ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋರ್ಬ್ಸ್ ಶ್ರೀಮಂತರ ಪಟ್ಟಿ: ವಿಜಿ ಸಿದ್ದಾರ್ಥ ಸ್ಥಾನ ಇಳಿಕೆ

By Mahesh
|
Google Oneindia Kannada News

Forbes India Top billionaires List
ಬೆಂಗಳೂರು, ಡಿ.01: ಪ್ರಖ್ಯಾತ ಜಾಗತಿಕ ನಿಯತಕಾಲಿಕೆ ಫೋರ್ಬ್ಸ್'ನ ಟಾಪ್-100 ಭಾರತೀಯ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸಿದೆ. ನಿರೀಕ್ಷೆಯಂತೆ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಮಾಲಿಕ ಮುಖೇಶ್ ಅಂಬಾನಿ ದೇಶದ ನಂ.1 ಶ್ರೀಮಂತರಾಗಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 2011ರ ಪಟ್ಟಿಯಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಳಿಯ ವಿ,ಜಿ ಸಿದ್ಧಾರ್ಥ ಅವರು ತಮ್ಮ ಸ್ಥಾನವನ್ನು ಉತ್ತಮಪಡಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ.

ಮೊದಲ ಮೂರು ಸ್ಥಾನದಲ್ಲಿ ರಿಲಯನ್ಸ್ ಸಂಸ್ಥೆಯ 56 ವರ್ಷ ವಯಸ್ಸಿನ ಮುಖೇಶ್ ಅಂಬಾನಿ ಅವರು 21000 ಮಿಲಿಯನ್ ಡಾಲರ್ ಮೊತ್ತದ ಆಸ್ತಿ ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿ ಲಂಡನ್ನಿನ ಲಕ್ಷ್ಮಿ ಮಿತ್ತಲ್ ಅವರು 16,000 ಮಿಲಿಯನ್ ಡಾಲರ್ ಆಸ್ತಿಗಳಿಸಿದ್ದಾರೆ. ದಿಲಿಪ್ ಶಾಂಘ್ವಿ 13,900 ಮಿಲಿಯನ್ ಡಾಲರ್ ಗಳಿಸಿ ಮೂರನೆ ಸ್ಥಾನದಲ್ಲಿದ್ದಾರೆ.

ಕೆಫೆ ಕಾಫಿ ಡೇ ಶಾಪ್'ಗಳ ಒಡೆಯ 54 ವರ್ಷದ ಸಿದ್ಧಾರ್ಥ ಅವರು 84.5 ಕೋಟಿ ಡಾಲರ್ (ಸುಮಾರು 5 ಸಾವಿರ ಕೋಟಿ ರುಪಾಯಿ) ಮೌಲ್ಯದ ಆಸ್ತಿಪಾಸ್ತಿ ಹೊಂದಿದ್ದಾರೆ. ಅಗ್ರ ಭಾರತೀಯರ ಪಟ್ಟಿಯಲ್ಲಿ 75ನೇ ಸ್ಥಾನ ಗಳಿಸಿದ್ದಾರೆ. 2011ರಲ್ಲಿ ಪ್ರಥಮ ಬಾರಿಗೆ ಫೋರ್ಬ್ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಸಿದ್ದಾರ್ಥ2950 ಕೋಟಿ ರೂಪಾಯಿ ಗಳಿಕೆಯೊಂದಿಗೆ 84ನೇ ಸ್ಥಾನ ಪಡೆದಿದ್ದರು. ಆದರೆ, 2012 67ನೇ ಸ್ಥಾನದಲ್ಲಿದ್ದ ಸಿದ್ದಾರ್ಥ ಈ ಬಾರಿ 75ನೇ ಸ್ಥಾನ ಗಳಿಸಿದ ಸಾಧನೆಗೆ ತೃಪ್ತಿಪಟ್ಟುಕೊಂಡಿದ್ದಾರೆ.

