ನಿರ್ದೇಶನಲಯವು ಜಪ್ತಿ ಕಾರ್ಯ ಮುಂದುವರೆಸಿದೆ.

ಜಾರಿ ನಿರ್ದೇಶನಾಲಯದ ಮನವಿ ಮೇರೆಗೆ ನೀರವ್ ಮೋದಿ ಹಾಗೂ ಅವರ ಸೋದರಿ ಪೂರ್ವಿ ಮೋದಿ ಅವರಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಸ್ವಿಸ್ ಬ್ಯಾಂಕ್ ಆಡಳಿತ ಅಧಿಕಾರಿಗಳು ಹೇಳಿದ್ದಾರೆ. ಒಟ್ಟು ನಾಲ್ಕು ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಖಾತೆಗಳಲ್ಲಿ ಎಷ್ಟು ಮೊತ್ತವಿತ್ತು ಎಂಬುದರ ವಿವರ ಇನ್ನು ಬಹಿರಂಗವಾಗಿಲ್ಲ.

ನೀರವ್ ಮೋದಿ ಜಾಮೀನು ಅರ್ಜಿ ಮತ್ತೆ ತಿರಸ್ಕರಿಸಿದ ಲಂಡನ್ ನ್ಯಾಯಾಲಯನೀರವ್ ಮೋದಿ ಜಾಮೀನು ಅರ್ಜಿ ಮತ್ತೆ ತಿರಸ್ಕರಿಸಿದ ಲಂಡನ್ ನ್ಯಾಯಾಲಯ

ನೀರವ್ ಮೋದಿ ಅವರಿಗೆ ಸೇರಿದ 255 ಕೋಟಿ ರು ಮೌಲ್ಯದ ಆಭರಣಗಳನ್ನು ಇತ್ತೀಚೆಗೆ ಹಾಂಗ್ ಕಾಂಗ್ ನಲ್ಲಿ ಕಳೆದ ಏಪ್ರಿಲ್ ನಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಮೋದಿ ಬಳಿ ಇರುವ ವಜ್ರಾಭರಣಗಳ ಮೌಲ್ಯ 4,700 ಕೋಟಿ ರು ದಾಟಲಿದೆ ಎಂದು ಅಂದಾಜಿಸಲಾಗಿದೆ.

ನೀರವ್ ಮೋದಿಗೆ ಸಿಗಲಿಲ್ಲ ಜಾಮೀನು, ಮೇ 24ರ ತನಕ ಜೈಲು ನೀರವ್ ಮೋದಿಗೆ ಸಿಗಲಿಲ್ಲ ಜಾಮೀನು, ಮೇ 24ರ ತನಕ ಜೈಲು

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿದ ಆರೋಪವನ್ನು ಹೊತ್ತುಕೊಂಡಿರುವ ನೀರವ್ ಮೋದಿ, ಮೆಹುಲ್ ಚೊಕ್ಸಿ ಅವರು ಭಾರತದಿಂದ ಪರಾರಿಯಾಗಿದ್ದು, ವಿವಿಧ ತನಿಖಾ ಸಂಸ್ಥೆಗಳು ಇವರಿಬ್ಬರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಯತ್ನಿಸುತ್ತಿವೆ.

ನೀರವ್ ಮೋದಿಯ 4 ಸ್ವಿಸ್ ಬ್ಯಾಂಕ್ ಖಾತೆಯಿಂದ ಸಿಕ್ಕ ಮೊತ್ತ

ನೀರವ್ ಮೋದಿಯ 4 ಸ್ವಿಸ್ ಬ್ಯಾಂಕ್ ಖಾತೆಯಿಂದ ಸಿಕ್ಕ ಮೊತ್ತ

ನೀರವ್ ಮೋದಿಯ 4 ಸ್ವಿಸ್ ಬ್ಯಾಂಕ್ ಖಾತೆಯಿಂದ ಸಿಕ್ಕ ಮೊತ್ತ ಬಹಿರಂಗವಾಗಿದ್ದು, ಸುಮಾರು 283.16 ಕೋಟಿ ರು ಗಳನ್ನು ತನಿಖಾ ಸಂಸ್ಥೆಗಳು ತಮ್ಮ ವಶಕ್ಕೆ ತೆಗೆದುಕೊಂಡಿವೆ. 3,74,11,596 ಡಾಲರ್ ಠೇವಣಿ ಹೊಂದಿದ್ದರೆ, ಸೋದರಿ ಪೂರ್ವಿ ಮೋದಿ ಖಾತೆಯಲ್ಲಿ 27,38,136 ಬ್ರಿಟಿಷ್ ಪೌಂಡ್ ಹೊಂದಿದ್ದರು. ಸುಮಾರು 13,700 ಕೋಟಿ ರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಪೂರ್ವಿ ಮೋದಿ ಕೂಡಾ ಸಹ ಆರೋಪಿಯಾಗಿದ್ದಾರೆ.

ಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿಯಾರೀತ? ಬಹು ಕೋಟಿ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ

6,400 ಕೋಟಿ ರು ಮನಿಲಾಂಡ್ರಿಂಗ್ ಅವ್ಯವಹಾರ

6,400 ಕೋಟಿ ರು ಮನಿಲಾಂಡ್ರಿಂಗ್ ಅವ್ಯವಹಾರ

ನೀರವ್ ಮೋದಿ ಅವರು 6,400 ಕೋಟಿ ರು ಮನಿಲಾಂಡ್ರಿಂಗ್ ಅವ್ಯವಹಾರದಲ್ಲಿ ತೊಡಗಿದ್ದರು ಎಂದು ಜಾರಿ ನಿರ್ದೇಶನಾಲಯವು ತನ್ನ ದೋಷಾರೋಪಣ ಪಟ್ಟಿಯಲ್ಲಿ ಹೇಳಿದೆ.ಪಿಎಂಎಲ್ಎ ಕಾಯ್ದೆ ಉಲ್ಲಂಘನೆಯಡಿಯಲ್ಲಿ ಥೈಲ್ಯಾಂಡ್ ನಲ್ಲಿ 13 ಕೋಟಿ ರು ಮೌಲ್ಯದ ಆಸ್ತಿ ವಶ ಪಡಿಸಿಕೊಳ್ಳಲಾಗಿತ್ತು. ಗೀತಾಂಜಲಿ ಸಮೂಹ ಸಂಸ್ಥೆಗೆ ಸೇರಿದ ಈ ಆಸ್ತಿಗೆ ನೀರವ್ ಅವರ ಅಂಕಲ್ ಮೆಹುಲ್ ಚೋಕ್ಸಿ ಅವರು ಸಹ ಮಾಲೀಕರಾಗಿದ್ದಾರೆ

ಲಂಡನ್‌ನಲ್ಲಿ ನೀರವ್ ಮೋದಿ ಬಂಧನ

ಲಂಡನ್‌ನಲ್ಲಿ ನೀರವ್ ಮೋದಿ ಬಂಧನ

ಲಂಡನ್‌ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ನೀರವ್ ಮೋದಿ ಅವರು ಜಾಮೀನಿಗಾಗಿ ಐದು ಬಾರಿ ಮನವಿ ಸಲ್ಲಿಸಿದ್ದರೂ ಜಾಮೀನು ಸಿಕ್ಕಿಲ್ಲ. ನೀರವ್ ಮೋದಿಗೆ ಇಂಗ್ಲೆಂಡಿನ ವೆಸ್ಟ್‌ಮಿನಿಸ್ಟರ್ ಕೋರ್ಟ್ ಜಾಮೀನು ನಿರಾಕರಿಸುತ್ತಾ ಬಂದಿದೆ. ಮೋದಿ ಅವರ ಮಕ್ಕಳು ಲಂಡನ್ನಿನಲ್ಲೇ ವ್ಯಾಸಂಗ ಮಾಡುತ್ತಿದ್ದು, ಲಂಡನ್ ಬಿಡುವುದಿಲ್ಲ, ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಮೋದಿ ಪರ ವಕೀಲರು ವಾದಿಸಿದ್ದರು.

ಭಾರತದಲ್ಲಿ ನನಗೆ ಭದ್ರತೆ ಇಲ್ಲ ಎಂದ ನೀರವ್

ಭಾರತದಲ್ಲಿ ನನಗೆ ಭದ್ರತೆ ಇಲ್ಲ ಎಂದ ನೀರವ್

2018ರಲ್ಲಿ ನ್ಯೂಯಾರ್ಕ್ ನ ಸೆಂಟ್ರಲ್ ಪಾರ್ಕ್ ನಲ್ಲಿರುವ ಎರಡು ಅಪಾರ್ಟ್ ಮೆಂಟ್ ಸೇರಿದಂತೆ 637 ಕೋಟಿ ರು ವಶಪಡಿಸಿಕೊಳ್ಳಲಾಗಿತ್ತು. ಹಾಂಗ್ ಕಾಂಗ್ ಸೇರಿದಂತೆ ವಿವಿಧೆಡೆ ಗೀತಾಂಜಲಿ ಜ್ಯುವೆಲ್ಲರ್ಸ್ ಹಾಗೂ ಮೋದಿ-ಚೋಕ್ಸಿ ಒಡೆತನದ ಸಹ ಸಂಸ್ಥೆಗಳ ಆಸ್ತಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಭಾರತದಲ್ಲಿ ವಿಚಾರಣೆ ನಡೆಸಲು ನೀರವ್ ರನ್ನು ಕರೆ ತರುವ ಯತ್ನ ನಡೆದಿದೆ. ಆದರೆ, ಭಾರತದಲ್ಲಿ ನನಗೆ ಭದ್ರತೆ ಇಲ್ಲ, ನನ್ನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನನ್ನ ಜೀವಕ್ಕೆ ಅಪಾಯವಿದೆ ಎಂದು ಕೋರ್ಟಿಗೆ ತಿಳಿಸಿದ್ದಾರೆ.

English summary
Four Swiss bank accounts of fugitive Nirav Modi and his sister Purvi Modi have been seized. Swiss authorities have seized these accounts on request of Enforcement Directorate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X