ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಿಪ್‌ಕಾರ್ಟ್‌ನ ಶಾಪ್ಸಿಗೆ 2 ಲಕ್ಷಕ್ಕೂ ಅಧಿಕ ಉದ್ಯಮಿಗಳ ಸೇರ್ಪಡೆ

|
Google Oneindia Kannada News

ಬೆಂಗಳೂರು, ಆಗಸ್ಟ್ 03: ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಫ್ಲಿಪ್‌ಕಾರ್ಟ್‌ ಇತ್ತೀಚೆಗೆ ಶಾಪ್ಸಿಯನ್ನು ಆರಂಭಿಸಿತ್ತು. ಇದೀಗ ಶೂನ್ಯ-ಕಮೀಷನ್ ಮಾರ್ಕೆಟ್ ಪ್ಲೇಸ್ ಅನ್ನು ಪರಿಚಯಿಸಿದೆ. ಫ್ಯಾಶನ್, ಗ್ರಾಸರಿ ಮತ್ತು ಗೃಹೋಪಯೋಗಿ ಉತ್ಪನ್ನಗಳ ವಿಭಾಗದಲ್ಲಿ ಸೂಕ್ತವಾದ ಮಾರಾಟಗಾರರು ಮತ್ತು ಆಯ್ಕೆಗಳನ್ನು ತರಲು ಇದು ನೆರವಾಗುತ್ತದೆ ಎಂದು ಫ್ಲಿಪ್ ಕಾರ್ಟ್ ನಂಬಿದೆ. ಈ ಯೋಜನೆಯಿಂದಾಗಿ ವಿಸ್ತಾರವಾದ ಉತ್ಪನ್ನಗಳ ಶ್ರೇಣಿ ಮತ್ತು ಕೆಟಲಾಗ್‌ಗಳನ್ನು ಹೆಚ್ಚು ಮಾಡುವುದು ಮತ್ತು 2ನೇ ಶ್ರೇಣಿಯ ನಗರಗಳು ಮತ್ತು ಪಟ್ಟಣಗಳಲ್ಲಿ ಇ-ಕಾಮರ್ಸ್ ಅನ್ನು ಬೆಳವಣಿಗೆ ಮಾಡುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ.

ಇಂದು ಫ್ಲಿಪ್‌ಕಾರ್ಟ್‌ಗೆ 2 ಮತ್ತು 3 ನೇ ಶ್ರೇಣಿಯ ನಗರಗಳಲ್ಲಿ ಶೇ.70 ರಷ್ಟು ಗ್ರಾಹಕರಿದ್ದಾರೆ. ಶಾಪ್ಸಿಯೊಂದಿಗೆ ಫ್ಲಿಪ್‌ಕಾರ್ಟ್‌ ಈ ಪ್ರಮಾಣವನ್ನು ಶೇ.90ಕ್ಕೆ ಹೆಚ್ಚಳ ಮಾಡುವ ಉದ್ದೇಶವನ್ನು ಹೊಂದಿದೆ. ಈ ಗುರಿಯನ್ನು ಸಾಧಿಸಲು ಸಾಮಾಜಿಕ ವಾಣಿಜ್ಯ ವೈಶಿಷ್ಟ್ಯತೆಗಳೊಂದಿಗೆ ಗ್ಯಾಮಿಫಿಕೇಶನ್ ನೆರವಾಗುತ್ತದೆ ಎಂದು ಫ್ಲಿಪ್‌ಕಾರ್ಟ್‌ ನಂಬಿದೆ. ಅಂಥ ಒಂದು ವೈಶಿಷ್ಟ್ಯತೆಯೆಂದರೆ ಶಾಪ್ ಮತ್ತು ಗಳಿಕೆ. ಅಲ್ಲಿ ಬಳಕೆದಾರರು ಒಂದು ನಿರ್ದಿಷ್ಟ ಸಾಪ್ತಾಹಿಕ/ಮಾಸಿಕ ಗುರಿಯನ್ನು ಸಾಧಿಸಲು ಹೆಚ್ಚಿನ ಪ್ರೋತ್ಸಾಹಕಗಳನ್ನು ಅನ್ ಲಾಕ್ ಮಾಡಲು ಸಾಧ್ಯವಾಗುತ್ತದೆ. ಈ ರೀತಿಯ ಗ್ಯಾಮಿಫಿಕೇಶನ್ ಮತ್ತಷ್ಟು ವೈರಲ್‌ಗೆ ಕಾರಣವಾಗುತ್ತದೆ.

