ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಖಲೆಯ ವಿದೇಶಿ ಹೂಡಿಕೆ: ನವೆಂಬರ್‌ನಲ್ಲಿ FPI ಒಳಹರಿವು 62,951 ಕೋಟಿ ರೂಪಾಯಿ

|
Google Oneindia Kannada News

ನವದೆಹಲಿ, ನವೆಂಬರ್ 30: ಫಾರಿನ್ ಪೋರ್ಟ್‌ಫೋಲಿಯೋ ಹೂಡಿಕೆದಾರರು (ಎಫ್‌ಪಿಐ) ನವೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 62,951 ಕೋಟಿ ರೂ. ಹೂಡಿಕೆ ಮಾಡಿದ್ದು, ಸತತ ಎರಡು ತಿಂಗಳು ದಾಖಲೆಯ ಹೂಡಿಕೆ ಆಗಿದೆ.

ಎಫ್‌ಪಿಐ ನಿವ್ವಳ ಖರೀದಿದಾರರು ಹೆಚ್ಚಿದ್ದು, ಒಟ್ಟು 62,951 ಕೋಟಿ ರೂ.ಗಳ ಹೂಡಿಕೆಯಲ್ಲಿ 60,358 ಕೋಟಿ ರೂ.ಗಳನ್ನು ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದೆ. ಉಳಿದ 2,593 ಕೋಟಿ ರೂ.ಗಳನ್ನು ಸಾಲ ವಿಭಾಗದಲ್ಲಿ ಹೂಡಿಕೆ ಮಾಡಲಾಗಿದೆ. ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ (ಎನ್‌ಎಸ್‌ಡಿ) ಎಫ್‌ಪಿಐ ಅಂಕಿಅಂಶಗಳನ್ನು ನೀಡಲು ಪ್ರಾರಂಭಿಸಿದಾಗಿನಿಂದ, ಇದು ಈಕ್ವಿಟಿ ವಿಭಾಗದಲ್ಲಿ ಅತಿ ಹೆಚ್ಚು ಹೂಡಿಕೆಯಾಗಿದೆ.

FII ಒಳಹರಿವು ಹೆಚ್ಚಳ: ನವೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಶೇ. 11.4ರಷ್ಟು ಲಾಭFII ಒಳಹರಿವು ಹೆಚ್ಚಳ: ನವೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಶೇ. 11.4ರಷ್ಟು ಲಾಭ

ಎಫ್‌ಪಿಐಗಳು ಹೆಚ್ಚು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುತ್ತಿದ್ದಾರೆ. ಏಕೆಂದರೆ ಅಂತಹ ಮಾರುಕಟ್ಟೆಯಲ್ಲಿ ಸಾಕಷ್ಟು ಅವಕಾಶವಿದೆ ಎಂದು ನಂಬುತ್ತಾರೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

Foreign Portfolio Investors (FPI) Pumped in Rs 62,951 Crore in Indian Markets in November

ತಜ್ಞರ ಪ್ರಕಾರ ಪ್ರಸ್ತುತ, ವಿದೇಶಿ ಹೂಡಿಕೆದಾರರು ಪ್ರಸಿದ್ಧ ಕಂಪನಿಗಳಲ್ಲಿ ಸಾಕಷ್ಟು ಹೂಡಿಕೆ ಮಾಡುತ್ತಿದ್ದಾರೆ. ಇದರ ನಂತರ, ಬ್ಯಾಂಕಿಂಗ್ ಕ್ಷೇತ್ರ ಪ್ರಮುಖ ಆಯ್ಕೆಯಾಗಿದೆ. ಇದಲ್ಲದೆ, ನವೆಂಬರ್‌ನಲ್ಲಿ ಕೆಲವು ಅನಿಶ್ಚಿತತೆಗಳನ್ನು ಹೊರಬರಲಾಗಿದೆ ಎಂದು ನಂಬಲಾಗಿದ್ದು, ಈ ಕಾರಣದಿಂದಾಗಿ ಎಫ್‌ಪಿಐ ಸಾಕಷ್ಟು ಹೂಡಿಕೆ ಮಾಡಿದೆ. ಯುಎಸ್ ಚುನಾವಣೆಯ ಬಗ್ಗೆ ಸಾಕಷ್ಟು ಗೊಂದಲಗಳು ಇದ್ದವು, ಆದರೆ ಈಗ ಪರಿಸ್ಥಿತಿ ಸುಧಾರಿಸುವುದರಿಂದ ಅನಿಶ್ಚಿತತೆ ಕಡಿಮೆಯಾಗಿದೆ.

English summary
Foreign portfolio investors (FPI) pumped in Rs 62,951 crore in Indian markets in November, recording the second consecutive month of net buying.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X