ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2021: ಆಹಾರ ಪದಾರ್ಥಗಳ ವಿತರಣೆ ಮೇಲಿನ GST ಇಳಿಕೆಯ ಬೇಡಿಕೆ

|
Google Oneindia Kannada News

ನವದೆಹಲಿ, ಜನವರಿ 18: ಮುಂಬರುವ ಕೇಂದ್ರ ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚುತ್ತಲೇ ಸಾಗಿದೆ. ಫೆಬ್ರವರಿ 1 ರಂದು 2021ರ ಬಜೆಟ್‌ನಲ್ಲಿ ಮನೆ ವಿತರಣೆಯ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಶೇ 5ರಷ್ಟು ಇಳಿಸುವಂತೆ ರೆಸ್ಟೋರೆಂಟ್ ಮತ್ತು ಆಹಾರ ವಿತರಣಾ ವಲಯ ಒತ್ತಾಯಿಸಿದೆ. ಪ್ರಸ್ತುತ, ಆಹಾರ ಪದಾರ್ಥಗಳ ವಿತರಣೆಯ ಮೇಲೆ ಜಿಎಸ್‌ಟಿಯನ್ನು ಶೇಕಡಾ 18ರಷ್ಟು ದರದಲ್ಲಿ ವಿಧಿಸಲಾಗುತ್ತದೆ.

ಜಿಎಸ್‌ಟಿ ದರವನ್ನು ನ್ಯಾಯಸಮ್ಮತಗೊಳಿಸುವುದು ಬಹಳ ಮುಖ್ಯ ಎಂದು ಈ ವಲಯದ ಪ್ರತಿನಿಧಿಗಳು ಒತ್ತಾಯಿಸಿದ್ದಾರೆ. ಗ್ರಾಹಕರು ರೆಸ್ಟೋರೆಂಟ್‌ನಲ್ಲಿ 5% ಜಿಎಸ್‌ಟಿ ನೀಡುವ ಆಹಾರ ವಸ್ತುವಿಗೆ, ಮನೆಗೆ ವಿತರಣೆ ಪಡೆಯಲು 18% ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ.

ಹಕ್ಕಿಜ್ವರದ ಭಯದ ನಡುವೆ ಚಿಕನ್ ತಿನ್ನಬಹುದಾ? ಇಲ್ಲಿದೆ WHO ಉತ್ತರ...ಹಕ್ಕಿಜ್ವರದ ಭಯದ ನಡುವೆ ಚಿಕನ್ ತಿನ್ನಬಹುದಾ? ಇಲ್ಲಿದೆ WHO ಉತ್ತರ...

ಭಾರತದಲ್ಲಿ ಆನ್‌ಲೈನ್ ಆಹಾರ ವಿತರಣಾ ಕ್ಷೇತ್ರವು ಅತ್ಯಂತ ವೇಗದಲ್ಲಿ ಬೆಳೆಯುತ್ತಿದ್ದು ಪ್ರಸ್ತುತ, ಈ ವಲಯದ ಮೌಲ್ಯ 2.94 ಬಿಲಿಯನ್ ಡಾಲರ್‌ ನಷ್ಟಿದೆ ಎಂದು ಫೂಜಾ ಫುಡ್ಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ದಿಬಿಯಾಂಡು ಬ್ಯಾನರ್ಜಿ ಹೇಳಿದ್ದರು.

Food Delivery Sector Demands GST On Business To Five Percent From 18

ಇನ್ನು ಲಾಕ್‌ಡೌನ್‌ ವೇಳೆ ಭಾರೀ ನಷ್ಟ ಎದುರಿಸಿರುವ ಹೋಟೆಲ್ ಉದ್ಯಮವು ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ವಿವಿಧ ಕ್ಷೇತ್ರದ ತಜ್ಞರೊಂದಿಗೆ ಬಜೆಟ್ ಕುರಿತು ಚರ್ಚೆಯನ್ನು ನಡೆಸಿದ್ದಾರೆ.

English summary
The restaurants and food delivery sector has demanded that goods and services tax (GST) on home delivery of food be reduced to 5% from 18% now to boost the $3 billion segment, industry officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X