ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ನೋಟು ಮುದ್ರಣದ ಆಲೋಚನೆ ಇಲ್ಲ: ನಿರ್ಮಲಾ ಸೀತಾರಾಮನ್

|
Google Oneindia Kannada News

ನವದೆಹಲಿ, ಜುಲೈ 26: ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ನೋಟು ಮುದ್ರಣದ ಆಲೋಚನೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಭಾರತದ ರಿಯಲ್ ಜಿಡಿಪಿ 2020-21ರ ಅವಧಿಯಲ್ಲಿ ಶೇ.7.3 ರಷ್ಟು ಕುಸಿತ ಕಂಡಿರುವ ಅಂದಾಜಿದೆ ಎಂದು ಲೋಕಸಭೆಗೆ ವಿತ್ತ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಈ ಕುಸಿತ ಸಾಂಕ್ರಾಮಿಕದ ಪರಿಣಾಮ ಹಾಗೂ ಸಾಂಕ್ರಾಮಿಕವನ್ನು ತಡೆಗಟ್ಟುವುದಕ್ಕೆ ಕೈಗೊಂಡ ಕ್ರಮಗಳನ್ನು ಸೂಚಿಸುತ್ತವೆ ಎಂದೂ ಸಚಿವರು ಹೇಳಿದ್ದಾರೆ.

"ಆದರೆ ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಬಲಿಷ್ಠವಾಗಿದೆ. ಆತ್ಮ ನಿರ್ಭರ ಭಾರತ ಮಿಷನ್ 2020-21 ರ ಉತ್ತರಾರ್ಧದಲ್ಲಿ ಆರ್ಥಿಕತೆಯನ್ನು ಚೇತರಿಕೆಯ ಹಾದಿಯಲ್ಲಿಟ್ಟಿದೆ." ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

FM Sitharaman Says No Plan To Print Currency Notes To Tide Over Crisis

ನೋಟು ಮುದ್ರಣದ ಕುರಿತ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಉತ್ತರಿಸುತ್ತಿದ್ದರು. ಕೋವಿಡ್-19 ನಿಂದ ಉಂಟಾಗಿರುವ ಉದ್ಯೋಗ ನಷ್ಟವನ್ನು ತಪ್ಪಿಸಲು ಹಾಗೂ ಆರ್ಥಿಕತೆಗೆ ಚೇತರಿಕೆ ನೀಡಲು ನೋಟುಗಳ ಮುದ್ರಣದ ಆಯ್ಕೆಯನ್ನು ಪರಿಗಣಿಸುವಂತೆ ಹಲವು ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ಸಲಹೆ ನೀಡಿದ್ದರು.

ಅರ್ಥ ವ್ಯವಸ್ಥೆಯ ಮೂಲ ಅಂಶಗಳು ಗಟ್ಟಿಯಾಗಿದೆ. ಲಾಕ್‌ಡೌನ್‌ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸಿದ್ದು ಮತ್ತು ಆತ್ಮನಿರ್ಭರ ಭಾರತ ಯೋಜನೆಯ ಮೂಲಕ ನೀಡಿದ ತ್ವರಿತ ಸಹಾಯದ ಕಾರಣದಿಂದಾಗಿ ಅರ್ಥ ವ್ಯವಸ್ಥೆಯು 2020-21ರ ದ್ವಿತೀಯಾರ್ಧದಲ್ಲಿ ಚೇತರಿಕೆಯ ಹಾದಿಗೆ ಮರಳಿದೆ ಎಂದು ಹೇಳಿದ್ದಾರೆ.

ಸಾಂಕ್ರಾಮಿಕದ ಪರಿಣಾಮವನ್ನು ತಡೆಗಟ್ಟಲು, 2020-21 ರ ಅವಧಿಯಲ್ಲಿ ಆರ್ಥಿಕ ಬೆಳವಣಿಗೆಗೆ ಪುನರುಜ್ಜೀವನ ನೀಡುವುದಕ್ಕಾಗಿ ಹಾಗೂ ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಸರ್ಕಾರ 29.87 ಲಕ್ಷ ಕೋಟಿಯ ಸಮಗ್ರ ಪ್ಯಾಕೇಜ್ ಘೋಷಿಸಿತ್ತು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

English summary
The government has no plan to print currency notes to tide over the current economic crisis triggered by the outbreak of COVID-19 pandemic, Finance Minister Nirmala Sitharaman informed Parliament on Monday. To a question on whether there is any plan to print currency to tide over the crisis, the Finance Minister said, “No Sir”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X