ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾರ ಹಣದುಬ್ಬರ: ಮೇ ತಿಂಗಳಿನಲ್ಲಿ 9.28 ಪರ್ಸೆಂಟ್‌ಗೆ ಏರಿಕೆ

|
Google Oneindia Kannada News

ನವದೆಹಲಿ, ಜೂನ್ 13: ದೇಶದಲ್ಲಿ ಕೊರೊನಾವೈರಸ್‌ದಿಂದಾಗಿ ಆಗಿರುವ ಅವಾಂತರ ಅಷ್ಟಿಷ್ಟಲ್ಲ. ಅನೇಕ ಉದ್ಯಮಗಳು ನೆಲಕಚ್ಚಿ ಮತ್ತೆ ಎದ್ದು ನಿಲ್ಲುವುದೇ ಅನುಮಾನ ಎಂಬಂತಹ ಪರಿಸ್ಥಿತಿಗೆ ತಲುಪಿವೆ. ಇದರ ನಡುವೆ ಲಾಕ್‌ಡೌನ್ ಕಾರಣಕ್ಕೆ ಮೇ ತಿಂಗಳಿನಲ್ಲಿ ಆಹಾರ ಹಣದುಬ್ಬರುವ 9.28 ಪರ್ಸೆಂಟ್‌ಗೆ ಏರಿಕೆಯಾಗಿದೆ.

Recommended Video

ಹುಚ್ಚ ವೆಂಕಟ್ ಗೆ ಹೊಡೆದವರ ಮೇಲೆ FIR ದಾಖಲು | Huccha Venkat | Srirangapatna

ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ವಿವರಗಳಲ್ಲಿ ಚಿಲ್ಲರೆ ಹಣದುಬ್ಬರದ ಕೆಲ ವಿವರಗಳನ್ನಷ್ಟೇ ಪ್ರಕಟಿಸಿದ್ದು, ಗ್ರಾಹಕರ ಆಹಾರ ಬೆಲೆ ಸೂಚ್ಯಂಕವು (ಸಿಎಫ್‌ಪಿಐ) 9.28 ಪರ್ಸೆಂಟ್‌ ತಲುಪಿದೆ ಎಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.83 ಪರ್ಸೆಂಟ್‌ರಷ್ಟಿತ್ತು.

 ಗುಡ್ ನ್ಯೂಸ್: 2021-22ನೇ ವರ್ಷದಲ್ಲಿ ಭಾರತದ ಆರ್ಥಿಕತೆ 9.5% ಗೆ ಪುಟಿದೇಳಲಿದೆ ಗುಡ್ ನ್ಯೂಸ್: 2021-22ನೇ ವರ್ಷದಲ್ಲಿ ಭಾರತದ ಆರ್ಥಿಕತೆ 9.5% ಗೆ ಪುಟಿದೇಳಲಿದೆ

ಆದಾಗ್ಯೂ, ಚಿಲ್ಲರೆ ಆಹಾರ ಹಣದುಬ್ಬರವು ವರ್ಷದಿಂದ ವರ್ಷಕ್ಕೆ 9.28 ಪರ್ಸೆಂಟ್‌ಗೆ ಏರಿಕೆಯಾಗಿದೆ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MOSPI) ಶುಕ್ರವಾರ ಬಿಡುಗಡೆ ಮಾಡಿದೆ. ನಗರ ಪ್ರದೇಶಗಳಲ್ಲಿ ಈ ಸಂಖ್ಯೆ 8.36 ಪರ್ಸೆಂಟ್‌ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಆಹಾರ ಹಣದುಬ್ಬರ 9.69 ಪರ್ಸೆಂಟ್‌ರಷ್ಟಿದೆ.

Food Inflation Up 9.28 Percent In May

ಹಿಂದಿನ ತಿಂಗಳ ಬಿಡುಗಡೆಯ ಪ್ರಕಾರ, ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿಯ (ಎನ್‌ಎಸ್‌ಒ) ಬೆಲೆ ಚಲನೆಯ ಮಾಹಿತಿಯು ಮಾರ್ಚ್‌ನಲ್ಲಿ ಆಹಾರ ಹಣದುಬ್ಬರವು 8.76 ಪರ್ಸೆಂಟ್ರಷ್ಟಿದೆ ಮತ್ತು ಚಿಲ್ಲರೆ ಹಣದುಬ್ಬರವನ್ನು ಆ ತಿಂಗಳಿಗೆ 5.84 ಪರ್ಸೆಂಟ್‌ ಎಂದು ದಾಖಲಿಸಲಾಗಿದೆ.

ಲಾಕ್‌ಡೌನ್ ದೇಶದಲ್ಲಿ ವೈರಸ್ ನಿಯಂತ್ರಿಸಿಲ್ಲ, ಜಿಡಿಪಿಯನ್ನು ತಗ್ಗಿಸಿದೆ: ರಾಜೀವ್ ಬಜಾಜ್ ಲಾಕ್‌ಡೌನ್ ದೇಶದಲ್ಲಿ ವೈರಸ್ ನಿಯಂತ್ರಿಸಿಲ್ಲ, ಜಿಡಿಪಿಯನ್ನು ತಗ್ಗಿಸಿದೆ: ರಾಜೀವ್ ಬಜಾಜ್

ಐಸಿಆರ್‌ಎ ಪ್ರಮುಖ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಅವರ ಪ್ರಕಾರ, ದ್ವಿದಳ ಧಾನ್ಯಗಳು, ಮಾಂಸ ಮತ್ತು ಮೀನುಗಳುತೈಲಗಳು ಮತ್ತು ಕೊಬ್ಬಿನ ಅಂಶವು ಮೇ ತಿಂಗಳಲ್ಲಿ ದ್ವಿ-ಅಂಕಿಯ(ಡಬಲ್ ಡಿಜಿಟ್) ಹಣದುಬ್ಬರ ಮಟ್ಟವು ಕಳವಳಕ್ಕೆ ಕಾರಣವಾಗಿದೆ.

English summary
Retail food inflation saw a year-on-year rise to 9.28%, data released by the ministry of statistics and programme implementation (MOSPI) on Friday showed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X