ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬದ ಋತುವಿನಲ್ಲಿ ಫ್ಲಿಪ್‌ಕಾರ್ಟ್‌ನಿಂದ 70,000 ಕ್ಕೂ ಅಧಿಕ ಉದ್ಯೋಗ ಸೃಷ್ಟಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್, ಮುಂಬರುವ ಹಬ್ಬದ ಋತು ಮತ್ತು ಬಿಗ್ ಬಿಲಿಯನ್ ಡೇಸ್ (ಬಿಬಿಡಿ) ಸಂದರ್ಭದಲ್ಲಿ ದೇಶಾದ್ಯಂತ 70,000 ಕ್ಕೂ ಅಧಿಕ ನೇರ ಮತ್ತು ಲಕ್ಷಾಂತರ ಪರೋಕ್ಷ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ.

ಫ್ಲಿಪ್ ಕಾರ್ಟ್ ನ ನೇರ ಉದ್ಯೋಗ ಅವಕಾಶಗಳು ಸಪ್ಲೈ ಚೇನ್, ವಿತರಣೆ ಪ್ರತಿನಿಧಿಗಳು, ಪಿಕ್ಕರ್ಸ್, ಪ್ಯಾಕರ್ಸ್ ಮತ್ತು ಸಾರ್ಟರ್ಸ್ ಸೇರಿದಂತೆ ಇನ್ನಿತರೆ ಹುದ್ದೆಗಳನ್ನು ಒಳಗೊಂಡಿರುತ್ತವೆ. ಇದಲ್ಲದೇ, ಫ್ಲಿಪ್ ಕಾರ್ಟ್ ನ ಮಾರಾಟ ಪಾಲುದಾರ ಸ್ಥಳಗಳಲ್ಲಿ ಮತ್ತು ಕಿರಾಣಗಳಲ್ಲಿ ಹೆಚ್ಚುವರಿಯಾಗಿ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರೊಂದಿಗೆ ವೆಂಡರ್ ಸ್ಥಳಗಳು ಮತ್ತು ಸರಕು ಪಾಲುದಾರರ ಉದ್ಯಮಗಳಲ್ಲಿಯೂ ಉದ್ಯೋಗ ಸೃಷ್ಟಿಯಾಗಲಿವೆ. ಈ ಮೂಲಕ ಇಡೀ ಪರಿಸರ ವ್ಯವಸ್ಥೆಯು ಹಬ್ಬದ ಸಂದರ್ಭಕ್ಕಾಗಿ ಸಜ್ಜಾಗಿದೆ.

 ಫ್ಲಿಪ್‌ಕಾರ್ಟ್‌ನ 50,000 ಕಿರಾಣ ಪಾಲುದಾರರು ಸಜ್ಜು: ಹಬ್ಬಕ್ಕೆ ಉತ್ಪನ್ನಗಳ ವಿತರಣೆ ಫ್ಲಿಪ್‌ಕಾರ್ಟ್‌ನ 50,000 ಕಿರಾಣ ಪಾಲುದಾರರು ಸಜ್ಜು: ಹಬ್ಬಕ್ಕೆ ಉತ್ಪನ್ನಗಳ ವಿತರಣೆ

ಆನ್‌ಲೈನ್‌ ಶಾಪಿಂಗ್‌ಗೆ ಹೆಚ್ಚಿನ ಬೇಡಿಕೆ

ಆನ್‌ಲೈನ್‌ ಶಾಪಿಂಗ್‌ಗೆ ಹೆಚ್ಚಿನ ಬೇಡಿಕೆ

ಹೌದು ಕೊರೊನಾವೈರಸ್ ನಮ್ಮ ದೈನಂದಿನ ಜೀವನದಲ್ಲಿ ಬೆರೆತು ಹೋದ ಬಳಿಕ ಆನ್‌ಲೈನ್ ಶಾಪಿಂಗ್‌ ಬೇಡಿಕೆ ದ್ವಿಗುಣಗೊಂಡಿದೆ. ಹೀಗಾಗಿ ಇ-ಕಾಮರ್ಸ್ ಸಂಸ್ಥೆಗಳು ನಾನಾ ಯೋಜನೆಗಳನ್ನು ಹಾಕಿಕೊಂಡಿವೆ.

