ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯ ಪ್ರಿಯರಿಗೆ ಖುಷಿ ಸುದ್ದಿ: ಇನ್ನು ಫ್ಲಿಪ್ ಕಾರ್ಟ್‌ನಲ್ಲಿಯೂ ಸಿಗುತ್ತೆ ಎಣ್ಣೆ!

|
Google Oneindia Kannada News

ನವದೆಹಲಿ, ಆಗಸ್ಟ್ 17: ಆನ್‌ಲೈನ್‌ನಲ್ಲಿ ಮದ್ಯ ಪೂರೈಕೆಯನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಸರಾಜ್ಯ ಸರ್ಕಾರ ಉದ್ದೇಶಿಸಿದೆ. ಇದಕ್ಕೆ ಮದ್ಯ ಮಾರಾಟಗಾರರ ಸಂಘ ವಿರೋಧ ವ್ಯಕ್ತಪಡಿಸಿದೆ. ಈ ನಡುವೆ ಇ-ಕಾಮರ್ಸ್ ಕ್ಷೇತ್ರದ ದಿಗ್ಗಜ ಫ್ಲಿಪ್ ಕಾರ್ಟ್, ದೇಶದ ಎರಡು ಪ್ರಮುಖ ನಗರಗಳಲ್ಲಿ ಮದ್ಯ ಸರಬರಾಜು ಮಾಡಲು ಮದ್ಯ ತಯಾರಕ ಸಂಸ್ಥೆ ಡಿಯಾಜಿಯೊ ಸ್ಟಾರ್ಟಪ್ ಜತೆಗೆ ಒಪ್ಪಂದ ಮಾಡಿಕೊಂಡಿದೆ.

ಕೆಲವು ತಿಂಗಳ ಹಿಂದಷ್ಟೇ ಮತ್ತೊಂದು ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಇದೇ ರೀತಿಯ ಆನ್‌ಲೈನ್ ಮದ್ಯ ಮಾರಾಟ ಸೌಲಭ್ಯ ಆರಂಭಿಸಲು ಉದ್ದೇಶಿಸಿತ್ತು. ಭಾರತದಲ್ಲಿ ಪ್ರಸ್ತುತ ಮದ್ಯ ಮಾರುಕಟ್ಟೆಯು 2.03 ಲಕ್ಷ ಕೋಟಿ ವಹಿವಾಟು ನಡೆಸುತ್ತಿದೆ ಎಂದು ಐಡಬ್ಲ್ಯೂಎಸ್‌ಆರ್ ಡಿಂಕ್ಸ್ ಮಾರುಕಟ್ಟೆ ವಿಶ್ಲೇಷಣೆ ಅಂದಾಜಿಸಿತ್ತು.

ಆನ್ಲೈನ್ ಮದ್ಯ ಮಾರಾಟಕ್ಕೆ ವೈನ್ ಮರ್ಚಂಟ್ಸ್ ವಿರೋಧಆನ್ಲೈನ್ ಮದ್ಯ ಮಾರಾಟಕ್ಕೆ ವೈನ್ ಮರ್ಚಂಟ್ಸ್ ವಿರೋಧ

ಡಿಯಾಜಿಯೊ ಬೆಂಬಲವುಳ್ಳ ಭಾರತದ ಆಲ್ಕೊಹಾಲ್ ಹೋಮ್ ಡೆಲಿವರಿ ಮೊಬೈಲ್ ಆಪ್, ಹಿಪ್‌ಬಾರ್ ಮೂಲಕ ಪಶ್ಚಿಮ ಬಂಗಾಳದ ಪೂರ್ವ ಭಾಗ ಮತ್ತು ಒಡಿಶಾದ ನಗರಗಳಲ್ಲಿ ಫ್ಲಿಪ್‌ಕಾರ್ಟ್‌ಅನ್ನು ತಂತ್ರಜ್ಞಾನ ಸೇವಾ ಪೂರೈಕೆದಾರರಾಗಿ ಬಳಸಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿವೆ ಎಂದು ವರದಿ ತಿಳಿಸಿದೆ. ಮುಂದೆ ಓದಿ...

ಫ್ಲಿಪ್ ಕಾರ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿ

ಫ್ಲಿಪ್ ಕಾರ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿ

ಫ್ಲಿಪ್ ಕಾರ್ಟ್ ಬಳಕೆದಾರರಿಗೆ ತನ್ನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಹಿಪ್‌ಬಾರ್ ಆಪ್‌ ಪ್ರವೇಶಿಸಲು ಅವಕಾಶ ನೀಡುತ್ತದೆ. ಫ್ಲಿಪ್ ಕಾರ್ಟ್ ಗ್ರಾಹಕರು ಮೊಬೈಲ್ ಆಪ್ ಮೂಲಕ ತಮ್ಮ ಇಷ್ಟದ ಮದ್ಯದ ಉತ್ಪನ್ನವನ್ನು ಆರ್ಡರ್ ಮಾಡಬಹುದು. ಫ್ಲಿಪ್ ಕಾರ್ಟ್ ಚಿಲ್ಲರೆ ಔಟ್ಲೆಟ್‌ಗಳಲ್ಲಿ ಅದನ್ನು ಖರೀದಿಸಿ ಸರಬರಾಜು ಮಾಡುತ್ತದೆ.

