• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫ್ಲಿಪ್‌ಕಾರ್ಟ್‌ ಸಮರ್ಥ್‌ ಮೊದಲ ವಾರ್ಷಿಕೋತ್ಸವ: ಕರಕುಶಲಕರ್ಮಿಗಳು, ನೇಕಾರರು ಇ-ಕಾಮರ್ಸ್ ವ್ಯಾಪ್ತಿಗೆ

|

ಬೆಂಗಳೂರು, ಜುಲೈ 31: ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ಫ್ಲಿಪ್ ಕಾರ್ಟ್ ಸಮರ್ಥ್ ಕಾರ್ಯಕ್ರಮದ ಮೊದಲ ವಾರ್ಷಿಕೋತ್ಸವವನ್ನು ಇಂದು ಆಚರಿಸಿತು. ಸೇವಾವಂಚಿತ ವಲಯ, ದೇಶೀಯ ಸಮುದಾಯಗಳು ಮತ್ತು ವ್ಯವಹಾರಗಳನ್ನು ಸಬಲೀಕರಣಗೊಳಿಸುವ ಮೂಲಕ ಸುಸ್ಥಿರ ಮತ್ತು ಸೇರ್ಪಡೆ ಪ್ಲಾಟ್ ಫಾರ್ಮ್ ಅನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ರೂಪಿಸಿ ಕಳೆದ ವರ್ಷ ಇದೇ ದಿನದಂದು ಆರಂಭಿಸಲಾಗಿತ್ತು.

ಇದರ ಮತ್ತೊಂದು ಪ್ರಮುಖ ಉದ್ದೇಶವೆಂದರೆ ಇಂತಹ ವರ್ಗಗಳಿಗೆ ವ್ಯವಹಾರಕ್ಕೆ ನೆರವಾಗಿ ಅವರಿಗೆ ಅತ್ಯದ್ಭುತವಾದ ಅವಕಾಶಗಳನ್ನು ಕಲ್ಪಿಸಿ ಅವರ ಜೀವನೋಪಾಯವನ್ನು ಉತ್ತಮಗೊಳಿಸುವುದಾಗಿದೆ. ಫ್ಲಿಪ್ ಕಾರ್ಟ್ ಸಮರ್ಥ್ ದೇಶಾದ್ಯಂತ ಬೆಳೆಯುತ್ತಿರುವ 200 ದಶಲಕ್ಷ ಗ್ರಾಹಕ ಮೂಲವನ್ನು ಈ ವ್ಯವಹಾರಗಳಿಗೆ ಲಭ್ಯವಾಗುವಂತೆ ಮಾಡುವುದು, ಈ ಮೂಲಕ ವಾಣಿಜ್ಯವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿರುವ ತಂತ್ರಜ್ಞಾನದೊಂದಿಗೆ ನಿಜವಾದ ಅರ್ಥದಲ್ಲಿ ಪ್ರಜಾಸತ್ತಾತ್ಮಕಗೊಳಿಸಲು ನೆರವಾಗುತ್ತದೆ.

ಫ್ಲಿಪ್‌ಕಾರ್ಟ್‌ನಿಂದ 90 ನಿಮಿಷಗಳಲ್ಲಿ ಡೆಲಿವರಿ ಸರ್ವೀಸ್

ಮೊದಲ 6 ತಿಂಗಳವರೆಗೆ ಕಮೀಷನ್ ನೀಡುವಂತಿಲ್ಲ

ಮೊದಲ 6 ತಿಂಗಳವರೆಗೆ ಕಮೀಷನ್ ನೀಡುವಂತಿಲ್ಲ

ಒಂದು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಫ್ಲಿಪ್ ಕಾರ್ಟ್, ತನ್ನ ಹಲವಾರು ಆಫರ್ ಗಳ ಮೂಲಕ ಫ್ಲಿಪ್ ಕಾರ್ಟ್ ಸಮರ್ಥ್ ಕಾರ್ಯಕ್ರಮವನ್ನು ಮತ್ತಷ್ಟು ಬಲವರ್ಧನೆಗೊಳಿಸಲಿದೆ ಮತ್ತು ತನ್ನ ಮಾರಾಟ ಪಾಲುದಾರರಿಗೆ ಹೊಸ ಹೊಸ ಪ್ರಯೋಜನಗಳನ್ನು ಪರಿಚಯಿಸುತ್ತಿದೆ. ಯಾವುದೇ ಪಾಲುದಾರನು ಈ ವೇದಿಕೆಗೆ ಸೇರ್ಪಡೆಗೊಂಡ ನಂತರದ ಮೊದಲ 6 ತಿಂಗಳವರೆಗೆ ಕಮೀಷನ್ ನೀಡುವಂತಿಲ್ಲ. ಈ ಅವಧಿ ಮುಗಿದ ನಂತರ ಮಾರಾಟಗಾರನಿಗೆ ಶೇ.5 ರಷ್ಟು ಕಮೀಷನ್ ವಿಧಿಸಲಾಗುತ್ತದೆ.