ಸ್ಥಳೀಯ ಉದ್ಯಮಿಗಳಿಗಾಗಿ ಫ್ಲಿಪ್‌ಕಾರ್ಟ್ ಶಾಪ್ಸಿ ಆರಂಭಸ್ಥಳೀಯ ಉದ್ಯಮಿಗಳಿಗಾಗಿ ಫ್ಲಿಪ್‌ಕಾರ್ಟ್ ಶಾಪ್ಸಿ ಆರಂಭ

ಕಳೆದ ಒಂದು ದಶಕದಲ್ಲಿ ಫ್ಲಿಪ್‌ಕಾರ್ಟ್‌ ತನ್ನ ಗ್ರಾಹಕರಿಗೆ ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಹೆಚ್ಚಿಸುವ ಮೌಲ್ಯವನ್ನು ಅನ್ಲಾಕ್ ಮಾಡಲು ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ. ಇದು ಮುಂದಿನ ಪೀಳಿಗೆಯ ಸಾಮಾಜಿಕ ವಾಣಿಜ್ಯ ಪ್ಲಾಟ್ ಫಾರ್ಮ್ ನ ಯಶಸ್ಸಿಗೆ ಬಲವಾದ ಮತ್ತು ನಿರ್ಣಾಯಕವಾದ ನೆಲೆಯನ್ನು ರೂಪಿಸುತ್ತದೆ. ಶೂನ್ಯ ಕಮೀಷನ್ ಕಾರ್ಯತಂತ್ರಕ್ಕೆ ಪೂರಕವಾಗಿ ಮಾರಾಟಗಾರರು ಈಗಾಗಲೇ ಫ್ಲಿಪ್ ಕಾರ್ಟ್ ನ ಜಾಹೀರಾತು ತಂತ್ರಜ್ಞಾನ ಪ್ಲಾಟ್ ಫಾರ್ಮ್ ಅನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ, ಫ್ಲಿಪ್‌ಕಾರ್ಟ್‌ ನ ಕಡಿಮೆ ಬೆಲೆಯ ಲಾಜಿಸ್ಟಿಕ್ ನೆಟ್ ವರ್ಜ್ ಮತ್ತು ಫ್ಲಿಪ್‌ಕಾರ್ಟ್‌ ಪೇ ಲೇಟರ್‌ನಂಥ ಕೈಗೆಟುಕುವ ಕಾರ್ಯಕ್ರಮಗಳು ಸಾಮಾಜಿಕ ವಾಣಿಜ್ಯದ ಸಂದರ್ಭದಲ್ಲಿ ಗೇಮ್ ಚೇಂಜರ್ ವೇಗವರ್ಧಕಗಳಾಗಿ ಕಾರ್ಯನಿರ್ವಹಣೆ ಮಾಡುವ ಎರಡು ಪ್ರಮುಖ ಅಸ್ತ್ರಗಳಾಗಿವೆ.