ಬೆಂಗಳೂರು ಮೂಲಕದ ಫ್ಲಿಪ್‌ಕಾರ್ಟ್ ಕೂಡ ಯೋಜನೆ ರೂಪಿಸಿಕೊಂಡಿದ್ದು, ಪೂರೈಕೆ ಜಾಲದ ವಿಸ್ತರಣೆ ಮತ್ತು ಬಲವರ್ಧನೆಯಿಂದಾಗಿ ಲಕ್ಷಾಂತರ ಹೊಸ ಇ-ಕಾಮರ್ಸ್ ಬಳಕೆದಾರರು ತಡೆ ರಹಿತವಾಗಿ ಆನ್ ಲೈನ್ ಶಾಪಿಂಗ್ ಮಾಡಲು ಸಹಕಾರಿಯಾಗಲಿದೆ. ಈ ಗ್ರಾಹಕರಿಗೆ ಹಬ್ಬದ ಸಂದರ್ಭದಲ್ಲಿ ನಿರಂತರ ಸೇವೆ ಸಲ್ಲಿಸಲು ಮಾರಾಟ ಪಾಲುದಾರರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ.

ಬಿಗ್ ಬಿಲಿಯನ್ ಡೇಸ್ಗೆ ಸಿದ್ಧತೆ

ಬಿಗ್ ಬಿಲಿಯನ್ ಡೇಸ್ಗೆ ಸಿದ್ಧತೆ

ಬಿಗ್ ಬಿಲಿಯನ್ ಡೇಸ್ ನ ಸಂಕೀರ್ಣತೆ ಮತ್ತು ಅದರ ಮಟ್ಟಕ್ಕೆ ಸಾಮರ್ಥ್ಯ, ಸಂಗ್ರಹ, ವಿಂಗಡಣೆ, ಪ್ಯಾಕಿಂಗ್, ಮಾನವ ಸಂಪನ್ಮೂಲಗಳು, ತರಬೇತಿ ಮತ್ತು ವಿತರಣೆಗೆ ಹೆಚ್ಚು ಹೂಡಿಕೆಗಳ ಅಗತ್ಯವಿರುತ್ತದೆ. ಇದು ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ನೆರವಾಗುತ್ತದೆ. ಈ ವರ್ಷ ಫ್ಲಿಪ್ ಕಾರ್ಟ್ ತನ್ನ ಪೂರೈಕೆ ಜಾಲದಲ್ಲಿ 70,000 ಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಲಿದೆ. ಇದರ ಜತೆಗೆ ತನ್ನ ಮಾರಾಟಗಾರರು ಮತ್ತು ಇತರೆ ಪರಿಸರ ವ್ಯವಸ್ಥೆ ಪಾಲುದಾರರ ಬಳಿ ಲಕ್ಷಾಂತರ ಪರೋಕ್ಷ ಹುದ್ದೆಗಳನ್ನು ಕಲ್ಪಿಸಲಿದೆ.

ಫ್ಲಿಪ್‌ಕಾರ್ಟ್‌ನಿಂದ ವೋಲ್‌ಸೇಲ್ ವ್ಯಾಪಾರ ಶುರುಫ್ಲಿಪ್‌ಕಾರ್ಟ್‌ನಿಂದ ವೋಲ್‌ಸೇಲ್ ವ್ಯಾಪಾರ ಶುರು