ಕೈಗಾರಿಕೆ ಗುಣಮಟ್ಟಗಳು ಮಾರಾಟಗಾರರಿಗೆ ಆನ್ ಲೈನ್ ನಲ್ಲಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತವೆ. ಈ ಮೂಲಕ ಅವರು ತಮಗೆ ಎದುರಾಗಿರುವ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿಕೊಳ್ಳಬಹುದಾಗಿದೆ. ಇದಲ್ಲದೇ, ಫ್ಲಿಪ್ ಕಾರ್ಟ್ ಸಮರ್ಥ್ ಮಾರಾಟಗಾರರಿಗೆ ಯಾವುದೇ ಮಿತಿ ಇಲ್ಲದೇ ಕೆಟಲಾಗಿಂಗ್ ಬೆಂಬಲವನ್ನು ಪಡೆಯಲಿದ್ದಾರೆ. ಈ ಪ್ಲಾಟ್ ಫಾರ್ಮ್ ನಲ್ಲಿ ಉತ್ಪನ್ನಗಳು ಕಣ್ಣಿಗೆ ಕಾಣುವ ರೀತಿಯಲ್ಲಿ ಜನಪ್ರಿಯಗೊಳಿಸಲು ಮೊದಲ ತಿಂಗಳು ಜಾಹೀರಾತು ಕ್ರೆಡಿಟ್ ದೊರೆಯಲಿದೆ. ಇದಕ್ಕಾಗಿ ಅವರಿಗೆ ನೋಂದಣಿ ಮತ್ತು ಲೀಸ್ಟಿಂಗ್ ತರಬೇತಿಯನ್ನು ನೀಡಲಾಗುತ್ತದೆ. ವ್ಯವಹಾರಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಮತ್ತು ಸ್ಥಿರವಾದ ಮಾರಾಟಗಾರರ ಬೆಂಬಲ ಲಭ್ಯವಾಗಲಿದೆ ಹಾಗೂ ಫ್ಲಿಪ್ ಕಾರ್ಟ್ ಫುಲ್ ಫಿಲ್ಮೆಂಟ್ ಸೆಂಟರ್ ಗಳಲ್ಲಿ ಪ್ರತ್ಯೇಕವಾದ ಸ್ಥಾನವನ್ನು ನೀಡಲಾಗುತ್ತದೆ.

ಸೇವಾವಂಚಿತ ಸಮುದಾಯಗಳು ಸುಲಭವಾಗಿ ಆನ್ ಬೋರ್ಡ್ ಪ್ರವೇಶ

ಸೇವಾವಂಚಿತ ಸಮುದಾಯಗಳು ಸುಲಭವಾಗಿ ಆನ್ ಬೋರ್ಡ್ ಪ್ರವೇಶ

ಈ ಪ್ರಯೋಜನಗಳ ಮೂಲಕ ಮಾರಾಟಗಾರರು ಮತ್ತು ಸೇವಾವಂಚಿತ ಸಮುದಾಯಗಳು ಸುಲಭವಾಗಿ ಆನ್ ಬೋರ್ಡ್ ಗೆ ಪ್ರವೇಶ ಹೊಂದಬಹುದು ಮತ್ತು ತಮ್ಮ ಮಾರಾಟ ಪಯಣವನ್ನು ಸುಲಭವಾಗಿಸಿಕೊಳ್ಳಬಹುದು. ಅದೇ ರೀತಿ ತಮ್ಮ ಡಿಜಿಟಲ್ ಫೂಟ್ ಪ್ರಿಂಟ್ ಅನ್ನು ರೂಪಾಂತರಿಸಿಕೊಳ್ಳಬಹುದಾಗಿದೆ. ಇಂದು ಫ್ಲಿಪ್ ಕಾರ್ಟ್ ಸಮರ್ಥ್, ದೇಶಾದ್ಯಂತ 6,00,000 ಕ್ಕೂ ಅಧಿಕ ಕರಕುಶಲಕರ್ಮಿಗಳು, ನೇಕಾರರು, ಕುಶಲಕರ್ಮಿಗಳ ಜೀವನೋಪಾಯವನ್ನು ಸುಧಾರಿಸಿಕೊಳ್ಳಲು ನೆರವಾಗುತ್ತಿದೆ. ಅವರನ್ನು ಪ್ಲಾಟ್ ಫಾರ್ಮ್ ವ್ಯಾಪ್ತಿಗೆ ತಂದು ಮಾರಾಟವನ್ನು ಸುಧಾರಣೆ ಮಾಡಲಾಗುತ್ತಿದೆ.

