ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಫ್ ಕಾರ್ಟ್ ಟಿಬಿಡಿಟಿಯಲ್ಲಿ ಪ್ರತಿ ಸೆಕೆಂಡಿಗೆ 34 ಎಲೆಕ್ಟ್ರಾನಿಕ್ ಉತ್ಪನ್ನ ಮಾರಾಟ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 07: ಭಾರತದಲ್ಲಿ ಮುಂಚೂಣಿಯಲ್ಲಿರುವ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ಈ ವರ್ಷದ ದಿ ಬಿಗ್ ಬಿಲಿಯನ್ ಡೇಸ್(ಟಿಬಿಬಿಡಿ)ನಲ್ಲಿ ಅತ್ಯಧಿಕ ದಾಖಲೆ ಪ್ರಮಾಣದ ವಹಿವಾಟು ನಡೆಸಿದೆ. 200 ದಶಲಕ್ಷ ಗ್ರಾಹಕರನ್ನು ಆಕರ್ಷಣೆ ಮಾಡುವ ಉದ್ದೇಶದೊಂದಿಗೆ ನಡೆದ ಈ ಟಿಬಿಬಿಡಿಗೆ ದೇಶದ ಮೂಲೆ ಮೂಲೆಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. 6 ದಿನಗಳಲ್ಲಿ ಟಿಬಿಬಿಡಿಗೆ 70 ಬಿಲಿಯನ್ ವೀಕ್ಷಕರನ್ನು ಪಡೆದುಕೊಂಡಿದೆ. ಪ್ರತಿ ಸೆಕೆಂಡಿಗೆ ಸುಮಾರು 34 ಎಲೆಕ್ಟ್ರಾನಿಕ್ ಉತ್ಪನ್ನ ಮಾರಾಟವಾಗಿದೆ ಎಂದು ಸಂಸ್ಥೆ ಪ್ರಕಟಿಸಿದೆ.

ಫ್ಲಿಪ್ ಕಾರ್ಟ್ ಗ್ರೂಪ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ ಅವರು ಈ ಟಿಬಿಬಿಡಿ ಬಗ್ಗೆ ಪ್ರತಿಕ್ರಿಯೆ ನೀಡಿ,"ಹಬ್ಬದ ಸೀಸನ್ ನ ಅತ್ಯದ್ಭುತ ಆರಂಭ ಇದಾಗಿದೆ. ನಾವು ಇಂಡಿಯಾ ಮತ್ತು ಭಾರತ್ ನಡುವಿನ ಅಂತರದ ನಡುವೆ ಸೇತುವೆಯನ್ನು ನಿರ್ಮಾಣ ಮಾಡುವ ಉದ್ದೇಶವಿಟ್ಟುಕೊಂಡು ಈ ಟಿಬಿಬಿಡಿಯನ್ನು ಆರಂಭಿಸಿದ್ದೆವು. ಈ ಉಪಕ್ರಮದ ಮೂಲಕ ಭಾರತ್ ಇಂಡಿಯಾದ ಸನಿಹದಲ್ಲಿ ಬಂದಿದೆ ಎಂಬುದನ್ನು ಸಾಬೀತುಪಡಿಸಿದ್ದೇವೆ. ಈ ಹಿಂದಿಗಿಂತಲೂ ಅಥವಾ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಗ್ರಾಹಕರು ಗೇಮಿಂಗ್ ಸೇರಿದಂತೆ ಅತ್ಯುತ್ತಮ ಬ್ರ್ಯಾಂಡ್ ಗಳ ಮೇಲಿನ ಪ್ರೀತಿಯನ್ನು ಈ ಬಾರಿ ತೋರಿಸಿದ್ದಾರೆ.