50,000 ಕ್ಕೂ ಅಧಿಕ ಕಿರಾಣಗಳ ಜತೆಗೆ ಪಾಲುದಾರಿಕೆ ಹೊಂದಿರುವ ಫ್ಲಿಪ್‌ಕಾರ್ಟ್

50,000 ಕ್ಕೂ ಅಧಿಕ ಕಿರಾಣಗಳ ಜತೆಗೆ ಪಾಲುದಾರಿಕೆ ಹೊಂದಿರುವ ಫ್ಲಿಪ್‌ಕಾರ್ಟ್

ಈಗಾಗಲೇ 50,000 ಕ್ಕೂ ಅಧಿಕ ಕಿರಾಣಗಳ ಜತೆಗೆ ಪಾಲುದಾರಿಕೆ ಹೊಂದಿರುವ ಫ್ಲಿಪ್ ಕಾರ್ಟ್ ಲಕ್ಷಾಂತರ ಗ್ರಾಹಕರಿಗೆ ತ್ವರಿತವಾಗಿ ಇ-ಕಾಮರ್ಸ್ ಅನುಭವವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಇದೇ ವೇಳೆ, ಕಿರಾಣಗಳಿಗೆ ಡಿಜಿಟಲ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಮತ್ತು ಹೆಚ್ಚುವರಿ ಆದಾಯ ಗಳಿಕೆಗೆ ಅವಕಾಶಗಳನ್ನು ಕಲ್ಪಿಸುತ್ತಿದೆ.

ಇದರೊಂದಿಗೆ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಪ್ಯಾಕೇಜ್ ಗಳ ವಿತರಣೆಗೆಂದು ಸಾವಿರಾರು ಕಾಲಾವಧಿ ಉದ್ಯೋಗಗಳನ್ನು ಕಲ್ಪಿಸಲಿದೆ.

ಫ್ಲಿಪ್ ಕಾರ್ಟ್ ನ ಇಕಾರ್ಟ್ ಮತ್ತು ಮಾರ್ಕೆಟ್ ಪ್ಲೇಸ್ ನ ಹಿರಿಯ ಉಪಾಧ್ಯಕ್ಷ ಅಮಿತೇಶ್ ಝಾ ಅವರು ಈ ಬಗ್ಗೆ ಮಾತನಾಡಿ, ನಮ್ಮ ಗ್ರಾಹಕರು ಮತ್ತು ಪರಿಸರವ್ಯವಸ್ಥೆಯ ಪಾಲುದಾರರ ಜೀವನದಲ್ಲಿ ಹಬ್ಬಗಳ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ಫ್ಲಿಪ್ ಕಾರ್ಟ್ ಅರ್ಥ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ನಾವು ಪರಿಣಾಮಕಾರಿಯಾದ ಪಾಲುದಾರಿಕೆಗಳನ್ನು ಮಾಡಿಕೊಂಡಿದ್ದೇವೆ. ಈ ಪಾಲುದಾರಿಕೆಯು ಅತ್ಯುದ್ಭುತವಾದ ಗ್ರಾಹಕ ಅನುಭವವನ್ನು ನೀಡುವುದಲ್ಲದೇ, ಇಡೀ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚುವರಿ ಆದಾಯವನ್ನು ಗಳಿಸಲು ನೆರವಾಗುತ್ತದೆ. ಇದೇ ವೇಳೆ ಬಿಗ್ ಬಿಲಿಯನ್ ಡೇಸ್ (ಬಿಬಿಡಿ) ಅವಧಿಯಲ್ಲಿ ತಮ್ಮ ಮಾರಾಟವನ್ನು ಉತ್ತಮಪಡಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಮುಂಚೂಣಿಯಲ್ಲಿರುವ ಇ-ಕಾಮರ್ಸ್ ಸಂಸ್ಥೆಯಾಗಿ ಕಾರ್ಮಿಕ ಶಕ್ತಿಗೆ ನೀಡುತ್ತಿರುವ ನಮ್ಮ ತರಬೇತಿ ಮತ್ತು ಹೂಡಿಕೆಗೆ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯೋಗವಕಾಶಗಳನ್ನು ಹೆಚ್ಚು ಮಾಡುತ್ತಿರುವುದರ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಉದ್ಯೋಗ ಸೃಷ್ಟಿ ಮಾಡುತ್ತಿರುವುದು ಮತ್ತು ಈ ಸಂದರ್ಭದಲ್ಲಿ ನಮ್ಮ ಮಾರಾಟಗಾರರು ತಮ್ಮ ವ್ಯವಹಾರಗಳನ್ನು ಹೆಚ್ಚು ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸುತ್ತಿದ್ದೇವೆ. ಅಲ್ಲದೇ, ಇದಕ್ಕೆ ಪೂರಕವಾಗಿ ನಾವು ಉದ್ಯಮ ಮತ್ತು ಆರ್ಥಿಕತೆಯ ಪ್ರಗತಿಯ ಭಾಗವಾಗಿದ್ದೇವೆ'' ಎಂದು ತಿಳಿಸಿದರು.