ಈ ಕುರಿತು ಫ್ಲಿಪ್ ಕಾರ್ಟ್ ಇಂದು ಏರ್ಪಡಿಸಿದ್ದ ವರ್ಚುವಲ್ ಕಾನ್ಫರೆನ್ಸ್ ಉದ್ದೇಶಿಸಿ ಮಾತನಾಡಿದ ಭಾರತ ಸರ್ಕಾರದ ಎಂಎಸ್ಎಂಇ ಖಾತೆಯ ರಾಜ್ಯ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರು, ``ದೇಶದ ಆರ್ಥಿಕ ಬೆಳವಣಿಗೆಗೆ ಎಂಎಸ್ಎಂಇಗಳು ಸಾಕಷ್ಟು ಕೊಡುಗೆಯನ್ನು ನೀಡುತ್ತಿವೆ. ಇದು ದೇಶದ ಪ್ರಗತಿಗೆ ಗಮನಾರ್ಹವಾದ ಕೊಡುಗೆಯಾಗಿದೆ ಮತ್ತು ಇನ್ನೂ ಹೆಚ್ಚು ಬೆಳವಣಿಗೆ ಹೊಂದಲು ಸಾಕಷ್ಟು ಅವಕಾಶಗಳು ಇವೆ. ಹಲವಾರು ಕೈಗಾರಿಕೆಗಳು, ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ಆಧುನಿಕತೆಯತ್ತ ಒಟ್ಟಾಗಿ ಹೆಜ್ಜೆ ಹಾಕುತ್ತಿವೆ ಮತ್ತು ಅದೇ ರೀತಿ ಇ-ಕಾಮರ್ಸ್ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದರ ಪ್ರಯೋಜನಗಳಲ್ಲಿ ಪ್ರಮುಖವಾದುದೆಂದರೆ ಇದು ಭಾರತೀಯ ಎಂಎಸ್ಎಂಇಗಳಿಗೆ ನೆರವಾಗುತ್ತದೆ ಮತ್ತು ಕರಕುಶಲ ಕ್ಷೇತ್ರಕ್ಕೆ ಜಾಗತಿಕ ಔಟ್ ಲುಕ್ ಅನ್ನು ನೀಡುತ್ತದೆ. ಇ-ಕಾಮರ್ಸ್ ವೇದಿಕೆಗಳ ಮೂಲಕ ಕರಕುಶಲ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದೊಂದಿಗೆ ಭಾರತದ ಶ್ರೀಮಂತವಾದ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗುತ್ತಿದೆ. ಈ ನಿಟ್ಟಿನಲ್ಲಿ ಇ-ಕಾಮರ್ಸ್ ಕಂಪನಿಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತಿವೆ ಮತ್ತು ಕರಕುಶಲ ಉತ್ಪನ್ನಗಳಿಗೆ ಜಾಗತಿಕ ಹಬ್ ಆಗಿ ಪರಿಣಮಿಸುತ್ತಿವೆ'' ಎಂದು ತಿಳಿಸಿದರು.