ಫ್ಲಿಪ್‍ಕಾರ್ಟ್‍ನಿಂದ ಹಬ್ಬದ ಸೀಸನ್‍ನಲ್ಲಿ 50 ಸಾವಿರ ನೇರ ಉದ್ಯೋಗಫ್ಲಿಪ್‍ಕಾರ್ಟ್‍ನಿಂದ ಹಬ್ಬದ ಸೀಸನ್‍ನಲ್ಲಿ 50 ಸಾವಿರ ನೇರ ಉದ್ಯೋಗ

ಈ ಹಬ್ಬದ ಸೀಸನ್ ನಲ್ಲಿ ನಾವು ಕೆಲವು ಟಾಪ್ ವಿಭಾಗಗಳನ್ನೂ ಇ-ಕಾಮರ್ಸ್ ವೇದಿಕೆಯಡಿ ತರುವ ಮೂಲಕ ಗ್ರಾಹಕರಿಗೆ ಅವುಗಳ ಉತ್ಪನ್ನಗಳನ್ನು ತಲುಪಿಸುವ ಪ್ರಯತ್ನ ಮಾಡಿ ಅದರಲ್ಲಿ ಸಫಲರಾಗಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ" ಎಂದರು.

ಮಾರ್ಕೆಟ್‍ಪ್ಲೇಸ್

ಮಾರ್ಕೆಟ್‍ಪ್ಲೇಸ್

ಇದಲ್ಲದೇ, 2 ನೇ ಹಂತದ ನಗರಗಳಲ್ಲಿಯೂ ಅಲ್ಲಿನ ಗ್ರಾಹಕರನ್ನು ತಲುಪುವ ಮೂಲಕ ಅತ್ಯುತ್ತಮವಾದ ಪ್ರತಿಕ್ರಿಯೆಗಳನ್ನು ಗಳಿಸಿದ್ದೇವೆ. ಕುಶಲಕರ್ಮಿಗಳು, ನೇಕಾರರು ಮತ್ತು ಗ್ರಾಹಕರಿಂದ ಮಾರಾಟಗಾರ ಪಾಲುದಾರರವರೆಗೆ ಇಡೀ ಪ್ರಕ್ರಿಯೆಯಲ್ಲಿ ಪರಿಸರಸ್ನೇಹಿ ಮತ್ತು ಗ್ರಾಹಕಸ್ನೇಹಿ ವ್ಯವಸ್ಥೆಯನ್ನು ತಂದಿದ್ದೇವೆ. ಈ ಮೂಲಕ ಇವರೆಲ್ಲದರೂ ಹಬ್ಬದ ಸಡಗರವನ್ನು ಹೆಚ್ಚು ಮಾಡಿಕೊಳ್ಳುವಂತೆ ಮಾಡಿದ್ದೇವೆ ಎಂದು ಸಂಸ್ಥೆ ಹೇಳಿದೆ.

* ಶೇ.50 ರಷ್ಟು ಟಾಪ್ ಮಾರಾಟಗಾರರು ಫ್ಲಿಪ್‍ಕಾರ್ಟ್‍ನಲ್ಲಿ 3 ಪಟ್ಟು ಪ್ರಗತಿ ಸಾಧಿಸಿದ್ದಾರೆ.
* ನಗರಗಳಲ್ಲಿನ ಹೊಸ ಮಾರಾಟಗಾರರಲ್ಲಿ ಶೇ.50 ರಷ್ಟು ಹೆಚ್ಚಳ.
* ಟಿಬಿಬಿಡಿಯಲ್ಲಿ ಮಾರಾಟ ಮಾಡಿದ ಮಾರಾಟಗಾರರ ಪೈಕಿ 2 ನೇ ಹಂತದ ನಗರಗಳು ಮತ್ತು ಪಟ್ಟಣಗಳಲ್ಲಿ ಶೇ.40 ರಷ್ಟು ಮಂದಿ ಇದ್ದಾರೆ.
* 2018 ರ ಟಿಬಿಬಿಡಿಗೆ ಹೋಲಿಸಿದರೆ 2019 ರಲ್ಲಿ ಮಾರಾಟಗಾರರ ಸಂಖ್ಯೆಯಲ್ಲಿ ಶೇ.50 ರಷ್ಟು ಹೆಚ್ಚಳ
* ಇ-ಕಾಮರ್ಸ್ ಮಾರಾಟಗಾರರಲ್ಲಿ ಫ್ಲಿಪ್‍ಕಾರ್ಟ್‍ನ ವಾಲೆಟ್ ಶೇರ್‍ನಲ್ಲಿನ ಮಾರಾಟಗಾರರಲ್ಲಿ ಶೇ.70 ರಷ್ಟು ಹೆಚ್ಚಳ ಮತ್ತು ಫ್ಯಾಶನ್ & ಹೋಂ ವಾಲೆಟ್ ವಿಭಾಗದಲ್ಲಿ ಶೇ.80 ರಷ್ಟು ಹೆಚ್ಚಳ.
* 2019 ರ ಟಿಬಿಬಿಡಿಯ ವೇಳೆ ಬಿಎಯುನಿಂದ ಫ್ಲಿಪ್‍ಕಾರ್ಟ್ ಸಮರ್ಥ್ ಮೂಲಕ ಕುಶಲಕರ್ಮಿಗಳು ನೂರಕ್ಕೆ ನೂರರಷ್ಟು ವ್ಯಾಪಾರವನ್ನು ಹೆಚ್ಚಿಸಿಕೊಂಡಿದ್ದಾರೆ.

