ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಬಿಟ್ಟು, ಐಟಿ ಸಂಸ್ಥೆ ಸೇರಿದ 'ಇನ್ಫಿ ಬಾಲಕೃಷ್ಣನ್

By Mahesh
|
Google Oneindia Kannada News

ಚೆನ್ನೈ, ಅ.18: ಭಾರತದ ಅಗ್ರಗಣ್ಯ ಐಟಿ ಸಂಸ್ಥೆ ಇನ್ಫೋಸಿಸ್ ನಲ್ಲಿ ಉನ್ನತ ಹುದ್ದೆಯನ್ನು ತೊರೆದು ಆಮ್ ಆದ್ಮಿ ಪಕ್ಷ ಸೇರಿ ರಾಜಕೀಯ ಜೀವನ ಆರಂಭಿಸಿದ್ದ ವಿ ಬಾಲಕೃಷ್ಣನ್ ಅವರು ಮರಳಿ ಐಟಿ ಫೀಲ್ಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸೈಲಂಟಾಗಿ ಚೆನ್ನೈನ ಡಿಜಿಟಲ್ ಕನ್ಸಲ್ಟೆನ್ಸಿ ಸಂಸ್ಥೆ ಕಾರ್ ಟೆಕ್ನಾಲಜಿಸ್ ಗೆ ಸ್ವತಂತ್ರ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡಿದ್ದಾರೆ.

ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಹಿರಿಯ ಅನುಭವಿ ಉದ್ಯೋಗಿಗಳ ಪೈಕಿ ಒಬ್ಬರಾದ ಬಾಲಕೃಷ್ಣನ್ ಅವರು ಕಾರ್ (Kaar) ತಂತ್ರಜ್ಞಾನ ಸಂಸ್ಥೆಯ ಆಡಿಟ್ ಸಮಿತಿಯ ಮುಖ್ಯಸ್ಥರಾಗಿ ಕೂಡಾ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಂಸ್ಥೆಯ ಚೇರ್ಮನ್ ಹಾಗೂ ಸಿಇಒ ಮಾರನ್ ನಾಗರಾಜನ್ ಹೇಳಿದ್ದಾರೆ.[ಇನ್ಫಿ ಬಾಲಕೃಷ್ಣನ್ ಆಸ್ತಿ ಪಾಸ್ತಿ ಎಷ್ಟಿದೆ?]

Former Infosys CFO V Balakrishnan joins Chennai firm

ಸಂಸ್ಥೆಯ CAGR(compound annual growth rate) ಶೇ 50ರಷ್ಟು ಏರಿಕೆ ಕಂಡು 1,000 ಕೋಟಿ ರು ತನಕ ಆದಾಯ ಗಳಿಕೆಯ ಯೋಜನೆ ಹಾಕಿಕೊಳ್ಳಲಾಗಿದೆ. 2020ರ ವೇಳೆಗೆ ಈ ಯೋಜನೆ ಪೂರ್ಣವಾಗಲಿದೆ. ನಂತರ ಷೇರುಪೇಟೆ ಪ್ರವೇಶ ಮಾಡುವ ಆಲೋಚನೆಯೂ ಇದೆ ಎಂದು ಮಾರನ್ ನಾಗರಾಜನ್ ಹೇಳಿದರು.[ಇನ್ಫೋಸಿಸ್ : ಬಾಲಕೃಷ್ಣನ್ ಔಟ್; ಬಯೋಕಾನ್ ಕಿರಣ್ ಇನ್]

ಕಾರ್ ಸಂಸ್ಥೆ ಸೇರಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಾಲಕೃಷ್ಣನ್ ಅವರು, ಸುಮಾರು 140 ಬಿಲಿಯನ್ ಡಾಲರ್ ಐಟಿ ಇಂಡಸ್ಟ್ರಿಯಲ್ಲಿ 100 ಬಿಲಿಯನ್ ಡಾಲರ್ ಸರ್ವೀಸ್ ಕ್ಷೇತ್ರದಿಂದಲೇ ಬರುತ್ತದೆ.ಈಗ ಇದನ್ನು ಕನ್ಸಲ್ಟೆನ್ಸಿ ಹಾಗೂ ತಂತ್ರಜ್ಞಾನ ಆಧಾರಿತ ಸಂಸ್ಥೆಗಳಿಂದ ಪಡೆಯಲು ಯೋಜಿಸಲಾಗಿದೆ ಎಂದರು. [ಆಮ್ ಆದ್ಮಿ ಬಾಲಕೃಷ್ಣನ್ ಸಂದರ್ಶನ]

ಕಳೆದ ವರ್ಷ 130 ಕೋಟಿ ಆದಾಯ ಗಳಿಸಿರುವ ಕಾರ್ ಸಂಸ್ಥೆ ಈ ವರ್ಷ 175 ಕೋಟಿ ರು ಆದಾಯ ನಿರೀಕ್ಷೆಯಲ್ಲಿದೆ.

ಇನ್ಫೋಸಿಸ್ ಬಿಪಿಒ, ಫಿನಾಕಲ್ ಹಾಗೂ ಇಂಡಿಯಾ ಬಿಸಿನೆಸ್ ಯೂನಿಟ್ ಮುಖ್ಯಸ್ಥ ಹಾಗೂ ಇನ್ಫೋಸಿಸ್ ನ ಲೊಡೆಸ್ಟೋನ್ ಚೇರ್ಮನ್ ಆಗಿರುವ ವಿ ಬಾಲಕೃಷ್ಣನ್ ಅವರು ತಮ್ಮ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ಇತ್ತಿದ್ದಾರೆ. ಅವರ ಅಧಿಕಾರ ಅವಧಿ ಡಿಸೆಂಬರ್ 31, 2013ಕ್ಕೆ ಕೊನೆಗೊಂಡಿತ್ತು. ನಂತರ ರಾಜಕೀಯ ರಂಗಕ್ಕೆ ಇಳಿದ ಬಾಲಕೃಷ್ಣನ್ ಅವರು ಆಮ್ ಆದ್ಮಿ ಪಕ್ಷದ ಟಿಕೆಟ್ ಪಡೆದು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.

English summary
Former chief financial officer of IT major Infosys Ltd V Balakrishnan on Friday joined city-based digital consultancy firm Kaar Technologies as an independent director.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X