ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LIVE: ಆರ್ಥಿಕ ಸಂಕಷ್ಟಕ್ಕೆ ಸಚಿವೆ ನಿರ್ಮಲಾ ನೀಡಿದ ಪರಿಹಾರ ಸೂತ್ರಗಳು

|
Google Oneindia Kannada News

ನವದೆಹಲಿ, ಅ. 12: ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈತರಿಗೆ, ಕಾರ್ಮಿಕರಿಗೆ, ಸಣ್ಣ ಉದ್ಯಮಿಗಳಿಗೆ, ಕೈಗಾರಿಕೆಗಳಿಗೆ, ಬೀದಿಬದಿ ವ್ಯಾಪಾರಿಗಳು, ಅಸಂಘಟಿತ ವಲಯಕ್ಕೆ, ಮಹಿಳೆಯರಿಗೆ ಸೇರಿದಂತೆ ಐದು ಕಂತಿನಲ್ಲಿ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದರು. ಇಂದು ಆರ್ಥಿಕ ಪುನಶ್ಚೇತನಕ್ಕಾಗಿ ಬೇಡಿಕೆಗೆ ತಕ್ಕ ಪೂರೈಕೆ ಒದಗಿಸಲು ಬೇಕಾದ ಕ್ರಮಗಳ ಬಗ್ಗೆ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.

ಈ ಸುದ್ದಿಗೋಷ್ಠಿ ಬಳಿಕ ಇಂದು ಜಿಎಸ್‌ಟಿ ಮಂಡಳಿಯ 43ನೇ ಸಭೆಯಲ್ಲಿ ಪಾಲ್ಗೊಳ್ಳಲಿರುವ ನಿರ್ಮಲಾ ಅವರು ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.


ಸುದ್ದಿಗೋಷ್ಠಿ ವಿವರ:
* ಗರೀಬ್ ಕಲ್ಯಾಣ್ ಯೋಜನೆ, ಆತ್ಮ ನಿರ್ಭರ್ ಯೋಜನೆ ಮೂಲಕ ಆರ್ಥಿಕ ಪುನಶ್ಚೇತನಕ್ಕೆ ಮುಂದಾಗಲಾಗಿದೆ.
* ಬಡ ಹಾಗೂ ಹಿಂದುಳಿದ ವರ್ಗಗಳ ನೋವಿಗೆ ಸ್ಪಂದಿಸಲಾಗಿದೆ.
* ಆದರೆ ಪೂರೈಕೆ ಸಮರ್ಪಕವಾಗಿದ್ದರೂ, ಗ್ರಾಹಕರ ಬೇಡಿಕೆ ಹೆಚ್ಚಾಗಿ ಅಸಮತೋಲನ ಉಂಟಾಗಿದೆ.

ಗ್ರಾಹಕರ ಹಿತದೃಷ್ಟಿ, ಜಿಡಿಪಿ ಹೆಚ್ಚಳ ಮಾಡಲು ಯೋಜನೆ ಜಾರಿಗೆ
* ಎಲ್ ಟಿಸಿ ನಗದು ವೋಚರ್ ಯೋಜನೆ
* ವಿಶೇಷ ಹಬ್ಬ ಮುಂಗಡ ಯೋಜನೆ

**
ಎಲ್ ಟಿಸಿ ನಗದು ವೋಚರ್ ಯೋಜನೆ
* ಸಂಘಟಿತ ವಲಯದ ಸರ್ಕಾರಿ ಸಿಬ್ಬಂದಿಗಳ ಸಂಬಳದಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗಿದ್ದು, ಉಳಿತಾಯ ಹೆಚ್ಚಳವಾಗಿದೆ.
* ಉಳಿತಾಯವಾದ ಹಣವನ್ನು ಎಲ್ ಟಿಸಿ ಬಳಸಿ ಪ್ರಯಾಣಕ್ಕೆ ಬಳಸಬಹುದು ಹಾಗೂ ಎಲ್ ಟಿಸಿ ನಗದು ವೋಚರ್ ಯೋಜನೆ ಮೂಲಕ ಮೂರು ಸೌಲಭ್ಯಗಳನ್ನು ಬಳಸಬಹುದು.
* ಪ್ರಯಾಣದ ದರ ತೆರಿಗೆ ರಹಿತವಾಗಿರುತ್ತದೆ
* ವಿಮಾನ ಅಥವಾ ರೈಲು ಪ್ರಯಾಣ ದರ ದಿನದ ಲೆಕ್ಕದಲ್ಲಿ ಮರು ಪಾವತಿ ಹಾಗೂ 10 ದಿನಗಳ ಪೇಯ್ಡ್ ಲೀವ್ ಸಿಗಲಿದೆ.