ಫ್ಯಾಶನ್ ವಿಭಾಗದ ಮಾರಾಟ

ಫ್ಯಾಶನ್ ವಿಭಾಗದ ಮಾರಾಟ

* 2018 ರ ಟಿಬಿಬಿಡಿಗೆ ಹೋಲಿಸಿದರೆ ಈ ವರ್ಷದ ಟಿಬಿಬಿಡಿಯಲ್ಲಿ ಫ್ಯಾಶನ್ ಮಾರಾಟ ವಿಭಾಗದಲ್ಲಿ ಶೇ.70 ರಷ್ಟು ಹೆಚ್ಚಳ.
* ಫ್ಯಾಶನ್ ವಿಭಾಗದ ಮೂಲಕ ಈ ವರ್ಷದ ಟಿಬಿಬಿಡಿಯಲ್ಲಿ ಶೇ.40 ರಷ್ಟು ಹೆಚ್ಚು ಗ್ರಾಹಕರ ಸೇರ್ಪಡೆ.
* ಫ್ಯಾಶನ್ ವಿಭಾಗದಲ್ಲಿ ಮಹಿಳಾ ಗ್ರಾಹಕರಿಂದ ಶೇ.45 ರಷ್ಟು ಖರೀದಿ.
ಒಟ್ಟಾರೆ ಯೂನಿಟ್‍ಗಳಲ್ಲಿ ಶೇ.55 ರಷ್ಟು ಪಾಲು 2 ನೇ ಹಂತದ ನಗರಗಳ ಗ್ರಾಹಕರದ್ದಾಗಿದೆ.
* 2018 ರ ಟಿಬಿಬಿಡಿಗೆ ಹೋಲಿಸಿದರೆ ಈ ವರ್ಷ ಗ್ರಾಹಕರ ಸಂಖ್ಯೆಯಲ್ಲಿ ಶೇ.70 ರಷ್ಟು ಹೆಚ್ಚಳ.
* 2019 ರ ಟಿಬಿಬಿಡಿಯಲ್ಲಿ ಪ್ರತಿ ಸೆಕೆಂಡಿಗೆ 15 ಜವಳಿ, 7 ಶೂ ಮತ್ತು 5 ಅಕ್ಸೆಸರಿಗಳ ಮಾರಾಟ.
* ಈ ಟಿಬಿಬಿಡಿಯಲ್ಲಿ 20 ಫ್ಯಾಶನ್ ಬ್ರ್ಯಾಂಡ್‍ಗಳು ತಲಾ 1 ಲಕ್ಷಕ್ಕೂ ಅಧಿಕ ಯೂನಿಟ್‍ಗಳ ಮಾರಾಟ ಮಾಡಿವೆ.

