ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 13ನೇ ವರ್ಷವೂ ಭಾರತದ ಶ್ರೀಮಂತ ವ್ಯಕ್ತಿಯಾಗಿ ಉಳಿದ ಮುಕೇಶ್ ಅಂಬಾನಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 08: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಸತತ 13 ನೇ ವರ್ಷವೂ ಶ್ರೀಮಂತ ಭಾರತೀಯರಾಗಿ ಉಳಿದಿದ್ದಾರೆ. ಫೋರ್ಬ್ಸ್ ಗುರುವಾರ 2020 ರ ಅಗ್ರ 100 ಶ್ರೀಮಂತ ಭಾರತೀಯರ ಪಟ್ಟಿಯನ್ನು ಬಿಡುಗಡೆ ಮಾಡಿತು.

ಭಾರತದಲ್ಲಿ ಕೊರೊನಾವೈರಸ್ ತೀವ್ರವಾಗಿ ಪರಿಣಾಮ ಬೀರಿರುವುದರ ಜೊತೆಗೆ, 2020 ರ ಫೋರ್ಬ್ಸ್ ಇಂಡಿಯಾ ಶ್ರೀಮಂತ ಪಟ್ಟಿಯಲ್ಲಿ ಸ್ಥಾನ ಪಡೆದ 100 ಶ್ರೀಮಂತರಲ್ಲಿ ಅರ್ಧದಷ್ಟು ಜನರು ಲಾಭಗಳಿಸಿದ್ದಾರೆ. ಅವರ ಸಾಮೂಹಿಕ ನಿವ್ವಳ ಮೌಲ್ಯವು ಹಿಂದಿನ ವರ್ಷಕ್ಕಿಂತ ಶೇ. 14ರಷ್ಟು ಏರಿಕೆಯಾಗಿ 517.5 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ'' ಎಂದು ಫೋರ್ಬ್ಸ್ ಹೇಳಿದೆ.

ರಿಲಯನ್ಸ್ ರಿಟೇಲ್: ಎಡಿಐಎ 5,512.50 ಕೋಟಿ ರೂಪಾಯಿ ಹೂಡಿಕೆ ರಿಲಯನ್ಸ್ ರಿಟೇಲ್: ಎಡಿಐಎ 5,512.50 ಕೋಟಿ ರೂಪಾಯಿ ಹೂಡಿಕೆ

"ಜಾಗತಿಕ ಆರ್ಥಿಕತೆಗೆ ಪ್ರಕ್ಷುಬ್ಧ ವರ್ಷದಲ್ಲಿ, ಭಾರತದ ಶ್ರೀಮಂತರು ತಮ್ಮ ಸಂಪತ್ತನ್ನು ಸಂರಕ್ಷಿಸಿದ್ದಾರೆ. ಮುಖೇಶ್ ಅಂಬಾನಿ ಸತತ 13 ನೇ ವರ್ಷವೂ ತನ್ನ ನಿವ್ವಳ ಮೌಲ್ಯಕ್ಕೆ 37.3 ಶತಕೋಟಿ ಹಣವನ್ನು ಸೇರಿಸಿದ್ದಾರೆ "ಎಂದು ಫೋರ್ಬ್ಸ್ ಹೇಳಿದೆ.

Forbes India rich list 2020: Mukesh Ambani is richest Indian for 13th time; check full list

ಇನ್ನೂ ಅಗ್ರ 10 ರಲ್ಲಿ ಹೊಸದಾಗಿ ಪ್ರವೇಶಿಸಿದವರು ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಯ ಅಧ್ಯಕ್ಷರಾಗಿರುವ ಸೈರಸ್ ಪೂನವಾಲ್ಲಾ. ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ಕಂಪನಿಯ ಅಧ್ಯಕ್ಷರು ಇವರಾಗಿದ್ದಾರೆ.

ಭಾರತದ ಅಗ್ರ 20 ಶ್ರೀಮಂತ ವ್ಯಕ್ತಿಗಳ ಪಟ್ಟಿ:

1. ಮುಖೇಶ್ ಅಂಬಾನಿ (88.7 ಬಿಲಿಯನ್ ಡಾಲರ್)

2. ಗೌತಮ್ ಅದಾನಿ (25.2 ಬಿಲಿಯನ್ ಡಾಲರ್)

3. ಶಿವ ನಾಡರ್ (20.4 ಬಿಲಿಯನ್ ಡಾಲರ್)

4. ರಾಧಾಕಿಶನ್ ದಮಾನಿ (15.4 ಬಿಲಿಯನ್ ಡಾಲರ್)

5. ಹಿಂದೂಜಾ ಸಹೋದರರು (12.8 ಬಿಲಿಯನ್ ಡಾಲರ್)

6. ಸೈರಸ್ ಪೂನವಾಲ್ಲಾ (11.5 ಬಿಲಿಯನ್ ಡಾಲರ್)

7. ಪಲ್ಲೊಂಜಿ ಮಿಸ್ತ್ರಿ (11.4 ಬಿಲಿಯನ್ ಡಾಲರ್)

8. ಉದಯ್ ಕೊಟಕ್ (11.3 ಬಿಲಿಯನ್ ಡಾಲರ್)

9. ಗೋದ್ರೇಜ್ ಕುಟುಂಬ (11 ಬಿಲಿಯನ್ ಡಾಲರ್)

10. ಲಕ್ಷ್ಮಿ ಮಿತ್ತಲ್ (10.3 ಬಿಲಿಯನ್ ಡಾಲರ್)

11. ಸುನಿಲ್ ಮಿತ್ತಲ್ (10.2 ಬಿಲಿಯನ್ ಡಾಲರ್)

12. ದಿಲೀಪ್ ಶಾಂಘ್ವಿ (9.5 ಬಿಲಿಯನ್ ಡಾಲರ್)

13. ಬರ್ಮನ್ ಕುಟುಂಬ (9.2 ಬಿಲಿಯನ್ ಡಾಲರ್)

14. ಕುಮಾರ್ ಬಿರ್ಲಾ (8.5 ಬಿಲಿಯನ್ ಡಾಲರ್)

15. ಅಜೀಮ್ ಪ್ರೇಮ್‌ಜಿ (7.9 ಬಿಲಿಯನ್ ಡಾಲರ್)

16. ಬಜಾಜ್ ಕುಟುಂಬ (7.4 ಬಿಲಿಯನ್ ಡಾಲರ್)

17. ಮಧುಕರ್ ಪರೇಖ್ (7.2 ಬಿಲಿಯನ್ ಡಾಲರ್)

18. ಕುಲದೀಪ್ ಮತ್ತು ಗುರ್ಬಚನ್ ಸಿಂಗ್ ಧಿಂಗ್ರಾ (6.8 ಬಿಲಿಯನ್ ಡಾಲರ್)

19. ಸಾವಿತ್ರಿ ಜಿಂದಾಲ್ (6.6 ಬಿಲಿಯನ್ ಡಾಲರ್)

20. ಮುರಳಿ ದಿವಿ (6.5 ಬಿಲಿಯನ್ ಡಾಲರ್)

English summary
Mukesh Ambani, the chairman of Reliance Industries Limited, remains the wealthiest Indian for the 13th consecutive year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X