ಸೌಲಭ್ಯ ಪಡೆಯುವುದು ಹೇಗೆ?
* 3 ಪಟ್ಟು ಹೆಚ್ಚು ದರದ ಉತ್ಪನ್ನ ಹಾಗೂ ಸೇವೆ ಬಳಸಬೇಕು, ಒಂದು ಬಾರಿ ರಜೆ ಎನ್ ಕ್ಯಾಶ್ ಮೆಂಟ್ ಲಭ್ಯ
* ಡಿಜಿಟಲ್ ಪೇಮೆಂಟ್, ಜಿಎಸ್ಟಿ ರಸೀತಿ ಪಡೆದುಕೊಳ್ಳಬೇಕು
* ಮಾರ್ಚ್ 31, 2021ರೊಳಗೆ ಈ ಸೌಲಭ್ಯ ಬಳಸಿ ಖರ್ಚು ಮಾಡಬೇಕು.

ಆರ್ಥಿಕ ಪುನಶ್ಚೇತನ ಹೇಗೆ?
* ಸುಮಾರು 5,675 ಕೋಟಿ ರು ಖರ್ಚಾಗಲಿದೆ. ಸೌಲಭ್ಯಗಳ ಖರ್ಚು 1900 ಕೋಟಿ ರು ಆಗಲಿದೆ.
* LTC ರಾಜ್ಯ ಹಾಗೂ ಖಾಸಗಿ ವಲಯಕ್ಕೂ ಲಭ್ಯವಾಗಲಿದ್ದು, ಆಯ್ಕೆ ಆಯಾ ರಾಜ್ಯಕ್ಕೆ ಬಿಟ್ಟಿದ್ದು
* ಬೇಡಿಕೆ ಆರ್ಥಿಕ ಸಂಗ್ರಹ 19,00 ಕೋಟಿ ರು ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಸುಮಾರು 9,000 ಕೋಟಿ ರು ಸಿಗಲಿದೆ.
* ಹೆಚ್ಚುವರಿ ಗ್ರಾಹಕರ ಬೇಡಿಕೆ ಉತ್ಪತ್ತಿ 28,000 ಕೋಟಿ ರು ಸಂಗ್ರಹ ನಿರೀಕ್ಷೆಯಿದೆ.

ವಿಶೇಷ ಹಬ್ಬದ ಆಫರ್ ಯೋಜನೆ
ಹಬ್ಬದ ಮುಂಗಡ 7ನೇ ವೇತನ ಆಯೋಗದ ಅನ್ವಯ ಸರ್ಕಾರಿ ನೌಕರರಿಗೆ ಮತ್ತೊಮ್ಮೆ ಲಭ್ಯ. ಒಂದು ಬಾರಿಗೆ 10, 000 ರು ತನಕ ಪಡೆಯಬಹುದು ಇದಕ್ಕೆ 10 ಗರಿಷ್ಠ ಪಾವತಿ ಅವಧಿ ನೀಡಲಾಗುತ್ತದೆ.
* ಹಣವನ್ನು ಪ್ರೀಪೇಯ್ಡ್ ರುಪೇ ಕಾರ್ಡ್ ರೂಪದಲ್ಲಿ ಮಾತ್ರ ನೀಡಲಾಗುತ್ತದೆ.
* ಇದರಿಂದ ಸುಮಾರು 4,000 ಕೋಟಿ ರು ಬೊಕ್ಕಸಕ್ಕೆ ಸಂಗ್ರಹವಾಗುವ ನಿರೀಕ್ಷೆಯಿದೆ.
* ಇದೇ ಮಾದರಿಯನ್ನು ರಾಜ್ಯ ಸರ್ಕಾರಗಳು ಬಳಸಿಕೊಂಡು 8,000 ಕೋಟಿ ರು ವಿತರಣೆ ಸಾಧ್ಯವಿದೆ.
* ಈ ಕಾರ್ಡ್ ನಿಂದ ನಗದು ವಿಥ್ ಡ್ರಾ ಸಾಧ್ಯವಿಲ್ಲ. ಆದರೆ, ಖರೀದಿಗೆ ಮಾತ್ರ ಬಳಸಬಹುದು. ಇದಕ್ಕಾಗಿ ಯಾವುದೆ ಬಡ್ಡಿ ಇರುವುದಿಲ್ಲ, ಬ್ಯಾಂಕ್ ವ್ಯವಹಾರ ಶುಲ್ಕವಿರುವುದಿಲ್ಲ.