ಮೊಬೈಲ್ ವಿಭಾಗ

ಮೊಬೈಲ್ ವಿಭಾಗ

ಮೊಬೈಲ್ ವಿಭಾಗದಲ್ಲಿ ಇದು ಅತಿದೊಡ್ಡ ಸೀಸನ್ ಎನಿಸಿದೆ. 2018 ರ ಟಿಬಿಬಿಡಿಗೆ ಹೋಲಿಸಿದರೆ ಈ ಬಾರಿ 2 ಪಟ್ಟು ಹೆಚ್ಚಳ ಸಾಧಿಸಲಾಗಿದೆ. ಈ ಬಾರಿ 20 ಕ್ಕೂ ಹೆಚ್ಚು ಮಾಡೆಲ್‍ಗಳ 100ಕೆ ಮೊಬೈಲ್‍ಗಳು ಮಾರಾಟವಾಗಿವೆ. ಇಷ್ಟೊಂದು ಪ್ರಮಾಣದಲ್ಲಿ ಮಾರಾಟ ಕಂಡಿರುವುದು ಇದೇ ಮೊದಲು.
ಮೊಬೈಲ್ ಎಕ್ಸ್‍ಚೇಂಜ್‍ನಲ್ಲಿ 2.5 ಪಟ್ಟು ಹೆಚ್ಚಳ ಕಂಡುಬಂದಿದೆ.

ದೊಡ್ಡ ಅಪ್ಲೈಯನ್ಸ್‍ಗಳು
ಟಿಬಿಬಿಡಿ ಆರಂಭವಾದ ಮೊದಲ ಒಂದು ಗಂಟೆಯಲ್ಲಿ ಪ್ರತಿ ಸೆಕೆಂಡಿಗೆ 10 ಟಿವಿಗಳು ಮಾರಾಟವಾಗಿವೆ.
ಪ್ರತಿ 10 ಗ್ರಾಹಕರಲ್ಲಿ 7 ಮಂದಿ ಟಿವಿಗಳನ್ನು ಪ್ರೀಪೇಯ್ಡ್ ಪಾವತಿ ಆಧಾರದಲ್ಲಿ ಖರೀದಿ ಮಾಡಿದ್ದಾರೆ.
ಪ್ರತಿ 10 ಪಿನ್‍ಕೋಡ್‍ಗಳ ಪೈಕಿ 1 ಹೊಸ ಪಿನ್‍ಕೋಡ್ ಸೇರ್ಪಡೆಯಾಗಿದೆ. ಅಂದರೆ, ಅರುಣಾಚಲ ಪ್ರದೇಶದ ತೇಜುನಂತಹ ಚಿಕ್ಕ ಹಳ್ಳಿಯಿಂದಲೂ ಖರೀದಿ ಪ್ರಕ್ರಿಯೆ ನಡೆದಿದೆ. ಈ ಗ್ರಾಮ ಮಿಯನ್ಮಾರ್ ಚೀನಾದ ಗಡಿಯಿಂದ 100 ಕಿಲೋಮೀಟರ್ ದೂರದಲ್ಲಿದೆ.
ದೊಡ್ಡ ದೊಡ್ಡ ಅಪ್ಲೈಯನ್ಸ್‍ಗಳಿಗೆ 2 ಮತ್ತು 3 ನೇ ಹಂತದ ನಗರಗಳಿಂದ ಭಾರೀ ಬೇಡಿಕೆ ಬಂದಿದ್ದು, ಒಟ್ಟು ಬೇಡಿಕೆಗಳ ಪೈಕಿ ಶೇ.50 ರಷ್ಟು ಬೇಡಿಕೆ ಬಂದಿರುವುದು ಈ ನಗರಗಳಿಂದ. ನೆಲ್ಲೂರು, ಮುಜಾಫರ್‍ಪುರ, ಸೇಲಂ, ಡೆಹ್ರಾಡೂನ್, ಮೈಸೂರು ಸೇರಿದಂತೆ ಇನ್ನೂ ಅನೇಕ ನಗರಗಳಿಂದ ಈ ಅಪ್ಲೈಯನ್ಸ್‍ಗೆ ಬೇಡಿಕೆ ಬಂದಿರುವುದು ಗಮನಾರ್ಹ ಬೆಳವಣಿಗೆ.