ಸ್ಥಳೀಯ ಕುಶಲಕರ್ಮಿಗಳು, ನೇಕಾರರು ಮತ್ತು ಕಸುಬುದಾರರಿಗೆ ಇ-ಕಾಮರ್ಸ್ ವೇದಿಕೆ

ಸ್ಥಳೀಯ ಕುಶಲಕರ್ಮಿಗಳು, ನೇಕಾರರು ಮತ್ತು ಕಸುಬುದಾರರಿಗೆ ಇ-ಕಾಮರ್ಸ್ ವೇದಿಕೆ

ವರ್ಷಗಳು ಕಳೆದಂತೆ ಫ್ಲಿಪ್ ಕಾರ್ಟ್ ದೇಶಾದ್ಯಂತ ಸರ್ಕಾರದ ಹಲವಾರು ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ ಮತ್ತು ಈ ಮೂಲಕ ಸ್ಥಳೀಯ ಕುಶಲಕರ್ಮಿಗಳು, ನೇಕಾರರು ಮತ್ತು ಕಸುಬುದಾರರಿಗೆ ಇ-ಕಾಮರ್ಸ್ ವೇದಿಕೆಗೆ ಬರಲು ಅವಕಾಶ ನೀಡಿ ಅದರ ಪ್ರಯೋಜನಗಳು ದೊರೆಯುವಂತೆ ಮಾಡುತ್ತಿದೆ. ಇವುಗಳಲ್ಲಿ ಪ್ರಮುಖವಾಗಿ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆ, ಯುಪಿ ಖಾದಿ ಗ್ರಾಮೋದ್ಯೋಗ ಮಂಡಳಿ ಮತ್ತು ದೀನ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯಗಳ ಮಿಷನ್ (ಡಿಎವೈ-ಎನ್ ಯುಎಲ್ಎಂ) ಜತೆಗೆ ಪಾಲುದಾರಿಕೆಯನ್ನು ಹೊಂದಿದ್ದು, 22 ರಾಜ್ಯಗಳಲ್ಲಿ ಫ್ಲಿಪ್ ಕಾರ್ಟ್ ಸಮರ್ಥ್ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದಿದೆ.

ದೊಡ್ಡ ಮಟ್ಟದಲ್ಲಿ ಗ್ರಾಮೀಣ ಉದ್ಯಮಿಗಳನ್ನು ತಲುಪುವ ಪ್ರಯತ್ನ

ದೊಡ್ಡ ಮಟ್ಟದಲ್ಲಿ ಗ್ರಾಮೀಣ ಉದ್ಯಮಿಗಳನ್ನು ತಲುಪುವ ಪ್ರಯತ್ನ

ಫ್ಲಿಪ್ ಕಾರ್ಟ್ ನ ಸೀನಿಯರ್ ಡೈರೆಕ್ಟರ್ ಅಂಡ್ ಹೆಡ್ ಆಫ್ ಮಾರ್ಕೆಟ್ ಪ್ಲೇಸ್ ಜಗಜೀತ್ ಹರೋಡೆ ಅವರು ಮಾತನಾಡಿ, ``ಫ್ಲಿಪ್ ಕಾರ್ಟ್ ಸಮರ್ಥ್ ಕಾರ್ಯಕ್ರಮದ ಒಂದು ವರ್ಷದ ಅವಧಿಯು ಭಾರತದಲ್ಲಿ ಸ್ಥಳೀಯ ಮತ್ತು ವಿರಳವಾಗಿರುವ ಕರಕುಶಲ ಮತ್ತು ಕೈಮಗ್ಗ ಕ್ಷೇತ್ರವನ್ನು ಬೆಳಕಿಗೆ ತರುವಲ್ಲಿ ಇ-ಕಾಮರ್ಸ್ ಹೊಂದಿರುವ ಸಾಮರ್ಥ್ಯವನ್ನು ಮುಂಚೂಣಿಗೆ ತಂದು ನಿಲ್ಲಿಸಿದೆ. ಸರ್ಕಾರದ ಪಾಲುದಾರಿಕೆಗಳ ನೆರವಿನಿಂದ ನಾವು ಒಡಿಶಾ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ಪಂಜಾಬ್ ಮತ್ತು ಕರ್ನಾಟಕ ಸೇರಿದಂತೆ ಇನ್ನಿತರೆ ರಾಜ್ಯಗಳ ಕರಕುಶಲಕರ್ಮಿಗಳನ್ನು ಆನ್ ಲೈನ್ ವೇದಿಕೆಗೆ ತರಲು ಸಾಧ್ಯವಾಗಿದೆ. ನಾವು ಮಾಡಿರುವ ಈ ಕಾರ್ಯ ನಮಗೆ ಉತ್ತೇಜನ ನೀಡಿದೆ ಮತ್ತು ಈ ಉಪಕ್ರಮಕ್ಕೆ ಮತ್ತಷ್ಟು ಒತ್ತು ನೀಡುವುದು ನಮ್ಮ ಗುರಿಯಾಗಿದೆ. ನಾವು ಇನ್ನೂ ಹೆಚ್ಚಿನ ಜೀವನೋಪಾಯಗಳ ಮೇಲೆ ಪರಿಣಾಮ ಬೀರಲು ಇನ್ನೂ ಅನೇಕ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ತಲುಪುವ ಉದ್ದೇಶವನ್ನು ಹೊಂದಿದ್ದೇವೆ'' ಎಂದು ಹೇಳಿದರು.

