ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋರ್ಬ್ಸ್ 100 ಪಟ್ಟಿ: ಮುಕೇಶ್ ಟಾಪ್, ಮಲ್ಯ ಔಟ್

By Mahesh
|
Google Oneindia Kannada News

ಬೆಂಗಳೂರು, ಸೆ.25: ಭಾರತದಲ್ಲಿನ ಅತಿ ದೊಡ್ಡ ಶ್ರೀಮಂತರ ಹೊಚ್ಚ ಹೊಸ ಪಟ್ಟಿಯನ್ನು ಫೋರ್ಬ್ಸ್ ನಿಯತ ಕಾಲಿಕೆ ಪ್ರಕಟಿಸಿದೆ. ನಿರೀಕ್ಷೆಯಂತೆ ರಿಲಯಸ್ ಸಂಸ್ಥೆ ಚೇರ್ಮನ್ ಮುಕೇಶ್ ಅಂಬಾನಿ ಅಗ್ರಸ್ಥಾನದಲ್ಲಿದ್ದಾರೆ. ಸತತ 8ನೇ ಬಾರಿಗೆ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಟಾಪ್ ಸ್ಥಾನ ಅಲಂಕರಿಸಿದ್ದಾರೆ. ಪಟ್ಟಿಯಲ್ಲಿ ಅದಾನಿ ಸಮೂಹದ ಗೌತಮ್ ಟಾಪ್ ಜಿಗಿತ ಕಂಡರೆ, ಯುಬಿ ಸಮೂಹದ ವಿಜಯ್ ಮಲ್ಯ ಟಾಪ್ 100 ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಫೋರ್ಬ್ಸ್ 100 ಭಾರತೀಯ ಶ್ರೀಮಂತರ ಪೈಕಿ ಮೊದಲ ಸ್ಥಾನದಲ್ಲಿರುವ ಮುಕೇಶ್ ಅವರ ನಿವ್ವಳ ಆಸ್ತಿ 23.6 ಬಿಲಿಯನ್ ಡಾಲರ್ ದಾಟುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2.6 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಸನ್ ಫಾರ್ಮಾಸ್ಯೂಟಿಕಲ್ ನ 59 ವರ್ಷ ವಯಸ್ಸಿನ ದಿಲಿಪ್ ಸಾಂಘ್ವಿ ಅವರು ಟಾಪ್ 2ನೇ ಸ್ಥಾನದಲ್ಲಿದ್ದಾರೆ. ಉಕ್ಕಿನ ದೊರೆ ಲಕ್ಷ್ಮಿ ಮಿತ್ತಲ್ ಅವರು ಎರಡನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.

ಸನ್ ಫಾರ್ಮಾದ ಸಾಂಘ್ವಿ 18 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿ 16.4 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ವಿಪ್ರೋ ಸಂಸ್ಥೆಯ ಅಜೀಂ ಪ್ರೇಂಜಿ ಇದ್ದಾರೆ.

Mukesh Ambani tops again, Gautam Adani moves up

11ನೇ ಸ್ಥಾನ ಜಿಗಿದು 11ನೇ ಸ್ಥಾನಕ್ಕೇರಿದ ಗೌತಮ್ ಅದಾನಿ ಅವರು 7.1 ಬಿಲಿಯನ್ ಡಾಲರ್ ಹೊಂದಿದ್ದಾರೆ. ಟಾಟಾ ಸಮೂಹದಿಂದ ಸುಮಾರು 900 ಮಿಲಿಯನ್ ಡಾಲರ್ ಮೊತ್ತಕ್ಕೆ ಹೊಸ ಬಂದರು ಖರೀದಿಸಿದ ಅದಾನಿ ಈಗ ದಕ್ಷಿಣ ಭಾರತದಲ್ಲಿ 1 ಬಿಲಿಯನ್ ಡಾಲರ್ ಮೊತ್ತ ಹೂಡಿ ವಿದ್ಯುತ್ ಸ್ಥಾವರ ಸ್ಥಾಪನೆ ಮುಂದಾಗಿದ್ದಾರೆ.

2013ರಲ್ಲಿ ಪಟ್ಟಿಗೆ ಶ್ರೀಮಂತರನ್ನು ಆಯ್ಕೆ ಮಾಡಲು 635 ಮಿಲಿಯನ್ ಡಾಲರ್ ಕನಿಷ್ಠ ಮೊತ್ತ ಎಂದು ನಿಗದಿಪಡಿಸಲಾಗಿತ್ತು. ಈ ಬಾರಿ ಈ ಮೊತ್ತ 1 ಬಿಲಿಯನ್ ಯುಎಸ್ ಡಾಲರ್ ಗೆ ಏರಿಸಲಾಯಿತು. ಹೀಗಾಗಿ ಯುಬಿ ಸಮೂಹದ ವಿಜಯ್ ಮಲ್ಯ, ಬ್ರಿಜ್ ಭೂಷಣ್ ಸಿಂಘಾಲ್ ಮುಂತಾದವರು ಟಾಪ್ ಪಟ್ಟಿಯಿಂದ ಹೊರ ಬಿದ್ದಿದ್ದಾರೆ. ಮುಕೇಶ್ ಅವರ ಸೋದರ ಅನಿಲ್ ಅಂಬಾನಿ 13ನೇ ಸ್ಥಾನದಲ್ಲಿದ್ದಾರೆ.

ಉಳಿದಂತೆ, ಇನ್ಪೋಸಿಸ್ ನ ನಾರಾಯಣ ಮೂರ್ತಿ 53ನೇ ಸ್ಥಾನ, ನಂದನ್ ನಿಲೇಕಣಿ 66ನೇ ಸ್ಥಾನ, ಕಾಫಿಡೇನ ವಿ.ಜಿ ಸಿದ್ದಾರ್ಥ 75ನೇ ಸ್ಥಾನದಲ್ಲಿದ್ದಾರೆ. ಬಯೋಕಾನ್ ನ ಕಿರಣ್ ಮಜುಂದಾರ್ ಶಾ 81ನೇ ಸ್ಥಾನ, ಬಿ.ಆರ್ ಶೆಟ್ಟಿ 86ನೇ ಸ್ಥಾನ, ಶುಭ್ ಜ್ಯುವೆಲರ್ಸ್ ನ ರಾಜೇಶ್ ಮೆಹ್ತಾ 88ನೇ ಸ್ಥಾನ ಪಡೆದುಕೊಂಡಿದ್ದಾರೆ.

English summary
Reliance Industries chairman Mukesh Ambani has topped the Forbes magazine's list of the top 100 richest tycoons in India for the eighth consecutive year with a net worth of $23.6 billion, up $2.6 billion from last year. The minimum amount required to make the list was $1 billion, up from $635 million in 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X