ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕರಿಂದ ಪ್ಲಾಸ್ಟಿಕ್ ಪ್ಯಾಕೇಜ್‍ ಸಂಗ್ರಹ, ಫ್ಲಿಪ್ ಕಾರ್ಟ್ ಕ್ರಮ

|
Google Oneindia Kannada News

ಬೆಂಗಳೂರು, ನವೆಂಬರ್ 14: ವಾಲ್ ಮಾರ್ಟ್ ಒಡೆತನದ ಭಾರತದ ಮುಂಚೂಣಿಯ ಇ ಕಾಮರ್ಸ್ ಸಂಸ್ಥೆ ಫ್ಲಿಪ್‍ಕಾರ್ಟ್ ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಸಾಧಿಸಲು ಹೊಸ ಯೋಜನೆ ಹಾಕಿಕೊಂಡಿದೆ. ಗ್ರಾಹಕರ ಮನೆ ಬಾಗಿಲಿನಿಂದ ಪ್ಲಾಸ್ಟಿಕ್ ಪ್ಯಾಕೇಜಿಂಗ್‍ಗಳನ್ನು ಸೂಕ್ತರೀತಿಯಲ್ಲಿ ಸಂಗ್ರಹಿಸುವ ಉಪಕ್ರಮವನ್ನು ಆರಂಭಿಸಿದೆ.

ಇದಕ್ಕಾಗಿ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಸಂಗ್ರಹಿಸುವ ಮಾದರಿ ಯೋಜನೆಗಳನ್ನು ಮುಂಬೈ, ಬೆಂಗಳೂರು, ಡೆಹ್ರಾಡೂನ್, ದೆಹಲಿ, ಕೊಲ್ಕತ್ತಾ, ಪುಣೆ ಮತ್ತು ಅಹ್ಮದಾಬಾದ್‍ಗಳ ಆಯ್ದ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದಡಿಯಲ್ಲಿ ಫ್ಲಿಪ್‍ಕಾರ್ಟ್ ಗ್ರಾಹಕರಿಗೆ ಸ್ವಯಂಇಚ್ಛೆಯಿಂದ ಈ ಪ್ಲಾಸ್ಟಿಕ್ ಪ್ಯಾಕೇಜ್‍ಗಳನ್ನು ಫ್ಲಿಪ್‍ಕಾರ್ಟ್ ವಿಶ್‍ಮಾಸ್ಟರ್ ಗಳಿಗೆ ಅದರ ಸೂಕ್ತ ವಿಲೇವಾರಿಯಾಗಿ ಉತ್ಪನ್ನದ ವಿತರಣೆ ಸಂದರ್ಭದಲ್ಲಿ ನೀಡಲು ಸೂಚನೆ ನೀಡುತ್ತದೆ. ಈ ವಿಶ್‍ಮಾಸ್ಟರ್ ಗಳಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದೆ.

ಫ್ಲಿಪ್‍ಕಾರ್ಟ್ ವೇರ್ ಹೌಸಿನಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಯಿಂದ ಪಾಠಫ್ಲಿಪ್‍ಕಾರ್ಟ್ ವೇರ್ ಹೌಸಿನಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಯಿಂದ ಪಾಠ

ಫ್ಲಿಪ್‍ಕಾರ್ಟ್ ಒಮ್ಮೆ ಬಳಸುವ ಪ್ಪಾಸ್ಟಿಕ್‍ನ ಉಪಯೋಗವನ್ನು ಶೇ.33ರಷ್ಟು ಇಳಿಸಿದ್ದು, ಶೇ100ರಷ್ಟು ಪುನರ್ ಬಳಕೆಯ ಪ್ಲಾಸ್ಟಿಕ್ ಅನ್ನು ತನ್ನ ಪೂರೈಕೆ ಸರಣಿಯಲ್ಲಿ ಮಾರ್ಚ್ 2021ರ ಹೊತ್ತಿಗೆ ಬಳಸುವ ಗುರಿ ಹೊಂದಿದೆ.

Flipkart to collect plastic packaging used in orders from consumers

ಫ್ಲಿಪ್‍ಕಾರ್ಟ್ ಸಮೂಹದ ಮುಖ್ಯ ಕಾರ್ಪೋರೇಟ್ ವಿದ್ಯಮಾನಗಳ ಅಧಿಕಾರಿ ರಜನೀಶ್ ಕುಮಾರ್ ಅವರು ಮಾತನಾಡಿ, "ಒಮ್ಮೆ ಬಳಸುವ ಪ್ಲಾಸ್ಟಿಕ್ ಅನ್ನು ವ್ಯವಸ್ಥೆಯಲ್ಲಿ ಕಡಿಮೆ ಮಾಡುವತ್ತ ಧೈರ್ಯಯುತ ಹೆಜ್ಜೆಗಳನ್ನು ನಾವು ತೆಗೆದುಕೊಂಡಿದ್ದು, ಹಲವಾರು ಪರಿಸರ ಸ್ನೇಹಿ ಬದಲಿ ವಸ್ತುಗಳನ್ನು ಸೇರಿಸಿಕೊಂಡಿದ್ದೇವೆ. ಸತತವಾಗಿ ನಮ್ಮ ಕ್ರಮಗಳಲ್ಲಿ ನವೀನತೆ ಅಳವಡಿಸುತ್ತಿದ್ದೇವೆ. ಮನೆ ಬಾಗಿಲಲ್ಲಿ ಸಂಗ್ರಹಿಸುವ ಮೂಲಕ ಪ್ಲಾಸ್ಟಿಕ್ ಪ್ಯಾಕೇಜ್ ಅನ್ನು ಪುನರ್ ಬಳಕೆಗೆ ಉಪಯೋಗಿಸುವತ್ತ ಮುಂದಾಗಿರುವ ಮೊದಲ ವಿದ್ಯುನ್ಮಾನ ವಾಣಿಜ್ಯ ಮಾರುಕಟ್ಟೆ ಸ್ಥಳ ನಾವಾಗಿರುವುದಕ್ಕೆ ಹೆಮ್ಮೆ ಪಡುತ್ತೇವೆ" ಎಂದರು.

ಪರಿಸರ ಸ್ನೇಹಿ ಪೇಪರ್ ಶ್ರೆಡ್‍ಗಳನ್ನು ಪರಿಚಯಿಸುವುದಲ್ಲದೆ, ಪಾಲಿಪೌಚ್‍ಗಳ ಬದಲಿಗೆ ಪುನರ್ ಬಳಕೆಯ ಪೇಪರ್ ಬ್ಯಾಗ್‍ಗಳನ್ನು ಬಬ್ಬಲ್ ರ್ಯಾಪ್‍ಗಳ ಬದಲಿಗೆ ಫ್ಲಿಪ್‍ಕಾರ್ಟ್ ಕಾರ್ಟನ್ ವೇಸ್ಟ್ ಶ್ರೆಡೆಡ್ ವಸ್ತು ಬಳಕೆಯ ಹಲವಾರು ಕ್ರಮಗಳನ್ನು ಸಂಸ್ಥೆ ಪರಿಚಯಿಸಿದೆ. ಇತ್ತೀಚೆಗೆ ಐಎಸ್‍ಒ 14001 ಪ್ರಾಮಾಣೀಕರಣವನ್ನು ತನ್ನ ಯೋಜನಾತ್ಮಕ ಸೌಲಭ್ಯಗಳಿಗೆ ಸಂಸ್ಥೆ ಪಡೆದುಕೊಂಡಿದೆ.

English summary
Walmart-owned e-commerce firm Flipkart on Thursday announced that it will collect plastic packaging back from consumers at select hubs including Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X