• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಫುಡ್ ಡೆಲಿವರಿ ಕ್ಷೇತ್ರವು ಬಲವಾದ ಚೇತರಿಕೆ ಕಾಣುತ್ತಿದೆ: ಜೊಮ್ಯಾಟೊ

|

ಬೆಂಗಳೂರು, ಸೆಪ್ಟೆಂಬರ್ 23: ಕೋವಿಡ್-19 ಬಹುತೇಕ ಎಲ್ಲಾ ಕ್ಷೇತ್ರಗಳನ್ನು ನಷ್ಟಕ್ಕೆ ದೂಡಿದ್ದು, ಕೋವಿಡ್ ಪೂರ್ವಕ್ಕೆ ಹೋಲಿಸಿದರೆ, ಪ್ರಸ್ತುತ ಶೇ. 85ರಷ್ಟು ಭಾರತದ ಫುಡ್ ಡೆಲಿವರಿ ವಿಭಾಗವೂ ಚೇತರಿಕೆಯ ಬಲವಾದ ಲಕ್ಷಣಗಳನ್ನು ತೋರಿಸಿದೆ ಎಂದು ಜೊಮ್ಯಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಬುಧವಾರ ಹೇಳಿದ್ದಾರೆ.

ದೇಶದ ಹಲವಾರು ದೊಡ್ಡ ಕ್ಷೇತ್ರಗಳಿಗೆ ಹೋಲಿಸಿದರೆ, ಆಹಾರ ವಿತರಣಾ ಕ್ಷೇತ್ರವು ಚೇತರಿಸಿಕೊಂಡಿದೆ ಮತ್ತು ಕೋವಿಡ್ ಪೂರ್ವ ಮಟ್ಟವನ್ನು ಮೀರಿ ಬೆಳೆದಿದೆ, ಇದು ದೇಶದ ಕೆಲವು ಶ್ರೀಮಂತ ವಸತಿ ಪ್ರದೇಶಗಳ ನೇತೃತ್ವದಲ್ಲಿದೆ ಎಂದು ಗೋಯಲ್ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಆಹಾರದ ಕೊರತೆ: ಸಾಕು ನಾಯಿಗಳನ್ನು ರೆಸ್ಟೋರೆಂಟ್‌ಗೆ ನೀಡಲು ಉತ್ತರ ಕೊರಿಯಾದ ಕಿಮ್ ಆದೇಶ

ದೆಹಲಿ ಮತ್ತು ಮುಂಬೈ ಕೋವಿಡ್ ಪೂರ್ವದ ಶೇಕಡಾ 95 ರಷ್ಟು ಪೂರ್ಣ ಚೇತರಿಕೆಗೆ ತಲುಪಿದೆ ಎಂದು ಅವರು ಹೇಳಿದರು. ಮೆಟ್ರೊಗಳಾದ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಕೋವಿಡ್ ಪೂರ್ವ ಮಾರಾಟದ ಶೇಕಡಾ 80 ರಷ್ಟಿದೆ.

ಕೋಲ್ಕತಾ, ಪಾಟ್ನಾ, ಜೆಮ್‌ಷೆಡ್‌ಪುರ , ರಾಂಚಿ, ಮತ್ತು ಸಿಲಿಗುರಿಯಂತಹ ಕೆಲವು ನಗರಗಳು ಸಂಪೂರ್ಣವಾಗಿ ಚೇತರಿಸಿಕೊಂಡಿವೆ ಮತ್ತು ಕೋವಿಡ್ ಪೂರ್ವ ಮಟ್ಟವನ್ನು ಮೀರಿವೆ ಎಂದು ಅವರು ಹೇಳಿದರು.

ನಗರವು ಲಾಕ್‌ಡೌನ್‌ಗೆ ಒಳಗಾದಾಗ ಗ್ರಾಹಕರು ಈಗ ಸಾಮಾನ್ಯಕ್ಕಿಂತಲೂ ಹೆಚ್ಚಾಗಿ ಆಹಾರ ವಿತರಣೆಯನ್ನು ಅವಲಂಬಿಸಿದ್ದಾರೆ.

"ನಡೆಯುತ್ತಿರುವ ಐಪಿಎಲ್ ಸೀಸನ್ ಮತ್ತು ನಂತರದ ಹಬ್ಬದ ಋತುವಿನೊಂದಿಗೆ, ಮಹಾನಗರಗಳು ಮತ್ತು ಸಣ್ಣ ನಗರಗಳಲ್ಲಿ ಆಹಾರ ವಿತರಣೆಯು ಶೀಘ್ರದಲ್ಲೇ ಪೂರ್ಣ ಚೇತರಿಕೆ ಪಡೆಯಲಿದೆ ಮತ್ತು ಕೋವಿಡ್ ಪೂರ್ವ ಹಂತಗಳಲ್ಲಿ ಬೆಳೆಯುವುದನ್ನು ಪುನರಾರಂಭಿಸುತ್ತದೆ" ಎಂದು ಗೋಯಲ್ ಹೇಳಿದರು.

English summary
The food delivery segment in India has shown stronger signs of recovery with the overall sector clocking over 85 percent of the pre-COVID says zomato Founder and CEO Deepinder Goyal said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X