ಸ್ವಿಗ್ಗಿ, ಜೊಮ್ಯಾಟೋ ಮಾರಾಟ

ಸ್ವಿಗ್ಗಿ, ಜೊಮ್ಯಾಟೋ ಮಾರಾಟ

ಆಹಾರ ಸರಬರಾಜು ಸ್ಟಾರ್ಟ್ಅಪ್‌ಗಳಾದ ಸ್ವಿಗ್ಗಿ ಮತ್ತು ಜೊಮ್ಯಾಟೋ ಕೂಡ ಕೆಲವು ನಗರಗಳಲ್ಲಿ ಮನೆ ಮನೆಗೆ ಮದ್ಯ ಪೂರೈಕೆ ಸೌಲಭ್ಯ ಆರಂಭಿಸಿದ್ದವು. ಕೊರೊನಾ ವೈರಸ್ ಲಾಕ್ ಡೌನ್ ವಿಧಿಸಿದ ಸಂದರ್ಭದಲ್ಲಿ ಆನ್‌ಲೈನ್ ಮದ್ಯಕ್ಕೆ ವಿಪರೀತ ಬೇಡಿಕೆ ಉಂಟಾಗಿತ್ತು. ಹೀಗಾಗಿ ಕೆಲವೆಡೆ ರಾಜ್ಯ ಸರ್ಕಾರಗಳೂ ಆನ್‌ಲೈನ್ ಮದ್ಯ ಮಾರಾಟಕ್ಕೆ ಮುಂದಾಗಿವೆ.

ಮೇ-ಜೂನ್ ಅವಧಿಯಲ್ಲಿ ಮದ್ಯ ಮಾರಾಟ ಶೇಕಡಾ 60ರಷ್ಟು ಇಳಿಕೆಮೇ-ಜೂನ್ ಅವಧಿಯಲ್ಲಿ ಮದ್ಯ ಮಾರಾಟ ಶೇಕಡಾ 60ರಷ್ಟು ಇಳಿಕೆ

ಅಮೆಜಾನ್‌ನಲ್ಲಿ ಆರಂಭ

ಅಮೆಜಾನ್‌ನಲ್ಲಿ ಆರಂಭ

ಪಶ್ಚಿಮ ಬಂಗಾಳದ ಪೂರ್ವ ಭಾಗದ ಸ್ಥಳೀಯ ಸರ್ಕಾರ ಮತ್ತು ಒಡಿಶಾದಲ್ಲಿ ಫ್ಲಿಪ್ ಕಾರ್ಟ್ ಡಿಯಾಜಿಯೊ ಮೂಲಕ ಮದ್ಯ ಪೂರೈಕೆ ಮಾಡಲು ಅವಕಾಶ ನೀಡಿವೆ. ಪಶ್ಚಿಮ ಬಂಗಾಳದಲ್ಲಿ ಆಲ್ಕೊಹಾಲ್ ಪೂರೈಕೆ ಮಾಡಲು ಅಮೆಜಾನ್, ಜೂನ್ ತಿಂಗಳಲ್ಲಿ ಅನುಮತಿ ಪಡೆದುಕೊಂಡಿತ್ತು. ಬೆಂಗಳೂರಿನಲ್ಲಿ ಆನ್‌ಲೈನ್ ಫಾರ್ಮಸಿ ಆರಂಭಿಸುವುದಾಗಿಯೂ ಅಮೆಜಾನ್ ಶುಕ್ರವಾರ ತಿಳಿಸಿದೆ.

ಮದ್ಯ ಮಾರಾಟಗಾರರ ಸಂಘದ ಆಕ್ಷೇಪ

ಮದ್ಯ ಮಾರಾಟಗಾರರ ಸಂಘದ ಆಕ್ಷೇಪ

ಆನ್‌ಲೈನ್ ಮದ್ಯ ಪೂರೈಕೆಯನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು, ಬಳಿಕ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮಳಿಗೆ ಮೂಲಕ ಜಿಲ್ಲಾ ಕೇಂದ್ರಗಳಲ್ಲಿಯೂ ಆನ್‌ಲೈನ್ ಸರಬರಾಜು ಬಗ್ಗೆ ರಾಜ್ಯ ಸರ್ಕಾರ ಯೋಜಿಸಿದೆ. ಸರ್ಕಾರದ ಉದ್ದೇಶಕ್ಕೆ ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಮನೆ ಬಾಗಿಲಿಗೆ ಮದ್ಯ ಪೂರೈಕೆ, ಕರ್ನಾಟಕದ ಯೋಜನೆಮನೆ ಬಾಗಿಲಿಗೆ ಮದ್ಯ ಪೂರೈಕೆ, ಕರ್ನಾಟಕದ ಯೋಜನೆ

English summary
Flipkart has tied up with Diageo to deliver alcohol in two Indian cities of West Bengal and Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X