ಕ್ಯಾಪಿಟಲ್ ವೆಚ್ಚ
ಇದರಿಂದ ಜಿಡಿಪಿ ಹೆಚ್ಚಳಕ್ಕೆ ಸಹಕಾರಿ
* ರಾಜ್ಯಗಳಿಗೆ ವಿಶೇಷ ಆರ್ಥಿಕ ಪುನಶ್ಚೇತನ ಸಾಲ ಪ್ಯಾಕೇಜ್ ಘೋಷಣೆ
* ವಿಶೇಷ ಬಡ್ಡಿರಹಿತ 50 ವರ್ಷಗಳ ಅವಧಿಯ ಸಾಲವನ್ನು ರಾಜ್ಯಗಳಿಗೆ ನೀಡಲಾಗುತ್ತದೆ. ಇದರ ಮೊತ್ತ ಸುಮಾರು 12, 000 ಕೋಟಿ ರು.
* 2,5000 ಕೋಟಿ ರು ಗಳಲ್ಲಿ ಈಶಾನ್ಯ ರಾಜ್ಯ(1600 ಕೋಟಿ ರು), ಉತ್ತರಾಖಂಡ್ ಹಾಗೂ ಹಿಮಾಚಲ (900 ಕೋಟಿ ರು)
* 7,500 ಕೋಟಿ ರು ಎಲ್ಲಾ ರಾಜ್ಯಗಳಿಗೆ ನೀಡಲಾಗುತ್ತದೆ.
* 2000 ಕೋಟಿ ರು ಗಳನ್ನು ಆತ್ಮ ನಿರ್ಭರ್ ವಿತ್ತೀಯ ಕೊರತೆ ಪ್ಯಾಕೇಜ್ ನ ಸುಧಾರಣೆಯಲ್ಲಿ ನಾಲ್ಕರಲ್ಲಿ 3 ಅಂಶ ಜಾರಿಗೊಳಿಸಿದ ರಾಜ್ಯಗಳಿಗೆ ಬಡ್ಡಿದರ ಸಾಲ ಘೋಷಣೆ
* ಎಲ್ಲವೂ 2021 ಮಾರ್ಚ್ 31ರೊಳಗೆ ಖರ್ಚು ಮಾಡಬೇಕಾಗುತ್ತದೆ.

''ನಿಜವಾದ ಜಿಡಿಪಿ ಬೆಳವಣಿಗೆ ಋಣಾತ್ಮಕ(9.5% ಕುಸಿತ)ವಾಗಿರುತ್ತದೆ. ಹೇಗಾದರೂ, ಕೊರೊನಾದಲ್ಲಿ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಯಾವುದೇ ಸಕಾರಾತ್ಮಕ ಸುದ್ದಿ ಪರಿಸ್ಥಿತಿಯನ್ನು ಬದಲಾಯಿಸುತ್ತದೆ. ಎಲ್ಲಾ ಕಾರ್ಖಾನೆಗಳನ್ನು ಗಮನದಲ್ಲಿಟ್ಟುಕೊಂಡು ವರ್ಷದ ಮೊದಲಾರ್ಧದಲ್ಲಿ ಜಿಡಿಪಿ ಬೆಳವಣಿಗೆ ಕುಸಿಯುವ ನಿರೀಕ್ಷೆಯಿದೆ. ಉತ್ತಮ ಮಾನ್ಸೂನ್ ಮತ್ತು ಖಾರಿಫ್ ಬಿತ್ತನೆ ಪ್ರದೇಶದಲ್ಲಿನ ಹೆಚ್ಚಳದೊಂದಿಗೆ ಕೃಷಿ ಕ್ಷೇತ್ರದ ಭವಿಷ್ಯವು ಸುಧಾರಿಸಿದೆ. ಸರಕುಗಳ ರಫ್ತು ಕಡಿಮೆಯಾಗಿದೆ, ಅಲ್ಲದೆ ಅದರ ಕುಸಿತದ ವೇಗ ಕಡಿಮೆಯಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

One class, one channel ಆನ್ಲೈನ್ ಶಿಕ್ಷಣಕ್ಕೆ ಒತ್ತು!One class, one channel ಆನ್ಲೈನ್ ಶಿಕ್ಷಣಕ್ಕೆ ಒತ್ತು!

FM Nirmala Sitharaman Press Conference on Economic Issues Highlights in Kannada

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ವ್ಯವಹಾರಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಪರಿಹರಿಸುವ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬ್ಯಾಂಕುಗಳಿಗೆ ಕರೆ ನೀಡಿದ್ದಾರೆ.

ನಿರ್ಮಲಾ 5ನೇ ಕಂತು: ಏಳು ವಲಯಗಳಿಗೆ ಹಲವು ಯೋಜನೆ ಘೋಷಣೆನಿರ್ಮಲಾ 5ನೇ ಕಂತು: ಏಳು ವಲಯಗಳಿಗೆ ಹಲವು ಯೋಜನೆ ಘೋಷಣೆ

ಮೇ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿ 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ ಪ್ಯಾಕೇಜ್‌ ಮೂಲಕ ದೇಶದ ಆರ್ಥಿಕತೆ ಪುನಶ್ಚೇತನಗೊಳ್ಳಲಿದೆ ಎಂದು ಮೋದಿ ಹೇಳಿದ್ದಾರೆ. ಮೋದಿ ಅವರ ಸಲಹೆಯಂತೆ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ 20.97 ಲಕ್ಷ ಕೋಟಿಯ ಯೋಜನೆಗಳನ್ನು ಘೋಷಣೆ ಮಾಡಿದ್ದರು.

FM Nirmala Sitharaman Press Conference on Economic Issues Highlights in Kannada

ಮಾರ್ಚ್ 1 ರಿಂದ ಮೇ 15 ರವರೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ಸುಮಾರು 5.5 ಮಿಲಿಯನ್ ಖಾತೆಗಳಿಗೆ 6.45 ಲಕ್ಷ ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿತ್ತು.

English summary
Check out the Finance MInister Nirmala Sitharaman Press Conference on Economic Issues Highlights in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X