ಸಮರ್ಥ್ ಉಪಕ್ರಮದ ಮೂಲಕ ಗ್ರಾಮೀಣ ಉದ್ಯಮಿಗಳನ್ನು ದೊಡ್ಡ ಮಟ್ಟದಲ್ಲಿ ತಲುಪಲು ಫ್ಲಿಪ್ ಕಾರ್ಟ್ ಎನ್ ಜಿಒಗಳು, ಸರ್ಕಾರದ ಸಂಸ್ಥೆಗಳು ಮತ್ತು ಜೀವನೋಪಾಯ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ವಿಶೇಷವಾಗಿ ಮಹಿಳಾ ನೇತೃತ್ವದ ಉದ್ದಿಮೆಗಳು, ವಿಶೇಷ ಚೇತನ ಉದ್ಯಮಿಗಳು, ಕರಕುಶಲಕರ್ಮಿಗಳು ಮತ್ತು ನೇಕಾರರನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ. ಈ ಸಮುದಾಯಗಳು ಬಂಡವಾಳದ ಕೊರತೆ, ಕಳಪೆ ಮೂಲಸೌಕರ್ಯ ಮತ್ತು ಅಸಮರ್ಪಕ ತರಬೇತಿಯಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಫ್ಲಿಪ್ ಕಾರ್ಟ್ ಸಮರ್ಥ್ ಅವರ ಈ ನೋವುಗಳು ಮತ್ತು ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಸಾಧ್ಯವಾದಷ್ಟರ ಮಟ್ಟಿಗೆ ಸಮಸ್ಯೆಗಳನ್ನು ನಿವಾರಣೆ ಮಾಡಿ ಅವರಿಗೊಂದು ಉತ್ತಮ ಜೀವನೋಪಾಯ ಕಲ್ಪಿಸಲು ನೆರವಾಗಲಿದೆ.

ಇದಲ್ಲದೇ, ವಾಲ್ ಮಾರ್ಟ್ ವೃದ್ಧಿ ಮೂಲಕ ಫ್ಲಿಪ್ ಕಾರ್ಟ್ ಎಂಎಸ್ಎಂಇಗಳಿಗೆ ಬೆಂಬಲವಾಗಿ ನಿಲ್ಲುತ್ತಿದೆ. ಸಪ್ಲೈಯರ್ ಡೆವಲಪ್ ಮೆಂಟ್ ಕಾರ್ಯಕ್ರಮದ ಮೂಲಕ ಸ್ಥಳೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗಾಗಿ ಮೇಕ್ ಇನ್ ಇಂಡಿಯಾ ಉತ್ಪನ್ನಗಳನ್ನು ತಯಾರಿಸಲು 50,000 ಕ್ಕೂ ಅಧಿಕ ಎಂಎಸ್ಎಂಇಗಳಿಗೆ ನೆರವನ್ನು ನೀಡುವ ಗುರಿ ಹೊಂದಿದೆ. ಫ್ಲಿಪ್ ಕಾರ್ಟ್ ನ ವ್ಯವಹಾರಗಳು ಮತ್ತು ವಾಲ್ ಮಾರ್ಟ್ ನ ಪೂರೈಕೆ ಸರಪಳಿಗಳು ಪರಿಣತಿಯನ್ನು ನಿಯಂತ್ರಿಸಲಿವೆ. ಈ ಮೂಲಕ ಎಂಎಸ್ಎಂಇಗಳಿಗೆ ಸೂಕ್ತವಾದ ರೀತಿಯಲ್ಲಿ ತರಬೇತಿ ಮತ್ತು ಸಲಹೆಗಳನ್ನು ನೀಡಲಿವೆ.

English summary
Flipkart Samarth Celebrates 1 Year Of Democratising E-Commerce for Artisans, Weavers & Under Served Communities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X