ನೌಕರರಿಗೆ ವಿವಿಧ ಆಯಾಮಗಳಿಂದ ಉತ್ತಮ ತರಬೇತಿ

ನೌಕರರಿಗೆ ವಿವಿಧ ಆಯಾಮಗಳಿಂದ ಉತ್ತಮ ತರಬೇತಿ

ಫ್ಲಿಪ್ ಕಾರ್ಟ್ ತನ್ನ ನೇರ ನೇಮಕಾತಿ ಮಾಡಿಕೊಂಡಿರುವ ಉದ್ಯೋಗಿಗಳಿಗೆ ವಿವಿಧ ಆಯಾಮಗಳಲ್ಲಿ ತರಬೇತಿಯನ್ನು ನೀಡುತ್ತಿದೆ. ಇದರಲ್ಲಿ ಪ್ರಮುಖವಾಗಿ ತರಗತಿ ಮತ್ತು ಡಿಜಿಟಲ್ ತರಬೇತಿಯನ್ನು ನೀಡುವ ಮೂಲಕ ವಿತರಣಾ ಜಾಲದ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಿದೆ. ಈ ತರಬೇತಿಯಿಂದ ಉದ್ಯೋಗಿಗಳು ಪೂರೈಕೆ ಜಾಲ ಅಥವಾ ಕೊಂಡಿಯ ನಿರ್ವಹಣೆ ಬಗ್ಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಇವುಗಳಲ್ಲಿ ಗ್ರಾಹಕ ಸೇವೆ, ವಿತರಣೆ, ಸ್ಥಾಪಕತ್ವ, ಸುರಕ್ಷತೆ ಮತ್ತು ಸ್ಯಾನಿಟೈಸೇಷನ್ ಕ್ರಮಗಳು ಸೇರಿರುತ್ತವೆ. ಅದೇ ರೀತಿ ಕೈಯಿಂದ ಹಿಡಿಯುವ ಸಾಧನಗಳನ್ನು ಯಾವ ರೀತಿ ಸುರಕ್ಷಿತವಾಗಿ ಹಿಡಿದಾಡಬೇಕು ಎಂಬುದರ ಬಗ್ಗೆಯೂ ಮಾರ್ಗದರ್ಶನ ನೀಡಲಾಗುತ್ತದೆ.

ಇನ್ನು ಪಿಒಎಸ್ ಯಂತ್ರಗಳು, ಸ್ಕ್ಯಾನರ್ ಗಳು, ವಿವಿಧ ಮೊಬೈಲ್ ಅಪ್ಲಿಕೇಷನ್ ಗಳು ಮತ್ತು ಇಆರ್ ಪಿಗಳನ್ನು ಬಳಕೆ ಮಾಡುವಾಗ ತೆಗೆದುಕೊಳ್ಳುವ ಸುರಕ್ಷತಾ ವಿಧಾನಗಳನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ಈ ಸಂದರ್ಭದಲ್ಲಿ ತೆಗೆದುಕೊಳ್ಳುತ್ತಿರುವ ತರಬೇತಿಯು ಭವಿಷ್ಯಕ್ಕೆ ಸಿದ್ಧ ಕೌಶಲ್ಯಗಳನ್ನು ಕಲಿತುಕೊಳ್ಳಲು ಮತ್ತು ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಉದ್ಯಮದಲ್ಲಿ ವೃತ್ತಿ ಪ್ರಗತಿಯನ್ನು ಸಾಧಿಸಲು ನೆರವಾಗುತ್ತದೆ.

English summary
Flipkart, will help generate over 70,000 direct and lakhs of indirect seasonal jobs as the country gears up for the upcoming festive season and Flipkart's Big Billion Days (BBD).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X