Flipkart’s Shopsy Announces zero commission marketplace for sellers

ಫ್ಲಿಪ್ ಕಾರ್ಟ್ ನ ಗ್ರೋಥ್ ಅಂಡ್ ಮಾನಿಟೈಸೇಶನ್ ನ ಹಿರಿಯ ಉಪಾಧ್ಯಕ್ಷ ಪ್ರಕಾಶ್ ಸಿಕಾರಿಯಾ ಅವರು ಮಾತನಾಡಿ, ''2023 ರ ವೇಳೆಗೆ 25 ಮಿಲಿಯನ್ ಆನ್ ಲೈನ್ ಉದ್ಯಮಿಗಳು ಶಾಪ್ಸಿ ವ್ಯಾಪ್ತಿಗೆ ಬರುವಂತೆ ಮಾಡುವ ದೂರಗಾಮಿ ಗುರಿಯನ್ನು ಇಟ್ಟುಕೊಂಡಿದ್ದೇವೆ. ಇದರ ಮೂಲಕ ಉದ್ಯಮಿಗಳು ತಮ್ಮ ಉದ್ಯಮಶೀಲತ್ವದ ಗುರಿಗಳನ್ನು ಸಾಕಾರಗೊಳಿಸಿಕೊಳ್ಳಲು ಡಿಜಿಟಲ್ ಕಾಮರ್ಸ್ ನೆಡೆಗೆ ಒಲವು ತೋರುವಂತೆ ಮಾಡಲಿದ್ದೇವೆ. ನಾವು ಶಾಪ್ಸಿಗೆ ಅಭೂತಪೂರ್ವವಾದ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದೇವೆ ಮತ್ತು ಸೇರ್ಪಡೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಹಲವಾರು ಉಪಕ್ರಮಗಳನ್ನು ಈ ಪ್ಲಾಟ್ ಫಾರ್ಮ್‌ನಲ್ಲಿ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ನಾವು ವಾರದಿಂದ ವಾರಕ್ಕೆ ಶೇ.100 ರಷ್ಟು ಪ್ರಗತಿಯನ್ನು ಕಾಣುತ್ತಿದ್ದು, ಇದನ್ನು ಮತ್ತಷ್ಟು ವೇಗಗೊಳಿಸುವತ್ತ ಗಮನಹರಿಸಿದ್ದೇವೆ. ಶಾಪ್ಸಿಯು ಒಂದು ವಿಶಿಷ್ಟವಾದ ಸಾಮಾಜಿಕ ಅಪ್ಲಿಕೇ‍ಷನ್ ಆಗಿ ಪ್ರದರ್ಶನ ನೀಡುತ್ತಿದೆ ಮತ್ತು ಹೆಚ್ಚು ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ. ಇದನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ನಾವು ಶಾಪ್ಸಿಯೊಂದಿಗೆ ನಮ್ಮ ಪ್ರಯಾಣದಲ್ಲಿ ಪ್ರಗತಿಯಾದಾಗ ಅತ್ಯುತ್ತಮವಾದ ಇ-ಕಾಮರ್ಸ್ ಅನ್ನು ಸಾಮಾಜಿಕ ವಾಣಿಜ್ಯಕ್ಕೆ ತರುವ ಗುರಿಯನ್ನು ಹೊಂದಿದ್ದೇವೆ. ಫ್ಲಿಪ್‌ಕಾರ್ಟ್‌ ಗ್ರೂಪ್ ಭಾರತೀಯರ ಉದ್ಯಮಶೀಲತಾ ಮನೋಭಾವವನ್ನು ನಿರಂತರವಾಗಿ ಬೆಳೆಸಲು ಬದ್ಧವಾಗಿದೆ ಮತ್ತು ಈ ಸಮುದಾಯದ ಅವಕಾಶಗಳನ್ನು ಸಕ್ರಿಯಗೊಳಿಸಲು ನಾವು ತಂತ್ರಜ್ಞಾನ ಮತ್ತು ನಮ್ಮ ಜಾಲದ ವಿಸ್ತಾರವನ್ನು ಬಳಸುವುದನ್ನು ಮುಂದುವರಿಸುತ್ತಿದ್ದೇವೆ'' ಎಂದು ತಿಳಿಸಿದರು.

ಶಾಪ್ಸಿಯನ್ನು ಆರಂಭಿಸಿದ ಕೇವಲ ಒಂದು ತಿಂಗಳಲ್ಲೇ ಇದರ ವ್ಯಾಪ್ತಿಗೆ 2 ಲಕ್ಷಕ್ಕೂ ಅಧಿಕ ರೀಸೆಲ್ಲರ್‌ಗಳು ಸೇರ್ಪಡೆಗೊಂಡಿದ್ದಾರೆ. ಹಬ್ಬದ ಸೀಸನ್ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಶಾಪ್ಸಿ ಮುಂದಿನ ಎರಡು ತಿಂಗಳಲ್ಲಿ ಈ ಸಂಖ್ಯೆಯನ್ನು 20 ಪಟ್ಟು ಹೆಚ್ಚಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಇದಕ್ಕಾಗಿ ಹಲವಾರು ವೈಶಿಷ್ಟ್ಯತೆಗಳನ್ನು ಪರಿಚಯಿಸುವುದರ ಜತೆಗೆ ಉದ್ಯಮಿಗಳು ಯಾವುದೇ ಬಂಡವಾಳಗಳಿಲ್ಲದೇ ಆನ್ ಲೈನ್ ಮೂಲಕ ತಮ್ಮ ವ್ಯವಹಾರಗಳನ್ನು ಆರಂಭಿಸುವಂಥ ಮತ್ತಷ್ಟು ಅವಕಾಶಗಳನ್ನು ಕಲ್ಪಿಸಿಕೊಡಲಿದೆ.

English summary
With over 2 Lakh users active on the Flipkart’s Shopsy platform Announces zero commission marketplace for sellers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X