ಈ ಟಾಪ್-100 ಸಿರಿವಂತ ಭಾರತೀಯರ ಪಟ್ಟಿಯಲ್ಲಿ ಬೆಂಗಳೂರು ಮೂಲದ 15 ಮಂದಿ ಇದ್ದಾರೆ. ಇವರಲ್ಲಿ ಕರ್ನಾಟಕ ಮೂಲದ ಅಥವಾ ಕರ್ನಾಟಕದಲ್ಲಿ ನೆಲೆ ಕಂಡುಕೊಂಡವರೂ ಒಳಗೊಂಡಿದ್ದಾರೆ. ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಂಜಿ ನಂಬರ್ ಒನ್ ಸ್ಥಾನ ಪಡೆದಿದ್ದಾರೆ. ಇವರ ಆಸ್ತಿ 88,300 ಕೋಟಿ ರುಪಾಯಿ ಇದೆ.

ಇನ್ಫೋಸಿಸ್ ನ ನಾರಾಯಣ ಮೂರ್ತಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ 10,500 ಕೋಟಿ ರೂಪಾಯಿ. ಕ್ರಿಸ್ ಗೋಪಾಲಕೃಷ್ಣನ್ ಮೂರನೇ ಸ್ಥಾನದಲ್ಲಿದ್ದರೆ, ಆಧಾರ್ ಕಾರ್ಡ್ ಮುಖ್ಯಸ್ಥ ನಂದನ್ ನಿಲೇಕಣಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಮುಖ್ಯಸ್ಥ ರಂಜನ್ ಪೈ ಐದು ಮತ್ತು ಜಿ.ಎಂ.ರಾವ್ ಆರನೇ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯುಬಿ ಸಮೂಹದ ಒಡೆಯ ವಿಜಯ್ ಮಲ್ಯ 14ನೇ ಸ್ಥಾನದಲ್ಲಿದ್ದು, ಬಯೋಕಾನ್ ನ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ 15ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಫೋರ್ಬ್ಸ್ ಅಗ್ರ ಸಿರಿವಂತ ಭಾರತೀಯ ಪಟ್ಟಿಯಲ್ಲಿರುವ ಕರ್ನಾಟಕದ ವ್ಯಕ್ತಿಗಳಿವರು....
4) ಅಜೀಮ್ ಪ್ರೇಮ್ಜಿ
37) ನಾರಾಯಣಮೂರ್ತಿ
46) ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್
50) ನಂದನ್ ನಿಲೇಕಣಿ
51) ರಂಜನ್ ಪೈ (ಮಣಿಪಾಲ್ ಸಮೂಹ)
63) ಗ್ರಂಧಿ ಮಲ್ಲಿಕಾರ್ಜುನ ರಾವ್ (ಜಿ.ಎಂ.ರಾವ್)
65) ಕೆ.ದಿನೇಶ್, ಇನ್ಫೋಸಿಸ್ ಸಹ ಸಂಸ್ಥಾಪಕ
66) ರಾಜೇಶ್ ಮೆಹ್ತಾ
71) ಎಸ್.ಡಿ.ಶಿಬುಲಾಲ್, ಇನ್ಫೋಸಿಸ್ ಸಹ ಸಂಸ್ಥಾಪಕ
72) ಬಿ.ಆರ್.ಶೆಟ್ಟಿ (ಬವಗುತ್ತು ರಘುರಾಮ್ ಶೆಟ್ಟಿ), ಅನಿವಾಸಿ ಕನ್ನಡಿಗ ಉದ್ಯಮಿ
75) ವಿ.ಜಿ.ಸಿದ್ಧಾರ್ಥ, ಕೆಫೆ ಕಾಫಿ ಡೇ ಸಂಸ್ಥಾಪಕ ಮತ್ತು ಎಸ್.ಎಂ.ಕೃಷ್ಣರವರ ಅಳಿಯ
81) ಪಿ.ಎನ್.ಸಿ. ಮೆನನ್
82) ರಾಧೇ ಶ್ಯಾಮ್ ಗೋಯೆಂಕಾ
84) ವಿಜಯ್ ಮಲ್ಯ
96) ಕಿರಣ್ ಮಜುಮ್ದಾರ್ ಶಾ

English summary
Forbes has released the richest Indians list. As excepted Mukesh Ambani of Reliance Industries Group is at the top of the list. Former Union Minister SM Krishna's Son in Law Cafe Coffee Day owner VG Siddhartha jumped is placed at 75th position.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X