ಸುಲಭ ದರ

ಸುಲಭ ದರ

ಇಎಂಐಗಳು, ಫ್ಲಿಪ್‍ಕಾರ್ಟ್ ಪೇ ಲೇಟರ್ ಮತ್ತು ಕಾರ್ಡ್‍ಲೆಸ್ ಕ್ರೆಡಿಟ್‍ನಂತಹ ಸೌಲಭ್ಯಗಳಿಂದಾಗಿ ಕೈಗೆಟುಕುವ ದರದಲ್ಲಿ ಉತ್ಪನ್ನಗಳು ಲಭ್ಯವಾದ ಕಾರಣ ಮಾರಾಟದಲ್ಲಿ ಶೇ.70 ರಷ್ಟು ಹೆಚ್ಚಳ ಸಾಧಿಸಲಾಗಿದೆ.
ಪ್ರತಿ 5 ರಲ್ಲಿ 3 ಜನರು ಫ್ಲಿಪ್‍ಕಾರ್ಟ್ ಕ್ರೆಡಿಟ್ ಸಾಧನಗಳೊಂದಿಗೆ ಖರೀದಿ ಮಾಡಿದ್ದಾರೆ.

ಇಎಂಐನಂತಹ ಸೌಲಭ್ಯವನ್ನು ಬಳಸಿಕೊಂಡು ಪ್ರತಿ ಮೂವರಲ್ಲಿ ಒಬ್ಬರು ದೊಡ್ಡ ಅಪ್ಲೈಯನ್ಸ್‍ಗಳನ್ನು ಖರೀದಿಸಿದ್ದಾರೆ.

ಇದಲ್ಲದೇ, ಫರ್ನಿಚರ್, ಅಪ್ಲೈಯನ್ಸ್ ಮತ್ತು ಹೋಂ ಫರ್ನಿಶಿಂಗ್‍ಗಳಿಗೆ ಅಗತ್ಯವಾದ ಉತ್ಪನ್ನಗಳ ಖರೀದಿಯಲ್ಲಿ ಸಾಕಷ್ಟು ಹೆಚ್ಚಳ ಕಂಡುಬಂದಿದೆ. ಸುಮಾರು 2.5 ಲಕ್ಷ ಗ್ರಾಹಕರು ಈ ಉತ್ಪನ್ನಗಳನ್ನು ಖರೀದಿಸಿದ್ದಾರೆ.

ಹೀಗೆ ಖಾಸಗಿ ಬ್ರ್ಯಾಂಡ್‍ಗಳ ಉತ್ಪನ್ನಗಳನ್ನು ಖರೀದಿ ಮಾಡಿದ ಗ್ರಾಹಕರ ಪೈಕಿ ಮೂರನೇ ಒಂದು ಭಾಗ ಮಹಿಳಾ ಗ್ರಾಹಕರು ಇದ್ದದ್ದು ಗಮನಾರ್ಹವಾಗಿದೆ. 16,000 ಕ್ಕೂ ಅಧಿಕ ಸ್ಥಳಗಳ ಗ್ರಾಹಕರು ಭಾರತದ ಅತಿದೊಡ್ಡ ಫರ್ನಿಚರ್ ಬ್ರ್ಯಾಂಡ್ ಆಗಿರುವ ಫ್ಲಿಪ್‍ಕಾರ್ಟ್‍ನಿಂದ ಫರ್ನಿಚರ್‍ಗಳನ್ನು ಖರೀದಿಸಿದ್ದಾರೆ.

ಇನ್ನು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಒಟ್ಟಾರೆ ಹೊಸ ಗ್ರಾಹಕರಲ್ಲಿ ಶೇ.50 ರಷ್ಟು ಹೆಚ್ಚಳ ಕಂಡುಬಂದಿದೆ. ಟಿಬಿಬಿಡಿ ಆರಂಭಿಕ ಹಂತದಲ್ಲಿಯೇ ಪ್ರತಿ ಸೆಕೆಂಡಿಗೆ 34 ಎಲೆಕ್ಟ್ರಾನಿಕ್ ಉತ್ಪನ್ನಗಳು ಮಾರಾಟವಾಗಿವೆ. ಲ್ಯಾಪ್‍ಟಾಪ್, ಹೆಡ್‍ಫೋನ್ಸ್, ಕ್ಯಾಮೆರಾಗಳು ಮತ್ತು ಟ್ಯಾಬ್ಲೆಟ್‍ಗಳು ಹೆಚ್ಚು ಮಾರಾಟ ಕಂಡಿವೆ.

English summary
Flipkart’s TBBD was spread over six days between September 29 to October 4, and it clocked 70 billion views,over 34 Electronics products sold per second said companies statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X